ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳು

By Suneel
|

ವೀಕೆಂಡ್ ಅಂತ ಬಂದ್ರೆ ವಾರಕ್ಕೆ ಒಂದು ಸಿನಿಮಾ ನೋಡೋದು ಈಗಿನ ಟ್ರೆಂಡ್. ಅಂದಹಾಗೆ ವಾರಕ್ಕೆ ಒಂದು ಸಿನಿಮಾ ನೋಡೋ ಟ್ರೆಂಡ್‌ ಶೇಕಡ 70 ರಷ್ಟು ಜನರಿಗೆ ಇದೆ ಎಂದ್ರೆ ತಪ್ಪಾಗಲಾರದು. ಆದ್ರೆ ಕೆಲವು ಪ್ರಖ್ಯಾತ ಸಿನಿಮಾಗಳನ್ನ ನೋಡೋವಾಗ ಹೇಗಪ್ಪಾ ತೆಗೆದ್ರು ಈ ದೃಶ್ಯನ ಅನ್ನೋ ಕೆಲವು ಭಯಾನಕ ದೃಶ್ಯಗಳನ್ನು ಎಲ್ಲರೂ ಸಹ ನೋಡಿರುತ್ತೀರಾ. ಅದಕ್ಕೆ ಉದಾಹರಣೆ ನೀವು ಕಳೆದ ವಾರವಷ್ಟೆ ನೋಡಿದ "ಜಂಗಲ್‌ ಬುಕ್‌" 3D ಸಿನಿಮಾ ಆಗಿರಬಹುದು. ಮ್ಯಾಡ್‌ ಮ್ಯಾಕ್ಸ್‌, ಅವೇಂಜರ್ಸ್‌, ಲೈಫ್‌ ಆಫ್‌ ಪೈ, ಗೇಮ್ ಆಫ್‌ ಥ್ರೋನ್‌, ಹ್ಯಾರಿ ಪಾಟರ್ ನಂತರ ಸಿನಿಮಾಗಳಾಗಿರಬಹುದು. ಭಯಾನಕ, ನಂಬಲು ಅಸಾಧ್ಯವಾದ ದೃಶ್ಯಗಳು, ಹಾಗೆ ಕೆಲವು ಪ್ರಾಣಿಗಳು ಹೀಗೂ ವರ್ತಿಸುತ್ತವಾ ಮನುಷ್ಯನ ಜೊತೆ? ಎಂದು ಕೊಳ್ಳುವಂತಹ ದೃಶ್ಯಗಳು ಇಂಗ್ಲೀಷ್‌ನ ಫೇಮಸ್‌ ಸಿನಿಮಾಗಳಲ್ಲಿ ಸಾಮಾನ್ಯವಾಗಿರುತ್ತವೆ. ಅದೆಲ್ಲಾ ಸರಿ ಆ ಸಿನಿಮಾಗಳ ಭಯಾನಕ ದೃಶ್ಯಗಳನ್ನ ಶೂಟಿಂಗ್‌ ಮಾಡಿದ್ದಾದರೂ ಹೇಗೆ? ಪ್ರಾಣಿಗಳು ನಿಜವಾಗಲೂ ಸಿನಿಮಾದಲ್ಲಿ ಅಷ್ಟೊಂದು ಚೆನ್ನಾಗಿ ನಟನೆ ಮಾಡುತ್ತವಾ? ಎಂಬ ಹಲವರ ಪ್ರಶ್ನೆಗೆ ಇಂದಿನ ಲೇಖನದಲ್ಲಿ ಉತ್ತರ ಖಂಡಿತಾ ಸಿಗುತ್ತೆ. ಸಿನಿಮಾ ನಿರ್ಮಾಣಕಾರರು ಕೇವಲ ಒಂದು ಗ್ರೀನ್‌ ಸ್ಕ್ರೀನ್‌ ಸ್ಟುಡಿಯೋದಲ್ಲಿ ಹೇಗಲ್ಲಾ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದು ಸಹ ತಿಳಿಯಬಹುದು.

ಇಂದಿನ ಲೇಖನದಲ್ಲಿ 23 ಫೇಮಸ್‌ ಸಿನಿಮಾಗಳ ರೋಮಾಂಚನಗೊಳಿಸುವ ದೃಶ್ಯಗಳನ್ನು ಚಿತ್ರ ನಿರ್ಮಾಣಕಾರರು ಹೇಗೆ ಸೆರೆಹಿಡಿದರು ಎಂಬುದನ್ನು ನಿಮಗೆ ತೋರಿಸುತ್ತಿದ್ದೇವೆ. ವಿಶೇಷ ಅಂದ್ರೆ ಸಿನಿಮಾ ಶೂಟಿಂಗ್‌ ಸಮಯದಲ್ಲಿ ಸೆರೆಹಿಡಿದ ದೃಶ್ಯ ಹಾಗೂ ಅದೇ ದೃಶ್ಯ(Scene) ಸಿನಿಮಾದಲ್ಲಿ ಕಂಡಿದ್ದು ಹೇಗೆ ಎಂಬುದನ್ನು ಒಂದೇ ಚಿತ್ರದಲ್ಲಿ ನಿಮಗೆ ತೋರಿಸುತ್ತಿದ್ದೇವೆ. ಈ ವಿಶೇಷ ಚಿತ್ರಗಳು ನಿಮಗೆ ಫೇಮಸ್‌ ಚಿತ್ರಗಳಲ್ಲಿ ವಿಶುವಲ್‌ ಎಫೆಕ್ಟ್‌ ನೀಡುತ್ತಾರೆ ಎಂಬುದು ಖಂಡಿತಾ ತಿಳಿಯುತ್ತೆ. ಸ್ಲೈಡರ್‌ಗಳಲ್ಲಿ ಮಾಹಿತಿ ಓದಿರಿ.

#1

#1

ಗೇಮ್‌ ಆಫ್‌ ಥ್ರೋನ್‌ ಇಂಗ್ಲೀಷ್‌ ಸಿನಿಮಾದಲ್ಲಿ ಬಂಡೆ ಮೇಲೆ ಕುಳಿತು ಅಲ್ಲಿನ ಪ್ರಾಣಿಯೊಂದನ್ನು ಚಿತ್ರ ನಟಿ ತಲೆ ಸವರುವುದನ್ನು ಶೂಟಿಂಗ್‌ ಸಮಯದಲ್ಲಿ ಸೆರೆಹಿಡಿದದ್ದು ಹೀಗೆ. ಇಲ್ಲಿ ಸಿನಿಮಾದಲ್ಲಿ ಕಂಡ ದೃಶ್ಯ ಹಾಗೂ ಸಿನಿಮಾ ನಿರ್ಮಾಣ ವೇಳೆ ಹೇಗೆ ಸೆರೆಹಿಡಿಯಲಾಗಿದೆ ಎಂದು ತಿಳಿಯುತ್ತದೆ. 'ಗೇಮ್‌ ಆಫ್‌ ಥ್ರೋನ್‌ ಸಿನಿಮಾ ಪ್ರಶಸ್ತಿ ವಿಜೇತ ಸಿನಿಮಾವಾಗಿದೆ.

#2

#2

ಪ್ರಖ್ಯಾತ ಸಿನಿಮಾ 'ಗಾರ್ಡಿಯನ್ಸ್ ಆಫ್‌ ಗೆಲಾಕ್ಸಿ'ಯಲ್ಲಿ ಮುನುಷ್ಯನ ಕೈ ತಲೆ ಮೇಲೆ ಇರುವ ಪ್ರಾಣಿಯೂ ಸಹ ಒಬ್ಬ ಮನುಷ್ಯನೆ. ಅದನ್ನು ಗ್ರೀನ್‌ ಸ್ಕ್ರೀನ್‌ನಲ್ಲಿ ಸೆರೆಹಿಡಿಯಲಾಗಿದೆ.

#3

#3

ಈ ಸಿನಿಮಾದಲ್ಲಿ ಕಾಣುವ ವಿಚಿತ್ರ ಮಾನವರಿಗೆ ವಿಶುವಲ್‌ ಎಫೆಕ್ಟ್‌ ಹೇಗೆ ನೀಡಲಾಗಿದೆ ಎಂದು ನೋಡಿರಿ.

#4

#4

ಅಂದಹಾಗೆ ಲೈಫ್‌ ಆಫ್‌ ಪೈ ಸಿನಿಮಾ ಮೆಚ್ಚದವರಿಲ್ಲ. ಆದ್ರೆ ನೀವು ಸಿನಿಮಾದಲ್ಲಿ ನಟನೆ ಮಾಡಿದ ಹುಲಿ ಯಾವುದು ಅಂತ ಈ ಚಿತ್ರದಲ್ಲಿ ನೋಡಿ.

#5

#5

ದಿ ಹಾಬಿಟ್‌ ಸಿನಿಮಾದಲ್ಲಿ ನೀವು ನೋಡುವ ರೋಮಾಂಚನಕಾರಿ ಪ್ರದೇಶವನ್ನು ಕೇವಲ ಒಂದು ಗ್ರೀನ್‌ ಸ್ಟುಡಿಯೋದಲ್ಲಿ ಸೆರೆಹಿಡಿದು ನಂತರ ವಿಶುವಲ್‌ ಎಫೆಕ್ಟ್‌ ನೀಡಲಾಗಿದೆ.

#6

#6

ಈ ಸಿನಿಮಾವನ್ನ ಮಕ್ಕಳು ಸಹ ಹೆಚ್ಚು ಇಷ್ಟಪಡುತ್ತಾರೆ. ಯಾವುದೋ ಲೋಕದಲ್ಲಿ ಮಾಡಿದ ಸಿನಿಮಾ ತರ ಇದ್ರು. ಆದರೆ ಸಿನಿಮಾ ಶೂಟಿಂಗ್ ಮಾತ್ರ ಒಂದೇ ಸ್ಟುಡಿಯೋದಲ್ಲಿ. ನಂತರ ಎಫೆಕ್ಟ್ ಹೇಗೆ ನೀಡಲಾಗಿದೆ ಎಂದು ನೋಡಿರಿ.

#7

#7

ಈ ಚಿತ್ರದಲ್ಲಿ ಎಡಭಾಗದ ಚಿತ್ರ ನಿಜವಾದುದಲ್ಲಾ. ಬಲಭಾಗದ ಚಿತ್ರದಲ್ಲಿ ನೀವು ನೋಡುತ್ತಿರುವ ಹಾಗೆ ಸಿನಿಮಾ ನಿರ್ಮಾಣ ಮಾಡಿ ನಂತರ ವಿಶುವಲ್‌ ಎಫೆಕ್ಟ್‌ ನೀಡಲಾಗಿದೆ.

#8

#8

ಸಸ್ಪೆನ್ಸ್, ಕ್ರೈಮ್‌ ಸಿನಿಮಾಗೆ ಹೆಸರುವಾಸಿಯಾದ "ದಿ ಡಾರ್ಕ್ ನೈಟ್‌" ಸಿನಿಮಾ ನಿರ್ಮಾಣ ಹಾಗೂ ಸಿನಿಮಾದಲ್ಲಿನ ದೃಶ್ಯ ಹೇಗಿದೆ ಕಲ್ಪಿಸಿಕೊಳ್ಳಿ.

#9

#9

ಈ ಸಿನಿಮಾದಲ್ಲಿ ನೀವು ಅಂದುಕೊಂಡಹಾಗೆ ಸಿಟಿಯ ಮಧ್ಯೆ ಚಿತ್ರೀಕರಣ ನಡೆಸಿಲ್ಲ. ಚಿತ್ರೀಕರಣ ಗ್ರೀನ್‌ ಸ್ಕ್ರೀನ್‌ನಲ್ಲಿ. ವಿಶುವಲ್‌ ಎಫೆಕ್ಟ್ ಸಿಟಿಯದ್ದು.

#10

#10

ಕೆಲವೂ ಸಾಮಾನ್ಯ ಸಾಹಸಗಳನ್ನು ಸಹ ಗ್ರೀನ್‌ ಸ್ಕ್ರೀನ್‌ ಸ್ಟುಡಿಯೋದಲ್ಲಿ ನಿರ್ಮಾಣ ಮಾಡುತ್ತಾರೆ ಕೆಲವೊಮ್ಮೆ ಎನ್ನವುದಕ್ಕೆ ಇದು ಸಾಕ್ಷಿ.

#11

#11

ನೀವು ತಿಳಿದುಕೊಂಡಿರುವ ಹಾಗೆ ಸಂಪೂರ್ಣ ಹಿಮ ಪ್ರದೇಶದಲ್ಲಿ ಚಿತ್ರ ನಿರ್ಮಾಣವಾಗಿಲ್ಲ. ವಿಶುವಲ್‌ ಎಫೆಕ್ಟ್‌ ಸಂಪೂರ್ಣ ಇದೆ.

#12

#12

ನಿಜವಾಗಿಯೂ ಬೆಂಕಿ ಹಾರಿಸುತ್ತಿರುವ ಈ ದೃಶ್ಯ ಎಷ್ಟು ಸತ್ಯ ನೋಡಿ.

#13

#13

"ಓಜಡ್‌, ದಿ ಗ್ರೇಟ್‌ ಅಂಡ್‌ ಪವರ್‌ಫುಲ್‌" ಸಿನಿಮಾದಲ್ಲಿ ನೀರಿನ ಪ್ರವಾದಲ್ಲಿ ಹೋಗುವ ದೃಶ್ಯ ಹೇಗೆ ಸೆರೆಹಿಡಿಯಲಾಗಿದೆ ನೋಡಿ. ಸಿನಿಮಾದಲ್ಲಿ ಇದು ಅಂತ್ಯಂತ ಭಯಾನಕ ದೃಶ್ಯವಾದರೂ ನಿರ್ಮಾಣ ಅತಿ ಸುಲಭ.

#14

#14

ಕೆಲವೊಂದು ಸಿನಿಮಾಗಳಲ್ಲಿ ಸಿನಿಮಾ ನಿರ್ಮಾಣದ ಸಮಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಆಡಿಯನ್ಸ್‌ ಇರುತ್ತಾರಾ, ಬರುತ್ತಾರೋ ಅಂತ ಪ್ರಶ್ನೆಗಳು ಹುಟ್ಟುತ್ತವೆ. ಆಡಿಯನ್ಸ್‌ ಬಂದದ್ದಾದರೂ ಹೇಗೆ ನೋಡಿ. ಚಿತ್ರದ ಬಲಭಾಗದಲ್ಲಿ ನೊಡಿ. ಗ್ರೀನ್‌ ಸ್ಕ್ರೀನ್‌ ಬ್ಯಾಗ್ರೌಂಡ್‌ ಇದ್ರೆ ಸಾಕು. ಎಷ್ಟು ಬೇಕೋ ಅಷ್ಟು ಆಡಿಯನ್ಸ್‌ಗಳನ್ನು ವಿಶುವಲ್‌ ನಿಂದಲೇ ನೀಡಬಹುದು. ಅಲ್ಲದೇ ಹೇಗೆ ಬೇಕಾದರೂ ಸಿನಿಮಾ ಔಟ್‌ಪುಟ್‌ ನೀಡಬಹುದು.

#15

#15

ಹ್ಯಾರಿ ಪಾಟರ್ ಸಿನಿಮಾ ನೋಡಿದವರಲ್ಲಿ ಅದನ್ನು ಮೆಚ್ಚದವರಿಲ್ಲ. ಸಿನಿಮಾ ನಿರ್ಮಾಣ ಹೇಗೆ ಮಾಡಲಾಗಿದೆ ನೋಡಿ.

#16

#16

'ದಿ ವೂಲ್ಫ್‌ ಆಫ್‌ ವಾಲ್‌ ಸ್ಟ್ರೀಟ್‌' ಸಿನಿಮಾ ನಿಜವಾಗಲೂ ಸಹ ನದಿಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಿಲ್ಲ.

#17

#17

ಬಹುಶಃ 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್‌" ಸಿನಿಮಾ ನೋಡಿದವರಿಗೆ ಮನುಷ್ಯ ಇಷ್ಟೊಂದು ವಿಚಿತ್ರವಾಗಿ ಇರುತ್ತಾನ ಎನಿಸಿಬಿಟ್ಟಿರುತ್ತದೆ. ಅಥವಾ ಇಷ್ಟೊಂದು ಕುಗ್ಗಿದ ದೇಹದ ಮನುಷ್ಯ ಹೇಗಾದ್ರು ನಟನೆ ಮಾಡಿದ ಎಂದು ಆಲೋಚಿಸುತ್ತಾರೆ. ಆದ್ರೆ ಈ ಚಿತ್ರ ನೋಡಿ ಒಂದು ತೀರ್ಮಾನಕ್ಕೆ ಬನ್ನಿ.

#18

#18

ಹೆಚ್ಚು ಭಯಾನಕವಾಗಿದ್ದರೂ ಸಹ ಹೆಚ್ಚು ನೋಡಿಸಿಕೊಂಡ ಸಿನಿಮಾ ಅಂದ್ರೆ ಅದು ಗಾಡ್ಜಿಲಾ. ಸಮುದ್ರದ ಎದುರಾಗಿ ನಿಂತು ಗಾಡ್ಜಿಲಾ ಬರುವಿಕೆಗಾಗಿ ಕಾಯುತ್ತಿರುವ ರಕ್ಷಣಾ ಪಡೆಯವರು ಗಾಡ್ಜಿಲಾಗೆ ನಿಜವಾಗಿ ಸಿನಿಮಾ ನಿರ್ಮಾಣ ಹಂತದಲ್ಲಿ ಕಂಡದ್ದು ಹೀಗೆ.

#19

#19

ಸಂಪೂರ್ಣ ಮರುಭೂಮಿಯಲ್ಲಿ ಟ್ರಾವೆಲಿಂಗ್‌ನಲ್ಲೇ ನಡೆಯುವ ಯುದ್ಧ. ವಿಚಿತ್ರವಾದ ಭಯಾನಕ ಯುದ್ಧ ತಂತ್ರಗಾರಿಕೆ. ಅಲ್ಲಿ ನೀರಿಗೂ ಸಹ ಬರ. ಕಥೆಯಲ್ಲಿ ಮ್ಯಾಕ್ಸ್‌ ಎಂಬಾತ ಕಥಾನಾಯಕ. ರೋಮಾಂಚನಗೊಳಿಸುವ ಯುದ್ಧದ ಈ ಚಿತ್ರ ನಿರ್ಮಾಣ ಗೊಂಡಿದ್ದು ಸಹ ಗ್ರೀನ್‌ ಸ್ಕ್ರೀನ್‌ನಲ್ಲೇ. ವಿಶುವಲ್‌ ಎಫೆಕ್ಟ್ ಹೇಗಿದೆ. ನೋಡಿ.

#20

#20

ತಂತ್ರಜ್ಞಾನದ ಸಹಾಯದಿಂದ ಕುಳಿತಿರುವವರರನ್ನ ಆಕಾಶದಲ್ಲಿ ಕಾಗೆಯ ಮೇಲೆ ಕುಳಿತು ಹೋಗುತ್ತಿರುವ ಹಾಗೆ ತೋರಿಸಬಹುದು. ಅದಕ್ಕೆ ಇಂದಿನ ಸಿನಿಮಾಗಳಲ್ಲಿ ಬಳಸುವ ವಿಶುವಲ್‌ ಎಫೆಕ್ಟ್‌ ಸಾಕು.

#21

#21

ಅಂತು ಇಂತು ಮಂಗಳ ಗ್ರಹದಲ್ಲಿ ಸಹ ಸಿನಿಮಾ ತೆಗೆದರು ಅಂತ ಖುಷಿ ಪಡಿ. ಆದ್ರೆ ಈ ಚಿತ್ರ ನೋಡಿ ಹೇಳಿ ಹಾಗೆ ಒಮ್ಮೆ?

#22

#22

ಸಿನಿಮಾ ಶೂಟಿಂಗ್ ನಡೆದದ್ದು ಪರಿಸರದ ಹೊರಾಂಗಣ ಪ್ರದೇಶದಲ್ಲೇ ಆದ್ರೆ ತೋರಿಸಿದ್ದು ವಿಶುವಲ್‌ ಎಫೆಕ್ಟ್‌ ಮೂಲಕ ಈ ರೀತಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!

ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌

ಏಲಿಯನ್‌ಗಳು ಹೆಚ್ಚು ಕಾಣಿಸಿಕೊಂಡ ಪ್ರಪಂಚದ ಟಾಪ್‌ ಸ್ಥಳಗಳುಏಲಿಯನ್‌ಗಳು ಹೆಚ್ಚು ಕಾಣಿಸಿಕೊಂಡ ಪ್ರಪಂಚದ ಟಾಪ್‌ ಸ್ಥಳಗಳು

ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್

Best Mobiles in India

English summary
23 Famous Movie Scenes That Are Completely Unrecognisable Without Their Visual Effects. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X