Home
ಫೀಚರ್ ಸ್ಟೋರೀಸ್

ವಿವರಿಸಲು ಸಾಧ್ಯವೇ ಆಗದ ನಿಗೂಢತೆಗಳು

By Suneel

ನಿಗೂಢ ಮತ್ತು ಕುತೂಹಲಕಾರಿ ವಿಷಯಗಳು ಕೇವಲ ಮಂಗಳ ಗ್ರಹದಲ್ಲೋ ಅಥವಾ ಚಂದ್ರನ ಮೇಲ್ಮೈನಲ್ಲೋ ಮಾತ್ರ ಅಲ್ಲಾ, ಭೂಮಿಯ ಮೇಲೂ ಸಹ ನಿಗೂಢ ಘಟನೆಗಳು ನಡೆಯುತ್ತವೆ, ಕುತೂಹಲಕಾರಿ ವಸ್ತುಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಉದಾಹರಣೆಯಾಗಿ ದಿನನಿತ್ಯ ಸುದ್ದಿ ವಾಹಿನಿಗಳನ್ನು ಗಮನಿಸಿದರೆ ತಿಳಿಯುತ್ತದೆ. ಇತಿಹಾಸ ಕೆದಕುತ್ತಾ ಹೋದರಂತು ನಿಗೂಢ ಮಾಹಿತಿಗಳಿಗೆ ಬರವಿಲ್ಲ.. ಅಲ್ಲದೇ ಕೆಲವು ವಸ್ತುಗಳನ್ನು ಮತ್ತು ಘಟನೆಗಳನ್ನು ವಿವರಿಸಲು ಸಹ ಕಷ್ಟವಾಗಿದೆ. ಅಂತಹ ಹಲವು ರಹಸ್ಯ ಮಾಹಿತಿಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂದಿನ ಲೇಖನದಲ್ಲಿ ನೀಡಲಾಗಿದೆ. ಹಲವು ವಿಜ್ಞಾನಿಗಳು ಮತ್ತು ಸಂಶೋಧಕರು ಸಹ ಈ ನಿಗೂಢ ಘಟನೆಗಳ ಬಗ್ಗೆ ವಿವರಿಸಲು ಸಾಧ್ಯವಾಗಿಲ್ಲ. ಅವುಗಳು ಏನು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಫೋಟೋಗಳು

1

1

ವಾತಾವರಣವು ಕೆಲವೊಮ್ಮೆ ಬೆರಗುಗೊಳಿಸುವ ಸಾಹಸವನ್ನು ಮಾಡುತ್ತದೆ. ಚಿತ್ರದಲ್ಲಿ ನೋಡಿದ ಮಹಿಳೆ ಅಮೇರಿಕದ 'ಮಿನ್ನೆಸೊಟ' ಪ್ರದೇಶದಲ್ಲಿ ತನ್ನ 19 ವರ್ಷದ ಸಂಬಂಧಿವೊಬ್ಬರಿಂದ ಕಾರಿನೊಳಗೆ ಕಾಣಿಸಿಕೊಂಡಿದ್ದಳು. ಆದರೆ ಈಕೆ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನದಿಂದ 0 ಗಿಂತ ಕಡಿಮೆ ತಾಪಮಾನಕ್ಕೆ ವಾತಾವರಣ ಕುಸಿದಿದ್ದರಿಂದ ಕೇವಲ ಒಂದು ದಿನದಲ್ಲೇ ಆಕೆ 'ಐಸ್‌ ಮಹಿಳೆ' ಯಾಗಿದ್ದಳು. ಯಾವ ವೈದ್ಯಕೀಯ ಚಿಕಿತ್ಸೆಯು ಸಹ ಈಕೆಯನ್ನು ಬದುಕಿಸಲು ಆಗಲಿಲ್ಲ. ಆದರೆ ನಿಗೂಢ ವಾತಾವರಣದ ಬಗ್ಗೆ ವಿವರಿಸಲೇ ಆಗಲಿಲ್ಲ.

2

2

ದೆಹಲಿಯ ಕಬ್ಬಿಣದ ಸ್ಥಂಭದ ಬಗ್ಗೆ ಯಾರು ಸಹ ವಿವರಿಸಲು ಸಾಧ್ಯವಿಲ್ಲ. ಯಾಕೆಂದರೆ 7 ಮೀಟರ್ ಎತ್ತರವಿರುವ ಮತ್ತು 6 ಟನ್‌ಗಿಂತಲೂ ಹೆಚ್ಚು ತೂಕವಿರುವ ಈ ಕಬ್ಬಿಣದ ಸ್ಥಂಭ 1600 ವರ್ಷಗಳಿಂದಲೂ ಸಹ ಸಣ್ಣ ಪ್ರಮಾಣದಲ್ಲಿಯೂ ತುಕ್ಕುಹಿಡಿದಿಲ್ಲ. ಈ ಸ್ಥಂಭದ ಬಗ್ಗೆ ವಿಜ್ಞಾನಿಗಳು ಸಹ ವಿವರಿಸಲು ಆಗಿಲ್ಲ.

3

3

ಮೇರಿ ಸೆಲೆಸ್ಟೆ ಸಿಬ್ಬಂದಿ ಹಡಗು "ಕ್ಯಾರೊಲ್ ಎ.ಡೀರಿಂಗ್" ನಿಗೂಢವಾಗಿ ಕಳೆದು ಹೋದ 50 ವರ್ಷಗಳ ನಂತರ ಜನವರಿ 31, 1921 ರಲ್ಲಿ ಉತ್ತರ ಕರೋಲಿನಾದ ಕರಾವಳಿ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಆದರೆ 50 ವರ್ಷಗಳ ಅವಧಿಯಲ್ಲಿ ಅದರ ಸುಳಿವು ಸ್ವಲ್ಪ ಪ್ರಮಾಣದಲ್ಲಿಯೂ ಸಹ ಸಿಕ್ಕಿರಲಿಲ್ಲ.

4

4

ಜಾನ್‌ ಹಚಿನ್ಸನ್, ವಿಜ್ಞಾನಿ 'ನಿಕೋಲಾ ತೆಸ್ಲಾ'ರ ಪ್ರಯೋಗಗಳನ್ನು ಪುನರಾರ್ತಿಸಲು ಹೋಗಿ ಉಪಯೋಗಕ್ಕೆ ಬಾರದ ಮತ್ತು ವಿವಾದಕ್ಕೆ ಒಳಗಾದ ಸಂಶೋಧನೆಯನ್ನು ಮಾಡಿದ್ದರು. ಇವರ ಈ ಸಂಶೋಧನೆಯನ್ನು ವಿವರಿಸಲೇ ಆಗಿರಲಿಲ್ಲ. ಇದನ್ನು ಹಚಿನ್ಸನ್‌ ಎಫೆಕ್ಟ್‌ ಎಂದು ಕರೆಯಲಾಗುತ್ತದೆ.

5

5

ಬೆಲ್‌ಮೆಜ್ ಮುಖವು ಸ್ಪೇನ್‌ನಲ್ಲಿ 1971 ಕಾಣಿಸಿಕೊಂಡ ಪೆರೇರಾ ಕುಟುಂಬದ ಒಂದು ಮನೆಯಲ್ಲಿನ ಮುಖವಾಗಿದೆ. ಭಯಾನಕವಾಗಿ ನೋಡುತ್ತಿರುವ ಈ ಮುಖವು ಪುರುಷನದ್ದೋ ಅಥವಾ ಮಹಿಳೆಯದೋ ಎಂದು ವಿವರಿಸಲೇ ಆಗಿಲ್ಲ. ಅಲ್ಲದೇ ತನಿಖಾ ತಂಡವೊಂದು ಮನೆಯ ಒಳಗೆ ಭೂಮಿಯಿಂದ ಮನುಷ್ಯನ ದೇಹವನ್ನು ಸಹ ತೆಗೆದು ಹಾಕಿತು. ಆದರೆ ಅಲ್ಲಿ ಕಾಣಿಸುತ್ತಿದ್ದ ಮನುಷ್ಯ ಮುಖ ಮಾತ್ರ ಹೋಗಲಿಲ್ಲ.

6

6

ಕೇವಲ ಎರಡು ತಿಂಗಳಲ್ಲಿ ಮಾಯವಾದ ಸರೋವರ ದಕ್ಷಿಣ ಅಮೇರಿಕದ ಪಟಗೋನಿಯಾ ಪ್ರದೇಶದ ಚಿಲಿಯಲ್ಲಿನ ಸರೋವರವೊಂದು 2007 ಮಾರ್ಚ್‌ ತಿಂಗಳಿನಲ್ಲಿ ಕಾಣಸಿಕೊಂಡಿದ್ದು, 2007 ರ ಮೇ ತಿಂಗಳಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲಾ. ಭೂವಿಜ್ಞಾನಿಯೊಬ್ಬರು ಈ ಮಾಹಿತಿಯನ್ನು ತಿಳಿಸಿದ್ದರು. ಸರೋವರ ಎರಡು ತಿಂಗಳಲ್ಲಿ 30 ಮೀಟರ್‌ ಆಳದಲ್ಲಿ, ಒಣಗಿದ ಕಲ್ಲುಗಳ ಹಿಂದೆ ಇಷ್ಟು ಬೇಗ ಮಾಯವಾಗಿದೆ ಎಂದಿದ್ದರು.

7

7

1994 ಆಗಸ್ಟ್ 7 ರಲ್ಲಿ ವಾಷಿಂಗ್ಟನ್‌ ವೋಕ್‌ವಿಲ್ಲೇ ನಗರದ ಜನರು ಮಳೆ ಹನಿಗಳು ಹನಿಗಳಾಗಿ ಬೀಳದೆ ದೊಡ್ಡ ಗಾತ್ರದಲ್ಲಿ ಬಿದ್ದ ಹನಿಗಳನ್ನು ಶೇಖರಿಸಿದಕ್ಕೆ ಸಾಕ್ಷಿಯಾಗಿದ್ದರು. ಈ ಗಾತ್ರದ ಮಳೆ ಹನಿಗಳು ಆಕಾಶದಿಂದ ಬೀಳಲು ಪ್ರಾರಂಭವಾದ 3 ತಿಂಗಳಲ್ಲಿ ಎಲ್ಲಾ ಕಡೆ ಜ್ವರ ಬಂದ ವಾತಾವರಣ ಸೃಷ್ಟಿಯಾಗಿ ಅಂತಿಮವಾಗಿ 'ದೊಡ್ಡ ಗಾತ್ರದ ಮಳೆ ಹನಿಯನ್ನು ಪರೀಕ್ಷೆಗೆ ನೀಡಿದಾಗ ಬಂದ ಉತ್ತರ ಎಲ್ಲರಿಗೂ ಅಚ್ಚರಿಯಾಗಿತ್ತು. ಕಾರಣ ಅದರಲ್ಲಿ ಮಾನವ ಬಿಳಿ ರಕ್ತ ಕಣಗಳು ಇದ್ದವು. ನಂತರ ಅದರಲ್ಲಿ ಎರಡು ರೀತಿಯ ಬ್ಯಾಕ್ಟೀರಿಯಾಗಳು ಸಹ ಪತ್ತೆಯಾದವು. ಆದರೆ ಅದು ಏನು ಎಂದು ವಿವರಿಸಲಾಗಲಿಲ್ಲ.

8

8

1994 ಮೇ 7 ರಂದು ಕಪ್ಪು ಹೆಲಿಕಾಪ್ಟರ್‌ ಒಂದು ಪ್ಯಾರಿಸ್‌ನ ಲೂಸಿಯಾನದಲ್ಲಿ ಹುಡುಗನೊಬ್ಬನನ್ನು 45 ನಿಮಿಷಗಳ ಕಾಲ ಚೇಸಿಂಗ್ ಮಾಡಿತ್ತಂತೆ. ಆದರೆ ಆ ಬ್ಲಾಕ್ ಹೆಲಿಕಾಪ್ಟರ್ ಯಾವುದು? ಏಕೆ ಚೇಸಿಂಗ್ ಮಾಡಿತ್ತು? ಎಂಬುದು ಮಾತ್ರ ತಿಳಿಯಲಿಲ್ಲವಂತೆ. ಅದು ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲವಂತೆ.

9

9

1976 ರಲ್ಲಿ ಟೆಕ್ಸಾಸ್‌ನ ವ್ಯಕ್ತಿಯೊಬ್ಬರು ತಮ್ಮ ಬಿಲ್ಡಿಂಗ್ ಅನ್ನು ಯಾವುದೋ ಕಾರಣ ನಿಮಿತ್ತ ಒಡೆದರಂತೆ. ಅಲ್ಲಿ ಯಾವುದೇ ಬಿರುಕು ಇಲ್ಲದಂತೆ ನಿರ್ಮಾಣ ಮಾಡಿದ್ದ ಕಾಂಕ್ರೀಟ್‌ ಬಿಲ್ಡಿಂಗ್‌ ಒಳಗೆ ಹಸಿರು ಆಮೆ ಕಾಣಿಸಿಕೊಂಡಿತ್ತಂತೆ. ಸಣ್ಣ ಬಿರುಕು ಇಲ್ಲದಂತ ಆ ಗೋಡೆಯ ಒಳಗೆ ಹಲವು ವರ್ಷಗಳಿಂದ ಹೇಗೆ ಜೀವಿಸುತ್ತಿತ್ತು ಎಂದು ವಿವರಿಸಲು ಸಾಧ್ಯವೇ ಆಗಲಿಲ್ಲವಂತೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

Best Mobiles in India

English summary
9 Enigmas That Defy Explanation. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+