ರಹಸ್ಯಗಳನ್ನು ಹೊಂದಿದ್ದ ಸಾಮಾನ್ಯ ಬಿಲ್ಡಿಂಗ್‌ಗಳು: ವೈರಲ್‌

Written By:

ಪ್ರಪಂಚದ ಒಂದೊಂದು ಪ್ರದೇಶವು ಸಹ ಒಂದೊಂದು ಇತಿಹಾಸವನ್ನು ಹೊಂದಿರುತ್ತವೆ. ಆದ್ರೆ ಬಹುಸಂಖ್ಯಾತರು ತಾವು ಇರುವ ಪ್ರದೇಶದ ಬಗ್ಗೆಯೇ ಹೆಚ್ಚು ಮಾಹಿತಿಯನ್ನು ತಿಳಿದಿರುವುದಿಲ್ಲ. ವ್ಯಕ್ತಿಗಳು ತಾವು ವಾಸಿಸುವ, ಹೆಚ್ಚು ಸಮಯ ಇರುವಂತಹ ಪ್ರದೇಶಗಳ ಬಗ್ಗೆ ಒಂದಷ್ಟು ಮಾಹಿತಿ ತಿಳಿಯಲು ಬಯಸಿದರೆ ಕುತೂಹಲ ಮಾಹಿತಿಗಳು ಸಿಗುತ್ತವೆ. ಇಂದಿನ ಲೇಖನದಲ್ಲಿ ಪ್ರಪಂಚದಾದ್ಯಂತದ ಕೆಲವು ಬಿಲ್ಡಿಂಗ್‌ಗಳು ಸಾಮಾನ್ಯವಾಗಿ ಕಂಡರು ಸಹ ನಿಬ್ಬೆರಗಾಗಿಸುವಂತಹ ರಹಸ್ಯಗಳನ್ನು ಹೊಂದಿರುವ ಬಗ್ಗೆ ಮಾಹಿತಿ ತಿಳಿಸಲಾಗುತ್ತಿದೆ. ಅಂದಹಾಗೆ ಈ ಬಿಲ್ಡಿಂಗ್‌ಗಳು ತಾವು ಹೊಂದಿರುವ ರಹಸ್ಯಮಯ ವಿಷಯಗಳಿಂದ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಮೂಹಿಕ ಸಮಾಧಿಗಳು

ಸಾಮೂಹಿಕ ಸಮಾಧಿಗಳು

1

ಲಂಡನ್‌ ನೋಡಲು ತುಂಬಾ ಲವ್ಲಿ ಆಗಿದೆ. ಆದರೆ ರಹಸ್ಯಮಯ ವಿಷಯವೆಂದರೆ ಹದಿನೇಳನೆಯ ಶತಮಾನದಲ್ಲಿ ಪ್ಲೇಗ್‌ ರೋಗ ಬಂದು ಸತ್ತ ಎಲ್ಲರ ದೇಹಗಳನ್ನು ಗ್ರೀನ್ ಪಾರ್ಕ್‌ಗಳಲ್ಲಿಯೂ ಸಹ ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.

ಫಿನ್ನಿಷ್ ಮ್ಯೂಸಿಯಂ

ಫಿನ್ನಿಷ್ ಮ್ಯೂಸಿಯಂ

2

ಫಿನ್ನಿಷ್‌ ಮ್ಯೂಸಿಯಂನಲ್ಲಿ 1960 ರಲ್ಲಿ ಕೇವಲ ಒಂದು ಚಿಲಿಯ ಜೇಡವನ್ನು ಸಾಯಿಸದೇ ಬಿಡಲಾಯಿತಂತೆ. ಜೇಡವು ಕೇವಲ ಒಬ್ಬ ವ್ಯಕ್ತಿಯನ್ನು ಕಚ್ಚಿತಂತೆ. ಅಂದು ಅದನ್ನು ಸಾಯಿಸಲು ಕಷ್ಟವಾಯಿತು. ಅವುಗಳು ಒಬ್ಬರನ್ನು ಕಚ್ಚುವುದರಿಂದ ನಾಲ್ಕು ಇಂಚು ಉದ್ದ ಬೆಳೆಯಬಹುದಂತೆ.

ಯುದ್ಧ ಅಪರಾಧಗಳ ಪ್ರದೇಶದಲ್ಲಿ ಹೋಟೆಲ್‌ ನಿರ್ಮಾಣ

ಯುದ್ಧ ಅಪರಾಧಗಳ ಪ್ರದೇಶದಲ್ಲಿ ಹೋಟೆಲ್‌ ನಿರ್ಮಾಣ

3

ಈ ಚಿತ್ರದಲ್ಲಿ ನೋಡಿದ ಹೋಟೆಲ್‌ ಅನ್ನು ಸಾವಿರಾರು ಜನರು ಸತ್ತ ಪ್ರಖ್ಯಾತ ಶ್ರೀಲಂಕ ಯುದ್ಧ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

 ಬ್ರಿಟಿಷ್‌ ಕಾರ್ಖಾನೆ

ಬ್ರಿಟಿಷ್‌ ಕಾರ್ಖಾನೆ

4

ಇಡಿ ಪ್ರಪಂಚದಲ್ಲೇ ಅತಿ ಅಪಾಯಕಾರಿಯಾದ ಬ್ರಿಟಿಷರ ಕಾರ್ಖಾನೆ ಆಗಿದೆ. ಅಲ್ಲದೇ ಇದು ಅಪಾಯಕಾರಿ ಪರಮಾಣು ಪ್ರದೇಶವೆಂದು ಹೆಸರು ಪಡೆದಿದೆ.

 ಮೊಂಟಾನಾ ಅಣೆಕಟ್ಟು

ಮೊಂಟಾನಾ ಅಣೆಕಟ್ಟು

5

ಮೊಂಟಾನಾ ಅಣೆಕಟ್ಟು ನಿರ್ಮಾಣ ಸಂಧರ್ಭದಲ್ಲಿ ಹಲವು ಕಾಮಗಾರಿ ಕೂಲಿಕಾರರು ಸತ್ತರು. ಆದರೆ ಅಲ್ಲಿ ಕೇವಲ 2 ಶವಗಳನ್ನು ಮಾತ್ರ ಪತ್ತೆಹಚ್ಚಲಾಯಿತು. ಉಳಿದ ಶವಗಳನ್ನು ಎಷ್ಟೇ ಪ್ರಯತ್ನಪಟ್ಟರು ಹುಡುಕಲು ಸಾಧ್ಯವಾಗಲಿಲ್ಲವಂತೆ.

ಸಂಪೂರ್ಣ ಇಲಿಗಳಿಂದ ಕೂಡಿದ ದೇವಾಲಯ- ಭಾರತ

ಸಂಪೂರ್ಣ ಇಲಿಗಳಿಂದ ಕೂಡಿದ ದೇವಾಲಯ- ಭಾರತ

6

ಇದು ಎಲ್ಲರಿಗೂ ಸಹ ಹಾಸ್ಯ ತರುವಂತಹ ವಿಷಯ. ದೇವಾಲಯಗಳಲ್ಲಿ ಸಾಮಾನ್ಯವಾಗಿ ಕೆಲವೊಂದು ಕಡೆ ಹೆಚ್ಚು ಕೋತಿಗಳು ಇರುತ್ತವೆ. ಆದರೆ ಭಾರತದ ರಾಜಸ್ತಾನದ ಕಾರ್ನಿ ಮಠ ದೇವಾಲಯದಲ್ಲಿ ಸುಮಾರು 20,000 ಕ್ಕೂ ಹೆಚ್ಚು ಇಲಿಗಳು ಇವೆಯಂತೆ.

ನ್ಯೂಯಾರ್ಕ್ ಬೀದಿ ಸಾಮೈಹಿಕ ಸಮಾಧಿಗಳ ಮೇಲೆ

ನ್ಯೂಯಾರ್ಕ್ ಬೀದಿ ಸಾಮೈಹಿಕ ಸಮಾಧಿಗಳ ಮೇಲೆ

7

ನ್ಯೂಯಾರ್ಕ್‌ ಪ್ರಪಂಚದ ಪ್ರಖ್ಯಾತ ನಗರ. ಅಲ್ಲಿನ ಮನ್‌ಹತ್ತನ್‌ ಚೇಂಬರ್ಸ್‌ ಬೀದಿ 20,000 ಗುಲಾಮರ ಸಾಮೂಹಿಕ ಸಮಾಧಿಗಳ ಮೇಲೆ ನಿರ್ಮಾಣವಾಗಿದೆ ಎನ್ನಲಾಗಿದೆ.

ಹಿಟ್ಲರ್ ಬದುಕಿಸಿದ ಆಸ್ಪತ್ರೆ

ಹಿಟ್ಲರ್ ಬದುಕಿಸಿದ ಆಸ್ಪತ್ರೆ

8

ಚಿತ್ರದಲ್ಲಿ ನೋಡುತ್ತಿರುವ ಈ ಆಸ್ಪತ್ರೆಯು ಜರ್ಮನ್‌ ಸರ್ವಾಧಿಕಾರಿ ಹಿಟ್ಲರ್‌ ಮತ್ತು ರಾಜಕೀಯ ವ್ಯಕ್ತಿ ಹೊನೆಕ್ಕರ್‌ ಇಬ್ಬರಿಗೂ ಚಿಕಿತ್ಸೆ ನೀಡಿ ಜೀವ ಉಳಿಸಿದೆ.

 ಡಿಸ್ನಿ ರೈಡ್‌

ಡಿಸ್ನಿ ರೈಡ್‌

9

ಪ್ರಸ್ತುತದಲ್ಲಿ ಇದು ಪಿತೂರಿ ಸಿದ್ಧಾಂತವಾಗಿದೆ. ಡಿಸ್ನಿ ವರ್ಲ್ಡ್‌ನಲ್ಲಿನ ಉದ್ಯೋಗಿಗಳು ಡಿಸ್ನಿ ರೈಡ್‌ಗಳು ಸಮಾಧಿಯ ಅವಶೇಷಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
9 social media viral Buildings pics arround the World have
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot