Subscribe to Gizbot

ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

Written By:

ದಿನನಿತ್ಯ ಅದೇ ಕೆಲಸ, ಅದೇ ಮನೆ, ಅದೇ ಆಫೀಸ್‌ ಯಾರಿಗ್‌ ತಾನೆ ಬೇಜಾರಾಗಲ್ಲ ಹೇಳಿ? ಬೇಜಾರಾಗುತ್ತೆ. ಆದ್ರೆ ಕೆಲವೊಬ್ಬರಿಗೆ ಅದ್‌ ಬಿಟ್ಟು ಬೇರೆ ಯಾವುದರಲ್ಲೂ ಆಸಕ್ತಿ ಇರಲ್ಲಾ. ಇನ್ನೂ ಕೆಲವರಿಗೆ ಅದೇ ಜಾಬ್‌ ಯಾರ್‌ ಮಾಡ್ತಾರೆ ಅಂತ ಬೇಸರವಾಗಿ "ದೇಶ ಸುತ್ತು ಕೋಶ ಓದು" ಅನ್ನೋ ನಾಣ್ಣುಡಿಯನ್ನು ಮೈಗೂಡಿಸಿಕೊಳ್ಳುವಾಸೆ. ಅಂದ ಹಾಗೆ ಈ ಮಾಹಿತಿ ಇಲ್ಲಿ ಹೇಳೋಕೆ ಕಾರಣ ಅಂದ್ರೆ ರೊಮಾನಿಯಾದ "ಮಿಹೇಲ ನೊರೊಕ್‌" ಎಂಬ ಮಹಿಳೆಯೊಬ್ಬರು ತಮ್ಮ ಬೋರಿಂಗ್‌ ಜಾಬ್‌ಗೆ ಬಾಯ್‌ ಹೇಳಿ ಪ್ರಪಂಚದ ನೂರಾರು ಸಾಂಸ್ಕೃತಿಕ ನಗರಿಗಳನ್ನು ಸುತ್ತಾಡಿ ಫೋಟೋಗ್ರಾಫ್‌ ಮಾಡೋ ಆಸೆಯನ್ನ ಹೊಂದಿದ್ದರು. ಅಲ್ಲದೇ ಅವರು ಪ್ರಪಂಚದಾದ್ಯಂತ ಸುತ್ತಾಡಿ ಪ್ರೋಟೋಗ್ರಾಫ್‌ ಮಾಡಿದ ಮನೋಹರ ಫೋಟೋಗಳನ್ನು ಒಂದು ಗ್ಯಾಲರಿ ಮಾಡಿದ್ದಾರೆ. ಅಲ್ಲದೇ ಅದಕ್ಕೆ "Atlas of Beauty" ಎಂದು ಹೆಸರು ನೀಡಿದ್ದಾರೆ.

ಮಿಹೇಲ ನೊರೊಕ್‌'ರವರ "Atlas of Beauty"ಯ ವಿಶೇಷತೆ ಅಂದ್ರೆ ಅವರು 3 ವರ್ಷಗಳ ಕಾಲ ಸುತ್ತಾಡಿದ ಎಲ್ಲಾ ದೇಶಗಳ ಅತೀ ಸುಂದರಿಯರ ಫೋಟೋಗಳನ್ನು ಹೊಂದಿದೆ. ರೊಮಾನಿಯಾ ಫೋಟೋಗ್ರಾಫರ್‌ ತೆಗೆದ ಆ ಫೋಟೋಗಳನ್ನು ನಾವು ಇಂದು ನಿಮ್ಮ ಮುಂದೆ ಇಡುತ್ತದ್ದೇವೆ. ಇತರ ದೇಶಗಳ ಸುಂದರಿಯು ಹೇಗಿರುತ್ತಾರೆ ಎಂಬುದನ್ನು ಇಂದಿನ ಲೇಖನದಲ್ಲಿ ಮಾಹಿತಿ ಸಹಿತ ಲೇಖನದ ಸ್ಲೈಡ್‌ನಲ್ಲಿ ನೋಡಿರಿ. ಅಂದಹಾಗೆ ಮಿಹೆಲ ನೊರೊಕ್‌ ತಾವು ಮೂರು ವರ್ಷಗಳ ಪ್ರಪಂಚದಾದ್ಯಂತ ಸುತ್ತಾಡಿದ ಬಗ್ಗೆ ಮತ್ತು ಇತರ ದೇಶಗಳ ಸುಂದರಿಯರ ಫೋಟೋಗಳಿರುವ "Atlas of Beauty" ಬಗ್ಗೆ ಟೆಕ್‌ ಇನ್‌ಸೈಡರ್‌ಜೊತೆ ಹೇಳಿಕೊಂಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಲ್ಡೊವ

ಮಾಲ್ಡೊವ

ಚಿತ್ರದಲ್ಲಿರುವ ಸುಂದರಿ ಮಾಲ್ಡೊವದ ಒಂದು ಸಣ್ಣ ಬಾಲ್ಕನ್‌ ರಾಜ್ಯದಲ್ಲಿಯ ಬೀದಿಯೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಅಂದಹಾಗೆ ಆಕೆಯ ಸುತ್ತಮುತ್ತಲಿನ ವಾತಾವರಣಕ್ಕೆ ಹೊಂದಿಕೊಂಡಂತೆ ಕಾಣುತ್ತಿದ್ದಾಳೆ.
ಫೋಟೋ ಕೃಪೆ:http://theatlasofbeauty.com/

ಪೆರು

ಪೆರು

ಈ ಚಿತ್ರದಲ್ಲಿರುವ ಸುಂದರಿ ಪೆರು ದೇಶದವರು. ಅಂದಹಾಗೆ ಅಲ್ಲಿ ಆಕೆ ಕೆಲಸಕ್ಕಾಗಿಯೇ ಹಲವು ಗಂಟೆಗಳ ಕಾಲ ನೆಡೆಯುತ್ತಾಳೆ. ಆಕೆಯ ಅಂದದ ಮೇಲೆ ಬಿಸಿಲಿನ ವಾತಾವರಣ ಹೇಗಿದೆ ಎಂದು ಕಾಣುತ್ತದೆ.
ಫೋಟೋ ಕೃಪೆ:http://theatlasofbeauty.com/

ಈಕ್ವಡೋರಿಯನ್

ಈಕ್ವಡೋರಿಯನ್

ಅಂದಹಾಗೆ ಈಕೆ ಹಲವು ಆನ್‌ಲೈನ್‌ ಬಳಕೆದಾರರಿಂದ ಹುಡುಕಾಡಲ್ಪಡುತ್ತಾಳಂತೆ. ಈಕ್ವಡೋರಿಯನ್‌ನ ಈ ಸುಂದರಿ ತನ್ನ ದೇಶದ ಮನೆಯಲ್ಲಿ ಕುಳಿತಿರುವುದು ಹೀಗೆ.
ಫೋಟೋ ಕೃಪೆ:http://theatlasofbeauty.com/

ತಜಕಿಸ್ತಾನ್‌

ತಜಕಿಸ್ತಾನ್‌

ಮಾಜಿ ಸೋವಿಯತ್‌ ಗಣರಾಜ್ಯ ದೇಶ ತಜಕಿಸ್ತಾನ್‌ನ ದುಶಾಂಬೆ ಪ್ರದೇಶದ ಮಹಿಳಾ ವ್ಯಾಪರಿ ಇವರು. ಆಕೆಯಷ್ಟೆ ಅಂದವಾಗಿ ಆಕೆಯ ಸಂಸ್ಕೃತಿಯು ಇದೆ ನೋಡಿ.
ಫೋಟೋ ಕೃಪೆ:http://theatlasofbeauty.com/

ಆಫ್ಘಾನಿಸ್ತಾನ

ಆಫ್ಘಾನಿಸ್ತಾನ

ಕೆಲವು ಮಹಿಳೆಯರು ತಮ್ಮ ಸುತ್ತಮುತ್ತಲಿನ ಯುದ್ಧದಿಂದ ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಈ ಆಫ್ಘಾನಿಸ್ತಾನದ ಸುಂದರಿಯೇ ಸಾಕ್ಷಿ. ವಖಾನ್‌ ಮಹಿಳೆ ತನ್ನ ದುಃಖವನ್ನು ತನ್ನ ಕಣ್ಣಿನಲ್ಲೇ ತುಂಬಿಕೊಂಡಿರುವುದು ಕಾಣತ್ತದೆ.
ಫೋಟೋ ಕೃಪೆ:http://theatlasofbeauty.com/

ಇಥಿಯೋಪಿಯ

ಇಥಿಯೋಪಿಯ

ಯಾವಾಗಲು ವಿಭಿನ್ನತೆಗೆ ಹೆಸರು ಇಥಿಯೋಪಿಯ. ಹಾಗೆಯೇ ಇಥಿಯೋಪಿಯದ ಸುಂದರಿಯೊಬ್ಬಳುತನ್ನ ವಿಭಿನ್ನ ಹೇರ್‌ಕಟ್‌ನಿಂದ ಹೇಗೆ ಕಾಣುತ್ತಿದ್ದಾಳೆ ನೋಡಿ.
ಫೋಟೋ ಕೃಪೆ:http://theatlasofbeauty.com/

 ಐಸ್‌ಲ್ಯಾಂಡ್‌

ಐಸ್‌ಲ್ಯಾಂಡ್‌

ಹೆಸರಿಗೆ ತಕ್ಕಂತೆ ಕೊರೆಯುವ ಚಳಿಗೆ ಐಸ್‌ಲ್ಯಾಂಡ್‌ ಮಹಿಳೆ ಹೇಗೆ ಬಟ್ಟೆ ಹೊದ್ದಿಕೊಂಡಿದ್ದಾರೆ ನೋಡಿ. ಐಸ್‌ಲ್ಯಾಂಡ್ ಸುಂದರಿಯ ಕಣ್ಣುಗಳು ಸಹ ಆಕೆಯ ಹಿಂದಿನ ನೀರಿನ ಬಣ್ಣದಲ್ಲಿವೆ.
ಫೋಟೋ ಕೃಪೆ:http://theatlasofbeauty.com/

ಇಸ್ತಾಂಬುಲ್‌

ಇಸ್ತಾಂಬುಲ್‌

ಅಂದಹಾಗೆ ಮಿಹೇಲ ನೊರೊಕ್‌ ಯಾವಾಗಲು ಪ್ರವಾಸದಲ್ಲಿ ಮೇಕಪ್‌ ರಹಿತ ಸುಂದರಿಯ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದರು. ಇಸ್ತಾಂಬುಲ್‌ನ ಈ ಸುಂದರಿ ನೋಡಿ. ಈಕೆ ಒಂದು ಟೀ ಶಾಪ್‌ನಲ್ಲಿ ಕುಳಿತು ಫೋಜ್‌ ಕೊಟ್ಟಿದ್ದು ಹೀಗೆ.
ಫೋಟೋ ಕೃಪೆ:http://theatlasofbeauty.com/

ಇಥಿಯೋಪಿಯ

ಇಥಿಯೋಪಿಯ

ಹೆಚ್ಚು ಕುತೂಹಲಕಾರಿ ದೇಶ ಅಂದ್ರೆ ಅದು ಇಥಿಯೋಪಿಯ. ಅಲ್ಲಿಯ ಸುಂದರಿ ತನ್ನ ಮೀನಿನ ಕಣ್ಣುಗಳಿಂದ ಕಂಡಿರುವುದು ಹೀಗೆ.
ಫೋಟೋ ಕೃಪೆ:http://theatlasofbeauty.com/

ಅಮೆಜಾನ್‌ ನದಿ

ಅಮೆಜಾನ್‌ ನದಿ

ಅಮೆಜಾನ್‌ ನದಿ ಪ್ರದೇಶದ ಈಕ್ವೆಡಾರ್‌ನ ಮಳೆಗಾಡು ಪ್ರದೇಶದಲ್ಲಿಯ ಬುಡಕಟ್ಟು ಸುಂದರಿಯೊಬ್ಬಳನ್ನು ನೊರೊಕ್‌'ರವರು ಫೋಟೋ ಕ್ಲಿಕ್ಕಿಸಿದ್ದು ಹೀಗೆ.
ಫೋಟೋ ಕೃಪೆ:http://theatlasofbeauty.com/

 ಉಜ್ಬೆಕಿಸ್ತಾನ್‌

ಉಜ್ಬೆಕಿಸ್ತಾನ್‌

ಉಜ್ಬೆಕಿಸ್ತಾನ್‌ನ ಬುಖರದಲ್ಲಿನ ಮಹಿಳೆಯೊಬ್ಬರು ವೈವಿಧ್ಯತೆಯಿಂದ ನೊರೊಕ್‌ ರವರ ಕ್ಯಾಮೆರಾ ಕಣ್ಣಿಗೆ ಕಾಣಸಿಕೊಂಡಿದ್ದು ಹೀಗೆ.
ಫೋಟೋ ಕೃಪೆ:http://theatlasofbeauty.com/

ನ್ಯೂಜಿಲ್ಯಾಂಡ್‌

ನ್ಯೂಜಿಲ್ಯಾಂಡ್‌

ಕೆಲವು ಪ್ರದೇಶಗಳಲ್ಲಿ ಯಾರೂ ಸಹ ತಮ್ಮ ಫೋಟೋ ನೀಡಲು ಒಪ್ಪುವುದಿಲ್ಲ. ಆದರೆ ನ್ಯೂಜಿಲ್ಯಾಂಡ್‌ನ ಮಓರಿ'ಯಲ್ಲಿ ಸುಂದರಿಯೊಬ್ಬಳು ಕ್ಯಾಮೆರಾಗೆ ಪೋಜ್‌ ಕೊಟ್ಟಿದ್ದು ಹೀಗೆ.
ಫೋಟೋ ಕೃಪೆ:http://theatlasofbeauty.com/

ನ್ಯೂಯಾರ್ಕ್‌

ನ್ಯೂಯಾರ್ಕ್‌

ಕಪ್ಪು ಕಸ್ತೂರಿ ಹೌದು. ಅದಕ್ಕೆ ನ್ಯೂಯಾರ್ಕ್‌ನ ಹಾರ್ಲೆನ್‌ ಮಹಿಳೆ ಸಾಕ್ಷಿ. ಈ ಸುಂದರಿ ನೊರೊಕ್‌ ಕ್ಯಾಮೆರಾಗೆ ಪೋಜ್‌ ಕೊಟ್ಟಿದ್ದು ಇನ್ನೂ ಸುಂದರವಾಗಿದೆ.
ಫೋಟೋ ಕೃಪೆ:http://theatlasofbeauty.com/

ಕಿರ್ಗಿಸ್ತಾನ್‌

ಕಿರ್ಗಿಸ್ತಾನ್‌

ಉಜ್ಬೆಕಿಸ್ತಾನ್‌ ಮಹಿಳೆಯೊಬ್ಬಳು ಕಿರ್ಗಿಸ್ತಾನ್‌ನಲ್ಲಿ ಸ್ವಾಭಾವಿಕವಾಗಿ ಕಂಡಿದ್ದು ಹೀಗೆ.
ಫೋಟೋ ಕೃಪೆ:http://theatlasofbeauty.com/

ನೇಪಾಳ

ನೇಪಾಳ

ನೇಪಾಳದ ಕಠ್ಮಂಡುವಿನಲ್ಲಿನ ಬುದ್ಧಿಸ್ಟ್‌ ಮಹಿಳೆ ಕಂಡಿದ್ದು ಇವರು.
ಫೋಟೋ ಕೃಪೆ:http://theatlasofbeauty.com/

ಮಂಗೋಲಿಯಾ

ಮಂಗೋಲಿಯಾ

ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿನ ಸುಂದರ ಯುವತಿ ನೊರೊಕ್‌ ಕ್ಯಾಮೆರಾಗೆ ಪೋಜ್‌ ನೀಡಿದ್ದು ಹೀಗೆ.
ಫೋಟೋ ಕೃಪೆ:http://theatlasofbeauty.com/

ಈಜಿಪ್ಟ್‌

ಈಜಿಪ್ಟ್‌

ಈಜಿಪ್ಟ್‌ನ ಕೈರೋದ ಕಂಪ್ಯೂಟರ್ ಇಂಜಿನಿಯರ್ ಮಹಿಳೆ ತನ್ನ ಹಸಿರು ಕಣ್ಣಿನಿಂದ ಹೇಗೆ ಮನಮೋಹಕವಾಗಿ ಕಾಣಿಸುತ್ತಿದ್ದಾಳೆ ನೋಡಿ.

ಇಂಡೋನೇಷಿಯಾ

ಇಂಡೋನೇಷಿಯಾ

ಈಕೆ ಇಂಡೋನೇಷಿಯಾದ ಜಾವಾ ಸಮುದ್ರ ಪ್ರದೇಶದಲ್ಲಿ ನೊರೊಕ್‌ರ ಕ್ಯಾಮೆರಾಗೆ ಪೋಜ್‌ ನೀಡಿದ್ದು ಹೀಗೆ.

ಉತ್ತರ ಕೊರಿಯಾ

ಉತ್ತರ ಕೊರಿಯಾ

ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ಪ್ರದೇಶದ ವಿಶಿಷ್ಟ ಡಾಕ್ಟರ್ ಸುಂದರಿ ಇವರು.

ಬಲ್ಗೇರಿಯಾ

ಬಲ್ಗೇರಿಯಾ

ಬಲ್ಗೇರಿಯಾ ದೇಶದ ಸೋಫಿಯಾನ ಕಪ್ಪು ಕೂದಲಿನ ಶ್ಯಾಮಲೆ.

ಚೀನಾ

ಚೀನಾ

ಚೀನಾದ ಗುವಾಂಗ್ಝೌನಲ್ಲಿ ಗರ್ಭಿಣಿ ಸುಂದರಿ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಆಕೆಯ ಫೋಟೋವನ್ನು ಕ್ಲಿಕ್ಕಿಸಿದಾಗ ತುಂಬಾ ಸಂತೋಷಗೊಂಡ ನಗುಮುಖವು ಹೇಗೆ ಕಾಣುತ್ತಿದೆ ನೋಡಿ.

ಫಿನ್‌ಲ್ಯಾಂಡ್

ಫಿನ್‌ಲ್ಯಾಂಡ್

ಫಿನ್‌ಲ್ಯಾಂಡ್‌ನ ಬಾಲ್ಟಿಕ್‌ ಸಮುದ್ರ ತೀರದಲ್ಲಿ ಹೊಂಬಣ್ಣದ ಹುಡುಗಿ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ.

ಚಿಲಿ

ಚಿಲಿ

ಚಿಲಿಯ ವಾಲ್ಪರೈಸೊನಲ್ಲಿ ಸ್ಥಳೀಯ ಕಲಾವಿದೆ ಫೋಟೋಗೆ ಲುಕ್ ನೀಡಿದ್ದು ಹೀಗೆ.

 ಕ್ಯೂಬಾ

ಕ್ಯೂಬಾ

ಕ್ಯೂಬಾದಲ್ಲಿಯ ಹವನ ಪ್ರದೇಶದಲ್ಲಿ ಸುಂದರಿ ಯುವತಿಯೊಬ್ಬಳು ಸ್ಟ್ರೀಟ್‌ನಲ್ಲಿ ಕಂಡಿದ್ದು ಹೀಗೆ.

ಸೆಂಟ್‌ ಫೀಟರ್ಸ್‌ಬರ್ಗ್‌

ಸೆಂಟ್‌ ಫೀಟರ್ಸ್‌ಬರ್ಗ್‌

ರಷ್ಯಾದ ಸೆಂಟ್‌ ಫೀಟರ್ಸ್‌ಬರ್ಗ್ ಎದುರು ನರ್ತಿಕಿಯೊಬ್ಬರು ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Photographer Travels The World Taking Pictures Of The Most Beautiful Women In Each Country. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot