Airtel ನಿಂದ ಸದ್ದಿಲ್ಲದೆ ಹೊಸ ಪ್ಲ್ಯಾನ್ ಘೋಷಣೆ: 35 ದಿನಗಳ ವ್ಯಾಲಿಡಿಟಿ!
ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‌ಟೆಲ್ ತನ್ನ ಭಿನ್ನ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಹೆಚ್ಚು ಹೆಚ್ಚು ಹೊಸ ಚಂದಾದಾರರನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಪೈಪೋಟಿ ನೀಡಲು ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಬಳಕೆದಾರರಿಗೆ ಇದರಿಂದ ಸಾಕಷ್ಟು ಅನುಕೂಲ ಆಗಲಿದೆ.
ಹೌದು, ಏರ್‌ಟೆಲ್ (Airtel) ಹೊಸ 289 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಪ್ಲ್ಯಾನ್ ಪ್ರಮುಖವಾಗಿ ಮಾನ್ಯತೆ ದಿನಗಳ ಮೇಲೆ ಕೇಂದ್ರೀಕರಿಸಿದ್ದು, ಇದರೊಂದಿಗೆ ಹಲವು ಪ್ರಯೋಜನಗಳನ್ನೂ ಸಹ ನೀಡುತ್ತದೆ. ಹಾಗಿದ್ರೆ ಈ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯ ಲಭ್ಯ,? ಇದರ ಮಾನ್ಯತೆ ದಿನಗಳ ಎಷ್ಟು ದಿನ ಇರಲಿವೆ?, ಯಾವೆಲ್ಲಾ ಓಟಿಟಿ ಆಪ್‌ಗಳಿಗೆ ಉಚಿತ ಪ್ರವೇಶ ಇದೆ ಎಂದು ತಿಳಿಯೋಣ ಬನ್ನಿ.

ಏರ್‌ಟೆಲ್‌ನ 289ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್: ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಸೈಲೆಂಟ್ ಆಗಿ ಲಾಂಚ್ ಮಾಡಿದ್ದು, ಈ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ಡೇಟಾ ಅನುಭವಕ್ಕಿಂತ ವ್ಯಾಲಿಡಿಟಿ ಸೌಲಭ್ಯವನ್ನು ನೀಡಿದೆ. ಅಂದರೆ ಈ ಪ್ಲ್ಯಾನ್‌ನ ಮಾನ್ಯತೆ ಬರೋಬ್ಬರಿ 35 ದಿನಗಳಾಗಿವೆ. ಈ ಹೊಸ ಪ್ಲ್ಯಾನ್ ಇದೀಗ ಏರ್‌ಟೆಲ್‌ನ ವೆಬ್‌ಸೈಟ್ ಮತ್ತು ಭಾರ್ತಿ ಏರ್‌ಟೆಲ್‌ನ ಮೊಬೈಲ್ ಆಪ್‌ನಲ್ಲಿ ಕಾಣಿಸಿಕೊಂಡಿದೆ.
ಮೊದಲೇ ತಿಳಿಸಿದಂತೆ ಇದು 35 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಉಳಿದಂತೆ ಬಳಕೆದಾರರಿಗೆ 4GB ಡೇಟಾ, 300 ಎಸ್‌ಎಮ್‌ಎಸ್ ಯಾಕೆ ಮತ್ತು ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡುತ್ತದೆ. ಇದಿಷ್ಟು ಮಾತ್ರವಲ್ಲದೆ ಏರ್‌ಟೆಲ್ ಥ್ಯಾಂಕ್ಸ್ ಜೊತೆಗೆ ಹೆಚ್ಚುವರಿ ಪ್ರಯೋಜನ ಸಹ ಇವೆ. ಅಂದರೆ ಅಪೊಲೊ 24|7 ಸರ್ಕಲ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಗೆ ಎಂಟ್ರಿ ಪಡೆಯಬಹುದು.
ಈ ಪ್ಲ್ಯಾನ್‌ನಲ್ಲಿ ಬಹುಪಾಲು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದೆ ಎಂದೇ ಹೇಳಬಹುದು. ಯಾಕೆಂದರೆ ಇದೇ ಬೆಲೆಯ ಇತರೆ ಟೆಲಿಕಾಂಗಳ ಪ್ಲ್ಯಾನ್ ಗಮನಿಸಿದರೆ ಇಷ್ಟೊಂದು ಹೆಚ್ಚಿನ ಪ್ರಯೋಜನಗಳು ಕಾಣಸಿಗುವುದಿಲ್ಲ. ಈ ಮೂಲಕ ನೀವು ನಿಮ್ಮ ಸಿಮ್‌ಗೆ ನಿತ್ಯ 8.25 ರೂ.ಗಳನ್ನು ವೆಚ್ಚ ಮಾಡಿದಂತೆ ಆಗುತ್ತದೆ. ಅದಾಗ್ಯೂ ಏರ್‌ಟೆಲ್ ಸಾಕಷ್ಟು ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿದ್ದು, ಅವುಗಳ ಕಡೆಗೂ ಕಣ್ಣಾಡಿಸೋಣ ಬನ್ನಿ.
ಏರ್‌ಟೆಲ್‌ನ 199 ರೂ.ಗಳ ಪ್ಲ್ಯಾನ್: ಈ ಹಳೆಯ 30 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಇದರಲ್ಲಿಯೂ ಸಹ 289ರೂ.ಗಳ ಪ್ಲ್ಯಾನ್‌ನಲ್ಲಿ ಲಭ್ಯ ಇರುವಂತೆ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ನೀಡುತ್ತದೆ. ಜೊತೆಗೆ 3GB ಡೇಟಾ, ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಜೊತೆಗೆ 300 ಎಸ್‌ಎಮ್‌ಎಸ್ ಆಯ್ಕೆಯನ್ನೂ ಸಹ ನೀಡಲಿದೆ. ಈ 199ರೂ. ಗಳ ಪ್ಲ್ಯಾನ್‌ಅನ್ನು ನೀವು ಬಳಕೆ ಮಾಡಿದ್ದೇ ಆದರೆ ನೀವು ನಿತ್ಯ ನಿಮ್ಮ ಸಿಮ್‌ಗಾಗಿ 6.63ರೂ.ಗಳನ್ನು ವ್ಯಯ ಮಾಡುತ್ತಿದ್ದೀರಿ ಎಂದರ್ಥ.
ಈ 289ರೂ.ಗಳ ಹಾಗೂ 199ರೂ.ಗಳ ಪ್ಲ್ಯಾನ್‌ಗಳಲ್ಲಿ ಕಂಡುಬರುವ ಅಂತರ ಅಷ್ಟೇನು ದೊಡ್ಡದಲ್ಲ 289ರೂ.ಗಳ ಪ್ಲ್ಯಾನ್‌ನಲ್ಲಿ ಸ್ವಲ್ಪವಷ್ಟೇ ಹೆಚ್ಚಿನ ಪ್ರಯೋಜನಗಳನ್ನು ಕಾಣಬಹುದು. ಈ ಕಾರಣಕ್ಕೆ ಗ್ರಾಹಕರು ಅಗತ್ಯ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಂದರೆ 289ರೂ.ಗಳ ಹೊಸ ಪ್ಲ್ಯಾನ್‌ಗಿಂತ 199ರೂ.ಗಳ ಪ್ಲ್ಯಾನ್ ಕೆಲವರಿಗೆ ಉತ್ತಮ ಎನಿಸಬಹುದು.

ಈ ನಡುವೆ ಏರ್‌ಟೆಲ್ ರಾಷ್ಟ್ರದ ಪ್ರತಿಯೊಂದು ಭಾಗದಲ್ಲೂ ಎಷ್ಟು ಸಾಧ್ಯವೋ ಅಷ್ಟು ಬೇಗ ಗ್ರಾಹಕರಿಗೆ 5G ಸೇವೆ ನೀಡಲು ಮುಂದಾಗಿದೆ. ಈ ನಡುವೆ 5G ಡೇಟಾ ಸಹ ಲಭ್ಯ ಆಗುತ್ತಿದ್ದು, ಇದರಿಂದ ಬಳಕೆದಾರರು ಯಾವುದೇ ಅಡೆತಡೆ ಇಲ್ಲದ ಇಂಟರ್ನೆಟ್ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ನೀವು 239ರೂ.ಗಳು ಅಥವಾ ಅದಕ್ಕಿಂತ ಹೆಚ್ಚಿನ ಪ್ರಿಪೇಯ್ಡ್ ಯೋಜನೆಯೊಂದಿಗೆ ರೀಚಾರ್ಜ್ ಮಾಡುವವರಾಗಿದ್ದರೆ, ಅನಿಯಮಿತ 5G ಡೇಟಾವನ್ನು ಪಡೆಯಬಹುದು.


Click it and Unblock the Notifications








