ಆನ್‌ಲೈನ್‌ನಲ್ಲಿ 500ರೂ.ಗೆ ಮಾರಾಟವಾಗುತ್ತಿದೆ ನಿಮ್ಮ ಬ್ಯಾಂಕ್ ವಿವರ!!
ಗ್ರಾಹಕರ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ, ಇ-ಮೇಲ್, ಸಿವಿವಿ ನಂಬರ್‌ಗಳು ಕೇವಲ 500 ರೂ.ಗಳಿಗೆ ಡಾರ್ಕ್‌ನೆಟ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿವೆ.
ಆನ್‌ಲೈನ್ ಬ್ಯಾಂಕಿಂಗ್ ಸುರಕ್ಷತೆ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಮೂಡುವಂತಹ ಪ್ರಕರಣವನ್ನು ಮಧ್ಯಪ್ರದೇಶ ಸೈಬರ್ ಘಟಕದ ಪೊಲೀಸರು ಬೇಧಿಸಿದ್ದು, ಭಾರತೀಯರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಂಪೂರ್ಣ ವಿವರಗಳು ಕೇವಲ 500 ರೂಪಾಯಿಗಳಿಗೆ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿರುವುದನ್ನು ಪತ್ತೆಹಚ್ಚಿದ್ದಾರೆ.!!
ಗ್ರಾಹಕರ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ, ಇ-ಮೇಲ್, ಸಿವಿವಿ ನಂಬರ್‌ಗಳು ಕೇವಲ 500 ರೂ.ಗಳಿಗೆ ಡಾರ್ಕ್‌ನೆಟ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿವೆ ಎಂದು ಪೊಲೀಸರು ತಿಳಿಸಿದ್ದು, ಅಂತಾರಾಷ್ಟ್ರೀಯ ವಂಚಕರ ಜಾಲವೊಂದನ್ನು ಬಯಲಿಗೆಳೆದಿರುವ ಪೊಲೀಸರಿಗೆ ಈ ಮಾಹಿತಿಗಳು ಲಭ್ಯವಾಗಿವೆ.!!

ಅಧಿಕಾರಿಯೊರ್ವರು ಗ್ರಾಹಕನ ಸೋಗಿನಲ್ಲಿ ಬಿಟ್‌ಕಾಯಿನ್‌ಗಳನ್ನು ನೀಡಿ, ವಂಚಕರಿಂದ ಇಂದೋರ್ ಮೂಲದ ಮಹಿಳೆಯೊಬ್ಬರ ಡೆಬಿಟ್ ಕಾರ್ಡ್ ವಿವರ ಪಡೆದಿದ್ದಾರೆ. ನಂತರ ಆ ವಂಚಕರ ತಂಡದ ಇಬ್ಬರು ಖದೀಮರನ್ನು ಮುಂಬಯಿಯಲ್ಲಿ ಬಂಧಿಸಲಾಗಿದ್ದು, ಬಂದಿತನು ಅಮೆರಿಕ ಮೂಲದ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಎಂದು ತಿಳಿದುಬಂದಿದೆ.!!

ಇನ್ನು ಈ ವಂಚಕರ ಜಾಲವು ಹಣ ವ್ಯವಹಾರಕ್ಕೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್)ಅಗತ್ಯವಿರದ ವೆಬ್‌ಸೈಟ್‌ಗಳಲ್ಲಿ ಕಾರ್ಡ್ ವಿವರಗಳನ್ನು ಬಳಸಿಕೊಳ್ಳುತ್ತಿತ್ತು ಎನ್ನಲಾಗಿದ್ದು, ಹಾಗಾಗಿ, ಒನ್‌ಟೈಮ್ ಪಾಸ್‌ವರ್ಡ್ ಇರದ ವೆಬ್‌ಸೈಟ್‌ಗಳ ಮೂಲಕ ವ್ಯವಹರಿಸುವ ಮುನ್ನ ಗ್ರಾಹಕರು ಒಮ್ಮೆ ಯೋಚಿಸಬೇಕಿದೆ.!!
ಓದಿರಿ: ಏರ್‌ಟೆಲ್‌ನಿಂದ ಕೇವಲ 7,777ಕ್ಕೆ ಐಫೋನ್ 7!..ಬೆಚ್ಚಿ ಬೀಳಿಸುವ ಆಫರ್ ಇದು!!


Click it and Unblock the Notifications








