ಕೊನೆಗೂ ಪತ್ತೆಯಾಗದ ವಿಶ್ವ ರಹಸ್ಯಗಳು

By Shwetha
|

ಈ ಜಗತ್ತು ಒಂದು ಮಾಯಾಲೋಕವಿದ್ದಂತೆ ನೀವು ಅಗೆದಷ್ಟೂ ಮೊಗೆದಷ್ಟೂ ನಿಮಗಿಲ್ಲಿ ರಹಸ್ಯಗಳ ಸರಮಾಲೆ ಸಿಕ್ಕೇ ಸಿಗುತ್ತದೆ. ಈಗ ನಾವು ಬಳಸುತ್ತಿರುವ ಅನುಕೂಲಗಳು, ನಮ್ಮ ನಾಗರೀಕತೆ ಹಿಂದೆ ಎಷ್ಟೋ ಪುರಾತನ ಕಾಲದಲ್ಲಿದ್ದ ನಮ್ಮ ಪೂರ್ವಜರ ಭಿಕ್ಷೆಯಾಗಿದೆ. ಈ ನಾಗರೀಕತೆಗಳು ಪ್ರಾಕೃತಿಕ ವಿಕೋಪಗಳಿಂದ ಅಳಿಯುವಿಕೆಯನ್ನು ಕಂಡರೂ ಅಧ್ಯಯನಗಳಿಂದ ಶೋಧನೆಗಳಿಂದ ಮತ್ತೊಮ್ಮೆ ಜೀವ ತಳೆದಿವೆ.

ಓದಿರಿ: ಸೋಜಿಗ: ಪ್ರಪ್ರಥಮ ಬಾರಿಗೆ 3 ಡಿ ಸ್ಕ್ಯಾನಿಂಗ್ ಬಳಸಿ 4 ಮಮ್ಮಿಗಳ ಅಧ್ಯಯನ

ಇಂದಿನ ಲೇಖನದಲ್ಲಿ ಇಂತಹುದೇ ಅತಿ ಪುರಾತನ ಮತ್ತು ಕೌತುಕಮಯವಾಗಿರುವ ಇತಿಹಾಸ ದಾಖಲೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದು ಇದರಿಂದ ಇತಿಹಾಸದ ಬಗೆಗಿನ ಇಣುಕು ನೋಟವನ್ನು ನಿಮಗೆ ಕಂಡೆತ್ತಿಕೊಳ್ಳಬಹುದಾಗಿದೆ.

#1

#1

ಇದೊಂದು ಪುರಾತನ ಸೈಟ್ ಆಗಿದ್ದು ಭೂಮಿಯಲ್ಲಿ ಪತ್ತೆಯಾಗಿದೆ. ಇದನ್ನು ಹೇಗೆ ನಿರ್ಮಿಸಲಾಗಿದೆ ಎಂಬುದು ಇಂದಿನ ಇಂಜಿನಿಯರ್‌ಗಳಿಗೂ ಪತ್ತೆಹಚ್ಚಲು ಕಷ್ಟಾಸಾಧ್ಯವಾಗಿದೆ. ಏಕೈಕ ಹಾಳೆಯಲ್ಲಿ ಸರಿಯಾಗಿ ಕೂರುವ ಈ ಕಲ್ಲುಗಳು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

#2

#2

ಟ್ವಿನಾಕು ಗೇಟ್‌ವೇನಲ್ಲಿ ಸ್ಥಾಪಿತವಾಗಿರುವ ಗಟ್ಟಿಯಾದ ಶಿಲೆಯಾಗಿದೆ. ಈ ಪುರಾತನ ಶಿಲೆಯಲ್ಲಿರುವ ಕೆಲವೊಂದು ಕೆತ್ತನೆಗಳನ್ನು ಸಂಶೋಧಕರಿಗೆ ಇಂದಿಗೂ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಜ್ಯೋತಿಷ್ಯ ಮತ್ತು ಖಗೋಳ ಮೌಲ್ಯಗಳನ್ನು ಈ ಕೆತ್ತನೆಗಳು ಪಡೆದುಕೊಂಡಿವೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

#3

#3

ಭೂಮಿಯಲ್ಲಿರುವ ಹೆಚ್ಚು ನಿಗೂಢ ಸ್ಥಳವಾಗಿ ಈ ಗುಹೆಗಳು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. 2000 ಹಳೆಯದಷ್ಟು ಪುರಾತನ ಇತಿಹಾಸವನ್ನು ಈ ಗುಹೆಗಳು ಪಡೆದುಕೊಂಡಿದ್ದು ಕೃತಕ ಗುಹೆಗಳಾಗಿದ್ದು ಮಾನವನು ಈ ಗುಹೆಗಳನ್ನು ಪತ್ತೆಹಚ್ಚಿದ್ದು ಗುಹೆಗಳ ಎತ್ತರ ಮತ್ತು ಆಕಾರವನ್ನು ಕಂಡು ಸಂಶೋಧಕರು ಸ್ತಂಭೀಭೂತರಾಗಿದ್ದಾರೆ. ಈ ಕೃತಕ ಗುಹೆಗಳನ್ನು ಏತಕ್ಕಾಗಿ ನಿರ್ಮಿಸಲಾಗಿದೆ ಎಂಬುದು ಇನ್ನೂ ರಹಸ್ಯಮಯವಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

#4

#4

ಭೂಮಿಯಾಳದ ನಗರ ನಿಜಕ್ಕೂ ಅದ್ಭುತವಾಗಿರುವ ನೀರಿನಾಳದ ಈ ನಗರವನ್ನು ಸ್ಕೂಬಾ ತರಬೇತುದಾರರೊಬ್ಬರು ಪತ್ತೆಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ನೀರಿನಾಳದ ನಗರವಾಗಿ ಪತ್ತೆಯಾಗಿದೆ. 10,000 ವರ್ಷಗಳ ಹಿಂದೆ ಈ ಕಲ್ಲುಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂಬುದು ಅನ್ವೇಷಣೆಯಾಗಿದ್ದು ಪುರಾತನ ಈಜಿಪ್ಟಿಯನ್ನರುಗಳ ಪಿರಾಮಿಡ್‌ಗಳ ರಚನೆಗಿಂತಲೂ ಮುನ್ನವೇ ಇದು ಜನ್ಮತಾಳಿದೆ ಎನ್ನಲಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

#5

#5

ಅತ್ಯಂತ ಪುರಾತನ ನಗರವಾಗಿ ಖ್ಯಾತಿಗೊಂಡಿದ್ದ ಮೊಹೆಂಜೋದಾರವನ್ನು 1992 ರಲ್ಲಿ ಸಿಂಧೂತಟದಲ್ಲಿ ಪತ್ತೆ ಮಾಡಿದ್ದು ಭಾರತೀಯ ಖಗೋಳಶಾಸ್ತ್ರಜ್ಞ ಆರ್. ಬನಾರ್ಜಿಯಾಗಿದ್ದಾರೆ. ಸುಧಾರಿತ ನ್ಯೂಕ್ಲಿಯರ್ ಆಯುಧಗಳಿಂದ ಈ ನಗರ ಅವನತಿಯನ್ನು ಕಂಡಿದೆ ಎಂಬುದಾಗಿ ಹೇಳಲಾಗುತ್ತಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

#6

#6

ಡೆರಿಂಕ್ಯೂ ಪತ್ತೆಯಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ನಗರವಾಗಿ ಡೆರಿಂಕ್ಯೂ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಇದನ್ನು ಹೇಗೆ ಮತ್ತು ಏತಕ್ಕಾಗಿ ನಿರ್ಮಿಸಲಾಗಿದೆ ಎಂಬುದು ಇನ್ನೂ ರಹಸ್ಯಮಯವಾಗಿದೆ. ತಮ್ಮ ರಕ್ಷಣೆಗಾಗಿ ಈ ನಗರವನ್ನು ಪುರಾತನ ಜನರು ನಿರ್ಮಿಸಿರಬಹುದು ಎಂಬ ಮಾತನ್ನೂ ತಳ್ಳಿಹಾಕುವಂತಿಲ್ಲ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

#7

#7

ಕೋಸ್ಟಾ ರಿಕಾದಲ್ಲಿ ಕಂಡುಬಂದಿರುವ ದೈತ್ಯ ಕಲ್ಲುಗಳು ದಕ್ಷಿಣ ಅಮೇರಿಕಾದಲ್ಲಿ ಪ್ರಥಮವಾಗಿ ಪತ್ತೆಯಾಗಿರುವಂತಹದ್ದಾಗಿದೆ. ಕಾಡುಗಳನ್ನು ಸಮತಟ್ಟು ಮಾಡುತ್ತಿರುವಾಗ ಅಲ್ಲಿನ ಕೆಲಸಗಾರರ ಕಣ್ಣಿಗೆ ಈ ದೈತ್ಯ ಕಲ್ಲುಗಳು ಕಂಡುಬಂದಿವೆ. ಇಲ್ಲಿನ ನಾಗರೀಕರು ಹೇಳುವಂತೆ ಚಿನ್ನದ ಸಂರಕ್ಷಣೆಗಾಗಿ ಬಹುಶಃ ಈ ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ ಎಂದಾಗಿದೆ. ಆದರೆ ಇದಕ್ಕಾಗಿ ಶೋಧಗಳು ನಡೆದಿವೆಯಾದರೂ ಯಾವುದೇ ನಿಧಿ ಪತ್ತೆಯಾಗಿಲ್ಲ. ಈ ಕಲ್ಲುಗಳ ನಿರ್ಮಾಣ ಯಾತಕ್ಕಾಗಿ ಆಗಿದೆ ಎಂಬುದು ಮಾತ್ರ ರಹಸ್ಯಮಯವಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

#8

#8

ರಷ್ಯಾದ ಸಂಶೋಧಕರು ಹೇಳಿರುವಂತೆ, ಈ ಟ್ರ್ಯಾಕ್‌ಗಳು 14 ಮಿಲಿಯನ್ ಹಳೆಯದಾಗಿದ್ದು ಅಜ್ಞಾತ ಪುರಾತನ ನಾಗರೀಕತೆಯೊಂದು ಅಭಿವೃದ್ಧಿಪಡಿಸಿದ್ದಾಗಿರಬಹುದು ಎಂಬುದಾಗಿ ಪತ್ತೆಮಾಡಲಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

Best Mobiles in India

English summary
In this article we are describing Earths most unexplained discoveries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X