ಅಣ್ಣಾವ್ರರಿಗೆ ನಮನ ಸಲ್ಲಿಸಿದ ಗೂಗಲ್: ಕನ್ನಡಿಗರೇ ಇಲ್ಲಿ ನೋಡಿ ಎಂತಹ ಗೌರವ
ಇಂದು ಡಾ.ರಾಜ್‌ಕುಮಾರ್ ಅವರ 88ನೇ ಜನ್ಮದಿನವಾಗಿದ್ದು, ಇದರ ಅಂಗವಾಗಿ ಅಣ್ಣಾವ್ರ ಡೂಗಲ್ ನಿರ್ಮಾಣ ಮಾಡಿ ಗೂಗಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದೆ.
ಸರ್ಚ್ ಇಂಜಿನ್ ದೈತ್ಯ ಗೂಗಲ್ ದೇಶ-ವಿದೇಶದ ಪ್ರತಿಷ್ಠಿತ ಸಾಧಕರ ಜನ್ಮದಿನದಂದೂ ಅದರದ್ದೇ ಡೂಗಲ್ ನಿರ್ಮಿಸಿ ಅವರ ಸಾಧನೆಯನ್ನು ತಿಳಿಸುವ ಮತ್ತು ನೆನಪಿಸುವ ಮೂಲಕ ಗೌರವ ವಂದನೆಯನ್ನು ಸಲ್ಲಿಸುತ್ತದೆ. ಇಂದು ಅದೇ ಗೂಗಲ್ ಗೌರವಕ್ಕೆ ನಮ್ಮ ನಿಮ್ಮ ನೆಚ್ಚಿನ ವರ ನಟ ಡಾ. ರಾಜ್‌ಕುಮಾರ್ ಪಾತ್ರರಾಗಿದ್ದಾರೆ.

ಓದಿರಿ: ಜಿಯೋ ನೀಡುತ್ತಿರುವ ಬೆಲೆಕಟ್ಟಲಾದ ಉಚಿತ ಸೇವೆಗಳಿದು..!!!
ಇಂದು ಡಾ.ರಾಜ್‌ಕುಮಾರ್ ಅವರ 88ನೇ ಜನ್ಮದಿನವಾಗಿದ್ದು, ಇದರ ಅಂಗವಾಗಿ ಅಣ್ಣಾವ್ರ ಡೂಗಲ್ ನಿರ್ಮಾಣ ಮಾಡಿ ಗೂಗಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಇದು ಕನ್ನಡಿಗರ ಸಂಭ್ರಮವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಗೂಗಲ್ ನಿರ್ಮಿಸಿರುವ ಈ ಡೂಗಲ್ ಮೇಲೆ ಕ್ಲಿಕ್ ಮಾಡಿದಲ್ಲಿ ಅಣ್ಣಾವ್ರ ಕುರಿತ ಸಂಪೂರ್ಣ ಮಾಹಿತಿಯೂ ದೊರೆಯಲಿದೆ.
ಓದಿರಿ: ಜುಲೈನಲ್ಲಿ ನೋಕಿಯಾ ರಿಲೀಸ್: ಯಾವತ್ತು ಅಂದ್ರಾ..??!!

ಇದೇ ಮೊದಲ ಬಾರಿಗೆ ಕನ್ನಡ ನಟನಿಗೆ ಸಂದ ಗೌರವ:
ಅಣ್ಣಾವ್ರ ಚಿತ್ರವನ್ನು ಬಳಸಿ ಗೂಗಲ್ ಡೂಗಲ್ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಕನ್ನಡದ ನಟರೊಬ್ಬರಿಗೆ ಇಷ್ಟು ದೊಡ್ಡ ಮಟ್ಟದ ಗೌರವ ದೊರೆತ್ತಿದೆ ಎನ್ನಲಾಗಿದೆ. ಅಣ್ಣಾವ್ರ ಸಾಧನೆಗೆ ಇದು ಕನ್ನಡಿಯಾಗಿದೆ.
ಅಣ್ಣಾವ್ರ ಈ ಡೂಗಲ್ ಮೇಲೆ ಕ್ಲಿಕ್ ಮಾಡಿದರೆ ವಿಕೀಪಿಡಿಯಾ ದಲ್ಲಿ ಅಣ್ಣಾವ್ ರಕುರಿತಾಗಿ ಇರುವ ಸಂಪೂರ್ಣ ಮಾಹಿತಿಯೂ ದೂರೆಯಲಿದ್ದು, ಡಾ. ರಾಜ್ ಬಗ್ಗೆ ತಿಳಿಯಲು ಇದು ಸಹಾಯಕವಾಗಿದೆ.

1929 ಏಪ್ರಿಲ್ 24ರಂದು ಜನಿಸಿದ ಮುತ್ತರಾಜ್ :
1929 ಏಪ್ರಿಲ್ 24ರಂದು ಜನಿಸಿ ಮುತ್ತರಾಜ್ ಎಂಬ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಣ್ಣಾವ್ರ ಹೆಸರನ್ನು ನಂತರ ರಾಜಕುಮಾರ ಎಂದು ಬದಲಾಯಿಸಲಾಯಿತು. ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಅವರು, ಅಭಿಮಾನಿ ದೇವರುಗಳ ಎದೆಯಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ.

ಮಾದರಿ ನಟ; ಡಾ.ರಾಜಕುಮಾರ್:
ಅಭಿಮಾನಿಗಳಿಗೆ ಮಾದರಿಯಾಗಿದ್ದ ರಾಜ್, ಎಂದಿಗೂ ತೆರೆಯ ಮೇಲೆ ಧೂಮಪಾನ ಮಾಡುವುದಾಗಲಿ, ಮಧ್ಯಪಾನ ಮಾಡುವುದನ್ನು ಪ್ರೋತ್ಸಾಹ ನೀಡಿರಲಿಲ್ಲ. ಮತ್ತು ಅಂತಹ ಸನ್ನಿವೇಶದಲ್ಲಿ ಕಾಣಿಸಿಕೊಂಡಿಲ್ಲ ಸಹ. ಈ ಮೂಲಕ ಎಲ್ಲಾ ನಟರಿಗೂ ಮಾದರಿಯಾಗಿದ್ದರು. ಇವರ ಬಂಗರದ ಮನುಷ್ಯ ಚಿತ್ರ ಅದೆಷ್ಟೋ ಯುವಕ ಬಾಳಿಗೆ ದಾರಿ ದೀಪ ಸಹ ಆಗಿತ್ತು.

ಅಣ್ಣವ್ರ ಖ್ಯಾತಿ ವ್ಯಾಪ್ತಿ ವಿಸ್ತರಿಸಿದೆ:
ಡಾ.ರಾಜ್‌ಕುಮಾರ್ ಅವರ ಖ್ಯಾತಿ ಈಗಾಗಲೇ ದೇಶದಾದ್ಯಂತ ಪಸರಿಸಿದೆ. ಇದೇ ಸಂದರ್ಭದಲ್ಲಿ ಗೂಗಲ್ ಡೂಗಲ್ ಈ ಖ್ಯಾತಿಯ ವ್ಯಾಪ್ತಿಯನ್ನು ಇನಷ್ಟು ವಿಸ್ತರಿಸಿದೆ ಎಂದರೆ ತಪ್ಪಾಗಲಾರದು. ರಾಜ್ ಬಗ್ಗೆ ತಿಳಿಯಲು ಇದೊಂದು ಸುಸಂದರ್ಭವಾಗಿದೆ.

ಆಂಗ್ಲ ಮಾಧ್ಯಮಗಳಲ್ಲಿ ರಾಜ್ ಗುಣಗಾನ:
ನಮ್ಮ ರಾಜ್ಯದ ಮಾಧ್ಯಮಗಳಲ್ಲಿ ರಾಜ್ ಕುರಿತ ಕಾರ್ಯಕ್ರಮಗಳು ಪ್ರಸಾರವಾಗುವುದು ಸಾಮಾನ್ಯ. ಆದರೆ ಗೂಗಲ್ ಡೂಗಲ್ ನಿಂದಾಗಿ ಅಣ್ಣವ್ರ ಕುರಿತು ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದು, ರಾಜ್ ಕುರಿತು ಗುಣಗಾನ ಮಾಡಿದ್ದಾರೆ.

ಅಭಿಮಾನಿ ದೇವರುಗಳು ಫುಲ್ ಖುಷ್:
ಗೂಗಲ್ ಡೂಗಲ್ ನಿಂದಾಗಿ ಅಣ್ಣಾವ್ರ ಅಭಿಮಾನಿ ದೇವರುಗಳು ಫುಲ್ ಖುಷಿಯಾಗಿದ್ಧಾರೆ. ತಮ್ಮ ನೆಚ್ಚಿನ ತಾರೆಗೆ ಗೌರವ ಸಲ್ಲಿಸಿರುವ ಗೂಗಲ್ ಗೆ ತಮ್ಮ ವಂದನೆಯನ್ನು ಸಲ್ಲಿಸಿದ್ದಾರೆ. ಈ ಮೂಲಕ ತಮ್ಮ ಆರಾಧ್ಯ ದೈವನನ್ನು ದೇಶದ ಮೂಲೆ ಮೂಲೆಗೆ ಪರಿಚಯಿಸಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications








