Home
ಫೀಚರ್ ಸ್ಟೋರೀಸ್

ಭಾಷೆ ಅನುವಾದಿಸುವ ಹಿಯರ್ ಪೀಸ್ ಮಾರುಕಟ್ಟೆಗೆ ಬರಲಿದೆ!

By Ashok

ಅಪರಿಚಿತ ಭಾಷೆಯ ಊರಿನಲ್ಲಿ ಏನು ಕೇಳಬೇಕಂತ ತಿಳಿಯದೆ ಏನು ಹೇಳಬೇಕಂತ ತಿಳಿಯದೆ ಒದ್ದಾಡಿದ ಸ್ಥಿತಿಯನ್ನು ನಾವೆಲ್ಲರೂ ಎದುರಿಸಿದ್ದೇವೆ. ನಿಯಮಿತವಾಗಿ ಪ್ರವಾಸದಲ್ಲಿರುವವರಿಗೆ ಇದು ಸರ್ವೇ ಸಾಮಾನ್ಯ ಸಮಸ್ಯೆ.

ಭಾಷೆ ಅನುವಾದಿಸುವ ಹಿಯರ್ ಪೀಸ್ ಮಾರುಕಟ್ಟೆಗೆ ಬರಲಿದೆ!

ಈ ರೀತಿಯ ಪರಿಸ್ಥಿತಿಯಿಂದ ಕಾಪಾಡಲು, ವೇವರ್ಲಿ ಲ್ಯಾಬ್ಸ್ ಒಂದು ಪರಿಹಾರ ಹುಡುಕಿದೆ, ಚಿಕ್ಕ ಹಿಯರ್ ಪೀಸ್ ನಿಮ್ಮ ಸೆಟ್ಟಿಂಗ್ಸಿನ ಅನುಸಾರ ಭಾಷೆಯನ್ನು ಅನುವಾದಿಸುತ್ತದೆ.

ಪೈಲಟ್ ಹೆಸರಿನ ಈ ಸಾಧನದಲ್ಲಿ ಎರಡು ಸಣ್ಣ ಸಣ್ಣ ಹಿಯರ್ ಪೀಸುಗಳಿವೆ, ಬ್ಲೂಟೂಥ್ ಮೂಲಕ ನಿಮ್ಮ ಮೊಬೈಲಿಗೆ ಸಂಪರ್ಕಿಸಬಹುದು. ಮೊದಲಿಗೆ, ಮೊಬೈಲಿನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ನಿಮ್ಮ ನೆಚ್ಚಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ, ನಿಮ್ಮ ಸ್ಮಾರ್ಟ್ ಫೋನ್ ಸ್ಥಳೀಯ ಭಾಷಾ ಡಾಟಾವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ; ಹಾಗಾಗಿ ಈ ಆ್ಯಪ್ ಕಾರ್ಯನಿರ್ವಹಿಸಲು ಅಂತರ್ಜಾಲದ ಸಂಪರ್ಕ ಬೇಕಿಲ್ಲ.

ಓದಿರಿ: 'ವಿಂಡೋಸ್‌ 10'ನಲ್ಲಿ ಭಾಷೆ ಆಡ್‌ ಮಾಡುವುದು, ರಿಮೂವ್‌ ಮತ್ತು ಬದಲಾವಣೆ ಹೇಗೆ?

ನಿಮಗಿದರ ಬಗ್ಗೆ ಆಸಕ್ತಿಯಿದ್ದಲ್ಲಿ, indiegogo ಪುಟದಲ್ಲಿ $129ಗೆ ಈಗಲೇ ಪ್ರೀ ಆರ್ಡರ್ ಮಾಡಬಹುದು (ಅಂದಾಜು 8,600 ರುಪಾಯಿ). ಈ ಸಾಧನದ ಕೆಲವು ವೈಶಿಷ್ಟತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಭಾಷೆ ಅನುವಾದಿಸುವ ಹಿಯರ್ ಪೀಸ್ ಮಾರುಕಟ್ಟೆಗೆ ಬರಲಿದೆ!

ಮಾತನಾಡುತ್ತಿರುವವರು ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರೂ ಈ ಸಣ್ಣ ಸಾಧನವು ಭಾಷಾನುವಾದ ಮಾಡಬಲ್ಲದು. ಸರಳವಾಗಿ ಹೇಳಬೇಕೆಂದರೆ, ಈ ಸಾಧನದ ಸ್ಪೀಕರ್ ಮೂಲಕ ನೀವು ನಿಮ್ಮ ಭಾಷೆಯಲ್ಲಿ ದನಿಯನ್ನು ಕೇಳುತ್ತೀರಿ.

ಭಾಷೆ ಅನುವಾದಿಸುವ ಹಿಯರ್ ಪೀಸ್ ಮಾರುಕಟ್ಟೆಗೆ ಬರಲಿದೆ!

ಪೈಲಟ್ ಸಾಧನಲ್ಲಿ ಸಂಗೀತವನ್ನು ಆಲಿಸುವುದಕ್ಕೆ ವೈರ್ ಲೆಸ್ ಸಾಧನವೂ ಅಡಕವಾಗಿದೆ. ಈ ಹಿಯರ್ ಪೀಸ್ ಗೆ ಒಂದು ಪ್ರತ್ಯೇಕ ಆ್ಯಪ್ ಲಭ್ಯವಿದೆ, ಅದರ ಮೂಲಕ ಬಳಕೆದಾರರು ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ತಮ್ಮ ಹಿಯರ್ ಪೀಸ್ ಗೆ ಅದನ್ನು ಅಪ್ ಲೋಡ್ ಮಾಡಿಕೊಂಡು ಅಂತರ್ಜಾಲ ಸೌಲಭ್ಯವಿಲ್ಲದೇ ಇದ್ದಾಗಲೂ ಉಪಯೋಗಿಸಬಹುದು.

ಜೊತೆಗೆ ಈ ಸಾಧನದಲ್ಲಿ ಕಾನ್ಫರೆನ್ಸ್ ಮೋಡ್ ಕೂಡ ಇದೆ; ಅನೇಕರು ಈ ಹೆಡ್ ಸೆಟ್ಟನ್ನು ಧರಿಸಿ ಮಾತುಕತೆಗೆ ತೊಡಗಬಹುದು.

ಭಾಷೆ ಅನುವಾದಿಸುವ ಹಿಯರ್ ಪೀಸ್ ಮಾರುಕಟ್ಟೆಗೆ ಬರಲಿದೆ!

ಅತ್ಯಾಧುನಿಕ ಸ್ಪೀಚ್ ರೆಕಗ್ನಿಶನ್ ತಂತ್ರಜ್ಞಾನ, ಮೆಷಿನ್ ಟ್ರಾನ್ಸ್ಲೇಶನ್ ತಂತ್ರಜ್ಞಾನವನ್ನು ಈ ಸಾಧನದಲ್ಲಿ ಉಪಯೋಗಿಸಿಕೊಳ್ಳಲಾಗಿದೆ.

ಭಾಷೆ ಅನುವಾದಿಸುವ ಹಿಯರ್ ಪೀಸ್ ಮಾರುಕಟ್ಟೆಗೆ ಬರಲಿದೆ!

ಮೇ 2017ರಲ್ಲಿ ಬಿಡುಗಡೆಯಾಗಲಿರುವ ಈ ಸಾಧನದಲ್ಲಿ ಮೊದಲಿಗೆ ಇಂಗ್ಲೀಷ್, ಸ್ಪ್ಯಾನಿಶ್, ಫ್ರೆಂಚ್, ಇಟಾಲಿಯನ್ ಹಾಗೂ ಪೋರ್ಚುಗೀಸ್ ಭಾಷೆಗಳಿರಲಿವೆ.

ಭಾಷೆ ಅನುವಾದಿಸುವ ಹಿಯರ್ ಪೀಸ್ ಮಾರುಕಟ್ಟೆಗೆ ಬರಲಿದೆ!

ನಂತರದ ದಿನಗಳಲ್ಲಿ ಜರ್ಮನ್, ಹೆಬ್ರೂ, ಅರೇಬಿಕ್, ರಷ್ಯನ್ ಭಾಷೆಗಳು, ಆಫ್ರಿಕಾ ಮತ್ತು ಏಷಿಯಾದ ಭಾಷೆಗಳನ್ನು ಕಂಪನಿಯು ಸೇರಿಸುತ್ತದೆ.

Best Mobiles in India

English summary
Most of us have faced a situation, where we got stranded in the city without knowing the native language. Now meet Pilot and get amazed!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+