'ವಿಂಡೋಸ್‌ 10'ನಲ್ಲಿ ಭಾಷೆ ಆಡ್‌ ಮಾಡುವುದು, ರಿಮೂವ್‌ ಮತ್ತು ಬದಲಾವಣೆ ಹೇಗೆ?

By Suneel
|

ಎಲ್ಲರಿಗೂ ತಿಳಿದಿರುವ ಹಾಗೆ ಲೇಟೆಸ್ಟ್ ವಿಂಡೋಸ್‌ ವರ್ಸನ್ 'ವಿಂಡೋಸ್‌ 10'. 'ವಿಂಡೋಸ್‌ 10' ನೀಡುವ ಅತ್ಯುತ್ತಮ ಫೀಚರ್ ಡಿಫಾಲ್ಟ್‌ ಭಾಷೆ ಬದಲಿಸುವುದು. ನಿಮಗಿಷ್ಟವಾದ ಭಾಷೆಯನ್ನು ವಿಂಡೋಸ್‌ 10 ರಲ್ಲಿ ವ್ಯವಸ್ಥೆಗೊಳಿಸಬಹುದು.

ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ನೆಚ್ಚಿನ ಭಾಷೆಯನ್ನು ಹೊಂದಬೇಕೇ? 'ವಿಂಡೋಸ್‌ 10' ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಇದು ಸಾಧ್ಯ. ಆದ್ದರಿಂದ ಇಂದಿನ ಲೇಖನದಲ್ಲಿ 'ವಿಂಡೋಸ್‌ 10' ರಲ್ಲಿ ಸುಲಭವಾಗಿ ಹೇಗೆ ಭಾಷೆ ಆಡ್‌ ಮಾಡುವುದು, ರಿಮೂವ್ ಮಾಡುವುದು ಮತ್ತು ಭಾಷೆ ಬದಲಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ವಿಂಡೋಸ್‌ 10 ಬಳಕೆದಾರರು ಈ ಫೀಚರ್‌ ಬಳಕೆಗಾಗಿ ಕೆಲವು ಹಂತಗಳನ್ನು ಅನುಸರಿಸಬೇಕಿದ್ದು, ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ವಿಂಡೋಸ್‌ 10 ರಲ್ಲಿ ಡಿಫಾಲ್ಟ್‌ ಭಾಷೆ ಬದಲಾವಣೆಗಾಗಿ ಅನುಸರಿಸಬೇಕಾದ ಹಂತಗಳು

ಹಂತ 1

ಹಂತ 1

ಮೊದಲಿಗೆ ವಿಂಡೋಸ್‌ 10 ಆಪರೇಟಿಂಗ್ ಸಿಸ್ಟಮ್‌ನಲ್ಲಿ ವಿಂಡೋಸ್‌ ಮೇಲೆ ಕ್ಲಿಕ್‌ ಮಾಡಿ ನಂತರ ಸೆಟ್ಟಿಂಗ್ಸ್ ಅನ್ನು ಕ್ಲಿಕ್‌ ಮಾಡಿ

ಹಂತ 2

ಹಂತ 2

ಸೆಟ್ಟಿಂಗ್‌ನಲ್ಲಿ "Time &Language" ಆಯ್ಕೆ ಮಾಡಿ

ಹಂತ 3

ಹಂತ 3

ಈ ಹಂತದಲ್ಲಿ ಎಡಭಾಗದಲ್ಲಿ "Region & Language" ಆಯ್ಕೆ ಮಾಡಿ. ಚಿತ್ರ ಗಮನಿಸಿ

ಹಂತ 4

ಹಂತ 4

ಡ್ರಾಪ್‌ ಡೌನ್‌ ಆಯ್ಕೆಯಲ್ಲಿ ಭಾಷೆಯನ್ನು ಸೆಲೆಕ್ಟ್‌ ಮಾಡಿ, ನಿಮ್ಮ ಓಎಸ್‌ಗೆ ಸೆಟ್‌ ಮಾಡಿ. ನಿಮ್ಮ ಆಯ್ಕೆಯ ಭಾಷೆ ಇರದಿದ್ದಲ್ಲಿ ನಂತರ "Add a language" ಸೆಲೆಕ್ಟ್‌ ಮಾಡಿ.

ಹಂತ 5

ಹಂತ 5

ಈ ಹಂತದಲ್ಲಿ ಹಲವು ಭಾಷೆಗಳನ್ನು ನೋಡುತ್ತೀರಿ. ಈ ಭಾಷೆಗಳಲ್ಲಿ ನಿಮ್ಮ ಓಎಸ್‌ಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ.

ಹಂತ 6

ಹಂತ 6

ಭಾಷೆ ಆಯ್ಕೆ ಮಾಡಿದ ನಂತರ ಭಾಷೆಯ ಪ್ಯಾಕೇಜ್‌ ಪ್ರದರ್ಶನವಾಗುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ಸರಳವಾಗಿ ನೀವು ಲಾಂಗ್ವೇಜ್‌ ಪ್ಯಾಕ್‌ ಮೇಲೆ ಕ್ಲಿಕ್‌ ಮಾಡಿರಿ.

ಹಂತ 7

ಹಂತ 7

ಈ ಹಂತದಲ್ಲಿ ನೀವು ಭಾಷೆಗೆ ಸಂಬಂಧಿಸಿದ 3 ಆಯ್ಕೆಗಳನ್ನು ಪಡೆಯುತ್ತೀರಿ. "Set as default", "Options", ಮತ್ತು "Remove".

ಹಂತ 8

ಹಂತ 8

3 ಆಯ್ಕೆಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿದ ನಂತರ, "Option" ಸೆಲೆಕ್ಟ್‌ ಮಾಡಿದಲ್ಲಿ, ನೀವು ಬೇಸಿಕ್ ಟೈಪಿಂಗ್‌ ಲಾಂಗ್ವೇಜ್‌ ಮತ್ತು ಸ್ಪೀಚ್‌ ಲಾಂಗ್ವೇಜ್‌ ಆಗಿ ಸೆಲೆಕ್ಟ್ ಮಾಡಿದ ಭಾಷೆಗೆ ಆಯ್ಕೆಗಳನ್ನು ಪಡೆಯಬಹುದು. ಅಲ್ಲದೇ ಟಾಸ್ಕ್‌ಬಾರ್‌ನಲ್ಲಿ ಸುಲಭವಾಗಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹದು. ಈ ಹಂತಗಳಿಂದ ಯಶಸ್ವಿಯಾಗಿ ನೀವು ಭಾಷೆಯನ್ನು ಆಡ್‌ ಮಾಡಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
How to Add, Remove and Change Language In Windows 10. read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X