ನಿಮ್ಮ ಜೀವನದ ಕೆಟ್ಟ ನೆನಪುಗಳನ್ನು ಮರೆಯುವಂತಿದ್ದರೆ? ಹೌದು,ಇದು ಸಾಧ್ಯ!!

Written By:

ಮರೆವು ಎಂಬುದು ದೇವರು ಕೊಟ್ಟ ಒಂದು ಅತ್ಯದ್ಬುತ ವರ!! ಹೌದು, ಅದೆಷ್ಟೋ ವರ್ಷಗಳ ಹಿಂದೆ ನಡೆದ ದುಃಖಕರ ವಿಚಾರ ಜೀವಮಾನ ಪೂರ್ತಿ ನಮ್ಮನ್ನು ಕಾಡುತ್ತಿರುತ್ತದೆ. ನಮಗೆ ಗೊತ್ತಿದ್ದೆಯೋ ಅಥವಾ ಗೊತ್ತಿಲ್ಲದೆಯೋ ಹಲವು ನೆನಪು ಮಾಡಿಕೊಳ್ಳಬಾರದ ತಪ್ಪನ್ನು ಪ್ರತಿಯೊಬ್ಬರು ಮಾಡುತ್ತಾರೆ.!!

ಇಂತಹ ತಪ್ಪುಗಳು ನಮ್ಮನ್ನು ಯಾವಾಗಲೂ ಕಾಡುತ್ತಿರುತ್ತವೆ. ಎಷ್ಟೇ ಪ್ರಯತ್ನಿಸಿದರೂ ಆ ನೆನಪುಗಳನ್ನು ನಾವು ಎಂದೂ ಮರೆಯಲು ಸಾಧ್ಯವಲ್ಲ. ಹೀಗೇ ಮನೋರೋಗಿಗಳೂ ಕೂಡ ತಯಾರಾಗುತ್ತಾರೆ. ಹಾಗಾಗಿ, ಮೆದುಳಿನಿಂದ ಕೆಟ್ಟ ನೆನಪುಗಳನ್ನು ತೊಡೆದು ಹಾಕುವಂತಹ ಸಂಶೋಧನೆಯನ್ನು ವಿಜ್ಞಾನಿಗಳು ಮಾಡಲು ಪ್ರಯತ್ನಿಸುತ್ತಿದ್ದರು.

ನಿಮ್ಮ ಜೀವನದ ಕೆಟ್ಟ ನೆನಪುಗಳನ್ನು ಮರೆಯುವಂತಿದ್ದರೆ? ಹೌದು,ಇದು ಸಾಧ್ಯ!!

5000 ಕ್ಕಿಂತ ಕಡಿಮೆ ಬೆಲೆಯಲ್ಲಿ ಇರುವ 4G ಸ್ಮಾರ್ಟ್‌ಫೋನ್‌ ಲೀಸ್ಟ್!!!!

ಅಂತಹ ಪ್ರಯತ್ನ ಇದೀಗ ಸಾಧ್ಯವಾಗಿದೆ. ಮೆದುಳಿನಿಂದ ಕೆಟ್ಟ ನೆನಪುಗಳನ್ನು ತೊಡೆದು ಹಾಕುವಂತಹ ನೂತನ ಸಂಶೋಧನೆಯನ್ನು ಟೊರಾಂಟೋ ವಿಶ್ವವಿದ್ಯಾಲಯದ ಹಿರಿಯ ಮಹಿಳಾ ವಿಜ್ಞಾನಿ ಪ್ರೊಫೆಸರ್ ಶೀನಾ ಜೋಶ್ಲಿನ್ ಮಾಡಿದ್ದಾರೆ. ಬೋಸ್ಟನ್​ನಲ್ಲಿ ನಡೆದ ವಿಶ್ವ ವಾರ್ಷಿಕ ವಿಜ್ಞಾನ ಸಮಾವೇಶದಲ್ಲಿ ತಮ್ಮ ಸಂಶೋಧನೆಯನ್ನು ಬಹಿರಂಗಪಡಿಸಿದ್ದಾರೆ.

ನಿಮ್ಮ ಜೀವನದ ಕೆಟ್ಟ ನೆನಪುಗಳನ್ನು ಮರೆಯುವಂತಿದ್ದರೆ? ಹೌದು,ಇದು ಸಾಧ್ಯ!!

ಮೆದುಳಿನಲ್ಲಿರುವ ಕೋಟ್ಯಂತರ ನ್ಯೂರಾನ್​ಗಳಲ್ಲಿ ಕೆಲವಲ್ಲಿ ಮಾತ್ರ ಕೆಟ್ಟ ನೆನಪುಗಳು ಸಂಗ್ರಹವಾಗಿರುತ್ತವೆ. ಇಂತಹ ನ್ಯೂರಾನ್​ಗಳನ್ನು ಕಂಡುಹಿಡಿದು ನಾಶಪಡಿಸಲು ಸಾಧ್ಯವಿದೆ ಎಂದು ಶೀನಾ ಹೇಳಿದ್ದಾರೆ. ಮಾತ್ರೆಯ ಮೂಲಕ ನಾಶಪಡಿಸುವ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇಲಿಗಳ ಮೇಲೆ ನಡೆಸಿರುವ ಪ್ರಯೋಗಗಳು ಯಶಸ್ವಿಯಾಗಿದ್ದು, ಮನುಷ್ಯರ ಮೇಲಿನ ಪ್ರಯೋಗಗಳನ್ನು ಆರಂಭಿಸಲಾಗಿದೆ ಎಂದಿದ್ದಾರೆ.!!

English summary
delete bad memories It might then come as a surprise to learn that until recently, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot