ಮೊಬೈಲ್‌ಗೆ ಇನ್ಶೂರೆನ್ಸ್ ಮಾಡಿಸುವುದು ಉತ್ತಮವೇ?..ಏನಾದ್ರೂ ಲಾಭ ಇದೆಯಾ?
ಸಾಮಾನ್ಯವಾಗಿ ಇನ್ಶೂರೆನ್ಸ್ ಮಹತ್ವವೇನು ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಏನಾದರೂ ಹಾನಿ ಆದಾಗ ನಷ್ಟ ಭರಿಸಲು ಇನ್ಶೂರೆನ್ಸ್ ನೆರವಾಗುತ್ತದೆ. ವಾಹನಗಳ ಇನ್ಶೂರೆನ್ಸ್, ಪ್ರಾಪರ್ಟಿ ಇನ್ಶೂರೆನ್ಸ್ ಗಳಂತೆ ಇಂದಿನ ಅಗತ್ಯ ಡಿವೈಸ್ ಎನಿಸಿಕೊಂಡಿರುವ ಸ್ಮಾರ್ಟ್‌ಫೋನ್‌ಗಳಿಗೂ ಇನ್ಶೂರೆನ್ಸ್ ಮಾಡಿಸಬಹುದು. ಆದ್ರೆ ಮೊಬೈಲ್‌ಗಳಿಗೆ ಇನ್ಶೂರೆನ್ಸ್ ಮಾಡಿಸುವ ಅಗತ್ಯ ಇದೆಯಾ?..ಮಾಡ್ಸಿದ್ರೆ, ಏನಾದ್ರೂ ಲಾಭಗಳಿವೆಯಾ?

ಹೌದು, ಹೊಸ ಫೋನ್ ಖರೀದಿಸುವ ಬಹುತೇಕರ ಎಲ್ಲರು ಮೊಬೈಲ್‌ಗಳಿಗೆ ಇನ್ಶೂರೆನ್ಸ್ ಬೇಕಾ? ಎಂದು ಯೋಚನೆ ಮಾಡಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೊಬೈಲ್‌ಗಳಿಗೆ ಇನ್ಶೂರೆನ್ಸ್ ನಿಜಕ್ಕೂ ಅಗತ್ಯ ಎನಿಸದು. ಆದ್ರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಒಂದು ಉತ್ತಮ ಇನ್ಶೂರೆನ್ಸ್ ಮಾಡಿಸುವುದು ಖಂಡಿತಾ ಅಗತ್ಯ ಎನಿಸುತ್ತದೆ. ಯಾವ ಸಂದರ್ಭದಲ್ಲಿ ಮಾಡಿಸಬೇಕು ಮತ್ತು ಯಾವ ಸಂದರ್ಭಗಳಲ್ಲಿ ಮಾಡಿಸಬಾರ್ದು ಅಂತೀರಾ?
ಪ್ರಸ್ತುತ 5000ರೂ. ಗಳಿಂದ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿವೆ. ಎಂಟ್ರಿ ಲೆವೆಲ್ ಅಥವಾ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು ಇನ್ಶೂರೆನ್ಸ್ ಅಗತ್ಯ ಇಲ್ಲ ಎಂದು ಹೇಳಬಹುದು. ಆದರೆ ದುಬಾರಿ ಬೆಲೆಯ, ಹೈ ಎಂಡ್ ದರದ ಫೋನ್ ಖರೀದಿಸುವ ಗ್ರಾಹಕರು ಇನ್ಶೂರೆನ್ಸ್ ಇರಲಿ ಎಂದು ಹೇಳಬಹುದು. ಆದರೆ ಅಂತಿಮವಾಗಿ ಇನ್ಶೂರೆನ್ಸ್ ಮಾಡಿಸುವ ಆಯ್ಕೆ ಫೋನ್ ಖರೀದಿಸುವ ಗ್ರಾಹಕರ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಮೊಬೈಲ್‌ಗೆ ಇನ್ಶೂರೆನ್ಸ್ ಮಾಡಿಸಿದ್ರೆ, ಯಾವ ಪ್ರಯೋಜನಗಳು ದೊರೆಯುತ್ತೆ? ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಕಸ್ಮಿಕವಾಗಿ ಆಗುವ ಹಾನಿಗಳು (Accidental Damage)
ಆಕಸ್ಮಿಕವಾಗಿ ಆಗುವ ಹಾನಿಗಳು ಮೊಬೈಲ್ ಸಾಫ್ಟ್‌ವೇರ್‌ಗೆ ಆಂತರಿಕ ಹಾನಿಯನ್ನು ಉಂಟುಮಾಡಬಹುದು. ಅದರ ಜೊತೆಗೆ ಫೋನ್‌ಗೆ ಬಾಹ್ಯ ಹಾನಿಯನ್ನು ಉಂಟುಮಾಡಬಹುದು. ಉದಾಹರಣೆಗೆ: ಸ್ಕ್ರೀನ್ ಹಾನಿಯಾಗುವುದು, ಪ್ಯಾನೆಲ್ ಒಡೆಯುವುದು, ಇತ್ಯಾದಿ. ಒಂದು ವೇಳೆ ಸ್ಮಾರ್ಟ್‌ಫೋನ್ ಇನ್ಶೂರೆನ್ಸ್ ಮಾಡಿಸಿದ್ರೆ, ಇನ್ಶೂರೆನ್ಸ್ ಕಂಪನಿಯು ಹಾನಿ ವೆಚ್ಚಗಳನ್ನು ಭರಿಸುತ್ತದೆ.
ಫೋನ್ ನೀರಿನಲ್ಲಿ ಇದ್ದಾಗ (Water Damage)
ನೀರು ಅಥವಾ ಇತರೆ ದ್ರವಗಗಳಲ್ಲಿ ಫೋನ್ ಬಿದ್ದರೆ, ಸಾಮಾನ್ಯ ಆಂತರಿಕವಾಗಿ ಹೆಚ್ಚಿನ ಹಾನಿ ಆಗುವ ಸಾಧ್ಯತೆಗಳು ಇರುತ್ತವೆ. ಹಾಗೆಯೇ ಸ್ಮಾರ್ಟ್‌ಫೋನ್‌ನ ಕಾರ್ಯನಿರ್ವಹಣೆಯನ್ನು ಪೂರ್ಣವಾಗಿ ಬಂದ್ ಆಗಬಹುದು. ಕೆಲವು ಇನ್ಶೂರೆನ್ಸ್ ಸಂಸ್ಥೆಗಳು ಇಂತಹ ಪ್ರಾಬ್ಲಂ ಆದಾಗಲು ಹಾನಿ ಭರಿಸುತ್ತವೆ.
ಬಿಡಿ ಭಾಗಗಳ ಬದಲಾವಣೆ
ಫೋನ್ ಹಾನಿ ಆದಾಗ ಕೆಲವು ಆಂತರಿಕ ಮತ್ತು ಬಾಹ್ಯ ಬಿಡಿ ಭಾಗಗಳನ್ನು ಬದಲಾಯಿಸಬೇಕಾಗುತ್ತದೆ. ಕೆಲವು ಬಿಡಿ ಭಾಗಗಳು ಅತ್ಯಂತ ದುಬಾರಿ ಆಗಿರುತ್ತವೆ. ಇಂತಹ ಸಂದರ್ಭಗಳಲ್ಲಿ ಇನ್ಶೂರೆನ್ಸ್ ಮಾಡಿಸಿದ್ರೆ, ನೆರವಾಗುತ್ತದೆ.

ಫೋನ್ ಕಳ್ಳತನ ಆದಾಗ
ಸ್ಮಾರ್ಟ್‌ಫೋನ್ ಕಳ್ಳತನವಾದಾಗ ಇನ್ಶೂರೆನ್ಸ್ ನೆರವಿಗೆ ಬರುವ ಸಾಧ್ಯತೆ ಅಧಿಕ. ಫೋನ್ ಕಳ್ಳತನ ಆದಾಗ ಫೋನ್ ಕಳುವಾಗಿರುವ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿರಬೇಕು. ಕಳೆದ ಫೋನ್ ಸಿಗುವ ಸಾಧ್ಯೆತ ಕಡಿಮೆ ಇರುತ್ತದೆ. ಆದ್ರೆ ಇನ್ಶೂರೆನ್ಸ್ ಇದ್ದರೆ, ಸ್ವಲ್ಪ ನೆರವಾಗುತ್ತದೆ.
ಫೋನ್ ಈ ರೀತಿ ಹಾನಿ ಆದ್ರೆ, ಇನ್ಶೂರೆನ್ಸ್ ಕವರ್ ಆಗುವ ಸಾಧ್ಯತೆ ಕಡಿಮೆ:
* ಸಾಮಾನ್ಯ ನೀರಿನಲ್ಲಿ ಬಿದ್ರೆ
* ಸಾಮಾನ್ಯ ನೀರಿನಿಂದ ಅಥವಾ ಕಣ್ಣೀರಿನಿಂದ ಫೋನ್ ಹಾನಿ ಆದ್ರೆ
* ಫೋನಿನಲ್ಲಿ ಎಲೆಕ್ಟ್ರಾನಿಕ್ ಅಥವಾ ಯಾಂತ್ರಿಕ ಸ್ಥಗಿತ
* ಬೇರೆಯವರ ಕೈಯಲ್ಲಿದ್ದಾಗ ಫೋನ್ ಹಾನಿಯಾಗಿದೆ ಅಥವಾ ಕಳೆದುಹೋಗಿದೆ ಎಂದಾಗ
* ಫೋನ್ ನಿಗೂಢವಾಗಿ ಕಾಣೆಯಾಗಿದೆ
* ತಿಳಿಯದ ಕಟ್ಟಡ ಅಥವಾ ವಾಹನದಿಂದ ಫೋನ್ ಕಳ್ಳತನ ಆದಾಗ
* ಯಾವುದೇ ಅಸಹಜ ಪರಿಸ್ಥಿತಿಗಳಲ್ಲಿ ಫೋನ್ ಅನ್ನು ಬಳಸಲಾಗುತ್ತದೆ
* ಹವಾಮಾನ ಅಥವಾ ವಾತಾವರಣದ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದ ಉಂಟಾಗುವ ಹಾನಿ
* ಉದ್ದೇಶಪೂರ್ವಕ ಫೋನ್‌ಗೆ ಹಾನಿ ಮಾಡಿದರೆ
* ದುರಸ್ತಿ ಪ್ರಕ್ರಿಯೆಯಲ್ಲಿ ಉಂಟಾಗುವ ಹಾನಿ


Click it and Unblock the Notifications








