ಜಿಯೋ 'ಧನ್ ಧನಾ ಧನ್' ಆಫರ್: ನಡುಗಿದ ಟೆಲಿಕಾಂ ಲೋಕ
ಖಾಸಗಿ ಟೆಲಿಕಾಂ ಕಂಪನಿಗಳು ಹಾಗೂ ಟ್ರಾಯ್ ಜಿಯೋವನ್ನು ಕಟ್ಟಿ ಹಾಕುವ ಯತ್ನದಲ್ಲಿ ಪ್ರತಿ ಬಾರಿಯೂ ಎಡುವುತ್ತಿದ್ದು, ಜಿಯೋ ವಿಜಯಶಾಲಿಯಾಗುತ್ತಿದೆ.
ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಬೆನ್ನಲ್ಲೇ ಮತ್ತೊಂದು ಭರ್ಜರಿ ಆಫರ್ ಘೋಷಣೆ ಮಾಡುವ ಮೂಲಕ ಯಾರೆ ತನ್ನದಾರಿಗೆ ಅಡ್ಡಬಂದರು ತನ್ನ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂಬುದನ್ನ ಮತ್ತೇ ಮತ್ತೇ ಸಾರಿ ಹೇಳಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಹಾಗೂ ಟ್ರಾಯ್ ಜಿಯೋವನ್ನು ಕಟ್ಟಿ ಹಾಕುವ ಯತ್ನದಲ್ಲಿ ಪ್ರತಿ ಬಾರಿಯೂ ಎಡುವುತ್ತಿದ್ದು, ಜಿಯೋ ವಿಜಯಶಾಲಿಯಾಗುತ್ತಿದೆ.

ತನ್ನನ್ನು ನಂಬಿ ಬಂದ 72 ಮಿಲಿಯನ್ ಗ್ರಾಹಕರಿಗೆ 'ಧನ್ ಧನಾ ಧನ್' ಎಂಬ ಹೊಸದೊಂದು ಕೊಡುಗೆಯನ್ನು ನೀಡಿದ್ದು, ಅಲ್ಲದೇ ಹೊಸದಾಗಿ ಬರುವ ಗ್ರಾಹಕರಿಗೂ ಈ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ ಈ ಮೂಲಕ ತನ್ನ ಗುರಿಯನ್ನು ಸಾಧಿಸಲು ಕಟಿ ಬದ್ದವಾಗಿದೆ ಜಿಯೋ.
ಓದಿರಿ: ಜಿಯೋದಿಂದ 309 ರೂ.ಗೆ ಮತ್ತೆ ಮೂರು ತಿಂಗಳು ಅನ್‌ಮಿಟೆಡ್ 4G ಡೇಟಾ: 'ಧನ್ ಧನಾ ಧನ್'

ಫುನಃ ಬಂತು ಮೂರು ತಿಂಗಳ ಉಚಿತ ಸೇವೆ:
ಮೊದಲು ಮೂರು ತಿಂಗಳು, ನಂತರ ಮೂರು ತಿಂಗಳು ಈಗ ಪುನಃ ಮೂರು ತಿಂಗಳು ಉಚಿತ ಸೇವೆಯನ್ನು ನೀಡಿಲು ಜಿಯೋ ವೇದಿಕೆ ಸಿದ್ಧಪಡಿಸಿದೆ. ತನ್ನ ಗ್ರಾಹಕರಿಗೆ ರೂ. 309 ಮತ್ತು ರೂ. 509 ಗಳಿಗೆ ಮೂರು ತಿಂಗಳು ಮತ್ತೇ ಅನ್‌ಲಿಮಿಟೆಡ್ ಡೇಟಾ ಸೇವೆಯನ್ನು ಖುಷಿಯಿಂದಲೇ ನೀಡಲು ಮುಂದಾಗಿದೆ ಜಿಯೋ.

ನಡುಗಿದ ಟೆಲಿಕಾಂ ಕಂಪನಿಗಳು:
ಸಮ್ಮರ್ ಸರ್ಪೈಸ್ ಆಫರ್ ನಲ್ಲಿ 303 ರೂ.ಗಳಿಗೆ ಮೂರು ತಿಂಗಳ ಉಚಿತ ಸೇವೆಯನ್ನು ತಡೆಯಲು ಟೆಲಿಕಾಂ ಕಂಪನಿಗಳು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದು, ಕೊನೆಗೆ ಟ್ರಾಯ್ ಮೇಲೆ ಒತ್ತಡ ತಂದು ಸಮ್ಮರ್ ಸರ್ಪೈಸ್ ಆಫರ್ ಹಿಂಪಡೆಯುವಂತೆ ಮಾಡಿದ್ದವು. ಆದರೆ ಜಿಯೋ 'ಧನ್ ಧನಾ ಧನ್' ಆಫರ್ ನೀಡಿ ಟೆಲಿಕಾಂ ಲೋಕವನ್ನೇ ನಡುಗಿಸಿದೆ.

ಸಮ್ಮರ್ ಸರ್ಪೈಸ್ ಆಫರ್ ಬದಲಿಗೆ 'ಧನ್ ಧನಾ ಧನ್'
ಸಮ್ಮರ್ ಸರ್ಪೈಸ್ ಆಫರ್ ಹಿಂಪಡೆದ ಬೆನ್ನಲೇ ಹೊಸ ಆಫರ್ ನೀಡುವುದಾಗಿ ತಿಳಿಸಿದ ಜಿಯೋ ಸಮ್ಮರ್ ಸರ್ಪೈಸ್ ಆಫರ್ ಬದಲಿಗೆ 'ಧನ್ ಧನಾ ಧನ್' ಘೋಷನೆ ಮಾಡಿದೆ. ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ಈ ಹೊಸ ಆಫರ್ ನೀಡಿದೆ.

ರೂ.303ಕ್ಕೆ ಬದಲಾಗಿ 309ರ ಪ್ಲಾನ್:
ಜಿಯೋ ಪ್ರೈಮ್ ಸದಸ್ಯರಿಗಾಗಿಯೇ ಘೋಷನೆ ಮಾಡಿದ್ದ ರೂ.303ಗಳಗೆ ಬದಲಾಗಿ ರೂ.309 ರಿಜಾರ್ಜ್ ಮಾಡಿಸುವಂತೆ ಗ್ರಾಹಕರಿಗೆ ಅವಕಾಶ ನೀಡಿದೆ. ಇಲ್ಲಿಯೂ ಉಚಿತ ಕರೆ ಮಾಡುವ ಸೌಲಭ್ಯ ಹಾಗೂ ಪ್ರತಿ ದಿನ 1GB ಹೈಸ್ಪಿಡ್ ಡೇಟಾ ಗ್ರಾಹಕರಿಗೆ ದೊರೆಯಲಿದೆ.

ರೂ.499ಕ್ಕೆ 509ರ ಪ್ಲಾನ್:
ರೂ.499ಕ್ಕೆ ಜಿಯೋ ಪ್ರೈಮ್ ಸದಸ್ಯರಿಗೆ ನೀಡುತ್ತಿದ್ದ ಕೊಡುಗೆಯ ಬದಲಾಗಿ ರೂ.509 ಆಫರ್ ನೀಡಿದೆ. ಇಲ್ಲಿ ಪ್ರತಿ ದಿನ 2GB ಹೈಸ್ಪಿಡ್ ಡೇಟಾ ದೊರೆಯಲಿದೆ. ಇಲ್ಲಿಯೂ ಉಚಿತ ಕರೆ ಮಾಡುವ ಸೌಲಭ್ಯ ಇದೇ.

ಜಿಯೋ ಆಪ್ ಬಳಕೆ ಉಚಿತ:
ಜಿಯೋ ಈ ಹಿಂದಿನಂತಯೆ 'ಧನ್ ಧನಾ ಧನ್' ಆಫರ್‌ನಲ್ಲಿಯೂ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಕೆ ಮಾಡಬಹುದಾಗಿದೆ. ಜಿಯೋ ಟಿವಿ, ಜಿಯೋ ಸಿನಿಮಾ. ಸೇರಿದಂತೆ ಎಲ್ಲವೂ ಉಚಿತ.

ಮತ್ತೊಂದು ಯೋಜನೆ:
'ಧನ್ ಧನಾ ಧನ್' ಆಫರ್ ನೀಡಿದ ಜಿಯೋ ಮತ್ತೇ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಹೊಸ ಗ್ರಾಹಕರಿಗೂ ಈ ಯೋಜನೆಯ ಲಾಭವನ್ನು ನೀಡುತ್ತಿದೆ. ಈ ಮೂಲಕ 100 ಮಿಲಿಯನ್ ಸಂಖ್ಯೆಯನ್ನು ಮತ್ತಷ್ಟು ದೊಡ್ಡದಾಗಿಸಿಕೊಳ್ಳುವ ಯೋಜನೆ ಇದೆ.


Click it and Unblock the Notifications








