ಮತ್ತೆ ಮೂರು ತಿಂಗಳು ಅನ್‌ಮಿಟೆಡ್ 4G ಡೇಟಾ: 'ಧನ್ ಧನಾ ಧನ್'

Written By:

ಜಿಯೋ ಟ್ರಾಯ್ ಆದೇಶದಂತೆ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಬೆನ್ನಲ್ಲೇ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ವೊಂದನ್ನು ನೀಡಲು ಮುಂದಾಗಿದೆ. ತನ್ನನ್ನು ನಂಬಿ ಬಂದಿರುವ ಗ್ರಾಹಕರಿಗೆ ಮೋಸವಾಗದ ರೀತಿಯಲ್ಲಿ 'ಧನ್ ಧನಾ ಧನ್' ಎಂಬ ಹೊಸದೊಂದು ಕೊಡುಗೆಯನ್ನು ನೀಡಿ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ಸಿಯಾಗಿದೆ.

ಮತ್ತೆ ಮೂರು ತಿಂಗಳು ಅನ್‌ಮಿಟೆಡ್ 4G ಡೇಟಾ: 'ಧನ್ ಧನಾ ಧನ್'

ಮತ್ತೇ ಮೂರು ತಿಂಗಳಿಗೆ ಆಫರ್ ಘೋಷಣೆ ಮಾಡಿರುವ ಜಿಯೋ, ತನ್ನ ಗ್ರಾಹಕರಿಗೆ ರೂ. 309 ಮತ್ತು ರೂ. 509 ಗಳಿಗೆ ಮೂರು ತಿಂಗಳು ಮತ್ತೇ ಅನ್‌ಲಿಮಿಟೆಡ್ ಡೇಟಾವನ್ನು ನೀಡಲು ಮುಂದಾಗಿದೆ. ಇದಕ್ಕೇ 'ಧನ್ ಧನಾ ಧನ್' ಎಂದು ನಾಮಕರಣ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಟ್ರಾಯ್ ಗೆ ಸೆಡ್ಡು ಹೊಡೆದ ಜಿಯೋ

ಟ್ರಾಯ್ ಗೆ ಸೆಡ್ಡು ಹೊಡೆದ ಜಿಯೋ

303 ರೂ.ಗಳಿಗೆ ಮೂರು ತಿಂಗಳು ಉಚಿತ ಸೇವೆಯನ್ನು ನಿಲ್ಲಿಸುಂತೆ ಸಮ್ಮರ್ ಸರ್ಪೈಸ್ ಆಫರ್ ಹಿಂಪಡೆಯುವಂತೆ ಮಾಡಿದ್ದ ಟ್ರಾಯ್‌ಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಜಿಯೋ 'ಧನ್ ಧನಾ ಧನ್; ಆಫರ್ ನೀಡಿದ್ದು, ಈ ಮೂಲಕ ತನ್ನ ಸೇವೆಯನ್ನು ವಿಸ್ತರಿಸಲು ಯಾರು ಅಡ್ಡ ಹಾಕಲು ಬಿಡುವುದಿಲ್ಲ ಎಂಬುದನ್ನು ತೋರಿಸಿದೆ.

'ಧನ್ ಧನಾ ಧನ್ ಆಫರ್'

'ಧನ್ ಧನಾ ಧನ್ ಆಫರ್'

ಜಿಯೋ ತನ್ನ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ಈ ಹೊಸ ಆಫರ್ ನೀಡಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿಯೇ 'ಧನ್ ಧನಾ ಧನ್ ಆಫರ್ ನೀಡುವ ಮೂಲಕ ಗ್ರಾಹಕರನ್ನು ಸಂತುಷ್ಟಗೊಳಿಸಲು ಮುಂದಾಗಿದೆ. ಈ ಕೊಡುಗೆಯಲ್ಲಿ ಗ್ರಾಹಕರಿಗೆ ಎರಡು ಆಯ್ಕೆಯನ್ನು ನೀಡಲು ಜಿಯೋ ಪ್ಲಾನ್ ಮಾಡಿದೆ.

ಓದಿರಿ: 'ಕೇವಲ ರೂ.1999ಕ್ಕೆ ಮೈಕ್ರೋಮಾಕ್ಸ್ ಭಾರತ್ 1 4G VoLTE ಫೋನ್'

ರೂ.309ರ ಪ್ಲಾನ್:

ರೂ.309ರ ಪ್ಲಾನ್:

ಜಿಯೋ ಪ್ರೈಮ್ ಸದಸ್ಯರಿಗಾಗಿಯೇ ಈ ಆಫರ್ ಬಿಡುಗಡೆ ಮಾಡಿದೆ. ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಈ ಕೊಡುಗೆಯ ಲಾಭ ದೊರೆಯಲಿದೆ. ರೂ.309 ರಿಜಾರ್ಜ್ ಮಾಡಿಸುವ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ಹಾಗೂ ಪ್ರತಿ ದಿನ 1GB ಹೈಸ್ಪಿಡ್ ಡೇಟಾವನ್ನು ಜಿಯೋ ನೀಡಲಿದೆ.

ರೂ.509ರ ಪ್ಲಾನ್:

ರೂ.509ರ ಪ್ಲಾನ್:

ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಈ ಕೊಡುಗೆಯ ಲಾಭ ದೊರೆಯಲಿದೆ. ರೂ.509 ರಿಜಾರ್ಜ್ ಮಾಡಿಸುವ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ಹಾಗೂ ಪ್ರತಿ ದಿನ 2GB ಹೈಸ್ಪಿಡ್ ಡೇಟಾವನ್ನು ಜಿಯೋ ನೀಡಲಿದೆ. ಅಲ್ಲದೇ ಈ ಎರಡು ಪ್ಲಾನ್‌ನಲ್ಲಿ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಕೆ ಮಾಡಬಹುದಾಗಿದೆ.

ಓದಿರಿ: ಗೂಗಲ್ ನಲ್ಲಿರುವ ಬೆಸ್ಟ್ ಸೆಲ್ಫಿ ತೋರಿಸಿದರೆ ಸಾಕು, ನಿಮ್ಮ ಸೆಲ್ಫಿ ಸಹ ಹಾಗೆಯೇ ಇರಲಿದೆ..!

ಹೊಸ ಗ್ರಾಹಕರಿಗೂ ಲಾಭ ಇದೇ:

ಹೊಸ ಗ್ರಾಹಕರಿಗೂ ಲಾಭ ಇದೇ:

ಜಿಯೋ ಹೊಸ ಗ್ರಾಹಕರಿಗೂ ಈ ಯೋಜನೆಯ ಲಾಭವನ್ನು ವಿಸ್ತರಿಸಲು ಮುಂದಾದಾಗಿದೆ. ಆದರೆ ಅವರು ರೂ.99 ಅನ್ನು ಹೆಚ್ಚಿಗೆ ಪಾವತಿ ಮಾಡಬೇಕಾಗಿದೆ. ಕಾರಣ ಜಿಯೋ ಪ್ರೈಮ್ ಸದಸ್ಯತ್ವಕ್ಕಾಗಿ ನೀಡಬೇಕಾಗಿದೆ. ಅಂದರೆ 303+99= 402 ರೂ.ಗಳನ್ನು ಪಾವತಿ ಮಾಡಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio has announced its new 'Dhan Dhana Dhan' plan which gives users 3 months of unlimited data benefits at Rs 309 or Rs 509. to know more visit kannada.gizot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot