'ಮೌಂಟ್ ಎವರೆಸ್ಟ್' ಎತ್ತರ ಅಳೆಯಲು ಮುಂದಾದ ನೇಪಾಳ!!..ಏಕೆ ಗೊತ್ತಾ?
ಪರ್ವತದ ಬಂಡೆಯ ಮೇಲೆ ಕುಳಿತಿರುವವ ಹಿಮವನ್ನು ಸೇರಿಸಬೇಕೆ ಅಥವಾ ಬೇಡವೇ ಎಂಬುದನ್ನು ಭೂವಿಜ್ಞಾನಿಗಳು ಮತ್ತು ಪರ್ವತಾರೋಹಿಗಳು ಚರ್ಚಿಸಿದ್ದಾರೆ. ಆದರೆ, ಈ ಚರ್ಚೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.!!
2015 ರಲ್ಲಿ ಆಗಿದ್ದ ಬೃಹತ್ ಭೂಕಂಪನದಿಂದ ವಿಶ್ವದ ಅತಿ ಎತ್ತರವಾದ ಪರ್ವತ 'ಮೌಂಟ್ ಎವರೆಸ್ಟ್' ಮೇಲೆ ಏನಾದರೂ ಪರಿಣಾಮ ಬೀರಿರಬಹುದೆಂದು ಖಚಿತಪಡಿಸಿಕೊಳ್ಳಲು ನೇಪಾಳ ಎವರೆಸ್ಟ್ ಅನ್ನು ಅಳೆಯಲು ಮುಂದಾಗಿದೆ.! ಅದಕ್ಕಾಗಿ "ರಾಷ್ಟ್ರೀಯ ಹೆಮ್ಮೆಯ" ಯೋಜನೆಯನ್ನು ನೇಪಾಳ ಪ್ರಾರಂಭಿಸಿದೆ.!!
'ಮೌಂಟ್ ಎವರೆಸ್ಟ್' ಎತ್ತರ ಅಳೆಯಲು ಪರ್ವತದ ಬಂಡೆಯ ಮೇಲೆ ಕುಳಿತಿರುವವ ಹಿಮವನ್ನು ಸೇರಿಸಬೇಕೆ ಅಥವಾ ಬೇಡವೇ ಎಂಬುದನ್ನು ಭೂವಿಜ್ಞಾನಿಗಳು ಮತ್ತು ಪರ್ವತಾರೋಹಿಗಳು ಚರ್ಚಿಸಿದ್ದಾರೆ. ಆದರೆ, ಈ ಚರ್ಚೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.!!

ಈ ಯೋಜನೆಗಾಗಿ ನೇಪಾಳ 250 ಮಿಲಿಯನ್ ನೇಪಾಳ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ತಂತ್ರಜ್ಞಾನ ಸಹಾಯದಿಂದ "ರಾಷ್ಟ್ರೀಯ ಹೆಮ್ಮೆಯ" ಯೋಜನೆ ಮೂಲಕ 'ಮೌಂಟ್ ಎವರೆಸ್ಟ್' ಎತ್ತರವನ್ನು ನಿರ್ಣಾಯಕ ಮಾಪನ ಎಂದು ಭಾವಿಸುವ ಆಧಾರದ ಮೇಲೆ ಈ ಯೋಜನೆಯನನ್ನು ತೆಗೆದುಕೊಳ್ಳಲಾಗಿದೆ.!!

1955 ರಲ್ಲಿ ಭಾರತೀಯ ದಂಡಯಾತ್ರೆಯಿಂದ ನಿರ್ಧರಿಸಲ್ಪಟ್ಟ 8,848 ಮೀಟರ್ (29,028 ಅಡಿ) ಪ್ರಸ್ತುತ ಅಧಿಕೃತ ಎತ್ತರವಾಗಿದೆ.! 1999 ರಲ್ಲಿ ನ್ಯಾಶನಲ್ ಜಿಯಾಗ್ರಫಿಕ್ ಸೊಸೈಟಿ ಮತ್ತು ಬೋಸ್ಟನ್ ಮ್ಯೂಸಿಯಂ ಆಫ್ ಸೈನ್ಸ್ ಉಪಗ್ರಹ ತಂತ್ರಜ್ಞಾನ ಬಳಸಿಕೊಂಡು ಪರ್ವತವು 29,035 ಅಡಿಗಳಷ್ಟು ಎತ್ತರದಲ್ಲಿದೆ ಎಂದು ತೀರ್ಮಾನಿಸಿದ್ದವು.!!
ಓದಿರಿ: 6,990 ರೂ.ಗೆ 3GB RAM, ಫಿಂಗರ್‌ಪ್ರಿಂಟ್ ಫೀಚರ್ ಹಾಗೂ ವೋಲ್ಟ್ ಸ್ಮಾರ್ಟ್‌ಫೋನ್!!


Click it and Unblock the Notifications








