ಜಿಯೋ ಪ್ರೈಮ್ ಸಂಪೂರ್ಣ ಉಚಿತ!...ಆದ್ರೆ ಅದಕ್ಕೊಂದು ಟ್ರಿಕ್ ಇದೆ!!

Written By:

ಮಾರ್ಚ್‌ 1ರಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್‌ ಆಫರ್ ಶುರುವಾಗಲಿದ್ದು, ಟೆಲಿಕಾಂ ದರಸಮರದಿಂದಾಗಿ ಜಿಯೋ ಪ್ರೈಮ್ ಮೆಂಬರ್‌ಶಿಪ್‌ ಆಫರ್ ಮೇಲೂ ಕೂಡ ಆಫರ್ ನೀಡಿದೆ!! ಜಿಯೋ ಪ್ರೈಮ್‌ ಮೆಂಬರ್ಶಿಪ್ 99 ರೂ.ಗಳನ್ನು ರಿಲಯನ್ಸ್ ಜಿಯೋದಲ್ಲಿನ ಜಿಯೊ ಮನಿ ಆಪ್ ಮೂಲಕ ಪಾವತಿಸಿದರೆ 50 ರೂ. ಕ್ಯಾಶ್‌ ಬ್ಯಾಕ್‌ ಆಫರ್ ಪಡೆಯಬಹುದಾಗಿದೆ.!!

ಇನ್ನು ಇದರ ಜೊತೆಗೆ, ಮಾರ್ಚ್‌ 1ರಿಂದ ಶುರುವಾಗುವ ತಿಂಗಳ ರೀಚಾರ್ಜ್‌ 303 ರೂ.ದರವನ್ನು ಜಿಯೋ ಮನಿ ಆಪ್ ಮೂಲಕ ಪಾವತಿಸಿದರೆ, ಪುನಃ 50 ರೂ.ಗಳ ಕ್ಯಾಶ್‌ ಬ್ಯಾಕ್‌ ಆಫರ್ ನೀಡುವುದಾಗಿ ಅಂಬಾನಿ ತಿಳಿಸಿದ್ದು, ಜಿಯೋ ಬಳಕೆದಾರರಿಗೆ ಪ್ರೈಮ್ ಸೇವೆಗೆ ಕಟ್ಟಿದ ಹಣ ಪೂರ್ಣ ವಾಪಸ್ ಬರುತ್ತದೆ.!!

ಜಿಯೋ ಪ್ರೈಮ್ ಸಂಪೂರ್ಣ ಉಚಿತ!...ಆದ್ರೆ ಅದಕ್ಕೊಂದು ಟ್ರಿಕ್ ಇದೆ!!

ಕೂಡಲೇ ಸ್ಮಾರ್ಟ್‌ಫೋನ್‌ ಅಪ್‌ಡೇಟ್ ಮಾಡಿ!.. ಏಕೆ ಎಂದು ಗೂಗಲ್ ವರದಿ ನೋಡಿ!!

ಈ ಎರಡು ರೀಚಾರ್ಜ್‌ಗಳಿಂದ 100 ರೂ. ಕ್ಯಾಶ್‌ ಬ್ಯಾಕ್‌ ಆಫರ್ ಸಿಗುವುದರಿಂದ ಬಳಕೆದಾರರು ಪಾವತಿಸುವ 99 ರೂ.ಗಳ ಜಿಯೋ ಪ್ರೈಮ್‌ ಮೆಂಬರ್‌ಶಿಪ್‌ ಶುಲ್ಕ ಪೂರ್ತಿಯಾಗಿ ಉಚಿತವಾದಂತಾಗುತ್ತದೆ. ಜಿಯೋ ಬಳಕೆದಾರರನ್ನು ಪೂರ್ತಿಯಾಗಿ ತಮ್ಮ ಜಾಲದಲ್ಲಿ ಉಳಿಸಿಕೊಳ್ಳಲು ಅಂಬಾನಿ ಈ ಪ್ಲಾನ್ ಮಾಡಿದ್ದು, ಜಿಯೋ ಬಳಕೆದಾರರಿಗೆ ಬಹುಉಪಯೋಗವಾಗಿದೆ.

ಜಿಯೋ ಪ್ರೈಮ್ ಸಂಪೂರ್ಣ ಉಚಿತ!...ಆದ್ರೆ ಅದಕ್ಕೊಂದು ಟ್ರಿಕ್ ಇದೆ!!

ಈಗಾಗಲೇ ಏರ್‌ಟೆಲ್ ಮತ್ತು BSNL ಸೇರಿದಂತೆ ಎಲ್ಲಾ ಟೆಲಿಕಾಂ ಕಂಪೆನಿಗಳು ಜಿಯೋ ಪ್ರೈಮ್ ಆಫರ್‌ಗೆ ವಿರುದ್ದವಾಗಿ ಆಫರ್ ನೀಡುತ್ತಿದ್ದು, ಇದರಿಂದ ಸ್ವಲ್ಪ ತಳಮಳಗೊಂಡಿರುವ ಅಂಬಾನಿ, ಕ್ಯಾಶ್ ಬ್ಯಾಕ್ ಸೌಲಭ್ಯಗಳನ್ನು ನೀಡಿ ಜಿಯೋ ಬಳಕೆದಾರರನ್ನು ತನ್ನಲ್ಲಿಯೇ ಉಳಿಸಿಕೊಳ್ಳುತ್ತಿದ್ದಾರೆ.

English summary
with an aim to lure in more subscribers for JIO. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot