Subscribe to Gizbot

ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ

Written By:

ಯಾರಾದ್ರು ಎಲ್ಲಾದ್ರು ಮರುಭೂಮಿಯಲ್ಲಿ ಸಿನಿಮಾ ಥಿಯೇಟರ್‌ ಅಥವಾ ನಾಟಕ ಥಿಯೇಟರ್‌ ನಿರ್ಮಾಣ ಮಾಡಿರುವುದನ್ನ ನೋಡಿದ್ದೀರಾ? ಚಾನ್ಸೆ ಇಲ್ಲಾ ಬಿಡಿ. ಆದ್ರೆ ಈಜಿಪ್ಟ್‌ನ ಮರುಭೂಮಿಯಲ್ಲಿ ಪ್ರಾಚೀನ ಕಾಲದಲ್ಲೇ ಸಿನಿಮಾ ಥಿಯೇಟರ್‌ಗೆ ಸೀಟ್‌ಗಳನ್ನು ಸಿದ್ದಗೊಳಿಸಿದ್ದರು. ಹೌದು ಇದು ನಿಜ. ಗೂಗಲ್‌ ಮ್ಯಾಪ್‌ನಲ್ಲಿ ವ್ಯಕ್ತಿಯೊಬ್ಬರು ಜೂಮ್‌ ಮಾಡಿ ಹಾಗೆ ಹಲವು ಪ್ರದೇಶಗಳನ್ನು ನೋಡಬೇಕಾದರೆ ಈ ವಿಚಿತ್ರ ಸ್ಥಳವು ಕಂಡುಬಂದಿದೆ. ಇಂದಿನ ಲೇಖನದಲ್ಲಿ ಈ ಬಗ್ಗೆ ವಿಶೇಷ ಮಾಹಿತಿಯನ್ನು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಮೈನವಿರೇಳಿಸುವ ಗೂಗಲ್‌ ಮ್ಯಾಪ್‌ ಸಾಹಸ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಮ್ಯಾಪ್‌ನಲ್ಲಿ ಕಂಡ ವಿಚಿತ್ರ ಸ್ಥಳ

ಗೂಗಲ್‌ ಮ್ಯಾಪ್‌ನಲ್ಲಿ ಕಂಡ ವಿಚಿತ್ರ ಸ್ಥಳ

ಈಜಿಪ್ಟ್‌ನ ಸಿನ್ನೈ ಪೆನಿನ್‌ಸುಲ ಮರುಭೂಮಿಯಲ್ಲಿ ಮರದ ಸೀಟ್‌ಗಳನ್ನು ಸಿದ್ದಗೊಳಿಸಿದ್ದು, ಅದು ಪ್ರಪಂಚದ ಕೊನೆಯ ಸಿನಿಮಾ ಎಂದು ಹೆಸರು ಪಡೆದಿದೆ.

ಪ್ರಾಚೀನ ನಾಗರಿಕತೆ

ಪ್ರಾಚೀನ ನಾಗರಿಕತೆ

ಮರದ ಸೀಟ್‌ಗಳನ್ನು ಸಿದ್ದಪಡಿಸಿರುವ ಆ ನಿರ್ಭೀತ ಪ್ರದೇಶವು ಸಮಾಜದಿಂದ ದೂರದಲ್ಲಿದ್ದು, ಪ್ರಾಚೀನ ರಹಸ್ಯ ನಾಗರೀಕತೆ ಸಿನಿಮಾಗೆ ಬಳಸಿರುವ ಸೀಟ್‌ಗಳೆಂದು ಅಲೋಚಿಸಲು ಕಾರಣವಾಗಿದೆ.

ಒಟ್ಟಾರೆ 150 ಸೀಟ್‌ಗಳು

ಒಟ್ಟಾರೆ 150 ಸೀಟ್‌ಗಳು

ಸಿನಿಮಾವು 10 ವರ್ಷಕ್ಕಿಂತ ಹೆಚ್ಚು ಹಿಂದೆ ರೂಪಿಸಿದ್ದಾಗಿದೆ. ಇದು 150 ಸೀಟ್‌ಗಳನ್ನು ಹೊಂದಿದ್ದು, ಅವುಗಳೆಲ್ಲಾ ಶಕ್ತಿಗುಂದಿದ್ದು, ಸ್ಕ್ರೀನ್‌ ಹರಿದಿದೆ. ಅಲ್ಲದೆ ಪಾಳುಬಿದ್ದ ಮನೆಯೊಂದು ಪ್ರೊಜೆಕ್ಟರ್ ಮತ್ತು ಜೆನೆರೇಟರ್ ಹೊಂದಿದೆ.

ಹಾಗಾದ್ರೆ ನಿರ್ಮಿಸಿದವರು ಯಾರು?

ಹಾಗಾದ್ರೆ ನಿರ್ಮಿಸಿದವರು ಯಾರು?

ಥಿಯೇಟರ್‌ ಅನ್ನು ಫ್ರೆಂಚ್‌ ವ್ಯಕ್ತಿಯೊಬ್ಬ ಕೈರೋ ಥಿಯೇಟರ್‌ನಿಂದ ಬಿಡಿಭಾಗಗಳನ್ನು ತಂದು ಇಲ್ಲಿ ನಿರ್ಮಿಸಲು ಯೋಜಿಸಿದ್ದ ಎನ್ನಲಾಗಿದೆ.

ಫೋಟೋಗ್ರಾಫ್‌

ಫೋಟೋಗ್ರಾಫ್‌

ಉತ್ತರ ಯೂರೋಪ್‌ನ ಎಸ್ಟೊನಿಯನ್‌ ಪ್ರದೇಶದ 'ಕೌಪೊ ಕಿಕ್ಕಾಸ್' ಎಂಬ ಫೋಟೋಗ್ರಾಫರ್‌ ಈ ಸಿನಿಮಾದ ಫೋಟೋಗಳನ್ನು ಆಶ್ಚರ್ಯಕರ ಸೈಟ್‌ ಒಂದರಿಂದ ತೆಗೆದುಕೊಂಡು ಅವನು ನೀಡಿದ ಮಾಹಿತಿ ಏನು ಗೊತ್ತೇ? ಮುಂದಿನ ಸ್ಲೈಡರ್‌ ಓದಿ.

ಕೌಪೊ ಕಿಕ್ಕಾಸ್ ಹೇಳಿದ್ದೇನು ಗೊತ್ತೇ?

ಕೌಪೊ ಕಿಕ್ಕಾಸ್ ಹೇಳಿದ್ದೇನು ಗೊತ್ತೇ?

ಸಹಸ್ರಮಾನದ ಬಿಸಿಲಿನ ದಿನ ಒಂದರಲ್ಲಿ, ಕ್ರೇಜಿ ಫ್ರೆಂಚ್‌ ವ್ಯಕ್ತಿ ಸಿನ್ನೈ ಮರುಭೂಮಿಯಲ್ಲಿ ಕಾಣಿಸಿಕೊಂಡು ಒಂದೆರಡು ಫುಫ್ ಸ್ಮೋಕ್‌ ಎಳೆದು ಈ ಮರುಭೂಮಿ ಮಧ್ಯದಲ್ಲಿ ಯಾವ ಸಿನಿಮಾವು ಬಂದಿಲ್ಲಾ ಎಂದು ಯೋಚಿಸಿ ಪ್ಯಾರಿಸ್‌ಗೆ ತೆರಳಿ ಹಣ ಹೊಂದಿಸಿದನು. ನಂತರ ವರಿಜಿನಲ್‌ ಸೀಟ್‌ಗಳನ್ನು ಮತ್ತು ಪ್ರೊಜೆಕ್ಟರ್‌ ಬಿಡಿಭಾಗಗಳನ್ನು ಖರೀದಿಸಲು ಕೈರೋ ಹಳೆಯ ಸಿನಿಮಾ ಥಿಯೇಟರ್‌ಗೆ ಹೋದರು. ಸಿನ್ನೈಗೆ ವಾಪಸು ಬಂದು ಜೆನೆರೇಟರ್‌ ಅನ್ನು ವಿದ್ಯುತ್‌ಗಾಗಿ ವ್ಯವಸ್ಥೆಗೊಳಿಸಿ, ಸ್ಕ್ರೀನ್‌ ಎಳೆಯಲು ಟ್ರ್ಯಾಕ್ಟರ್‌ ಬಳಕೆ ಮಾಡಿದ್ದರು. ಈಗ ಶೋ ನಡೆಸಲು ಸಿದ್ದವಾಗಿದೆ ಎಂದು ವಿವರಿಸಿದ್ದರು.

ಸಿನಿಮಾ ಏಕೆ ಪ್ರದರ್ಶನ ಪಡೆಯಲಿಲ್ಲ

ಸಿನಿಮಾ ಏಕೆ ಪ್ರದರ್ಶನ ಪಡೆಯಲಿಲ್ಲ

ಮರುಭೂಮಿಗೆ ಹೊಂದಿಕೊಂಡ ಸ್ಥಳೀಯ ಆಡಳಿತದವರು ತಮ್ಮ ಅನುಮತಿ ಇಲ್ಲದೆ ಸಿನಿಮಾ ಪ್ರದರ್ಶನ ಮಾಡಲು ಒಪ್ಪಿಗೆ ನೀಡದೆ ವಿದ್ಯುತ್‌ ಅನ್ನು ನಾಶಪಡಿಸಲಾಗಿ ಯಾವುದೇ ಸಿನಿಮಾ ಪ್ರದರ್ಶನ ಕಾಣಲಿಲ್ಲಾ.

ಪ್ರಸ್ತುತ ಸ್ಥಿತಿ ಹೇಗಿದೆ?

ಪ್ರಸ್ತುತ ಸ್ಥಿತಿ ಹೇಗಿದೆ?

ಈ ಸಿನಿಮಾ ಥಿಯೇಟರ್‌ ಇರುವಲ್ಲಿಗೆ ಯಾರು ಸಹ ಹೋಗಲು ಆಗುವುದಿಲ್ಲಾ. ಕಾರಣ ಮರುಭೂಮಿಯ ಮಧ್ಯದಲ್ಲಿ ಇರುವುದರಿಂದ ಯಾರು ಅಲ್ಲಗೆ ಭೇಟಿ ನೀಡುವುದಿಲ್ಲಾ. ಆದರೆ ಅಲ್ಲಿನ ಸರ್ಕಾರ ಮತ್ತು ಫ್ರೆಂಚ್‌ ವ್ಯಕ್ತಿ ನಡುವೆ ಹಾಗೂ ಅಲ್ಲಿನ ಅಲೆಮಾರಿಗಳ ನಡುವೆ ಹಲವು ಸಂಶಯಗಳನ್ನು ಈ ಥಿಯೇಟರ್‌ ಹುಟ್ಟುಹಾಕಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೈನವಿರೇಳಿಸುವ ಗೂಗಲ್‌ ಮ್ಯಾಪ್‌ ಸಾಹಸ ಫೋಟೋಗಳು

25 ವರ್ಷಗಳನ್ನು ಬರೇ ಸಮುದ್ರದಲ್ಲೇ ಕಳೆದ ಈತ ಮಾಡಿದ್ದಾದರೂ ಏನು?

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Strange Place Found On Google Maps, When I Zoomed In. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot