Home
ಫೀಚರ್ ಸ್ಟೋರೀಸ್

ಬಾಯಿಯೊಳಗೆ 138 ಪೆನ್ಸಿಲ್ ತುರುಕಿ ವೀಡಿಯೊ ಮಾಡಿದ: ಥಾಪಾ

By Shwetha

ಗಿನ್ನಿಸ್ ದಾಖಲೆಯನ್ನು ಮಾಡುವುದಕ್ಕಾಗಿ ಜನರು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎಂಬುದನ್ನು ನೀವು ನೋಡಿದ್ದೀರಿ ಕೇಳಿದ್ದೀರಿ. ಇವನ ಸಾಧನೆ ಎಂತಹವರ ಎದೆಯನ್ನು ನಡುಗಿಸುವಂತಿದ್ದು ತಾನು ಮಾಡಿದ ದಾಖಲೆಯಿಂದ ವಿಶ್ವದ ಗಮನವನ್ನೇ ಸೆಳೆದಿದ್ದಾನೆ ಅಂತೆಯೇ ತನ್ನ ಈ ಸಾಹಸ ಕಾರ್ಯವನ್ನು ಸ್ವತಃ ವೀಡಿಯೊ ಮಾಡಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಓದಿರಿ: ಬಾಲಿವುಡ್‌ ಸ್ಟಾರ್‌ಗಳು 'ಗೇಮ್‌ ಆಫ್‌ ಥ್ರೋನ್ಸ್'ನಲ್ಲಿ ನಟಿಸಿದರೆ!!

ತೆಂಗಿನ ಕಾಯಿಯ ಸಿಪ್ಪೆಯನ್ನು ಬಾಯಿಯಲ್ಲಿ ಸುಲಿಯುವುದು, ಎಷ್ಟೋ ಸೆಕೆಂಡ್‌ಗಳಲ್ಲಿ ಕೋಕ್ ಕುಡಿದು ಮುಗಿಸುವುದು, ಗಾಜಿನ ಮೇಲೆ ನಡೆಯುವುದು ಹೀಗೆ ಭಯಾನಕ ಸಾಹಸಗಳನ್ನು ಮಾಡುವ ಜನರು ವಿಶ್ವ ದಾಖಲೆಗಾಗಿ ಹಲವಾರು ಅಪಾಯಗಳನ್ನು ತಮ್ಮ ಮೇಲೆ ಒಡ್ಡಿಕೊಳ್ಳುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ರಾಜಾ ಥಾಪಾ ಏನು ಸಾಧನೆ ಮಾಡಿ ವೀಡಿಯೊ ಅಪ್‌ಲೋಡ್ ಮಾಡಿದ್ದಾನೆ ಎಂಬುದನ್ನು ನೋಡೋಣ.

#1

#1

ಬರೋಬ್ಬರಿ 138 ಪೆನ್ಸಿಲ್‌ಗಳನ್ನು ತನ್ನ ಬಾಯಲ್ಲಿ ತುಂಬಿಸಿಕೊಂಡು 19 ರ ಹರೆಯದ ರಾಜಾ ಥಾಪಾ ವಿಶ್ವದಲ್ಲೇ ಅಗಲ ಬಾಯಿಯನ್ನು ಹೊಂದಿರುವವನು ಎಂಬುದಾಗಿ ದಾಖಲೆ ಮಾಡಿದ್ದಾನೆ.

#2

#2

ತನ್ನ ಬಾಯಿಗೆ 138 ಪೆನ್ಸಿಲ್‌ಗಳನ್ನು ತುಂಬಿಸಿಕೊಂಡು ಅದರ ವೀಡಿಯೊವನ್ನು ಮಾಡಿ ಗಿನ್ನಿಸ್ ರೆಕಾರ್ಡ್‌ಗಾಗಿ ಶ್ರಮಪಟ್ಟಿದ್ದಾನೆ.

#3

#3

ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಇದು ದೃಢೀಕೃತವಾದರೆ, ಪ್ರಸ್ತುತ ರೆಕಾರ್ಡ್ ಹೋಲ್ಡರ್‌ನಲ್ಲಿ ಥಾಪಾ ಪ್ರಥಮ ಸ್ಥಾನವನ್ನು ಗಳಿಸುವುದು ನಿಜ. ಏಕೆಂದರೆ ಪ್ರಸ್ತುತ ಈ ರೆಕಾರ್ಡ್ ಅನ್ನು ದಿನೇಶ್ ಶಿವಾಂತ್ ಉಪಾಧ್ಯಾಯ ಹೊಂದಿದ್ದಾರೆ.

#4

#4

ಆತ ತನ್ನ ಬಾಯಿಯೊಳಗೆ 92 ಪೆನ್ಸಿಲ್‌ಗಳನ್ನು ತೂರಿಸಿಕೊಂಡು ಪ್ರಸ್ತುತ ದಾಖಲೆಯನ್ನು ಹೊಂದಿದ್ದಾನೆ.

#5

#5

ಥಾಪಾ, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು 32 ಕ್ಯಾಂಡಲ್‌ಗಳನ್ನು ತನ್ನ ಬಾಯಿಯೊಳಗೆ ಈ ಮೊದಲು ತೂರಿಸಿಕೊಂಡಿದ್ದಾನೆ. ವಿಶಿಷ್ಟವಾದ ಕೆಲಸಗಳನ್ನು ಮಾಡುವುದು ಎಂದರೆ ನನಗೆ ತುಂಬಾ ಇಷ್ಟ ಎಂಬುದು ಥಾಪಾ ಮಾತಾಗಿದೆ.

#6

#6

ಜನರನ್ನು ಆನಂದಿಸುವುದು ನನ್ನ ಹವ್ಯಾಸವಾಗಿದ್ದು ಇಂತಹ ಮನರಂಜನೆಯನ್ನೇ ನಾನು ಕೈಗೊಳ್ಳುತ್ತೇನೆ ಎಂಬುದು ಥಾಪಾ ಮಾತಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we are presenting Teen shows off his record breaking large mouth by stuffing 138 pencils in it that video went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+