ನಾನ್‌ವೆಜ್ ಅಜ್ಜಿ ಯೂಟ್ಯೂಬ್ ಸ್ಟಾರ್ ಆದ ಕಥೆ
ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ ಅಜ್ಜಿಯೊಬ್ಬರು ಸದ್ಯದ ಜಗತ್ತಿನ ಅತೀ ಹಿರಿಯ ಯೂಟ್ಯೂಬ್ ಸ್ಟಾರ್' ಆಗಿದ್ದಾರೆ.
ಇಂದು ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯಾರಲ್ಲಿ ಟಾಲೆಂಟ್ ಇರುತ್ತದೆಯೋ ಅವರು ಯಾರ ಸಹಾಯವೂ ಇಲ್ಲದೇ ಇಲ್ಲಿ ಸ್ಟಾರ್ ಆಗಬಹುದಾಗಿದೆ. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ ಅಜ್ಜಿಯೊಬ್ಬರು ಸದ್ಯದ ಜಗತ್ತಿನ ಅತೀ ಹಿರಿಯ ಯೂಟ್ಯೂಬ್ ಸ್ಟಾರ್' ಆಗಿದ್ದಾರೆ.

ಓದಿರಿ: ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರ ಆಯ್ತು ಬಾಹುಬಲಿ-2 ಚಿತ್ರ..!!! ನೀವು ನೋಡಿದ್ರಾ..?
ಆಂಧ್ರಪ್ರದೇಶದ ಮಸ್ತಾನಮ್ಮ ಎಂಬ ಶತಾಯುಷಿ (106 ವರ್ಷ) ನಾಟಿ ಸ್ಟೈಲ್ ನಾನ್-ವೆಜ್ ಮಾಡುವುದರಲ್ಲಿ ಸಖತ್ ಫೇಮಸ್ ಆಗಿದ್ದು, ತಮ್ಮ ರುಚಿ ಮತ್ತು ರೆಸಿಪಿಯನ್ನು ಜಾಗತಿಕವಾಗಿ ಯೂಟ್ಯೂಬ್ ಮೂಲಕ ಹಂಚಿಕೊಳ್ಳುವ ಮೂಲಕ ಜಗತ್ತಿನ 'ಅತೀ ಹಿರಿಯ ಯೂಟ್ಯೂಬ್ ಸ್ಟಾರ್' ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.

ಅಜ್ಜಿ ಯೂಟ್ಯೂಬ್ ಚಾನಲ್‌ಗೆ 2.61 ಲಕ್ಷ ಸಬ್ ಸ್ಕ್ರೈಬರ್:
ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿರುವ ಮಸ್ತಾನಮ್ಮ ಅವರ ಯೂಟ್ಯೂಬ್ ಚಾನಲ್‌ಗೆ 2.61 ಲಕ್ಷ ಸಬ್ ಸ್ಕ್ರೈಬರ್ ಇದ್ದಾರೆ ಎನ್ನಲಾಗಿದೆ. ಇದು ದೊಡ್ಡ ಪ್ರಮಾಣದಾಗಿದ್ದು, ಯೂಟೂಬ್‌ನಲ್ಲಿ ಇಷ್ಟು ಸಬ್ ಸ್ಕ್ರೈಬರ್ ಪಡೆಯುವುದು ತೀರ ಕಷ್ಟ ಎನ್ನಲಾಗಿದೆ.

ಶತಾಯುಷಿ ಅಜ್ಜಿಯ ಯೂಟ್ಯೂಬ್ ಚಾನಲ್:
ತನ್ನ ಹಳ್ಳಿ ಸ್ಟೈಲ್ ಅಡುಗೆಯಿಂದಲೇ ಖ್ಯಾತಿ ಪಡೆದುಕೊಂಡಿರುವ ಶತಾಯುಷಿ ಅಜ್ಜಿ 'ಕಂಟ್ರಿ ಫುಡ್ಸ್' ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದು, ಇದರ ಮೂಲಕ ದೇಶ ವಿದೇಶದ ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇವರ ಸೌದೆ ಒಲೆ ನಾನ್‌ವೆಜ್ ಸೂಪರ್:
ಸೌದೆ ಒಲೆಯಲ್ಲಿ ನಾನ್‌ವೆಜ್ ಮಾಡುವ ಶತಾಯುಷಿ ಅಜ್ಜಿ ಮಸ್ತಾನಮ್ಮ ಇದರಿಂದಲೇ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹಳ್ಳಿ ವಾತಾವರಣ, ಮೈದಾನದಲ್ಲಿ ಇವರು ಅಡುಗೆ ಮಾಡುತ್ತಾರೆ. ಇದೇ ಅವರ ವಿಶೇಷತೆ.

ಸಾಂಪ್ರದಾಯಿಕ ಶೈಲಿಯ ಅಡುಗೆ:
ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ಶತಾಯುಷಿ ಅಜ್ಜಿ ಮಸ್ತಾನಮ್ಮ ಅಡುಗೆ ಮಾಡುತ್ತಾರೆ ಎನ್ನಲಾಗಿದೆ. ಇದು ಅವರ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ ಎನ್ನಲಾಗಿದೆ. ಇವರ ಅಡುಗೆಯನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ.
ಸ್ವಲ್ಪ ಅಡುಗೆ ಮಾಡುವುದೇ ಇಲ್ಲ: ನೀವೇ ನೋಡಿ
ಶತಾಯುಷಿ ಅಜ್ಜಿ ಮಸ್ತಾನಮ್ಮ ಮಾಡುವ ಅಡುಗೆಗಳು ಸಣ್ಣ ಪ್ರಮಾಣದಲ್ಲಿ ಇರುವುದೇ ಇಲ್ಲ. ಎಲ್ಲವೂ ಹತ್ತರಿಂದ ಹದಿನೈದು ಜನ ತಿನ್ನುವ ಹಾಗೆಯೇ ಇರುತ್ತದೆ. ಅಲ್ಲದೇ ತಾವು ಮಾಡುವ ಅಡುಗೆಯನ್ನು ಎಲ್ಲರಿಗೆ ಬಡಿಸುತ್ತಾರೆ ಇದೆ ಅವರ ಸ್ಪೆಷಾಲಿಟಿ ಎನ್ನಲಾಗಿದೆ.


Click it and Unblock the Notifications








