ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರ ಆಯ್ತು ಬಾಹುಬಲಿ-2 ಚಿತ್ರ..!!! ನೀವು ನೋಡಿದ್ರಾ..?
ನೂರಿನ್ನೂರು ರೂ. ದುಡ್ಡು ಕೊಟ್ಟು ನೋಡಲು ಹೊದವರು ತಮ್ಮ ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರ ಮಾಡಿದ್ದಾರೆ.
ನೂರಾರು ಕೋಟಿ ಹಣ ಖರ್ಚು ಮಾಡಿ ನಿರ್ಮಾಣವಾಗಿದ್ದ 'ಬಾಹುಬಲಿ- ದ ಕನ್‌ಕ್ಲೂಷನ್' ಸಿನಿಮಾವನ್ನು ನೂರಿನ್ನೂರು ರೂ. ದುಡ್ಡು ಕೊಟ್ಟು ನೋಡಲು ಹೊದವರು ತಮ್ಮ ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರ ಮಾಡಿದ್ದಾರೆ.

ಓದಿರಿ: ಮತ್ತೇ ಬದಲಾದ ಜಿಯೋ ಪ್ಲಾನ್..! ಏಕೆ, ಹೊಸ ಆಫರ್ ಏನೇನು.?
ಬಹು ನಿರೀಕ್ಷಿತ ಚಿತ್ರ 'ಬಾಹುಬಲಿ- ದ ಕನ್‌ಕ್ಲೂಷನ್' ಸಿನಿಮಾವನ್ನು ನೋಡಬೇಕು ಎನ್ನುವುದು ಸಾಕಷ್ಟು ಮಂದಿಯ ಆಸೆಯಾಗಿದ್ದು, ಆದರೆ ಇಲ್ಲೋಬ್ಬ ಬಾಹುಬಲಿ-2 ಚಿತ್ರ ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿದ್ದಂತೆ ಫೇಸ್‍ಬುಕ್ ಲೈವ್ ಮೂಲಕ ಸಿನಿಮಾ ಪ್ರಸಾರ ಮಾಡಿದ್ದಾನೆ.

ಲೈವ್ ಪ್ರಸಾರ ಮಾಡಿದ್ದು ಭಾರತದಿಂದಲ್ಲ:
ಆದರೆ ಈ ಸಿನಿಮಾವನ್ನು ಲೈವ್ ಪ್ರಸಾರ ಮಾಡಿರುವವರು ಭಾರತದಲ್ಲಿ ಸಿನಿಮಾ ನೋಡಬೇಕಾದರೆ ಮಾಡಿಲ್ಲ, ಕುವೈತ್‍ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದವರು ಸುಮಾರು 55 ನಿಮಿಷಗಳ ಕಾಲ ಫೇಸ್‍ಬುಕ್ ನಲ್ಲಿ ಬಾಹುಬಲಿ-2 ಲೈವ್ ಮೂಲಕ ಬಾಹುಬಲಿ ಪ್ರಸಾರ ಮಾಡಿದ್ದಾರೆ.

ಕುವೈತ್‍ನಿಂದ ಲೈವ್ ಪ್ರಸಾರ:
ದೇಶದಾದ್ಯಂತ ಇಂದು ತೆರೆಕಂಡಿರುವ ಬಾಹುಬಲಿ- 2 ಚಿತ್ರ ಅರಬ್ ರಾಷ್ಟ್ರಗಳಲ್ಲಿ ನಿನ್ನೆ ತೆರೆ ಕಂಡಿತ್ತು. ಕುವೈತ್‍ನಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರೊಬ್ಬರು ಸುಮಾರು 55 ನಿಮಿಷಗಳ ಕಾಲ ಫೇಸ್‍ಬುಕ್ ಲೈವ್ ಮೂಲಕ ಬಾಹುಬಲಿ ಪ್ರಸಾರವಾಗಿದೆ.

ನಿನ್ನೇ ಅರಬ್ ರಾಷ್ಟ್ರಗಳಲ್ಲಿ ಶೋ ಆರಂಭಿಸಿತ್ತು:
ಇಂದು ಭಾರತದಲ್ಲಿ ಭರ್ಜರಿಯಾಗಿ ತೆರೆಗೆ ಅಪ್ಪಳಿಸಿರುವ ಬಾಹುಬಲಿ- 2 ಸಿನಿಮಾ ನಿನ್ನೇ ಅರಬ್ ರಾಷ್ಟ್ರಗಳಲ್ಲಿ ಶೋ ಆರಂಭಿಸಿತ್ತು. ಅಲ್ಲಿ ಸಿನಿಮಾ ನೋಡುತ್ತಿದ್ದರು ಫೇಸ್‌ಬುಕ್ ನೀಡಿರುವ ಲೈವ್ ಆಯ್ಕೆಯನ್ನು ಬಳಿಸಿಕೊಂಡು ಈ ರೀತಿಯಲ್ಲಿ ಮಾಡಿದ್ದಾರೆ.

2000 ಮಂದಿ ವಿಡಿಯೋ ಶೇರ್ ಮಾಡಿದ್ದಾರೆ:
ಈ ಲೈವ್ ವಿಡಿಯೊವನ್ನು ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, 2000 ಕ್ಕಿಂತಲೂ ಹೆಚ್ಚು ಮಂದಿ ವಿಡಿಯೊ ಶೇರ್ ಮಾಡಿದ್ದಾರೆ. ಇದು ಸಿನಿಮಾಗೆ ನಷ್ಟವನ್ನು ಉಂಟು ಮಾಡಲಿದೆ. ಸಿನಿಮಾವನ್ನು ಪ್ರೈವಸಿ ಮಾಡುವಂತಿಲ್ಲ. ಹಾಗೇಯೆ ಇದನ್ನು ತಡಯಬೇಕಾಗಿದೆ.


Click it and Unblock the Notifications








