ಭಾರತದ ಎಥಿಕಲ್ ಹ್ಯಾಕಿಂಗ್ ತಂತ್ರಜ್ಞಾನದ ಹಿರೋ ತ್ರಿಶನೀತ್!! ಏನಿವರ ಸಾಧನೆ?
ದೂರ ಶಿಕ್ಷಣದ ಮೂಲಕ ಶಿಕ್ಷಣ ಪಡೆದು ಹ್ಯಾಕಿಂಗ್ ಜಗತ್ತನ್ನು ಆಳುತ್ತಿರುವ ತ್ರಿಶನೀತ್ ಇಂದಿನ ನಮ್ಮ ತಂತ್ರಜ್ಞಾನ ಲೋಕದ ಹಿರೋ!!
ಬೃಹತ್ ಕಾರ್ಪೊರೇಟ್ ಸಂಸ್ಥೆಗಳೂ ಸೇರಿದಂತೆ ಭಾರತದ ಸಿಬಿಐ , ಪಂಜಾಬ್ ಮತ್ತು ಗುಜರಾತ್ ರಾಜ್ಯ ಪೊಲೀಸ್ ತನಿಖಾ ಸಂಸ್ಥೆಗಳಿಗೂ ಬೇಕಾಗಿರುವ, 8ನೇ ಕ್ಲಾಸ್‌ನಲ್ಲಿಯೇ ಫೇಲ್ ಆಗಿದ್ದ, 23 ವರ್ಷದ ತ್ರಿಶನೀತ್ ಅರೋರ ಎಂಬ ಟೆಕ್ಕಿಯ ಜೀವನದ ಕತೆ ಎಲ್ಲರೂ ತಿಳಿಯಬೇಕಾದುದು.! ದೂರ ಶಿಕ್ಷಣದ ಮೂಲಕ ಶಿಕ್ಷಣ ಪಡೆದು ಹ್ಯಾಕಿಂಗ್ ಜಗತ್ತನ್ನು ಆಳುತ್ತಿರುವ ತ್ರಿಶನೀತ್ ಇಂದಿನ ನಮ್ಮ ತಂತ್ರಜ್ಞಾನ ಲೋಕದ ಹಿರೋ!!
ಡಿಜಿಟಲೀಕರಣಕ್ಕೆ ತಂತ್ರಜ್ಞಾನ ಸೃಷ್ಟಿಸಿರುವ ಅವಕಾಶದ ಜೊತೆಗೆ ಆಪತ್ತೂ ಸಹ ಸೃಷ್ಟಿಯಾಗಿರುವ ಇಂದಿನ ದಿನದಲ್ಲಿ, ಜನಸಾಮಾನ್ಯರು ಮತ್ತು ಸರ್ಕಾರಕ್ಕೆ ಸಹಾಯವಾಗುವಂತೆ ತನ್ನ ಹ್ಯಾಂಕಿಂಗ್ ಕಲೆಯನ್ನು ಬಳಸುತ್ತಿರುವ ತ್ರಿಶನೀತ್ ಆನ್‌ಲೈನ್ ಹ್ಯಾಕಿಂಗ್ ಬಗ್ಗೆ ಇಡೀ ದೇಶಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತಿದ್ದಾನೆ.!

ಜಿಯೋ ಬಗ್ಗೆ ಏರ್‌ಟೆಲ್ ಹೇಳಿದ್ದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.!!?
ಎಥಿಕಲ್ ಹ್ಯಾಕಿಂಗ್ ಮೂಲಕ ಆನ್‌ಲೈನ್ ರಹಸ್ಯ ಮಾಹಿತಿಗಳು ಸೋರಿಕೆಯಾಗಿ ಹೋಗುತ್ತಿರುವುದನ್ನು ತಪ್ಪಿಸಿ. ಬ್ಯಾಂಕಿನಲ್ಲಿರುವ ಹಣವನ್ನು ಜೊತೆಗೆ ಮಾಹಿತಿಗಳನ್ನು ದೋಚುವ 'ಹ್ಯಾಕಿಂಗ್' ಎಂಬ ವಿಲಕ್ಷಣವಾದ ವಿದ್ಯೆಯನ್ನು ವಂಚನೆಗಾಗಿ ಬಳಸದೇ ದೇಶಕ್ಕಾಗಿ ಮುಡುಪಿಟ್ಟಿದ್ದಾನೆ.!!
ಇಂದು ಟ್ಯಾಕ್ ಸೆಕ್ಯುರಿಟಿ ಎಂಬ ಕಂಪೆನಿಯ ವಾರ್ಷಿಕ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿರುವ ತ್ರಿಶನೀತ್ ಒಂದು ಕಾಲಕ್ಕೆ ತನ್ನ 8ನೇ ಕ್ಲಾಸ್‌ನಲ್ಲಿಯೇಲ ಆಗಿದ್ದ! ನಂತರ ಜೀವನವನ್ನೆ ಕಂಪ್ಯೂಟರ್-ಕೋಡಿಂಗ್ ಮೂಲಕ ಕಟ್ಟಿಕೊಳ್ಳಲು ನಿರ್ಧರಿಸಿದ್ದ. ನಂತರ ಶ್ರಮಪಟ್ಟು ಓದಿ ಕಂಪ್ಯೂಟರ್ ಜ್ಞಾನಿಯಾಗಿ ಬದಲಾದ.!!

8ನೇ ಕ್ಲಾಸ್ ಪಾಸು ಮಾಡಿಕೊಳ್ಳಲಾಗದ ಯುವಕ ಅಂತರ್ಜಾಲ ಸೇವೆಯ ನ್ಯೂನ್ಯತೆಗಳನ್ನು ಕಂಪನಿಗಳು, ತನಿಖಾ ಸಂಸ್ಥೆಗಳು ಗಮನಕ್ಕೆ ತರುತ್ತಿದ್ದಾನೆ. ಇದರಿಂದ ಆತನಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆಯೂ ಅವನಿಗೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಶುರುಮಾಡಿದ 'ಟ್ಯಾಕ್ ಸೆಕ್ಯುರಿಟಿ' ದೊಡ್ಡ ಮಟ್ಟದಲ್ಲಿ ಹೆಸರುಮಾಡುತ್ತಿದೆ.


Click it and Unblock the Notifications








