ಕಾವೇರಿ ನದಿ ಬಗ್ಗೆ ಗೂಗಲ್ ಮ್ಯಾಪ್ ಸರ್ಚ್ ಮಾಡಿದವರಿಗೆ ಶಾಕ್ ಆಗುತ್ತೆ!!..ಏಕೆ ಗೊತ್ತಾ?
ರಾಜಕೀಯ ಪ್ರೇರಿತವಾಗಿ ಹೋರಾಟ ನಡೆಯುತ್ತಿರುವ ಕಾವೇರಿ ನದಿ ಹಂಚಿಕೆ ವಿವಾದಕ್ಕೆ ಬೆಂಕಿಹಚ್ಚುವ ಕೆಲಸವನ್ನು ವಿಶ್ವದ ಪ್ರಖ್ಯಾತ ಜಾಲತಾಣ ಗೂಗಲ್ ಸಂಸ್ಥೆಯಿಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ವಿರುದ್ಧ ಯಾವಾಗಲೂ ಸಣ್ಣದೊಂದು ಮನಸ್ತಾಪ ಇದ್ದೇ ಇದೆ. ಇಲ್ಲಿಯೇ ಹುಟ್ಟಿ ಹರಿರುವ ಕಾವೇರಿ ನದಿ ನಮ್ಮದು ಎಂದು ಕರ್ನಾಟಕ ಹೇಳಿದರೆ, ಕಾವೇರಿ ನದಿ ಹೆಚ್ಚು ಹರಿಯುವುದು ನಮ್ಮ ರಾಜ್ಯದಲ್ಲಿ ಎಂದು ತಮಿಳುನಾಡು ಹೇಳಿಕೊಳ್ಳುತ್ತದೆ. ಹಾಗಾಗಿ, ಇದು ಇತಿಹಾಸದಿಂದಲೂ ವಿವಾದಕ್ಕೆ ಕಾರಣವಾಗಿದೆ.
ಅಯ್ಯೋ ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೆ, ತಂತ್ರಜ್ಞಾನ ವೆಬ್‌ಸೈಟಿನಲ್ಲಿ ಇದೇನಿದು ರಾಜಕೀಯ ಬರೆಯುತ್ತಿದ್ದೀರಾ ಎಂದುಕೊಳ್ಳಬೇಡಿ. ಏಕೆಂದರೆ, ರಾಜಕೀಯ ಪ್ರೇರಿತವಾಗಿ ಹೋರಾಟ ನಡೆಯುತ್ತಿರುವ ಕಾವೇರಿ ನದಿ ಹಂಚಿಕೆ ವಿವಾದಕ್ಕೆ ಬೆಂಕಿಹಚ್ಚುವ ಕೆಲಸ ವಿಶ್ವದ ಪ್ರಖ್ಯಾತ ಜಾಲತಾಣ ಗೂಗಲ್ ಸಂಸ್ಥೆಯಿಂದಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಕಾವೇರಿ ನದಿ ನೀರಿನ ವಿಷಯದಲ್ಲಿ ಎರಡೂ ರಾಜ್ಯಗಳು ಕಚ್ಚಾಡುತ್ತಿರುವಾಗಲೇ, ಗೂಗಲ್ ಸಂಸ್ಥೆ ತನ್ನ ಗೂಗಲ್ ಮ್ಯಾಪಿನಲ್ಲಿ ಅನರ್ಥವೊಂದನ್ನು ಮಾಡಿದೆ. ಗೂಗಲ್ ಮ್ಯಾಪಿನಲ್ಲಿ ಕಾವೇರಿ ನದಿಯ ಬಗ್ಗೆ ಹುಡುಕಿದರೆ, ಗೂಗಲ್ ಮ್ಯಾಪಿನ ಗುರುತು ತಮಿಳುನಾಡು ರಾಜ್ಯದ ಒಳಗಡೆ ತೋರಿಸುತ್ತಿರುವುದು, ಕರ್ನಾಟಕದವರ ಕಣ್ಣು ಕೆಂಪಾಗುವಂತೆ ಮಾಡಿದೆ.
ಗೂಗಲ್ ಮ್ಯಾಪ್ ತೆರೆದು "ಕಾವೇರಿ ನದಿ" (Kaveri River) ಎಂದು ಟೈಪಿಸಿ ಎಂಟರ್ ಒತ್ತಿದರೆ, ಗೂಗಲ್ ಮ್ಯಾಪಿನ ಗುರುತು ಕಡ್ಡಿ ನೆರವಾಗಿ ಕರ್ನಾಟಕ ಬಿಟ್ಟು ತಮಿಳುನಾಡು ರಾಜ್ಯದ ಒಳಗೆ ತೋರಿಸುತ್ತಿದೆ. ಕರ್ನಾಟಕದ ಗಡಿ ಪ್ರದೇಶದಿಂದ 60 ಕಿ.ಮೀಟರ್ ದೂರದಲ್ಲಿರುವ ಮೆಟ್ಟೂರು ಡ್ಯಾಮ್ ಬಳಿಯ ಪ್ರದೇಶದಲ್ಲಿ ಗೂಗಲ್ ಮ್ಯಾಪ್ ಕಾವೇರಿಯನ್ನು ಗುರುತಿಸುತ್ತಿದೆ.

ದೇಶ ದೇಶಗಳ ಗಡಿ ಪ್ರದೇಶಗಳಲ್ಲಿ ಭೂಪಟವನ್ನು ಗುರುತಿಸಿರುವ ವಿಷಯದಲ್ಲಿ ಗೂಗಲ್ ಮ್ಯಾಪಿನ ಬಗ್ಗೆ ಹಲವು ವಿವಾದಗಳು ಇದ್ದೇ ಇವೆ. ಹಾಗಾಗಿ, ಗೂಗಲ್ ಸಂಸ್ಥೆ ಯಾವಾಗಲೂ ವಿವಾದಗಳಿರುವ ಸ್ಥಳಗಳನ್ನು ಗೆರೆಹಾಕಿದ ರೀತಿಯಲ್ಲಿ ಗುರುತಿಸುವುದು ವಾಡಿಕೆ. ಆದರೆ, ಕಾವೇರಿ ವಿಷಯದಲ್ಲಿ ಗೂಗಲ್ ಏನು ಮಾಡುತ್ತದೆ ಎಂಬುದು ಕನ್ನಡಿಗರ ಮುಂದಿನ ನಡೆಗೆ ಬಿಟ್ಟಿದ್ದು!!

ಓದಿರಿ: ದೇಶವನ್ನೇ ಬೆಚ್ಚಿಬಿಳಿಸಿದ ಬಹುದೊಡ್ಡ 6 ಡೇಟಾ ಕಳವು ಪ್ರಕರಣಗಳಿವು!.ನಂಬಿದ ಕಂಪೆನಿಗಳೇ ಮೋಸ ಮಾಡಿದವು!!


Click it and Unblock the Notifications








