ಪೆಟ್ರೋಲ್ ಬಂಕ್‌ಗಳಲ್ಲಿ ಸ್ಮಾರ್ಟ್‌ಫೋನ್ ಬಳಸಬಹುದೇ?
ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಜನರು ಈ ದಿನಗಳಲ್ಲಿ ಎಲ್ಲಾ ಕಡೆಯೂ ಮಾಡುತ್ತಿದ್ದಾರೆ. ನಿಷೇಧಿತ ಪ್ರದೇಶಗಳಲ್ಲಿ ನೀವು ಸ್ಮಾರ್ಟ್‌ಫೋನ್ ಬಳಕೆ ಮಾಡಬಾರದು ಎಂಬ ಬೋರ್ಡ್ ಹಾಕಿರುವುದನ್ನು ನೀವು ನೋಡಿರುತ್ತೀರಿ. ಅದಾಗ್ಯೂ ಜನರು ಈ ನಿರ್ಬಂಧವನ್ನು ಮೀರಿ ಫೋನ್ ಅನ್ನು ಬಳಸುತ್ತಿದ್ದಾರೆ. ಎಟಿಎಮ್ ಕೇಂದ್ರ, ಆಸ್ಪತ್ರೆ, ದೇವಸ್ಥಾನ, ಶಾಲಾ ಆವರಣ ಇಲ್ಲಿ ಫೋನ್ ಬಳಕೆ ಮಾಡಬಾರದು ಏಕೆಂದರೆ ಇಲ್ಲಿನ ನಿಯಮಗಳಿಗೆ ಫೋನ್‌ಗಳು ಭಂಗ ತರುತ್ತವೆ ಎಂಬ ಕಾರಣಕ್ಕಾಗಿದೆ. ಅಂತೆಯೇ ಪೆಟ್ರೋಲ್ ಪಂಪ್‌ನಲ್ಲಿ ಕೂಡ ಮೊಬೈಲ್ ಬಳಕೆಯನ್ನು ಮಾಡಬಾರದು ಎಂಬುದಾಗಿ ಹೇಳಿರುವುದನ್ನು ನೀವು ಕೇಳಿರುತ್ತೀರಿ.
ಓದಿರಿ: ಸ್ಮಾರ್ಟ್‌ಫೋನ್ ಚಟಕ್ಕೆ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ!
ಇದು ನಿಜವೇ ಅಥವಾ ಸುಳ್ಳೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳುತ್ತಿದ್ದು ವಿಜ್ಞಾನವು ಇದಕ್ಕೆ ನೀಡುತ್ತಿರುವ ಕಾರಣವನ್ನು ಅರಿತುಕೊಳ್ಳೋಣ.

ಮೊಬೈಲ್ ಫೋನ್‌ಗಳನ್ನು ಸ್ಚಿಚ್ ಆಫ್
ಪೆಟ್ರೋಲ್ ಬಂಕ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ಸ್ಚಿಚ್ ಆಫ್ ಮಾಡುವ ಸಂಗತಿಯನ್ನು ನಾವು ಮರೆತೇ ಬಿಡುತ್ತೇವೆ. ಇಲೆಕ್ಟ್ರೋ ಮ್ಯಾಗ್ನಟಿಕ್ ರೇಡಿಯೇಶನ್ ಅನ್ನು ಇದು ಹೊರಹಾಕುತ್ತದೆ ಎಂಬ ಕಾರಣಕ್ಕೆ ಫೋನ್ ಸ್ವಿಚ್ ಆಫ್ ಮಾಡಬೇಕು.

ನಿಷೇಧ
ಟ್ರಾಫಿಕ್ ನಿಯಮಗಳ ಪ್ರಕಾರ, ಮೊಬೈಲ್ ಫೋನ್‌ಗಳು ನಿಷೇಧವನ್ನು ಪಡೆದುಕೊಂಡಿವೆ ಈ ಡಿವೈಸ್‌ಗಳು ಕಡಿಮೆ ಪ್ರಮಾಣದ ರೇಡಿಯೊ ಆವರ್ತನಾ ಟ್ರಾನ್ಸ್‌ಮೀಟರ್‌ಗಳನ್ನು ಹೊಂದಿವೆ. ಆದರೆ ಇದು ಪೆಟ್ರೋಲ್ ಸ್ಟೇಶನ್‌ಗಳ ಮೇಲೆ ಪರಿಣಾಮವನ್ನು ಬೀರಲಿವೆಯೇ ಎಂಬುದು ತಿಳಿದಿಲ್ಲ.

ಬೆಂಕಿ ಉಂಟುಮಾಡಲಿವೆ
ಸುದ್ದಿಗಳಲ್ಲಿ ಬಂದಿರುವಂತೆ ಮೊಬೈಲ್ ಫೋನ್‌ಗಳ ಬಳಕೆಯು ಬೆಂಕಿಯನ್ನು ಈ ಸ್ಥಾಪನೆಗಳಲ್ಲಿ ಉಂಟುಮಾಡಲಿವೆ ಎಂದಾಗಿದೆ. ಆದರೆ ನಿಮ್ಮ ಫೋನ್ ಆನ್ ಮಾಡಿರುವುದರಿಂದ ಇಂತಹ ಘಟನೆಗಳು ನಡೆದಿವೆಯೇ ಎಂಬ ಪ್ರಶ್ನೆಯನ್ನು ಹಾಕಿದಲ್ಲಿ ವಿಜ್ಞಾನವು ಇಲ್ಲವೆಂದೇ ಹೇಳುತ್ತಿದೆ.

ಅತಿ ಕಡಿಮೆ ಶಕ್ತಿ ಪ್ರಸಾರ
ಏಕೆಂದರೆ ಮೊಬೈಲ್ ಡಿವೈಸ್‌ಗಳು ಅತಿ ಕಡಿಮೆ ಶಕ್ತಿಯನ್ನು ಪ್ರಸಾರ ಮಾಡುತ್ತಿವೆ ಎಂದಾಗಿದೆ. ಆದರೆ ನಿಮ್ಮ ಫೋನ್ ಬ್ಯಾಟರಿ ಸಮಸ್ಯೆಯನ್ನು ಹೊಂದಿದ್ದಲ್ಲಿ ಪೆಟ್ರೋಲ್ ಸ್ಟೇಶನ್‌ನಲ್ಲಿ ಬೆಂಕಿಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

ಸ್ಫೋಟ
ನಿಮ್ಮ ಕಾರಿನ ಬ್ಯಾಟರಿ ಕೂಡ ಇದೇ ಸಮಸ್ಯೆ ಹೊಂದಿದೆ ಎಂದಾದಲ್ಲಿ ಬೆಂಕಿಯುಂಟಾಗುವ ಸಾಧ್ಯತೆ ಇರುತ್ತದೆ. ಸ್ಫೋಟಕ್ಕಿಂತಲೂ ಹೆಚ್ಚಾಗಿ ಇದು ಗಮನವನ್ನು ಸೆಳೆದು ಕಾರ್ಯಭಂಗವನ್ನುಂಟು ಮಾಡುತ್ತದೆ ಎಂಬುದಂತೂ ನಿಜ.

ಸ್ಫೋಟ ಕುರಿತಾದ ಯಾವುದೇ ಮಾಹಿತಿ
ಆದರೆ ಈ ಸ್ಫೋಟ ಕುರಿತಾದ ಯಾವುದೇ ಮಾಹಿತಿ ಇದುವರೆಗೂ ಲಭ್ಯವಿಲ್ಲ. ಆಗಿದ್ದರೂ ಸ್ಮಾರ್ಟ್‌ಫೋನ್ ಆನ್ ಆಗಿರುವುದು ಈ ಸ್ಫೋಟಕ್ಕೆ ಕಾರಣವಾಗಿರುವುದಿಲ್ಲ.

ಇಲೆಕ್ಟ್ರಾನಿಕ್ ಉಪಕರಣಗಳ ಸ್ಫೋಟ
ಇಂತಹ ಇಲೆಕ್ಟ್ರಾನಿಕ್ ಉಪಕರಣಗಳು ಸ್ಫೋಟವನ್ನುಂಟು ಮಾಡುತ್ತದೆ ಎಂಬುದಾಗಿ ವಿಜ್ಞಾನವು ದೃಢೀಕರಿಸುತ್ತಿಲ್ಲ ಅದಾಗ್ಯೂ ನೀವು ಹೆಚ್ಚುವರಿ ಮುಂಜಾಗರೂಕತೆಯನ್ನು ತೆಗೆದುಕೊಳ್ಳಬೇಕು.


Click it and Unblock the Notifications








