ಎಕ್ಸ್‌ಪೀರಿಯಾ ಝೆಡ್ 3 ಅದ್ಭುತ ಕ್ಯಾಮೆರಾ ವಿಶೇಷತೆ

By Shwetha
|

ಭಾರತೀಯ ಮಾರುಕಟ್ಟೆಯನ್ನು ಆಳುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲೊಂದಾಗಿದೆ ಸೋನಿ. ಆದರೆ ಸೋನಿಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ. ನೀವು ಅದು ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳ ಕಡೆಗೆ ಗಮನ ಹರಿಸಿದರೆ ಸಾಕು ಅದು ತನ್ನ ಅಭಿಮಾನಿಗಳಿಂದ ಗಳಿಸಿರುವ ಪ್ರತಿಕ್ರಿಯೆಯನ್ನು ನೋಡಿದರೆ ನಮಗೆ ಕಂಪೆನಿಯ ಸಾಧನೆಯ ಅರಿವಾಗುತ್ತದೆ.

ಹಿಂದಿನಿಂದಲೂ ಜಪಾನ್ ಮೂಲದ ಈ ಟೆಕ್ ದೈತ್ಯ ಎಲ್ಲಾ ಅಂಶಗಳಲ್ಲೂ ಮುಂದಿದೆ. ಇದರ ಮ್ಯೂಸಿಕ್ ಪ್ಲೇಯರ್‌ಗಳಿಂದ ಹಿಡಿದು, ಇಂದಿನ ಪ್ಲೇ ಸ್ಟೇಶನ್‌ವರೆಗೆ ಕಂಪೆನಿಯ ಮುಖ್ಯ ಸಾಧನೆ ನಿಜಕ್ಕೂ ಮೋಡಿಮಾಡುವಂಥದ್ದಾಗಿದೆ. ಇನ್ನು ಸ್ಮಾರ್ಟ್‌ಫೋನ್ ವ್ಯವಹಾರದಲ್ಲಂತೂ ಇದರ ಸಾಧನೆ ಕಂಪೆನಿಯ ಹಿರಿಮೆಗೆ ಇನ್ನೊಂದು ಗರಿಯನ್ನು ಜೋಡಿಸಿದೆ.

ಈ ಸಾಧನೆಗೆ ಇನ್ನೊಂದು ಹಿರಿಮೆ ಎಂಬಂತೆ ಸೋನಿ ಎಕ್ಸ್‌ಪೀರಿಯಾ ಝೆಡ್ 3 ಅನ್ನು ಸೇರಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಇತರ ದೊಡ್ಡ ಹೆಸರುಗಳನ್ನು ಮೂಲೆಗುಂಪಾಗಿಸಲು ಈ ಹೊಸ ಸ್ಮಾರ್ಟ್‌ಫೋನ್ ತಲೆಎತ್ತಿದೆ. ಮಾರುಕಟ್ಟೆಯಲ್ಲಿ ಈ ಫೋನ್‌ನ ಬೆಲೆ ರೂ 48,000 ಆಗಿದ್ದು ಇದು 5.2 ಇಂಚಿನ ಡಿಸ್‌ಪ್ಲೇಯೊಂದಿಗೆ ಪೂರ್ಣ ಎಚ್‌ಡಿ ರೆಸಲ್ಯೂಶನ್ ಆದ 1920x1080 ಪಿಕ್ಸೆಲ್‌ಗಳೊಂದಿಗೆ ಬಂದಿದೆ.

ಇದನ್ನೂ ಓದಿ: ಸೋನಿ ಎಕ್ಸ್‌ಪೀರಿಯಾ ಝೆಡ್ 3 ಯ 10 ಆಕರ್ಷಕ ಫೀಚರ್‌ಗಳು

ಮೊಬೈಲ್ ಹಾಗೂ ಮೊಬೈಲ್ ಪಿಕ್ಚರ್ ಎಂಜಿನ್‌ಗಾಗಿ ಕಂಪೆನಿಯ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇಯೊಂದಿಗೆ ಫೋನ್ ಬಂದಿದೆ. ಫೋನ್‌ನಲ್ಲಿ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಸಾಕ್ ಜೊತೆಗೆ 2.5 GHz ನೊಂದಿಗೆ ಕ್ವಾಡ್ ಕೋರ್ ಸಿಪಿಯುನೊಂದಿಗೆ 4G LTE ಮೋಡೆಮ್ ಹಾಗೂ ಅಡ್ರೆನೊ 330 GPU ನೊಂದಿಗೆ ಬಂದಿದೆ. ಸೋನಿಯು ಹೆಚ್ಚಿ ನ ಕಾರ್ಯ ಯೋಜನೆಗಳಿಗಾಗಿ 3 ಜಿಬಿ RAM ಅನ್ನು ಒದಗಿಸುತ್ತಿದೆ.

ಇನ್ನು ಗೂಗಲ್‌ನ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಇದರಲ್ಲಿದ್ದು ಕ್ಯಾಮೆರಾವು 20.7 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಇದು ಹೊಂದಿದೆ. ಕ್ಯಾಮೆರಾವು ಎಲ್‌ಇಡಿ ಫ್ಲ್ಯಾಶ್ ಮತ್ತು ಆಟೋ ಫೋಕಸ್ ಅನ್ನು ಹೊಂದಿದೆ. ಇನ್ನು ಫೋನ್ ಮುಂಭಾಗದಲ್ಲಿ 2.2 ಎಮ್‌ಪಿ ಕ್ಯಾಮೆರಾವನ್ನು ಒಳಗೊಂಡಿದ್ದು ಫೋನ್‌ನ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದೆ ಮತ್ತು ಇದನ್ನು 128 ಜಿಬಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.

ಇನ್ನು ಸೋನಿ ಎಕ್ಸ್‌ಪೀರಿಯಾ ಝೆಡ್ 3 ನಲ್ಲಿ ಮನಸೆಳೆಯುವ ಅಂಶವೆಂದರೆ ಅದರ ಕ್ಯಾಮೆರಾವಾಗಿದೆ. ಪ್ರಿಡಿಸೆಸರ್‌ಗಿಂತಲೂ ಇದರ ಕ್ಯಾಮೆರಾ ಮನಸೆಳೆಯುವಂತಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸೋನಿ ಎಕ್ಸ್‌ಪೀರಿಯಾ ಝೆಡ್ 3 ಯ ಹತ್ತು ಮನಸೆಳೆಯುವ ಅಂಶಗಳನ್ನು ನೋಡೋಣ.

#1

#1

ಇದೇ ವರ್ಗಕ್ಕೆ ಬರುವ ಇತರ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾಗಳಿಗಿಂತ ಸೋನಿ ಎಕ್ಸ್‌ಪೀರಿಯಾ ಝೆಡ್ 3 ಯ ಬಿಲ್ಟ್ ಇನ್ ಕ್ಯಾಮೆರಾ ಹೆಚ್ಚುವರಿ ISO ಅನ್ನು ಪಡೆದುಕೊಂಡಿದೆ. ಇದು ದೊಡ್ಡದಾದ ಕ್ಯಾಮೆರಾ ಸೆನ್ಸಾರ್ ಅನ್ನು ನೀಡುತ್ತಿದೆ. ಇನ್ನು ಕಡಿಮೆ ಬೆಳಕಿರುವಲ್ಲಿ ಕೂಡ ಫೋನ್ ಕ್ಯಾಮೆರಾ ಅದ್ಭುತ ಫೋಟೋಗಳನ್ನು ತೆಗೆಯುವಲ್ಲಿ ನಿಸ್ಸೀಮನಾಗಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

#2

#2

ತನ್ನ ಹೊಸ ಎಕ್ಸ್‌ಪೀರಿಯಾ ಝೆಡ್ 3 ನಲ್ಲಿ ಸೋನಿಯು ಅದ್ಭುತ ಹ್ಯಾಂಡಿ ಕ್ಯಾಮ್ ತಂತ್ರಜ್ಞಾನವನ್ನು ಪ್ರಸ್ತುತಪಡಿಸಿದೆ. ಇದು ಬಲವಾದ ಜಲಪ್ರತಿರೋಧಕ ಗುಣಮಟ್ಟವನ್ನು ಕೂಡ ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊಗಳನ್ನು ತೆಗೆಯುವ ಹಂಬಲ ಫೋನ್ ಯಜಮಾನರಲ್ಲಿ ಇರುವುದು ಸಹಜವೇ ಆಗಿದೆ. ಅಂತೂ ಈ ಫೋನ್‌ನಲ್ಲಿ ವೀಡಿಯೊ ದಾಖಲಿಸುವಿಕೆ ಮಜಬೂತಾಗಿದ್ದು ಈ ಫೋನ್ ನಿಮ್ಮನ್ನು ಇತರರಿಗಿಂತ ಬೇರೆಯಾಗಿಸುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.

#3

#3

ನೀವು ವೀಡಿಯೊ ಶೂಟ್ ಮಾಡುತ್ತಿರುವಾಗ ತಕ್ಷಣದ ಸೆಳೆತಗಳು ಅಥವಾ ಚಲನೆಗಳು ನಿಮ್ಮ ವೀಡಿಯೊವನ್ನು ಹಾಳುಮಾಡುವುದಿಲ್ಲ. ಈ ಅದ್ಭುತದ ಹಿಂದಿರುವ ಕೈಯಾಗಿದೆ ಸ್ಟೆಡಿ ಶಾಟ್. ಉತ್ತಮ ಕ್ಯಾಮೆರಾ ಎಂದು ಹೇಳಿಸಿಕೊಳ್ಳುವ ಪ್ರತೀ ಫೋನ್‌ನಲ್ಲಿ ಸ್ಟೆಡಿ ಶಾಟ್ ಎಂಬ ಅಂಶ ಇರುವುದು ಹೆಚ್ಚು ಮುಖ್ಯವಾಗಿದೆ.

#4

#4

ಆರಂಭದ ದಿನಗಳಿಂದಲೂ, ಹೆಚ್ಚು ಸುಧಾರಿತ ಎಕ್ಸ್‌ಪೀರಿಯಾ ಕ್ಯಾಮೆರಾಗಳ ಲೆನ್ಸ್‌ಗಳು ನೀರಿನಾಳದಲ್ಲೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಗುಣವನ್ನು ಹೊಂದಿರುವಂತವುಗಳು. ಇದು ಹೊಸ ಎಕ್ಸ್‌ಪೀರಿಯಾ ಝೆಡ್ 3 ನಲ್ಲೂ ನಿಮಗೆ ಲಭ್ಯವಾಗಲಿದೆ.

#5

#5

ಸೋನಿಯ ಅಧಿಕೃತ ಸೆಲ್ಫೀ ಫೋನ್ ಆಗಿದೆ ಹೊಸ ಎಕ್ಸ್‌ಪೀರಿಯಾ ಸಿ3. ಆದರೂ ಎಕ್ಸ್‌ಪೀರಿಯಾ ಝೆಡ್3 ನಲ್ಲಿ ಗುಂಪು ಸೆಲ್ಫೀಯನ್ನು ತೆಗೆಯಬೇಕು ಎಂದು ಬಯಸುವವರಿಗೆ ಸೋನಿ ಈ ಫೋನ್‌ನಲ್ಲಿ ಏನನ್ನೂ ಒದಗಿಸುತ್ತಿಲ್ಲ. ಸೋನಿ ಹೇಳುವಂತೆ ಎಕ್ಸ್‌ಪೀರಿಯಾ ಝೆಡ್3 ಯ ಪ್ರಶಸ್ತಿ ಪುರಸ್ಕೃತ ಜಿ ಲೆನ್ಸ್ ಹೆಚ್ಚಿನ ಬೆಳಕನ್ನು ಸೆರೆಹಿಡಿಯುತ್ತದೆ, ಅದಲ್ಲದೆ ಫೋನ್‌ನ 25 ಎಮ್‌ಎಮ್ ವೈಡ್ ಆಂಗಲ್ ಲೆನ್ಸ್ ಫ್ರೇಮ್‌ನಲ್ಲಿ ಹೆಚ್ಚು ಫಿಟ್ ಆಗಲು ನಿಮ್ಮನ್ನು ಅನುಮತಿಸುತ್ತದೆ.

#6

#6

ಎಕ್ಸ್‌ಪೀರಿಯಾ ಝೆಡ್3 ನಲ್ಲಿ ನೀವು ಹೆಚ್ಚು ಗಂಭೀರ ಮತ್ತು ತೀಕ್ಷ್ಣ ಫೋಟೋಗಳನ್ನು ತೆಗೆಯಬಹುದಾಗಿದೆ. ಎಕ್ಸ್‌ಪೀರಿಯಾ ಝೆಡ್3 ನಲ್ಲಿ ಅತ್ಯತ್ತಮ ಗುಣಮಟ್ಟದ ವೀಡಿಯೊವನ್ನು ನಿಮಗೆ ದಾಖಲಿಸಬಹುದಾಗಿದೆ. ಇನ್ನು 4K ಬೆಂಬಲ ಎಂದರೆ ಪೂರ್ಣ ಎಚ್‌ಡಿ 1080p ಚಿತ್ರ ಗುಣಮಟ್ಟಕ್ಕೆ ಹೋಲಿಸಿದಾಗ ಇದು ನಾಲ್ಕು ಪಟ್ಟು ಉತ್ತಮವಾಗಿರುತ್ತದೆ ಎಂದಾಗಿದೆ.

#7

#7

ಫೋನ್‌ನಲ್ಲಿರುವ ಮೂವಿ ಕ್ರಿಯೇಟರ್ ಫೀಚರ್ ನಿಜಕ್ಕೂ ಪ್ರತಿಯೊಬ್ಬರನ್ನೂ ಆಕರ್ಷಿಸುವುದು ಖಂಡಿತ. ಇದು ನಿಮ್ಮ ಮೀಡಿಯಾ ಮತ್ತು ಕ್ಲಸ್ಟರ್ ಈವೆಂಟ್‌ಗಳನ್ನು ಜೊತೆಯಾಗಿ ವಿಶ್ಲೇಷಿಸಲಿದ್ದು ಇದು ಮುಖ, ಸ್ಥಳಗಳನ್ನು ಚೆನ್ನಾಗಿ ಪತ್ತೆ ಹಚ್ಚುತ್ತದೆ. ಇದರಲ್ಲಿರುವ ವೀಡಿಯೊ ಎಸ್‌ಕ್ಯೂ ಮೂವಿಯಲ್ಲಿ ನೀವು ಚಮತ್ಕಾರಗಳನ್ನು ರೂಪಿಸಿ ನಿಮ್ಮ ಸ್ನೇಹಿತರನ್ನು ಖುಷಿಪಡಿಸಬಹುದು.

#8

#8

ನೀವು ಚಿತ್ರಗಳನ್ನು ತೆಗೆದ ನಂತರ ಕೂಡ ಆ ಚಿತ್ರಗಳಲ್ಲಿ ಸಾಕಷ್ಟು ವಿಸ್ಮಯಗಳನ್ನು ನಿರ್ಮಿಸಬಹುದಾಗಿದೆ. ನಿಮ್ಮ ಚಿತ್ರಗಳಿಗೆ ಇನ್ನಷ್ಟು ಆಕರ್ಷಣೆಯನ್ನು ತುಂಬುವುದಕ್ಕಾಗಿ ಸೋನಿ ಬಹಳಷ್ಟನ್ನು ತನ್ನ ಫೋನ್‌ನಲ್ಲಿ ನಿಮಗಾಗಿ ನೀಡಿದೆ.

#9

#9

ಎಕ್ಸ್‌ಪೀರಿಯಾ ಝೆಡ್3 ನೀವು ಕಂಡಂತೆ, ಬಳಕೆದಾರರು ಹೆಚ್ಚಿನ ಅನೂಹ್ಯ ಕ್ಯಾಮೆರಾ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದ್ದು ಸೋನಿ ಇದರಲ್ಲಿ ಅಭಿವೃದ್ಧಿಪಡಿಸಿದೆ. ನಿಮ್ಮ ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿ ಸೋನಿ ಅಭಿವೃದ್ಧಿಪಡಿಸಿರುವ ಈ ಎಲ್ಲಾ ಅಂಶಗಳಿದ್ದು ನಿಜಕ್ಕೂ ಇದು ನಿಮ್ಮನ್ನು ವಿಸ್ಮಯಗೊಳಿಸಲಿದೆ. ಪ್ರತಿಯೊಂದು ಅಪ್ಲಿಕೇಶನ್ ಕೂಡ ಕ್ರಿಯಾತ್ಮಕ ವಿಶೇಷತೆಗಳನ್ನು ಒಳಗೊಂಡಿದ್ದು ನಿಜಕ್ಕೂ ಇದು ಮನಮೋಹಕಗೊಳಿಸಲಿದೆ.

#10

#10

ಎಕ್ಸ್‌ಪೀರಿಯಾ ಝೆಡ್ 3 ಯಲ್ಲಿ ನೀವು ಕಂಡುಕೊಂಡಂತೆ, ಅನನ್ಯ ಕ್ಯಾಮೆರಾ ಅಪ್ಲಿಕೇಶನ್‌ಗಳ ಉತ್ತಮ ಆಯ್ಕೆಯನ್ನೇ ನೀಡಿದ್ದು ಸೋನಿಗಾಗಿಯೇ ಇದನ್ನು ನಿರ್ಮಿಸಲಾಗಿದೆ ಎಂಬ ಅನುಭವ ನಮ್ಮಲ್ಲಿ ಉಂಟಾಗುವುದು ಸಹಜವಾಗಿದೆ. ಸೋನಿಗಾಗಿಯೇ ತಯಾರಿಸಲಾಗಿರುವ ಕ್ಯಾಮೆರಾ ವಿಶೇಷತೆಗಳು ಮತ್ತು ಆಯ್ಕೆಗಳನ್ನು ಕಂಡಾಗ ನಿಜಕ್ಕೂ ಇದು ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಆನ್‌ಲೈನ್‌ನಲ್ಲಿ ಕೂಡ ಈ ಅಪ್ಲಿಕೇಶನ್‌ಗಳಿಗಾಗಿ ನೀವು ಹುಡುಕಾಡಬಹುದಾಗಿದೆ.

Best Mobiles in India

English summary
This article tells about 10 Amazing Things Sony Xperia Z3 Camera Can Do for You Sony is one of the premier smartphone companies that are currently ruling the Indian market. But you don't need us to tell you that. Just look at the smartphones the company has been delivering off late and the kind of response it....

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X