ಸೋನಿ ಎಕ್ಸ್‌ಪೀರಿಯಾ ಝೆಡ್ 3 ಯ 10 ಆಕರ್ಷಕ ಫೀಚರ್‌ಗಳು

Posted By:

ನಿಧಾನವಾಗಿಯಾದರೂ ತನ್ನ ನಿಲುವನ್ನು ದೃಢಪಡಿಸಿಕೊಂಡಿರುವ ಬ್ರ್ಯಾಂಡ್ ಆಗಿ ಭಾರತದಲ್ಲಿ ಸೋನಿ ನೆಲೆಗೊಂಡಿದೆ. ಅದ್ಭುತ ವಿಶೇಷತೆಗಳಿಂದ ಮೋಡಿ ಮಾಡಿದ ಕಂಪೆನಿಯ ಫ್ಲ್ಯಾಗ್‌ಶಿಪ್ ಡಿವೈಸ್ ಆದ ಎಕ್ಸ್‌ಪೀರಿಯಾ ಝೆಡ್ 3 ಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು.

ಹಿಂದಿನ ಆವೃತ್ತಿಯ ಸುಧಾರಣೆಯೊಂದಿಗೆ ಶಕ್ತಿಯುತವಾದ ಉತ್ಪನ್ನದ ಮೂಲಕ ಎಕ್ಸ್‌ಪೀರಿಯಾ ಝೆಡ್ 3 ಅನ್ನು ನಿರ್ಮಿಸಲಾಗಿದೆ. ಬ್ಯಾಟರಿ ಮತ್ತು ಕ್ಯಾಮೆರಾ ಅಂಶಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಇತರ ಪ್ರತಿಸ್ಪರ್ಧಿ ಡಿವೈಸ್‌ಗಳೊಂದಿಗೆ ಹೋಲಿಸಿದಾಗ ಈ ಡಿವೈಸ್ ತೆಳುವಾಗಿದೆ ಮತ್ತು ವೇಗವಾಗಿದೆ.

ಇದನ್ನೂ ಓದಿ: ಸೋನಿ ಎಕ್ಸ್‌ಪೀರಿಯಾ ಝೆಡ್3 ಮತ್ತು ಟಾಪ್ 10 ಪ್ರತಿಸ್ಪರ್ಧಿಗಳು: ಅತ್ಯುತ್ತಮ ಮತ್ತು ಉಳಿದಿರುವುದಕ್ಕೆ ಇರುವ ವ್ಯತ್ಯಾಸ

ಇದು ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಹೊಂದಿರುವ ಡಿವೈಸ್ ಆಗಿದೆ ಜೊತೆಗೆ ಎಕ್ಸ್‌ಪೀರಿಯಾ ಝೆಡ್ 3 ಯ ಒಳಭಾಗದಲ್ಲಿ ಜೋಡಿಸಿರುವ ಬ್ಯಾಟರಿ ಅಂಶವನ್ನು ಇನ್ನಷ್ಟು ಸುಧಾರಿಸಲಾಗಿದೆ. ಇನ್ನು ಆಪಲ್ ಐಫೋನ್ 6 ಪ್ಲಸ್‌ಗಿಂತ ಸೋನಿ ಎಕ್ಸ್‌ಪೀರಿಯಾ ಝೆಡ್ 3 ಯ ಬೆಲೆ ಕಡಿಮೆ ಇದೆ. ಈ ಫೋನ್ ಬೆಲೆ ರೂ 11,900 ಆಗಿದೆ. ನಿಜಕ್ಕೂ ಆಪಲ್ ಐಫೋನ್ 6 ಪ್ಲಸ್‌ಗಿಂತ ಇದು ಕಡಿಮೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ವೈಟ್ ರೂ 50,000 ಕ್ಕೆ ಲಭ್ಯವಾಗುತ್ತಿದೆ.


ಸೋನಿ ಎಕ್ಸ್‌ಪೀರಿಯಾ ಝೆಡ್ 3: ಪ್ರಮುಖ ವಿಶೇಷತೆಗಳು
ಎಕ್ಸ್‌ಪೀರಿಯಾ ಝೆಡ್ 3, 5.2 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಆದ 1920x1080 ಪಿಕ್ಸೆಲ್‌ಗಳೊಂದಿಗೆ ಬಂದಿದೆ. ಮೊಬೈಲ್‌ಗಾಗಿ ಕಂಪೆನಿಯ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇಯನ್ನು ಹಾಗೂ ಮೊಬೈಲ್ ಪಿಕ್ಚರ್ ಎಂಜಿನ್‌ಗಾಗಿ ಎಕ್ಸ್‌ ರಿಯಾಲಿಟಿಯನ್ನು ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 SoC ಜೊತೆಗೆ 2.5 GHz ಕ್ವಾಡ್ ಕೋರ್ CPU ನೊಂದಿಗೆ 4 ಜಿ LTE ಮೋಡೆಮ್ ಮತ್ತು ಅಡ್ರೆನೊ 330 GPU ನೊಂದಿಗೆ ಫೋನ್ ಬಂದಿದೆ. ಇನ್ನು ಬಹು ಕಾರ್ಯಗಳಿಗಾಗಿ ಸೋನಿ ಈ ಡಿವೈಸ್‌ನಲ್ಲಿ 3 ಜಿಬಿ RAM ಅನ್ನು ಕೂಡ ಪ್ರಸ್ತುತಪಡಿಸುತ್ತಿದೆ.

ಇನ್ನು ಡಿವೈಸ್‌ನಲ್ಲಿ ಗೂಗಲ್‌ನ ಆಂಡ್ರಾಯ್ಡ್ ಓಎಸ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದೆ. ಇನ್ನು ಕ್ಯಾಮೆರಾ ಅಂಶಗಳತ್ತ ಗಮನ ಹರಿಸುವುದಾದರೆ ಇದು 20.7 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಜೊತೆಗೆ ಆಟೋ ಫೋಕಸ್ LED ಫ್ಲ್ಯಾಶ್ ಅನ್ನು ಪಡೆದುಕೊಂಡಿದೆ. ಇನ್ನು ಫೋನ್‌ನ ಮುಂಭಾಗ ಕ್ಯಾಮೆರಾ 2.2 ಎಮ್‌ಪಿಯಾಗಿದ್ದು ಫ್ರಂಟ್ ಫೇಸಿಂಗ್ ಸ್ನ್ಯಾಪರ್ ಅನ್ನು ಫೋನ್ ಹೊಂದಿದೆ. ಇನ್ನು ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಇದನ್ನು 128 ಜಿಬಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.

ಇನ್ನು ಫೋನ್‌ನ ಸಂಪರ್ಕ ಅಂಶಗಳತ್ತ ಗಮನ ಹರಿಸುವುದಾದರೆ ಇದು 4ಜಿ ಎಲ್‌ಟಿಇ, ಜಿಪಿಎಸ್/ಗ್ಲೋನಾಸ್, ಬ್ಲ್ಯೂಟೂತ್ 4.0, ಡಿಎಲ್‌ಎನ್‌ಎ, ಎನ್‌ಎಫ್‌ಸಿ, ನೇಟೀವ್ ಯುಎಸ್‌ಬಿ ಟೆದರಿಂಗ್ ಸಿಂಕ್ರೊನೈಸೇಶನ್, ಯುಎಸ್‌ಬಿ ಹೈ ಸ್ಪೀಡ್ 2.0 ಮತ್ತು ಮೈಕ್ರೋ ಯುಎಸ್‌ಬಿ ಬೆಂಬಲ, ವೈಫೈ, ಹಾಗೂ ವೈಫೈ ಹಾಟ್‌ಸ್ಪಾಟ್ ಅನ್ನು ಡಿವೈಸ್ ಪಡೆದುಕೊಂಡಿದೆ. ಸೋನಿ ಎಕ್ಸ್‌ಪೀರಿಯಾ ಝೆಡ್ 3 3100 mAh ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಸೋನಿ ಹೇಳುವಂತೆ ಇದು 19 ಗಂಟೆಗಳ ಟಾಕ್ ಟೈಮ್ ಅವಧಿಯನ್ನು 740 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುತ್ತಿದೆ.

ಇನ್ನು ಮಲ್ಟಿಮೀಡಿಯಾ ಅಂಶವನ್ನು ಆನಂದಿಸುವುದಕ್ಕಾಗಿ ದೊಡ್ಡ ಗಾತ್ರದ ಪರದೆಯನ್ನು ಬಯಸುವವರಿಗಾಗಿ ತನ್ನ ಫೋನ್ ಅನ್ನು ವಿನ್ಯಾಸಪಡಿಸಿದೆ. ಇದು ಆಕರ್ಷಕ ವಿನ್ಯಾಸ, ಹೊಸ ವಿಶೇಷತೆಗಳು ಮತ್ತು ಇನ್ನಷ್ಟನ್ನು ತರುವಂತಿದೆ.

ಇದೇ ಸಂದರ್ಭದಲ್ಲಿ ಸೋನಿ ಎಕ್ಸ್‌ಪೀರಿಯಾ ಝೆಡ್ 3ನ 10 ಉತ್ತಮ ಅಂಶಗಳತ್ತ ಗಮನಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲಾಸಿಕ್ ಅಂಶ
  

ಎಕ್ಸ್‌ಪೀರಿಯಾ ಝೆಡ್2ವನ್ನು ಇನ್ನೂ ನಾವು ಇಷ್ಟಪಡುತ್ತಿದ್ದೇವೆ. ಆದರೆ ಈ ಸಕ್ಸೆಸರ್ ನಮ್ಮನ್ನು ಇನ್ನಷ್ಟು ಆಕರ್ಷಣೆಗೆ ಒಳಪಡಿಸುವಂತಿದೆ. ಗ್ಲಾಸ್ ಮತ್ತು ಅಲ್ಯುಮಿನಿಯಮ್‌ನ ಸಮ್ಮಿಶ್ರಣ ಜೊತೆಗೆ ಮುಂಭಾಗ ಸ್ಪೀಕರ್ ನಿಜಕ್ಕೂ ಫೋನ್‌ನ ಲುಕ್ ಅನ್ನು ಹೆಚ್ಚಿಸಿದೆ.

ಅದ್ಭುತ ಡಿಸ್‌ಪ್ಲೇ
  

ಸೋನಿ ಎಕ್ಸ್‌ಪೀರಿಯಾ ಕಳೆದ ವರ್ಷದ ಮಾಡೆಲ್‌ಗಿಂತಲೂ ಭಿನ್ನವಾಗಿದೆ. ಫೋನ್‌ನಲ್ಲಿ ಅಮೋಘ ಪರದೆ ಮತ್ತು ಉತ್ತಮ ಕ್ಯಾಮೆರಾಗಳನ್ನು ನಮಗೆ ಕಾಣಬಹುದಾಗಿದ್ದು, ಎಕ್ಸ್‌ಪೀರಿಯಾ ಝೆಡ್ 3, 5.2ಇಂಚಿನ ಐಪಿಎಸ್ ಎಲ್‌ಸಿಡಿ ಮತ್ತು 1,920 x 1,080 ರೆಸಲ್ಯೂಶನ್‌ನೊಂದಿಗೆ ಕಣ್ಸೆಳೆಯುವಂತಿದೆ.

ಸಾಫ್ಟ್‌ವೇರ್
  

ಸೋನಿ ಎಕ್ಸ್‌ಪೀರಿಯಾ ಝೆಡ್ 3 ಗೂಗಲ್‌ನ ಇತ್ತೀಚಿನ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ (ಕಿಟ್‌ಕ್ಯಾಟ್ 4.4).

ಕ್ಯಾಮೆರಾ
  

20.7ಎಮ್‌ಪಿ ಯ 1/2.3 ಇಂಚಿನ ಸೆನ್ಸಾರ್ ಜೊತೆಗೆ ಸಿಂಗಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಫೋನ್ ಪಡೆದುಕೊಂಡಿದೆ. ಇನ್ನು ಫೋನ್‌ನ ಮುಂಭಾಗ ಕ್ಯಾಮೆರಾ 2.2 ಮೆಗಾಪಿಕ್ಸೆಲ್ ಆಗಿದ್ದು ಇದು ರೆಸಲ್ಯೂಶನ್ ಸೆನ್ಸಾರ್ ಅನ್ನು ಹೊಂದಿದೆ. ಇದು ಎಚ್‌ಡಿಆರ್ ಮೋಡ್‌ಗೂ ಬೆಂಬಲವನ್ನು ನೀಡುತ್ತಿದೆ. ಎರಡೂ ಕ್ಯಾಮೆರಾಗಳು 1080p ವೀಡಿಯೊವನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಫೋನ್‌ನ ಹಿಂಭಾಗ ಕ್ಯಾಮೆರಾದಲ್ಲಂತೂ 4K ವೀಡಿಯೊಗಳನ್ನು ನಿಶ್ಚಿಂತೆಯಿಂದ ದಾಖಲಿಸಬಹುದಾಗಿದೆ.

ಕಾರ್ಯಕ್ಷಮತೆ
  

ಸೋನಿ ಎಕ್ಸ್‌ಪೀರಿಯಾ ಝೆಡ್ 3, 2.5GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ 3 ಜಿಬಿ RAM ನೊಂದಿಗೆ ಬಂದಿದೆ. ವೀಡಿಯೊಗಳನ್ನು ದಾಖಲಿಸಲು ಮತ್ತು ಗೇಮ್ ಆಡಲು ಫೋನ್ ಹೇಳಿಮಾಡಿಸಿದಂತಿದೆ.

ಬ್ಯಾಟರಿ
  

ಸೋನಿ ದೊಡ್ಡದಾದ 3,100mAh ಬ್ಯಾಟರಿಯನ್ನು ಒಳಭಾಗದಲ್ಲಿದ್ದು ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಅಥವಾ ಎಚ್‌ಟಿಸಿ ಒನ್ (ಎಮ್8) ಗಿಂತಲೂ ಫೋನ್ ಬ್ಯಾಟರಿ ದೊಡ್ಡದಾಗಿದೆ. ಇದು 13 ಗಂಟೆಗಳ ಬ್ಯಾಟರಿಯನ್ನು ಹೊಂದಿದ್ದು, ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಗಿಂತ ಹೆಚ್ಚಿನ ಟಾಕ್ ಟೈಮ್ ಅವಧಿಯನ್ನು ನೀಡುತ್ತಿದೆ.

ದೃಢವಾದ ಸ್ವಭಾವ
  

ಎಚ್‌ಟಿಸಿ ಒನ್, ಮತ್ತು ಐಫೋನ್ 6 ನಂತೆ, ಹೊಸ ಸೋನಿ ಎಕ್ಸ್‌ಪೀರಿಯಾ ಝೆಡ್ 3 ಧೂಳು ಮತ್ತು ನೀರು ನಿರೋಧಕವಾಗಿದೆ. ಇದು IP68 ಪ್ರಮಾಣವನ್ನು ಹೊಂದಿದ್ದು ಇದರ ಪ್ರಕಾರ ನೀರು ಮತ್ತು ಧೂಳಿನಿಂದ ರಕ್ಷಣೆಯನ್ನು ಪಡೆದುಕೊಳ್ಳುತ್ತದೆ ಎಂದಾಗಿದೆ.

ಸಂಪರ್ಕ
  

ಇನ್ನು ಫೋನ್‌ನ ಸಂಪರ್ಕ ಅಂಶಗಳತ್ತ ಗಮನ ಹರಿಸುವುದಾದರೆ ಇದು 4ಜಿ ಎಲ್‌ಟಿಇ, ಜಿಪಿಎಸ್/ಗ್ಲೋನಾಸ್, ಬ್ಲ್ಯೂಟೂತ್ 4.0, ಡಿಎಲ್‌ಎನ್‌ಎ, ಎನ್‌ಎಫ್‌ಸಿ, ನೇಟೀವ್ ಯುಎಸ್‌ಬಿ ಟೆದರಿಂಗ್ ಸಿಂಕ್ರೊನೈಸೇಶನ್, ಯುಎಸ್‌ಬಿ ಹೈ ಸ್ಪೀಡ್ 2.0 ಮತ್ತು ಮೈಕ್ರೋ ಯುಎಸ್‌ಬಿ ಬೆಂಬಲ, ವೈಫೈ, ಹಾಗೂ ವೈಫೈ ಹಾಟ್‌ಸ್ಪಾಟ್ ಅನ್ನು ಡಿವೈಸ್ ಪಡೆದುಕೊಂಡಿದೆ.

ಸ್ಪೀಕರ್ ಗುಣಮಟ್ಟ
  

ಸೋನಿ ಉತ್ತಮ ಗುಣಮಟ್ಟದ ಸ್ಟಿರಿಯೋ ಸ್ಪೀಕರ್‌ಗೆ ಹೆಸರುವಾಸಿಯಾಗಿದೆ. ಆದ್ದರಿಂದಾಗಿ ಸೋನಿ ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಸ ಎಕ್ಸ್‌ಪೀರಿಯಾ ಝೆಡ್3 ನಲ್ಲಿ ಅಳವಡಿಸಲಾಗಿದೆ.

ರಿಮೋಟ್ ಪ್ಲೇ ಫಂಕ್ಷನ್
  

ನಿಮ್ಮ ಟಿವಿ ಪರದೆಯನ್ನು ಬಳಸಿಕೊಳ್ಳದೆಯೇ PS4 ಕನ್ಸೋಲ್‌ಗೆ ಸಂಪರ್ಕವನ್ನು ಪಡೆದುಕೊಂಡು ಗೇಮ್ಸ್ ಆಡಲು ಸೋನಿ ಎಕ್ಸ್‌ಪೀರಿಯಾ ಝೆಡ್3 ನಿಮ್ಮನ್ನು ಅನುಮತಿಸುತ್ತದೆ.

ಸಂಗ್ರಹಣೆ
  

ಸೋನಿ ಎಕ್ಸ್‌ಪೀರಿಯಾ ಝೆಡ್3ಯು, 16ಜಿಬಿ ಸಾಮರ್ಥ್ಯದಲ್ಲಿ ಲಭ್ಯವಿದೆ. ಇದರ ಮೈಕ್ರೋ ಎಸ್‌ಡಿ ಕಾರ್ಡ್ 128ಜಿಬಿ ವಿಸ್ತರಣಾ ಸಾಮರ್ಥ್ಯವನ್ನು ಒದಗಿಸುತ್ತಿದೆ. ನಿಜಕ್ಕೂ ಇದು ಮಹಾನ್ ಸೇರ್ಪಡೆಯಾಗಿದೆ.

ಸ್ಮಾರ್ಟ್‌ವಾಚ್‌ನೊಂದಿಗೆ ಸಿಂಕ್ ಮಾಡಬಹುದು
  

ಸೋನಿ ಎಕ್ಸ್‌ಪೀರಿಯಾ ಝೆಡ್3 ನ ಇನ್ನೊಂದು ವಿಶೇಷತೆ ಎಂದರೆ ಇದು ಸೋನಿಯ ಸ್ಮಾರ್ಟ್‌ವಾಚ್ 3 ನೊಂದಿಗೆ ಹೊಂದಿಕೆಯಾಗುತ್ತದೆ. ಇನ್ನು ಸ್ಮಾರ್ಟ್‌ವಾಚ್ 3 ಈ ವರ್ಷದ ಡಿಸೆಂಬರ್‌ನಲ್ಲಿ ಲಾಂಚ್ ಆಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about 10 Impressive Features of Sony Xperia Z3 Launched in India. The Xperia Z3, for instance, builds on a strong product with improvements to the predecessor – where battery and camera are the USP of the phone. The successor is thinner, faster and a lot more appealing than rival devices.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot