ವಿಶ್ವದ ಈ 10 ದುಬಾರಿ ಫೋನ್‌ಗಳ ಬೆಲೆ ಕೇಳಿದ್ರೆ ನೀವು ಬೆರಗಾಗೊದು ಪಕ್ಕಾ!

|

ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಇಂದಿನ ಅಗತ್ಯವಾಗಿದ್ದು, ಮಾರುಕಟ್ಟೆಯಲ್ಲಿ ನಾವು ನೀಡುವ ಹಣಕ್ಕೆ ತಕ್ಕಂತ ಫೋನ್‌ಗಳು ಲಭ್ಯ ಇವೆ. ಬಹುತೇಕರು ಗ್ರಾಹಕರು ಇರುವುದರಲ್ಲೇ ಅತ್ಯುತ್ತಮ ಫೀಚರ್ಸ್‌ಗಳಿರುವ ಬಜೆಟ್‌ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗುತ್ತಾರೆ. ಆದರೆ ಹಣವಂತರು ಅವರ ಸ್ಟೆಟಸ್‌ಗೆ ತಕ್ಕಂತೆ ದುಬಾರಿ ಸ್ಮಾರ್ಟ್‌ಫೋನ್ ಖರೀದಿಸಲು ಇಚ್ಚಿಸುತ್ತಾರೆ. ಅದು ಸಹಜ ಕೂಡಾ ಆಗಿದ್ದು, ಅಂಥಹ ಫೋನ್‌ಗಳ ಬೆಲೆ ಕೇಳಿದರೇ ನೀವು ಬೆರಗಾಗೂದು ಗ್ಯಾರೆಂಟಿ.

ವಿಶ್ವದ ಈ 10 ದುಬಾರಿ ಫೋನ್‌ಗಳ ಬೆಲೆ ಕೇಳಿದ್ರೆ ನೀವು ಬೆರಗಾಗೊದು ಪಕ್ಕಾ!

ಹೌದು, ಮೊಬೈಲ್‌ ಮಾರುಕಟ್ಟೆಯಲ್ಲಿ ಅತೀ ದುಬಾರಿ ಬೆಲೆಯ ಫೋನ್‌ಗಳಿದ್ದು, ಚಿನ್ನ, ಡೈಮಂಡ್‌ಗಳ ರಚನೆಯನ್ನು ಹೊಂದಿರುವ ಲಕ್ಸುರಿ ಸ್ಮಾರ್ಟ್‌ಫೋನ್‌ಗಳಿವೆ. ಇಂಥ ಫೋನ್‌ಗಳು ಗ್ರಾಹಕರ ಹುಬ್ಬೆರುವಂತೆ ಮಾಡಿದರೂ, ಅವುಗಳನ್ನು ಖರೀದಿಸುವ ಶ್ರೀಮಂತ ಗ್ರಾಹಕರು ನಮ್ಮ ದೇಶದಲ್ಲಿ ಇದ್ದಾರೆ ಎಂಬುದು ಅಚ್ಚರಿ ಸಂಗತಿಯೆನಲ್ಲ. ಹಾಗಾದರೇ ಇಂದಿನ ಲೇಖನದಲ್ಲಿ ದುಬಾರಿ ಬೆಲೆಯ ಹತ್ತು ಸ್ಮಾರ್ಟ್‌ಫೋನ್‌ಗಳ ಕುರಿತಾಗಿ ಮುಂದೆ ನೋಡೋಣ ಬನ್ನಿರಿ.

1.ವೆರ್ಟು ಸಿಗ್ನೇಚರ್ ಡೈಮಂಡ್

1.ವೆರ್ಟು ಸಿಗ್ನೇಚರ್ ಡೈಮಂಡ್

ವೆರ್ಟು ಎಂಬ ಕಂಪನಿಯು ಬ್ರಿಟನ್‌ ಮೂಲದ ಹ್ಯಾಂಡ್‌ ಮೇಡ್ ರೀಟೆಲ್‌ ಮೊಬೈಲ್ ತಯಾರಿಕಾ ಕಂಪನಿಯಾಗಿದ್ದು, 2018ರಲ್ಲಿ ನೋಕಿಯಾ ಫಿನಿಶ್ ಮೊಬೈಲ್‌ ಫೋನ್‌ ತಯಾರಕರಿಂದ ಸ್ಥಾಪಿತವಾಗಿದೆ. ಒಟ್ಟು ಎಂಟು ಬಾಹ್ಯ ವೇರಿಯಂಟ್‌ಗಳನ್ನು ಹೊಂದಿದ್ದು, ಅವುಗಳೆಂದರೇ, ಜೆಟ್ ಕ್ಯಾಲ್, ಗಾರ್ನೆಟ್ ಕ್ಯಾಲ್, ಗ್ರೇಪ್ ಲಿಜಾರ್ಡ್, ಶುದ್ಧ ಜೆಟ್ ಲಿಜಾರ್ಡ್, ಜೆಟ್ ಅಲಿಗೇಟರ್, ಶುದ್ಧ ನೇವಿ ಅಲಿಗೇಟರ್, ಕ್ಲಾಸ್ ಡಿ ಪ್ಯಾರಿಸ್ ಅಲಿಗೇಟರ್, ಮತ್ತು ಶುದ್ಧ ಜೆಟ್ ರೆಡ್ ಗೋಲ್ಡ್ ಆಗಿವೆ. ಇನ್ನು ಇದರ ಬೆಲೆ 5,865,067.72 ರೂಪಾಯಿಗಳಾಗಿದೆ.

2. ಐಫೋನ್ ಪ್ರಿನ್ಸೆಸ್ ಪ್ಲಸ್

2. ಐಫೋನ್ ಪ್ರಿನ್ಸೆಸ್ ಪ್ಲಸ್

ಈ ಐಫೋನ್‌ ಪ್ರಿನ್ಸೆಸ್‌ ಫೋನ್‌ ಐಫೋನ್‌ಗಿಂತ ಯಾವುದೇ ಪ್ರತ್ಯಕ್ ಫೀಚರ್ಸ್‌ಗಳನ್ನು ಹೊಂದಿಲ್ಲ. ಈ ಸ್ಮಾರ್ಟ್‌ಫೋನ್‌ ಅನ್ನು ಆಸ್ಟ್ರೇಲಿಯಾದ ಪ್ರಸಿದ್ಧ ಡಿಸೈನರ್‌ ಪೀಟರ್ ಎಲಿಸನ್ ಅವರು ಡಿಸೈನ್ ಮಾಡಿದ್ದಾರೆ. ಈ ಫೋನ್‌ 138 ಪ್ರಿಂಟ್ಸ್‌ ಕಟ್‌ಗಳನ್ನು ಮತ್ತು 180 ಬ್ರಿಲಿಯಂಟ್ ಕಟ್‌ ಡೈಮಂಡ್‌ಗಳ ರಚನೆಯಿಂದ ತಯಾರಾಗಿದೆ. ಮಾರುಕಟ್ಟೆಯಲ್ಲಿ ಈ ಫೋನ್‌ ಬೆಲೆಯು 11,756.96 ರೂ.ಗಳು ಆಗಿದೆ.

3.ಬ್ಲಾಕ್ ಡೈಮಂಡ್ ವಿಐಪಿಎನ್

3.ಬ್ಲಾಕ್ ಡೈಮಂಡ್ ವಿಐಪಿಎನ್

ಸೋನಿ ಎರಿಕ್‌ಸನ್‌ ಬ್ಲ್ಯಾಕ್‌ ಡೈಮಂಡ್‌ ಫೋನ್‌ ವಿಶ್ವದ ದುಬಾರಿ ಫೋನ್‌ಗಳಲ್ಲಿ ಒಂದಾಗಿದ್ದು, ಈ ಫೋನಿನಲ್ಲಿ ಎರಡು ಡೈಮಂಡ್‌ಗಳಿದ್ದು, ನಾವಿಗೇಶನ್ ಬಟನನಲ್ಲಿ ಒಂದನ್ನು ಅಳವಡಿಸಿದ್ದರೇ, ಮತ್ತೊಂದನ್ನು ಫೋನಿನ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಮಿರರ್‌ ಡಿಟೆಕ್ಷನ್‌ ಮತ್ತು ಪಾಲಿಕಾರ್ಬೊನೆಟ್‌ ಮಿರರ್‌ ನೊಂದಿಗೆ ಆರ್ಗ್ಯಾನಿಕ್ ಎಲ್‌ಇಡಿ ತಂತ್ರಜ್ಞಾನದಲ್ಲಿ ರಚಿತವಾಗಿದೆ. ಇದರ ಬೆಲೆಯು 19,994,086.09ರೂ.ಗಳು ಆಗಿದೆ.

4.ವೆರ್ಟು ಸಿಗ್ನೇಚರ್ ಕೋಬ್ರಾ

4.ವೆರ್ಟು ಸಿಗ್ನೇಚರ್ ಕೋಬ್ರಾ

ವೆರ್ಟು ಸಿಗ್ನೇಚರ್ ಕೋಬ್ರಾ ಫೋನ್‌ ವಿಶ್ವದ ಏಳನೆ ದುಬಾರಿ ಫೋನ್‌ ಎಂದು ಗುರುತಿಸಿಕೊಂಡಿದ್ದು, ಈ ಫೋನ್‌ ಅನ್ನು ಫ್ರೆಂಚ್‌ ಪ್ರಮುಖ ಜ್ಯುವೆಲರಿ ಡಿಸೈನರ್‌ ಬಚರಣ್ ಕೋಬ್ರಾ ಡಿಸೈನ್‌ ಮಾದರಿಯಲ್ಲಿ ತಯಾರಿಸಿದ್ದಾರೆ. ಪೀರ್‌ ಕಟ್‌ ಡೈಮಂಡ್, ರೌಂಡ್ ವೈಟ್ ಡೈಮಂಡ್‌ಗಳನ್ನು ತಯಾರಿಕೆಯಲ್ಲಿ ಬಳಕೆ ಮಾಡಿದ್ದು, ಹಾಗೂ 439 ವಿವಿಧ ದುಬಾರಿ ಮಾಣಿಕ್ಯಗಳನ್ನು ಸಹ ಅಳವಡಿಸಿದ್ದಾರೆ.

5.ಗ್ರೇಸೋ ಲಕ್ಸಾರ್ ಲಾಸ್ ವೆಗಾಸ್ ಜಾಕ್ಪಾಟ್

5.ಗ್ರೇಸೋ ಲಕ್ಸಾರ್ ಲಾಸ್ ವೆಗಾಸ್ ಜಾಕ್ಪಾಟ್

ಗ್ರೇಸೋ ಲಕ್ಸಾರ್ ಲಾಸ್ ವೆಗಾಸ್ ಜಾಕ್ಪಾಟ್ ಫೋನ್‌ ಅನ್ನು 2005ರಲ್ಲಿ ಸ್ವಿಡ್ಜರ್ಲ್ಯಾಂಡ್‌ನಲ್ಲಿ ತಯಾರಿಸಲಾಗಿದೆ. ಇದರ ತಯಾರಿಕೆಯಲ್ಲಿ ಸುಮಾರು 180 ಶುಧ್ಧ ಚಿನ್ನವನ್ನು ಬಳಸಿರುವುದು ಇದರ ಪ್ರಮುಖ ಆಕರ್ಷಣೆ ಎನ್ನಬಹುದಾಗಿದೆ. ಇದರ ಬೆಲೆಯು 66.63 ಲಕ್ಷ ರೂ.ಗಳು ಆಗಿದೆ.

6. ಡೈಮಂಡ್ ಕ್ರಿಪ್ಟೋ ಸ್ಮಾರ್ಟ್‌ಫೋನ್

6. ಡೈಮಂಡ್ ಕ್ರಿಪ್ಟೋ ಸ್ಮಾರ್ಟ್‌ಫೋನ್

ವಿಂಡೊಸ್‌ CE ನಲ್ಲಿ ಕಾರ್ಯನಿರ್ವಹಿಸುವ ಈ ದುಬಾರಿ ಸ್ಮಾರ್ಟ್‌ಫೋನ್ ಅನ್ನು ಪೀಟರ್ ಎಲಿಸನ್‌ ಅವರು ಡಿಸೈನ್‌ ಮಾಡಿದ್ದಾರೆ. ಫೋನಿನ ತಯಾರಿಕೆಯಲ್ಲಿ 50 ಡೈಮಂಡ್‌ಗಳನ್ನು ಬಳಕೆ ಮಾಡಲಾಗಿದ್ದು, ಹಾಗೂ ವಿಶೇಷ 10 ಬ್ಲೂ ಡೈಮಂಡ್‌ಗಳ ಹರಳುಗಳನ್ನು ಸಹ ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ಗೆ ಪೋಲಿಸ್‌ ರಕ್ಷಣೆ ನೀಡಲಾಗಿದೆ ಎನ್ನಲಾಗಿದೆ. ಇದರ ಬೆಲೆಯು 86.62 ಲಕ್ಷ ರೂ.ಗಳು ಆಗಿದೆ.

7.ಗೋಲ್ಡ್ವಿಷ್ ಲೆ. ಮಿಲಿಯನ್

7.ಗೋಲ್ಡ್ವಿಷ್ ಲೆ. ಮಿಲಿಯನ್

ಗೋಲ್ಡ್ವಿಷ್ ಹೆಸರಿನ ಈ ಫೋನ್‌ ಹೆಸರಿಗೆ ತಕ್ಕನಾಗಿ ಗೋಲ್ಡ್‌ನಲ್ಲಿ ಕಂಗೊಳಿಸುತ್ತದೆ. ಈ ಸ್ಮಾರ್ಟ್‌ಫೋನ್‌ ಅನ್ನು ಇಮ್ಯಾನ್ಯುಯಲ್ ಗುಟ್ ಡಿಸೈನ್‌ ಮಾಡಲಾಗಿದ್ದು, ವಿಶ್ವದ ದುಬಾರಿ ಫೋನ್‌ಗಳ ಲಿಸ್ಟ್‌ನಲ್ಲಿ ಗಿನ್ನಿಸ್‌ ಪುಸ್ತಕದಲ್ಲಿ ದಾಖಲಾಗಿದೆ. ಈ ಫೋನ್‌ ತಯಾರಿಕೆಯಲ್ಲಿ 20 ಕ್ಯಾರೆಟ್‌ ಡೈಮಂಡ್‌ ಬಳಸಲಾಗಿದೆ. ಇದರ 86.62 ಲಕ್ಷ ರೂ.ಗಳು ಆಗಿದೆ.

8. ಐಫೋನ್ 3 ಜಿ ಕಿಂಗ್ಸ್ ಬಟನ್

8. ಐಫೋನ್ 3 ಜಿ ಕಿಂಗ್ಸ್ ಬಟನ್

ಐಫೋನ್ 3 ಜಿ ಫೋನ್‌ ಅದ್ಭುತ ರಚನೆಯನ್ನು ಹೊಂದಿದ್ದು, ಇದರ ತಯಾರಿಕೆಯಲ್ಲಿ ಸುಮಾರು 138 ಡೈಮಂಡ್‌ಗಳನ್ನು ಬಳಕೆ ಮಾಡಲಾಗಿದೆ. ಇದರ ತಯಾರಿಕೆಯನ್ನು ಆಸ್ಟ್ರೇಲಿಯಾದ ಪೀಟರ್ ಎರಿಸನ್ ಡಿಸೈನ್‌ ಅನ್ನು ಮಾಡಿದ್ದು, ಫೋನ್‌ ಅನ್ನು ಅಂಚಿನ ಸುತ್ತಲು ಡೈಮಂಡ್‌ಗಳಿಂದ ಸುಂದರವಾಗಿ ರಚಿಸಲಾಗಿದೆ. ಈ ದುಬಾರಿ ಫೋನ್‌ ಬೆಲೆಯು 159.88 ಲಕ್ಷ ರೂ.ಗಳು ಆಗಿದೆ.

9.ಸುಪ್ರೀಮ್‌ ಗೋಲ್ಡ್‌ಸ್ಟ್ರೈಕರ್‌ ಐಫೋನ್

9.ಸುಪ್ರೀಮ್‌ ಗೋಲ್ಡ್‌ಸ್ಟ್ರೈಕರ್‌ ಐಫೋನ್

ಸುಪ್ರೀಮ್‌ ಗೋಲ್ಡ್‌ಸ್ಟ್ರೈಕರ್‌ ಐಫೋನ್ ವಿಶ್ವದ ಎರಡನೇ ಅತಿ ದುಬಾರಿ ಸ್ಮಾರ್ಟ್‌ಫೋನ್‌ ಎಂದು ಬಿಂಬಿತವಾಗಿದ್ದು, ಇದರ ತಯಾರಿಕೆಯಲ್ಲಿ 271 ಗ್ರಾಂ, 22 ಕ್ಯಾರೆಟ್ ಚಿನ್ನವನ್ನು ಬಳಸಿಕೊಳ್ಳಲಾಗಿದೆ. ಹಾಗೇ 53 ಡೈಮಂಡ್‌ ಹರಳುಗಳನ್ನು ಸಹ ಫೋನಿನ ಡಿಸೈನ್‌ನಲ್ಲಿ ಉಪಯೋಗಿಸಿದ್ದಾರೆ. ಫೋನಿನ ಮೇನ್‌ ಬಟನ್‌ನಲ್ಲಿ 7.1 ಕ್ಯಾರೆಟ್ ಡೈಮಂಡ್ ಬಳಸಲಾಗಿದೆ. ಇದರ ಬೆಲೆಯು 213.17 ಲಕ್ಷ ರೂ.ಗಳು ಆಗಿದೆ.

10. ಡೈಮಂಡ್‌ ರೋಜ್‌ ಐಫೋನ್ 4

10. ಡೈಮಂಡ್‌ ರೋಜ್‌ ಐಫೋನ್ 4

ಈ ಸ್ಮಾರ್ಟ್‌ಫೋನ್‌ 32GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದ್ದು, ಫೋನಿಗೆ ಅದ್ಭುತ ರೂಪ ನೀಡಿದ್ದು, ಡಿಸೈನರ್‌ ಮಿಯಾ(Mia). 100 ಕ್ಯಾರೆಟ್‌ ಡೈಮಂಡ್‌ಗಳನ್ನು ಬಳಸಿಕೊಂಡಿದ್ದು, ಸುಮಾರು 500 ಹರಳುಗಳನ್ನು ಅಳವಡಿಸಲಾಗಿದೆ. ವಿಶ್ವದಲ್ಲಿ ಲಭ್ಯವಿರುವ ಸುಮಾರು 53 ವಿವಿಧ ಡೈಮಂಡ್ ಹರಳುಗಳನ್ನು ಫೋನಿಗೆ ಅಳವಡಿಸಲಾಗಿದ್ದು, ಆಕರ್ಷಕವಾಗಿ ಕಾಣುತ್ತದೆ. ಇದರ ಬೆಲೆಯು 16,671,124,735,486.4ರೂ.ಗಳು ಆಗಿದೆ.

Best Mobiles in India

English summary
10 expensive Smart phones of India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X