ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ

Written By:

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಹೊಸದಕ್ಕೆ ಅಪ್‌ಗ್ರೇಡ್ ಮಾಡುವ ಯೋಚನೆ ನಿಮ್ಮದಾಗಿದ್ದರೆ, ನಿಮಗಾಗಿ ಶುಭ ಸುದ್ದಿಯೊಂದನ್ನು ನಾವು ಹೊತ್ತು ತಂದಿದ್ದೇವೆ. ಹೌದು ನಿಮ್ಮ ಮೆಚ್ಚಿನ ಹಲವಾರು ಡಿವೈಸ್‌ಗಳು ಇದೀಗ ಅದ್ಭುತ ವಿನಾಯಿತಿ ದರಗಳಲ್ಲಿ ದೊರೆಯುತ್ತಿದೆ.

ಓದಿರಿ: ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ

ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮೂರು ದಿನಗಳ ವಿನಾಯಿತಿ ಕೊಡುಗೆಯನ್ನು ಬಳಕೆದಾರರಿಗೆ ಒದಗಿಸಿಕೊಡುತ್ತಿದ್ದು (22 ಜೂನ್‌ನಿಂದ 24 ರವೆರೆಗೆ) ಇಲ್ಲಿ ನಿಮಗೆ ಒನ್ ಪ್ಲಸ್ ಒನ್, ಮೋಟೋ ಜಿ (ಸೆಕೆಂಡ್ ಜನರೇಶನ್), ಮೋಟೋ ಎಕ್ಸ್ ಮತ್ತು ಹುವಾಯಿ ಹೋನರ್ 6 ಪ್ಲಸ್ ಮೇಲೆ ಎಕ್ಸ್‌ಚೇಂಜ್ ಕೊಡುಗೆ ಇದ್ದೂ ಇಲ್ಲದೆಯೂ ಫೋನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಹಾಗಿದ್ದರೆ ತಡ ಮಾಡದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುವ ಆಫರ್ ಕುರಿತಾದ ವಿವರ ಮಾಹಿತಿಯನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ 22,999 ಕ್ಕೆ ಲಭ್ಯ

ರೂ 22,999 ಕ್ಕೆ ಲಭ್ಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಸ್ಯಾಮ್‌ಸಂಗ್‌ನ 2014 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್5, ಫ್ಲಿಪ್‌ಕಾರ್ಟ್‌ನಲ್ಲಿ ರೂ 22,999 ಕ್ಕೆ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ ರೂ 51,500 ಆಗಿದೆ.

ರೂ 9,998 ಕ್ಕೆ ಲಭ್ಯ

ರೂ 9,998 ಕ್ಕೆ ಲಭ್ಯ

ಒನ್ ಪ್ಲಸ್ ಒನ್

ಖರೀದಿಸಿದ ಹಣಕ್ಕೆ ನಿಜವಾದ ಮೌಲ್ಯವನ್ನೊದಗಿಸುವ ಒನ್ ಪ್ಲಸ್ ಒನ್ ಸ್ಮಾರ್ಟ್‌ಫೋನ್ ರೂ 9,998 ಕ್ಕೆ ಲಭ್ಯವಾಗುತ್ತಿದೆ. ಇದರ 64 ಜಿಬಿ ಆವೃತ್ತಿ ರೂ 21,999 ಕ್ಕೆ ದೊರೆಯುತ್ತಿದೆ.

ರೂ 7,999 ಕ್ಕೆ ಲಭ್ಯ

ರೂ 7,999 ಕ್ಕೆ ಲಭ್ಯ

ಶ್ಯೋಮಿ ಎಮ್ಐ 4ಐ

ಶ್ಯೋಮಿಯ 4ಜಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಇದಾಗಿದ್ದು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿದಾಗ ಇದು ನಿಮಗೆ ರೂ 7,999 ಕ್ಕೆ ಲಭ್ಯವಾಗುತ್ತಿದೆ.

ರೂ 4,999 ಕ್ಕೆ ಲಭ್ಯ

ರೂ 4,999 ಕ್ಕೆ ಲಭ್ಯ

ಲೆನೊವೊ ಎ7000

ಲೆನೊವೊದ ಬಜೆಟ್ ಸ್ಮಾರ್ಟ್‌ಫೋನ್ ಎ7000 ವಿನಾಯಿತಿ ದರವಾದ ರೂ 4,999 ಕ್ಕೆ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ ರೂ 8,999 ಆಗಿದೆ ಮತ್ತು ಫ್ಲ್ಯಾಶ್ ಸೇಲ್ ದಿನದಂದು ಇದು ಲಭ್ಯವಾಗುತ್ತಿದೆ.

ರೂ 18,999 ಕ್ಕೆ ಲಭ್ಯ

ರೂ 18,999 ಕ್ಕೆ ಲಭ್ಯ

ಅಸೂಸ್ ಜೆನ್‌ಫೋನ್ 2

ಮಾರುಕಟ್ಟೆಯಲ್ಲಿ 4 ಜಿಬಿ RAM ಡಿವೈಸ್ ಲಭ್ಯವಾಗುತ್ತಿದೆ. ಇನ್ನು 32 ಜಿಬಿಯ ಡಿವೈಸ್ ರೂ 1,000 ಇಳಿಮುಖ ಬೆಲೆಯಲ್ಲಿ ರೂ 18,999 ಕ್ಕೆ ದೊರೆಯುತ್ತಿದೆ.

ರೂ 6,999 ಕ್ಕೆ ಲಭ್ಯ

ರೂ 6,999 ಕ್ಕೆ ಲಭ್ಯ

ಲೆನೊವೊ ಎ6000 ಪ್ಲಸ್

ಲೆನೊವೊದ ಇನ್ನೊಂದು ಬಜೆಟ್ ಫೋನ್ 2 ಜಿಬಿ RAM ಹಾಗೂ 16 ಜಿಬಿ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬಂದಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಡಿವೈಸ್ ರೂ 6,999 ಕ್ಕೆ ದೊರೆಯುತ್ತಿದೆ.

ರೂ 6,999 ಕ್ಕೆ ಲಭ್ಯ

ರೂ 6,999 ಕ್ಕೆ ಲಭ್ಯ

ಮೋಟೋ ಇ 4ಜಿ

ಮೋಟೋರೋಲಾದ ಸೆಕೆಂಡ್ ಜನರೇಶನ್ ಮೋಟೋ ಇ ಫೋನ್ ರೂ 6,999 ಕ್ಕೆ ಲಭ್ಯವಾಗುತ್ತಿದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ಇಲ್ಲಿ ಎಕ್ಸ್‌ಚೇಂಜ್ ಮಾಡಿದಲ್ಲಿ ರೂ 2,000 ವಿನಾಯಿತಿ ದರದಲ್ಲಿ ಫೋನ್ ನಿಮ್ಮದಾಗುತ್ತದೆ.

ರೂ 24,499 ಕ್ಕೆ ಲಭ್ಯ

ರೂ 24,499 ಕ್ಕೆ ಲಭ್ಯ

ಹುವಾಯಿ ಹೋನರ್ 6 ಪ್ಲಸ್

ಹುವಾಯಿನ ಹೊಸ ಹೋನರ್ 6 ಪ್ಲಸ್ ಸ್ಮಾರ್ಟ್‌ಫೋನ್ ವಿನಾಯಿತಿ ದರ ರೂ 24,499 ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುತ್ತಿದೆ. ನಿಮ್ಮ ಹಳೆಯ ಫೋನ್‌ಗೆ ರೂ 10,000 ವಿನಾಯಿತಿ ದರ ನಿಮಗೆ ಲಭ್ಯವಾಗುತ್ತದೆ.

ರೂ 38,499 ಲಭ್ಯ

ರೂ 38,499 ಲಭ್ಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಫ್ಯಾಬ್ಲೆಟ್ ಅನ್ನು ನಿಮ್ಮದಾಗಿಸಿಕೊಳ್ಳಬೇಕೆಂಬ ಬಯಕೆಯೇ ರೂ 40,000 ಕ್ಕಿಂತ ಕಡಿಮೆ ದರದಲ್ಲಿ ದೊರೆಯುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಮೂಲ ಬೆಲೆ ರೂ 58,300 ಆಗಿದ್ದು ವಿನಾಯಿತಿ ದರ ರೂ 38,499 ಆಗಿದೆ.

ರೂ 9,999 ಕ್ಕೆ ಲಭ್ಯ

ರೂ 9,999 ಕ್ಕೆ ಲಭ್ಯ

ಹುವಾಯಿ ಹೋನರ್ 4 ಎಕ್ಸ್

ಬಜೆಟ್ ಸ್ಮಾರ್ಟ್‌ಫೋನ್ ಆಗಿರುವ ಹುವಾಯಿ ಹೋನರ್ 4ಎಕ್ಸ್, ಫ್ಲಿಪ್‌ಕಾರ್ಟ್‌ನಲ್ಲಿ ರೂ 9,999 ಕ್ಕೆ ಲಭ್ಯವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you’re in the market for upgrading your old smartphone, we have some good news. A number of popular smartphones are available at discounted prices. Here’s a look at some great deals.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot