Home
ಮೊಬೈಲ್

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿ ಮರೆಯಾಗಿರುವ ಟಾಪ್‌ 10 ಮೊಬೈಲ್‌ ಲಿಸ್ಟ್‌!

ಮೊಬೈಲ್‌ ಕ್ಷೇತ್ರ ಸಾಕಷ್ಟು ಅಪ್‌ಗ್ರೇಡ್‌ ಆಗಿದ್ದು, ಫೀಚರ್‌ ಮೊಬೈಲ್‌ಗಳು ಮರೆಯಾಗಿ ಸದ್ಯ ಸ್ಮಾರ್ಟ್‌ಫೋನ್‌ಗಳ ಅಬ್ಬರ ಜೋರಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಫ್ಲ್ಯಾಗ್‌ಶಿಪ್‌ ಮಾದರಿಯ, ಫೋಲ್ಡ್‌ ಮಾದರಿಯ, ಫ್ಲಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳು ಇದ್ದರೂ, ಈ ಹಿಂದೆ ಸದ್ದು ಮಾಡಿ ಮರೆಯಾಗಿರುವ ಕೆಲವು ಮೊಬೈಲ್‌ಗಳನ್ನು ಬಳಕೆದಾರರು ಇಂದಿಗೂ ಮರೆತಿಲ್ಲ.

ಹೌದು, ಕೆಲವು ಹಳೆಯ ಮೊಬೈಲ್ ಫೋನ್‌ಗಳು ಬಹಳ ಜನಪ್ರಿಯವಾದವು, ಅಲ್ಲದೇ ಮಾರುಕಟ್ಟೆಯಲ್ಲಿ ಅವುಗಳು ತಮ್ಮದೇ ಶಾಶ್ವತವಾದ ಗುರುತು ಮೂಡಿಸಿವೆ. ಸದ್ಯ ಮೊಬೈಲ್‌ ಮಾರುಕಟ್ಟೆ ಅಪ್‌ಗ್ರೇಡ್‌ ದೃಷ್ಠಿಯಿಂದ ಬಹು ದೂರ ಸಾಗಿದ್ದರೂ, ಮೊಬೈಲ್‌ ಆರಂಭದ ಹಾಗೂ ತದ ನಂತರದ ದಿನಗಳಲ್ಲಿ ಕೆಲವು ಮೊಬೈಲ್‌ಗಳು ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿದ್ದವು. ಅಂತಹ ಕೆಲವು ಜನಪ್ರಿಯ ಮೊಬೈಲ್‌ಗಳ ಬಗ್ಗೆ ಇಲ್ಲಿದೆ ಒಂದು ಕ್ವಿಕ್ ನೋಟ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿ ಮರೆಯಾಗಿರುವ ಟಾಪ್‌ 10 ಮೊಬೈಲ್‌ ಲಿಸ್ಟ್‌!

ಮೊಟೊರೊಲಾ ಸ್ಟಾರ್‌ಟಾಕ್‌ (Motorola StarTAC)
* 1996 ರಲ್ಲಿ ಅನಾವರಣ ಆಗಿತ್ತು.
* ಫ್ಲಿಪ್-ಶೈಲಿಯ ಮೊಬೈಲ್ ಇದಾಗಿತ್ತು
* 2G ಕನೆಕ್ಟಿವಿಟಿ ಸೌಲಭ್ಯ ಹೊಂದಿತ್ತು
* ಇದು 500mAh ಬ್ಯಾಟರಿಯನ್ನು ಹೊಂದಿದೆ.

ನೋಕಿಯಾ 3310 (Nokia 3310)
* ನೋಕಿಯಾ ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌
* 2000 ರಲ್ಲಿ ಪ್ರಾರಂಭ
* ಕಠಿಣ ಬಾಹ್ಯ ರಚನೆ
* ಸ್ಮ್ಯಾಶ್-ಹಿಟ್ ಸ್ನೇಕ್ II ಮೊಬೈಲ್ ಗೇಮ್‌ ಹೊಸ ಟ್ರೆಂಡ್‌ ಸೃಷ್ಠಿಸಿತ್ತು.

ನೋಕಿಯಾ 1100 (Nokia 1100)
* ಅತ್ಯಂತ ಜನಪ್ರಿಯ ಮೊಬೈಲ್‌
* 2003 ರಲ್ಲಿ ಪ್ರಾರಂಭ
* ಗಟ್ಟಿಮುಟ್ಟಾದ ಬಾಹ್ಯ ರಚನೆ
* ದೀರ್ಘಾವಧಿ ಬ್ಯಾಟರಿ
* 50 ಟೆಕ್ಸ್ಟ್‌ ಮೆಸೆಜ್‌ ಸಂಗ್ರಹ ಸಾಮರ್ಥ್ಯ

ನೋಕಿಯಾ 6600 (Nokia 6600)
* 2.16-ಇಂಚಿನ TFT ಡಿಸ್ಪ್ಲೇ
* 2003 ರಲ್ಲಿ ಬಿಡುಗಡೆ
* ಸಿಂಬಿಯಾನ್ ಓಎಸ್ (Symbian)
* ದೀರ್ಘಾವಧಿ ಬ್ಯಾಟರಿ
* ವಿಜಿಎ (0.3 ಎಂಪಿ) ರೆಸಲ್ಯೂಶನ್ ಹಿಂಬದಿಯ ಕ್ಯಾಮರಾ
* 6MB ಆಂತರಿಕ ಮೆಮೊರಿ ಸಾಮರ್ಥ್ಯ

ನೋಕಿಯಾ 9210 (Nokia 9210 Communicator)
* 2000 ರಲ್ಲಿ ಅನಾವರಣ
* ವ್ಯಾಪಾರ-ವರ್ಗದ ಸ್ಮಾರ್ಟ್‌ಫೋನ್
* ಲ್ಯಾಪ್‌ಟಾಪ್‌ನಂತ ತೆರೆಯುವ ರಚನೆ
* ಮಿನಿ-ಕೀಬೋರ್ಡ್ ಪಡೆದಿದೆ
* ಫ್ಯಾಕ್ಸ್ ಕಳುಹಿಸುವ ಮತ್ತು ಸ್ವೀಕರಿಸುವ ಸೌಲಭ್ಯ

ಮೊಟೊ ರೇಜರ್‌ V3 (Moto RAZR V3)
* 2003 ರಲ್ಲಿ ಅನಾವರಣ
* ತೆಳುವಾದ ರಚನೆ
* ಫ್ಲಿಪ್‌ ಮಾದರಿ
* ಅಲ್ಯೂಮಿನಿಯಮ್ ರಚನೆ
* ಎಕ್ಸ್‌ಟ್ರನಲ್‌ ಗ್ಲಾಸ್‌ ಸ್ಕ್ರೀನ್‌

ಎರಿಕ್ಸನ್ T28 (Ericsson T28)
* ಈ ಮೊಬೈಲ್‌ 1999 ರಲ್ಲಿ ಬಿಡುಗಡೆ ಆಗಿತ್ತು.
* ತೆಳುವಾದ ರಚನೆ
* ಕೇವಲ 83 ಗ್ರಾಂ ತೂಕವಿತ್ತು
* ಡ್ಯುಯಲ್-ಬ್ಯಾಂಡ್ GSM
* 250 ಕಾಂಟ್ಯಾಕ್ಟ್‌ ಸ್ಟೋರೇಜ್‌
* ಟೆಟ್ರಿಸ್ ಮತ್ತು ಸಾಲಿಟೇರ್‌ನಂತಹ ಕ್ಲಾಸಿಕ್ ಗೇಮ್‌
* ಬಳಕೆದಾರರು ಸ್ವತ ರಿಂಗ್‌ಟ್ಯೂನ್‌ ಸಂಯೋಜಿಸುವ ಆಯ್ಕೆ

ಬ್ಲ್ಯಾಕ್‌ಬೆರಿ ಪರ್ಲ್ 8100 (Blackberry Pearl 8100)
* ಬ್ಲ್ಯಾಕ್‌ಬೆರಿ ಪರ್ಲ್ 8100 - 2006 ರಲ್ಲಿ ಬಿಡುಗಡೆ
* SureType ಕೀಬೋರ್ಡ್
* ನ್ಯಾವಿಗೇಷನ್‌ಗಾಗಿ ಟ್ರ್ಯಾಕ್‌ಬಾಲ್‌
* 1.3ಎಂಪಿ ಕ್ಯಾಮೆರಾ
* ಕಲರ್‌ ಡಿಸ್‌ಪ್ಲೇ
* ಕೆಲವು ಸೆಕ್ಯುರಿಟಿ ಫೀಚರ್ಸ್‌

ಸೋನಿ ಎರಿಕ್ಸನ್ K750 (Sony Ericsson K750)
* ಸೋನಿ ಎರಿಕ್ಸನ್ K750- 2005 ರಲ್ಲಿ ಬಿಡುಗಡೆ
* ಕ್ಯಾಂಡಿಬಾರ್-ಶೈಲಿ
* ಜಾಯ್‌ಸ್ಟಿಕ್ ನ್ಯಾವಿಗೇಶನ್ ಜನಪ್ರಿಯ ಆಗಿತ್ತು
* ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು ಮೊಬೈಲ್‌ ವಾಲ್ಯೂಮ್ ಕೀಗಳನ್ನು ಬಳಸಬಹುದಾಗಿತ್ತು.

Best Mobiles in India

English summary
10 most iconic mobile phones list in past. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+