ಸ್ಮಾರ್ಟ್ ಫೋನಿನ ಬ್ಯಾಟರಿ ಲೈಫ್ ಹೆಚ್ಚಿಸುವ ಬಗೆಗಿನ 10 ತಂತ್ರಗಳು ಮತ್ತು ನಂಬಿಕೆಗಳು

By Prateeksha
|

ಸ್ಮಾರ್ಟ್‍ಫೋನ್ ನಲ್ಲಿ ಬ್ಯಾಟರಿ ಇದ್ದು, ಫೋನ್ ಚಾಲ್ತಿ ಯಲ್ಲಿರಲು ಅದನ್ನು ಚಾರ್ಜ್ ಮಾಡಬೇಕೆಂದು ಎಲ್ಲರಿಗೂ ಗೊತ್ತು. ಒಮ್ಮೆ ಚಾರ್ಜ್ ಮಾಡಿ ಫೋನನ್ನು ಕೆಲ ಸಮಯದ ತನಕ ಉಪಯೋಗಿಸಬಹುದು.

ಸ್ಮಾರ್ಟ್ ಫೋನಿನ ಬ್ಯಾಟರಿ ಲೈಫ್ ಹೆಚ್ಚಿಸುವ ಬಗೆಗಿನ 10 ತಂತ್ರಗಳು ಮತ್ತು  ನಂಬಿಕೆ

ಮುಖ್ಯವಾಗಿ ಬೇಕಾದಾಗಲೆ ನಿಮ್ಮ ಫೋನ್ ಲೊ ಬ್ಯಾಟರಿ ಎಂದು ತೋರಿಸುವ ಸಮಸ್ಯೆಯನ್ನು ನೀವು ಎದುರಿಸಿರಬಹುದು. ಮಾರುಕಟ್ಟೆಯಲ್ಲಿ ನಿಮಿಷದೊಳಗೆ ವೇಗವಾಗಿ ಚಾರ್ಜ್ ಮಾಡುವ ಮತ್ತು ವೈರ್‍ಲೆಸ್ ಚಾರ್ಜಿಂಗ್ ತಂತ್ರಾಂಶವಿರುವಂತಹುದು ಸಿಗುತ್ತದೆ.

ಓದಿರಿ: ಜಿಯೋ 4ಜಿ ಆಫರ್ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳಿಗೆ

ಈ ಇತ್ತೀಚಿನ ತಂತ್ರಾಂಶಗಳು ನಿಮಗೆ ಫೋನ್ ಚಾರ್ಜ್ ಮಾಡಲು ಸಹಾಯ ಮಾಡಬಹುದು, ಆದರೆ ನೀವು ಮುನ್ನೆಚ್ಚರಿಕೆ ವಹಿಸಿ ಅಂತಹ ಪರಿಸ್ಥಿತಿಯನ್ನು ತಪ್ಪಿಸಬಹುದು. ಕೆಲ ತಂತ್ರಗಳನ್ನು ಉಪಯೋಗಿಸಿ ಚಾರ್ಜ್ ಮುಗಿದು ಹೋಗುವ ಸ್ಥಿತಿಯನ್ನು ತಪ್ಪಿಸಬಹುದು. ಇಲ್ಲಿ ನಾವು ಫೋನಿನ ಬ್ಯಾಟರಿ ಜೀವನಕ್ಕೆ ಸಂಬಂದಿಸಿದ ಕೆಲ ನಿಜಾಂಶ ಮತ್ತು ನಂಬಿಕೆ ಗಳೊಂದಿಗೆ ಬಂದಿದ್ದೇವೆ, ನೋಡಿ.

ತಣ್ಣಗೆ ಇಡಿ

ತಣ್ಣಗೆ ಇಡಿ

ಫೋನ್ ಮತ್ತು ಬ್ಯಾಟರಿ ಹೆಚ್ಚು ಬಿಸಿಯಾದರೆ ಅದು ಬ್ಯಾಟರಿ ಜೀವಿತಕಾಲದ ಮೇಲೆ ಪರಿಣಾಮ ಬೀರುತ್ತದೆ. ತುಂಬಾ ಜನ ತಿಳಿದುಕೊಳ್ಳುತ್ತಾರೆ ತುಂಬಾ ಬಿಸಿಯಾಗುವುದು ತುಂಬಾ ಚಾರ್ಜ್ ಅಥವಾ ತುಂಬಾ ಉಪಯೋಗಿಸುವುದರಿಂದ ಎಂದು. ಆದರೆ, ನೆನಪಿಡಿ ಫೋನ್ ಜೇಬಿನಿಂದ ಹೊರಗಿಟ್ಟಾಗಲು ಬ್ಯಾಟರಿ ಬಿಸಿಯಾಗುತ್ತದೆ. ಹೀಗಾಗಿ ಸಾಮಾನ್ಯ ಕಾಯಿದೆ ಎಂದರೆ ಫೋನನ್ನು ತಣ್ಣಗೆ ಇಡುವುದು.

ಉಚಿತ ಆಪ್ಸ್ ಬ್ಯಾಟರಿ ನುಂಗುತ್ತಿರಬಹುದು

ಉಚಿತ ಆಪ್ಸ್ ಬ್ಯಾಟರಿ ನುಂಗುತ್ತಿರಬಹುದು

ಬ್ಯಾಟರಿಯನ್ನು ಬಹಳಷ್ಟು ಮಟ್ಟಿಗೆ ನುಂಗುವ ಬಹಳಷ್ಟು ಆಪ್ಸ್‍ಗಳಿವೆ ಮತ್ತು ಅವು ಉಚಿತವಾಗಿವೆ. ನೀವು ಆಡ್-ಸಪೋರ್ಟೆಡ್ ಆಪ್ಸ್ ಡೌನ್‍ಲೋಡ್ ಮಾಡಿಕೊಂಡಿದ್ದರೆ ಅದರ ಅರ್ಥ ಅವುಗಳಿಗೆ ನಿಮ್ಮ ಬ್ಯಾಟರಿ ಜೀವನ ತಿನ್ನುವ ಕ್ಷಮತೆ ಇದೆ ಜೊತೆಗೆ ಅದರೊಂದಿಗಿನ ಪೊಪ್ ಅಪ್ ಆಡ್ಸ್ ಮತ್ತು ಬ್ಯಾನರ್ ಗಳಿಗೆ.

ಎಲ್ಲಾ ಪವರ್ ಸೇವಿಂಗ್ ಆಪ್ಸ್ ಉಪಯುಕ್ತವಾಗಿರಲಿಕ್ಕಿಲ್ಲಾ

ಎಲ್ಲಾ ಪವರ್ ಸೇವಿಂಗ್ ಆಪ್ಸ್ ಉಪಯುಕ್ತವಾಗಿರಲಿಕ್ಕಿಲ್ಲಾ

ಬಹಳಷ್ಟು ಜನ ಪವರ್ ಸೇವಿಂಗ್ ಆಪ್ಸ್ ಅನ್ನು ಬಹಳಷ್ಟು ಜನ ಉಪಯೋಗಿಸುತ್ತಿರಬಹುದು ಅವರ ಸ್ಮಾರ್ಟ್‍ಫೋನಿನ ಬ್ಯಾಟರಿ ಲೈಫ್ ಉಳಿಸಲು. ಆದರೆ ಅವು ತಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತವೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲಾ. ಕೆಲವೊಮ್ಮೆ ಇದೇ ಆಪ್‍ಗಳು ಬ್ಯಾಟರಿ ಜೀವನವನ್ನು ಕಾಲಾಂತರದಲ್ಲಿ ನುಂಗಬಹುದು.

ಪುಶ್ಶಿ ಆಪ್ಸ್ ತೊಂದರೆಗೆ ಕಾರಣವಾಗಿರಬಹುದು

ಪುಶ್ಶಿ ಆಪ್ಸ್ ತೊಂದರೆಗೆ ಕಾರಣವಾಗಿರಬಹುದು

ಪುಶ್ಶಿ ಆಪ್ಸ್‍ಗಳನ್ನು ಉಪಯೋಗಿಸುವುದು ಅನುಕೂಲಕರವಾಗಿದೆ , ಇದು ನಿಮಗೆ ಹೊಸ ಮೇಲ್ ಅಥವಾ ಮೆಸೆಜ್ ಬಂದ ಕೂಡಲೆ ನಿಮಗೆ ತಿಳಿಸುತ್ತದೆ. ಆದಷ್ಟು ಕಡಿಮೆ ಉಪಯೋಗಿಸಿ ಏಕೆಂದರೆ ಈ ಆಪ್ ಕೂಡ ಬಹಳಷ್ಟು ಬ್ಯಾಟರಿ ತೆಗೆದುಕೊಳ್ಳುತ್ತದೆ ಚೆಕ್ ಮಾಡಿ ನೋಟಿಫಿಕೇಷನ್ ಅನ್ನು ಬ್ಯಾಕ್‍ಗ್ರೌಂಡ್ ನಲ್ಲಿ ಕಳಿಸಲು.

ಬ್ರೈಟ್ ಡಿಸ್ಪ್ಲೆ ಎಲ್ಲಾ ಸಮಯದಲ್ಲೂ ಅವಶ್ಯವಿಲ್ಲಾ

ಬ್ರೈಟ್ ಡಿಸ್ಪ್ಲೆ ಎಲ್ಲಾ ಸಮಯದಲ್ಲೂ ಅವಶ್ಯವಿಲ್ಲಾ

ಬಹಳಷ್ಟು ಜನ ತಿಳಿದುಕೊಳ್ಳುತ್ತಾರೆ ಆಟೊ ಬ್ರೈಟ್‍ನೆಸ್ ಕಂಟ್ರೊಲ್ ಸೆಟ್ಟಿಂಗ್ ಬ್ಯಾಟರಿ ಲೈಫ್ ಸೇವ್ ಮಾಡುತ್ತದೆ ಎಂದು , ಅವಶ್ಯಕತೆಗೆ ತಕ್ಕಂತೆ ಡಿಸ್ಪ್ಲೆ ಅಡ್ಜಸ್ಟ್ ಮಾಡುವುದರಿಂದ. ಅದೇನಿದ್ದರೂ ಇದನ್ನು ಡಿಸೇಬಲ್ ಮಾಡುವುದು ಉತ್ತಮ ಏಕೆಂದರೆ ಇದಕ್ಕೆ ಬ್ಯಾಟರಿಯ ಹಸಿವು ಜಾಸ್ತಿ.

ವೈಬ್ರೆಷನ್ ಬ್ಯಾಟರಿ ಪವರ್ ತೆಗೆದುಕೊಳ್ಳುತ್ತದೆ

ವೈಬ್ರೆಷನ್ ಬ್ಯಾಟರಿ ಪವರ್ ತೆಗೆದುಕೊಳ್ಳುತ್ತದೆ

ನೀವು ನಿಮ್ಮ ಫೋನನ್ನು ವೈಬ್ರೆಷನ್ ಮೊಡ್ ನಲ್ಲಿ ಉಪಯೋಗಿಸುತ್ತಿದ್ದರೆ, ನಿಮಗೆ ಗೊತ್ತಾಗುತ್ತದೆ ಬ್ಯಾಟರಿ ಲೈಫ್ ಕಡಿಮೆ ಆಗುತ್ತಾ ಬರುತ್ತದೆ. ಫೋನಿನಲ್ಲಿ ಇರುವಂತಹ ವೈಬ್ರೆಷನ್ ಮೊಟರ್ ಫೋನನ್ನು ನಡಗುವಂತೆ ಮಾಡುತ್ತದೆ ಕಾಲ್ ಅಥವಾ ಮೆಸೆಜ್ ಬಂದಾಗ. ನೀವು ವೈಬ್ರೆಷನ್ಸ್ ನಿಲ್ಲಿಸಿದರೆ ನಿಮ್ಮ ಫೋನಿಗೆ ಹೆಚ್ಚಿನ ಶಕ್ತಿ ಸಿಕ್ಕುತ್ತದೆ ಬೇರೆ ಕೆಲಸ ಮಾಡಲು.

ಸೆಲ್ಫ್ ಕಂಟ್ರೊಲ್ ಉಪಯೋಗಿಸಿ

ಸೆಲ್ಫ್ ಕಂಟ್ರೊಲ್ ಉಪಯೋಗಿಸಿ

ಬ್ಯಾಟರಿ ಲೈಫ್ ಹೆಚ್ಚಿಸಲು ನಿಮಗೆ ನಿಮ್ಮ ಫೋನನ್ನು ಸ್ವಲ್ಪ ನಿಯಂತ್ರಣದಿಂದ ಉಪಯೋಗಿಸಬೇಕು. ನೆನಪಿಡಿ, ಬಹಳಷ್ಟು ಆಟ ಆಡುವುದು, ಸಾಮಾಜಿಕ ಜಾಲತಾಣದಲ್ಲಿನ ಅಪ್‍ಡೇಟ್ಸ್ ನೋಡುವುದು ಮತ್ತು ನಿರಂತರವಾಗಿ ಫೋನನ್ನು ಉಪಯೋಗಿಸುವುದು ಬ್ಯಾಟರಿಯ ಪವರ್ ಅನ್ನು ಕಡಿಮೆ ಮಾಡುತ್ತಾ ಬರುತ್ತದೆ.

ಬ್ಯಾಟರಿ ಸೇವರ್ ಮೊಡ್ಸ್ ಉಪಯೋಗಿಸಿ

ಬ್ಯಾಟರಿ ಸೇವರ್ ಮೊಡ್ಸ್ ಉಪಯೋಗಿಸಿ

ಪವರ್ ಸೇವಿಂಗ್ ಮೊಡ್ಸ್ ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‍ಫೋನಿನಲ್ಲಿ ಇರುತ್ತವೆ ಇತ್ತೀಚಿನ ದಿನಗಳಲ್ಲಿ. ಅದೇ ರೀತಿಯಲ್ಲಿ ಬ್ಯಾಕ್‍ಗ್ರೌಂಡ್ ಆಪ್ಸ್ ನಿಯಂತ್ರಿಸಿ, ಬ್ರೈಟ್‍ನೆಸ್ ಕಡಿಮೆ ಮಾಡಿ ಮತ್ತು ಇತ್ಯಾದಿ. ಇದು ನಿಮ್ಮ ಬ್ಯಾಟರಿ ಗೆ ಹೆಚ್ಚಿನ ಜೀವಿತಾವಧಿ ನೀಡುತ್ತದೆ.

ಬ್ಯಾಟರಿ ಪ್ಯಾಕ್ ತೆಗೆದುಕೊಳ್ಳಿ

ಬ್ಯಾಟರಿ ಪ್ಯಾಕ್ ತೆಗೆದುಕೊಳ್ಳಿ

ಯಾವುದು ಕೆಲಸ ಮಾಡದಿದ್ದರೆ, ನೀವು ಬ್ಯಾಟರಿ ಪ್ಯಾಕ್ ಅಥವಾ ಸ್ಪೇರ್ ಬ್ಯಾಟರಿಯನ್ನು ಉಪಯೋಗಿಸಬಹುದು ನಿಮಗೆ ಬೇಕೆನಿಸಿದಾಗ ಲೊ ಬ್ಯಾಟರಿಯ ಚಿಂತೆಯಿಲ್ಲದೆ.

ಬ್ಯಾಟರಿ ಹೆಚ್ಚು ಬಳಸುವ ಆಪ್ಸ್ ಅನ್ನು ಅನ್‍ಇನಸ್ಟೊಲ್ ಮಾಡಬೇಕೆಂದಿಲ್ಲಾ

ಬ್ಯಾಟರಿ ಹೆಚ್ಚು ಬಳಸುವ ಆಪ್ಸ್ ಅನ್ನು ಅನ್‍ಇನಸ್ಟೊಲ್ ಮಾಡಬೇಕೆಂದಿಲ್ಲಾ

ನಿಮ್ಮ ಫೋನಿನ ಸೆಟ್ಟಿಂಗ್ಸ್ ನಲ್ಲಿ ನಿಮಗೆ ಗೊತ್ತಾಗುತ್ತದೆ ಯಾವ ಆಪ್ಸ್ ಹೆಚ್ಚು ಬ್ಯಾಟರಿ ಉಪಯೋಗಿಸುತ್ತಿವೆ ಎಂದು. ಆದರೆ ಕಡ್ಡಾಯವಾಗಿ ಆ ಆಪ್ಸ್ ಗಳನ್ನು ಅನ್‍ಇನಸ್ಟೊಲ್ ಮಾಡಬೇಕೆಂದಿಲ್ಲಾ, ನಿಮ್ಮ ಬಳಕೆಯನ್ನು ಕಡಿಮೆ ಗೊಳಿಸಿ ಮತ್ತು ಆಪ್ ನ ಬ್ಯಾಕ್‍ಗ್ರೌಂಡ್ ಆಕ್ಸೆಸ್ ಕಡಿತಗೊಳಿಸಿ ಬ್ಯಾಟರಿ ವೇಸ್ಟೆಜ್ ತಡೆಯಲು.

Best Mobiles in India

English summary
Smartphone battery life and the myths related to it are talked by everyone. There are many useful tips to extend the battery life. Here, we have detailed some smartphone battery hacks, tips and myths that you need to know. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X