ಜಿಯೋ 4ಜಿ ಆಫರ್ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳಿಗೆ

Written By:

ಜನಪ್ರಿಯ ಡಿವೈಸ್ ಬ್ರ್ಯಾಂಡ್‌ಗಳಾದ ಜಿಯೋನಿ, ಕಾರ್ಬನ್ ಮತ್ತು ಲಾವಾ ರಿಲಾಯನ್ಸ್ ಜಿಯೋದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡದ್ದು ಜಿಯೋ ಪ್ರಿವ್ಯೂ ಆಫರ್ ತಮ್ಮ 4ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ದೊರೆಯುವಂತೆ ಮಾಡಿಕೊಂಡಿವೆ.

ಓದಿರಿ: ಜಿಯೋ 4ಜಿ ಸಿಮ್ ಅನ್ನು ಡಾಂಗಲ್‌ನಲ್ಲಿ ಬಳಸುವುದು ಹೇಗೆ?

ಬಳಕೆದಾರರು ಎಲ್ಲಾ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ (ಡಿಜಿಟಲ್ ಎಕ್ಸ್‌ಪ್ರೆಸ್ ಮತ್ತು ಡಿಜಿಟಲ್ ಎಕ್ಸ್‌ಪ್ರೆಸ್ ಮಿನಿ) ಮೊದಲಾದ ಕಡೆಗಳಲ್ಲಿ ಜಿಯೋ ಪ್ರಿವ್ಯೂ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ದೇಶದಲ್ಲಿರುವ ಇತರ ಸ್ಮಾರ್ಟ್‌ಫೋನ್ ರೀಟೈಲ್ ಸ್ಟೋರ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ಜಿಯೋ 4ಜಿ ಆಫರ್ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳಿಗೆ

4ಜಿ ಪ್ರಿವ್ಯೂ ಆಫರ್ ನೀಡುತ್ತಿರುವ ಸೌಲಭ್ಯಗಳೆಂದರೆ 4 ಜಿ ಇಂಟರ್ನೆಟ್, ವೋಲ್ಟ್ ವಾಯ್ಸ್ ಕಾಲಿಂಗ್, ವೀಡಿಯೊ ಕಾಲಿಂಗ್ ಮತ್ತು 90 ದಿನಗಳ ಎಸ್‌ಎಮ್‌ಎಸ್ ಆಗಿದೆ.

ಓದಿರಿ: ಏರ್‌ಟೆಲ್ 4ಜಿ ಯನ್ನೂ ಮೂಲೆಗುಂಪಾಗಿಸಿತೇ ರಿಲಾಯನ್ಸ್ ಜಿಯೋ

ಇದುವರೆಗೆ, ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಸೋನಿಕ್, ಮೈಕ್ರೋಮ್ಯಾಕ್ಸ್, ಏಸಸ್, ಟಿಸಿಎಲ್, ಅಲಾಕ್ಟೆಲ್ ಮತ್ತು ಎಲ್‌ವೈಎಫ್ ಗಳಲ್ಲಿ ದೊರೆಯಲಿದೆ. ಈ ಟೆಸ್ಟಿಂಗ್ ಇತರ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಾದ ಜಿಯೋ ನ್ಯೂ 4ಜಿ ಎಲ್‌ಟಿಇ, ಎಲ್ಲಾ ಐಪಿ ಆಧಾರಿತ ನೆಟ್‌ವರ್ಕ್‌ನಲ್ಲಿ ವಿಸ್ತರಿತವಾಗಿದೆ.

ಓದಿರಿ: ರಿಲಾಯನ್ಸ್ ಜಿಯೋಗೆ ಸ್ಪರ್ಧಿಯಾಗಿ ಬಿಎಸ್‌ಎನ್‌ಎಲ್‌ನಿಂದ ಅನ್‌ಲಿಮಿಟೆಡ್‌ 3G ಡಾಟಾ ಆಫರ್!

ಎಚ್‌ಡಿ ವಾಯ್ಸ್ ಮತ್ತು ವೀಡಿಯೊ ಕರೆಗಳು, ಅನಿಯಮಿತ ಎಸ್‌ಎಮ್‌ಎಸ್ ಮತ್ತು ಅನಿಯಮಿತ ಹೆಚ್ಚು ವೇಗದ ಡೇಟಾವನ್ನು ಜಿಯೋದ 4ಜಿ ಎಲ್‌ಟಿಇ ಸರ್ವೀಸ್ ಒಳಗೊಂಡಿದೆ.

ಜಿಯೋ 4ಜಿ ಆಫರ್ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳಿಗೆ

ಇಷ್ಟಲ್ಲದೆ ಬಳಕೆದಾರರಿಗೆ ಜಿಯೋಪ್ಲೇ, ಜಿಯೋಆನ್‌ಡಿಮಾಂಡ್, ಜಿಯೋಬೀಟ್ಸ್, ಜಿಯೋಮ್ಯಾಗ್ಸ್, ಜಿಯೋಎಕ್ಸ್‌ಪ್ರೆಸ್ ನ್ಯೂಸ್, ಜಿಯೋ ಡ್ರೈವ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಮನಿ ಮೊದಲಾದ ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವ ಸೌಲಭ್ಯವನ್ನು ಒದಗಿಸಲಿದೆ.

ಜಿಯೋ ಆನ್ ಡಿಮಾಂಡ್ ಚಲನ ಚಿತ್ರಗಳಿಗೆ, ಟಿವಿ ಶೋಗಳಿಗೆ, ಲೈವ್ ಟಿವಿ ಮತ್ತು ಮ್ಯೂಸಿಕ್‌ಗಾಗಿ ಜಿಯೋ ಬೀಟ್ಸ್‌ಗೆ ಪ್ರವೇಶವನ್ನು ಪಡೆದುಕೊಳ್ಳುವ ಸವಲತ್ತನ್ನು ನೀಡಲಿದೆ.

 

English summary
Popular device brands Gionee, Karbonn and Lava have partnered with Reliance Jio Infocomm Limited to make the Jio Preview Offer available on their 4G smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot