ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳಿಕೆಗೆ ಈ ಅಪ್ಲಿಕೇಶನ್‌ಗಳು
ಇಂದಿನ ದಿನಗಳಲ್ಲಿ ವಿವಿಧ ಬಗೆಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು ಹೆಚ್ಚಿನ ಎಲ್ಲಾ ವಿಶೇಷತೆಗಳನ್ನು ಒಳಗೊಂಡು ಈ ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಕಣ್ಮನ ಸೆಳೆಯುವ ವಿನ್ಯಾಸದಿಂದ ಹಿಡಿದು ಉತ್ತಮ ಗುಣಮಟ್ಟದ ಕ್ಯಾಮೆರಾ ಕೂಡ ನಿಮ್ಮ ಇಚ್ಛೆಯ ಸೆಲ್ಪೀ ಫೋಟೋವನ್ನು ಈಡೇರಿಸುವ ಬಯಕೆಯೊಂದಿಗೆ ಬರುತ್ತಿದೆ. ಆದರೆ ಇವೆಲ್ಲಾ ಅಂಶಗಳೊಂದಿಗೆ ಉತ್ತಮ ಬ್ಯಾಟರಿ ಬಾಳಿಕೆ ಕೂಡ ಸ್ಮಾರ್ಟ್‌ಫೋನ್‌ನ ಅತಿ ಮುಖ್ಯ ಅಂಶವಾಗಿದೆ.
ಇದನ್ನೂ ಓದಿ: ಆಪಲ್ ಫೋನ್‌ಗಳ ಪ್ರಿ ಆರ್ಡರ್‌ಗಾಗಿ ಟಾಪ್ ಸೈಟ್‌ಗಳು
ಇತ್ತೀಚಿನ IDC ಸರ್ವೆಯ ಪ್ರಕಾರ 56% ದಷ್ಟು ಆಂಡ್ರಾಯ್ಡ್ ಖರೀದಿದಾರರು, 49% ದಷ್ಟು ಐಫೋನ್ ಖರೀದಿದಾರರು ಮತ್ತು 53% ದಷ್ಟು ವಿಂಡೋಸ್ ಫೋನ್ ಖರೀದಿದಾರರು ಬ್ಯಾಟರಿ ಬಾಳಿಕೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ರೂ 5,000 ದ ಒಳಗಿನ ಕಿಟ್‌ಕ್ಯಾಟ್ ಆಂಡ್ರಾಯ್ಡ್ ಫೋನ್‌ಗಳು
ಈ ಎಲ್ಲಾ ಹೇಳಿಕೆಗಳನ್ನು ಗಮನಿಸುವಾಗ ಅತ್ಯುತ್ತಮ ಬ್ಯಾಟರಿ ಜೀವನ ಸ್ಮಾರ್ಟ್‌ಫೋನ್‌ಗಳಿಗೆ ಅತೀ ಅವಶ್ಯಕ ಎಂಬುದು ಮನದಟ್ಟಾಗುತ್ತದೆ. ಹಾಗಿದ್ದರೆ ನಿಮ್ಮ ಬ್ಯಾಟರಿ ಬಾಳಿಕೆಯನ್ನು ನಿರಂತರವಾಗಿಸುವ ಕೆಲವೊಂದು ಅತಿ ಮುಖ್ಯ ಅಪ್ಲಿಕೇಶನ್‌ಗಳೊಂದಿಗೆ ನಾವು ಬಂದಿದ್ದು ಇವುಗಳು ಬ್ಯಾಟರಿ ಫೋಲಾಗುವಿಕೆಯನ್ನು ತಡೆಗಟ್ಟುತ್ತದೆ ಮತ್ತು ಬ್ಯಾಟರಿಯನ್ನು ದೀರ್ಘ ಸಮಯದವರೆಗೆ ಬಾಳುವಂತೆ ಮಾಡುತ್ತದೆ.

#1
DU Battery ಸೇವರ್ ಒಂದು ಉಚಿತ ಅಪ್ಲಿಕೇಶನ್ ಆಗಿದ್ದು ನಿಮ್ಮ ಡಿವೈಸ್‌ನ ಬಾಟರಿ ಉಳಿಕೆಯನ್ನು ಇದು 50%. ದವರೆಗೆ ಹೆಚ್ಚಿಸುತ್ತದೆ. ಇದು ಈಗಾಗಲೇ ಸಂಯೋಜಿಸಲಾದ ಪವರ್ ಮ್ಯಾನೇಜ್‌ಮೆಂಟ್ ಮೋಡ್‌ಗಳಾದ ದೀರ್ಘ ಸ್ಟ್ಯಾಂಡ್‌ಬೈ, ಸಾಮಾನ್ಯ ಮೋಡ್ ಮತ್ತು ಸ್ಲೀಪ್ ಮೋಡ್ ಅನ್ನು ಒದಗಿಸುತ್ತದೆ.

#2
ಕೇವಲ ಒಂದೇ ಒಂದು ಕ್ಲಿಕ್ ಮೂಲಕ ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುವ ಅಪ್ಲಿಕೇಶನ್ ಆಗಿದೆ ಬ್ಯಾಟರಿ ಸೇವ್ ಬೂಸ್ಟರ್. ಹಿನ್ನಲೆ ಪ್ರಕ್ರಿಯೆ ಮತ್ತು ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಂಡು ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.

#3
2 ಬ್ಯಾಟರಿ - ಬ್ಯಾಟರಿ ಸೇವರ್
ಈ ಅಪ್ಲಿಕೇಶನ್ ನಿಮಗೆ ಬ್ಯಾಟರಿಯನ್ನು ಸುದೀರ್ಘ ಸಮಯದವರೆಗೆ ಬಾಳುವಂತೆ ಮಾಡಲು ಸಹಾಯ ಮಾಡುತ್ತದೆ.

#4
ಕೊಮೊಡೊ ಬ್ಯಾಟರಿ ಸೇವರ್
ನಿಮ್ಮ ಮೊಬೈಲ್ ಅನ್ನು ಪವರ್ ಸೇವಿಂಗ್ ಮೋಡ್‌ಗೆ ಅನುಮತಿಸುವ ಮೂಲಕ ಮತ್ತು ಬ್ಯಾಟರಿಯನ್ನು ಹೆಚ್ಚು ಬಳಸುವ ಅಪ್ಲಿಕೇಶನ್ ಅನ್ನು ತಡೆಹಿಡಿಯುವ ಕಾರ್ಯವನ್ನು ಈ ಅಪ್ಲಿಕೇಶನ್ ಮಾಡುತ್ತದೆ. ಯಾವ ಅಪ್ಲಿಕೇಶನ್ ಜಾಸ್ತಿ ಚಾರ್ಜ್ ಅನ್ನು ಬಳಸುತ್ತದೆ ಎಂಬ ಮಾಹಿತಿಯನ್ನು ಕೂಡ ಈ ಅಪ್ಲಿಕೇಶನ್ ನಿಮಗೆ ನೀಡುತ್ತದೆ.

#5
ಸ್ನ್ಯಾಪ್‌ಡ್ರಾಗನ್ ಬ್ಯಾಟರಿ ಗುರು
ಇದು ನಿಮ್ಮ ಬ್ಯಾಟರಿ ಜೀವನವನ್ನು ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿದ್ದು ನಿಮ್ಮ ಸ್ಮಾರ್ಟ್‌ಫೋನ್ ಬಳಕೆಯನ್ನು ಹೇಗೆ ಮಾಡಬೇಕು ಮತ್ತು ಸೆಟ್ಟಿಂಗ್ ಯಾವ ರೀತಿಯಲ್ಲಿರಬೇಕು ಎಂಬ ವಿವರವನ್ನು ನಿಮಗೆ ನೀಡುತ್ತದೆ.

#6
ಜೂಸ್ ಡಿಫೆಂಡರ್
ಇದು ಉಚಿತವಾಗಿರುವ ಮತ್ತು ಬಳಸಲು ಸರಳವಾಗಿರುವ ಬ್ಯಾಟರಿ ಉಳಿಸುವ ಅಪ್ಲಿಕೇಶನ್ ಆಗಿದ್ದು ನಿಮ್ಮ ಹೆಚ್ಚುವರಿ ಬ್ಯಾಟರಿ ಖರ್ಚಾಗುವುದನ್ನು ಇದರ ಮೂಲಕ ತಡೆಯಬಹುದಾಗಿದೆ.

#7
ಒನ್ ಟಚ್ ಬ್ಯಾಟರಿ ಸೇವರ್
ಹಸರೇ ಹೇಳುವಂತೆ ಒಂದೇ ಸ್ಪರ್ಶದಲ್ಲಿ, ಪವರ್ ಸೇವಿಂಗ್ ಮೋಡ್ ಅನ್ನು ನಿಮಗೆ ಸಕ್ರಿಯಗೊಳಿಸಬಹುದು.

#8
ಡೀಪ್ ಸ್ಲೀಪ್ ಬ್ಯಾಟರಿ ಸೇವರ್
ಡೀಪ್ ಸ್ಲಿಪ್ ಮೋಡ್ ಎಂಬ ವೈಶಿಷ್ಟ್ಯವನ್ನು ಇದು ಪರಿಚಯಿಸುತ್ತದೆ. ಇದು ನಿಮ್ಮ ಫೋನ್ ಅನ್ನು ಡೀಪ್ ಸ್ಲೀಪ್ ಮೋಡ್‌ನಲ್ಲಿ ಇರಿಸುವ ಮೂಲಕ, 3 ಜಿ ಮತ್ತು ವೈಫೈ ಅನ್ನು ಆಫ್ ಮಾಡುತ್ತದೆ ಮತ್ತು ಹಿನ್ನಲೆ ಅಪ್ಲಿಕೇಶನ್‌ಗಳ ಕಾರ್ಯನಿರ್ವಹಣೆಯನ್ನು ಇದು ನಿಲ್ಲಿಸುತ್ತದೆ.

#9
ಈಸಿ ಬ್ಯಾಟರಿ ಸೇವರ್
ಫೋನ್‌ನ ನೆಟ್‌ವರ್ಕ್ ಸಂಪರ್ಕವನ್ನು ಬಳಸಿಕೊಂಡು, ಬ್ಯಾಟರಿ ಬಾಳ್ವಿಕೆಯನ್ನು ಹೆಚ್ಚಿಸುವ ಈಸಿ ಬ್ಯಾಟರಿ ಸೇವರ್ ಬಳಸಲು ಸರಳವಾಗಿರುವ ಅಪ್ಲಿಕೇಶನ್ ಆಗಿದೆ.

#10
ಬಟಾರಿಯಾ - ಬ್ಯಾಟರಿ ಸೇವರ್
ಇದು ಬ್ಯಾಟರಿ ಸೇವರ್ ಅಪ್ಲಿಕೇಶನ್ ಜೊತೆಗೆ ಟಾಸ್ಕ್ ಮ್ಯಾನೇಜಿಂಗ್ ಅಪ್ಲಿಕೇಶನ್ ಕೂಡ ಆಗಿದೆ.

#11
ಬ್ಯಾಟರಿ ಸೇವರ್ ಎಕ್ಸಟ್ರಾ ಪವರ್
ಇದು ಉಚಿತ ಅಪ್ಲಿಕೇಶನ್ ಆಗಿದ್ದು ನಿಮ್ಮ ಫೋನ್‌ನ ಬ್ಯಾಟರಿ ಬಾಳಿಕೆಯನ್ನು ಇದು ವರ್ಧಿಸುತ್ತದೆ.

#12
ಬ್ಯಾಟರಿ ಡಿಫೆಂಡರ್
ಬ್ಯಾಟರಿ ಡಿಫೆಂಡರ್ ಅನ್ನು ಬಳಸುವ ಮೂಲಕ ಕೇವಲ ಒಂದೇ ಸ್ಪರ್ಶದಲ್ಲಿ ನಿಮ್ಮ ಬ್ಯಾಟರಿ ಜೀವನವನ್ನು ಇದು ವರ್ಧಿಸುತ್ತದೆ.


Click it and Unblock the Notifications








