ಹೋನರ್‌ನ 16 ಎನ್‌ಎಮ್ ಚಿಪ್‌ಸೆಟ್‌ ವಿಶೇಷತೆ ಏನು?

By Shwetha
|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಉತ್ತಮ ವಿಶೇಷತೆಗಳನ್ನು ಫೀಚರ್‌ಗಳನ್ನು ಒಳಗೊಂಡು ಬರುತ್ತಿದ್ದು ಪಿಸಿ ಮತ್ತು ಲ್ಯಾಪ್‌ಟಾಪ್‌ಗಿಂತಲೂ ಹೆಚ್ಚು ವೇಗವಾಗಿ ಸ್ಮಾರ್ಟ್‌ಫೋನ್‌ಗಳು ಈಗ ಚಾಲನೆಗೊಳ್ಳುತ್ತಿವೆ. ಇದಕ್ಕೆ ಕಾರಣವಾಗಿರುವುದು ಸುಧಾರಿತ ಚಿಪ್‌ಸೆಟ್ ಆಗಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಗ್ರಾಫಿಕ್‌ಗಳು ಮತ್ತು ಅನಿಮೇಶನ್‌ಗಳನ್ನು ಹೊಂದುವಂತಾಗಿದ್ದು, ಹೆಚ್ಚು ಸುಲಭವಾಗಿ ಮಲ್ಟಿ ಟಾಸ್ಕಿಂಗ್ ಅನ್ನು ನಡೆಸುವ ಸಾಮರ್ಥ್ಯನ್ನು ಪಡೆದುಕೊಂಡಿವೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಚಿಪ್‌ಸೆಟ್ ಏಕೆ ಹೆಚ್ಚು ಮಹತ್ವದ್ದು?

ಇಲ್ಲಿಯವರೆಗೆ, ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ತಮ್ಮ ಫೋನ್‌ಗಳಲ್ಲಿ ಸಾಕಷ್ಟು ಕೋರ್‌ಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿವೆ. ಸ್ಮಾರ್ಟ್‌ಫೋನ್‌ಗಳ ಕಾರ್ಯವನ್ನು ಇನ್ನಷ್ಟು ವೇಗಗೊಳಿಸಲು ಕೋರ್‌ಗಳು ಹೆಚ್ಚು ಮುಖ್ಯ ಎಂದೆನಿಸಿವೆ. ಗ್ರಾಹಕರು ಮೊದಲಿಗೆ ಕ್ವಾಡ್ ಕೋರ್‌ನತ್ತ ಹೆಚ್ಚು ಆಕರ್ಷಿತರಾಗಿದ್ದು ನಂತರ ಓಕ್ಟಾ ಕೋರ್ ಸಾಕ್‌ನತ್ತ ಮುಖಮಾಡಿದ್ದಾರೆ. ಹೆಚ್ಚು ಶಕ್ತಿಶಾಲಿ ಸಮಾನವಾದ ಓಕ್ಟಾ ಕೋರ್ ಚಿಪ್‌ಸೆಟ್‌ಗಳನ್ನು ಎಲ್ಲಾ ಸ್ಮಾರ್ಟ್‌ಫೋನ್‌ಗಳು ಹೊಂದಿಲ್ಲ ಎಂಬುದಾಗಿ ಹೇಳಬಹುದಾಗಿದೆ. ಇಂದಿನ ಲೇಖನದಲ್ಲಿ ಈ ಚಿಪ್‌ಸೆಟ್ ಕುರಿತು ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

#1

#1

ಬಹಳಷ್ಟು ವರ್ಷಗಳ ಹಿಂದೆ, 28 ಎನ್‌ಎಮ್ ಚಿಪ್‌ ಎಂಬುದು ಬಹುದೊಡ್ಡ ಮಾತಾಗಿತ್ತು ಆದರೆ 20 ಎನ್‌ಎಮ್ ಚಿಪ್‌ಸೆಟ್ ಸುಧಾರಿತ ಕಾರ್ಯಕ್ಷಮತೆಯನ್ನು ಪಡೆದುಕೊಂಡು ಇವುಗಳ ಸ್ಥಾನವನ್ನು ಪಡೆದಿವೆ. ಈಗ 20 ಎನ್‌ಎಮ್ ಕೂಡ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅವುಗಳನ್ನು 16 ನ್ಯಾನೊಮೀಟರ್ ಪಡೆದುಕೊಂಡಿವೆ. ಇದು ವೇಗದ ಕಾರ್ಯಕ್ಷಮತೆಯನ್ನು ಒದಗಿಸುತ್ತಿವೆ.

#2

#2

ಅಂತೆಯೇ 16 ನ್ಯಾನೊಮೀಟರ್ ಚಿಪ್‌ಸೆಟ್ ಕಡಿಮೆ ಶಕ್ತಿಯನ್ನು ವಿನಿಯೋಗಿಸುತ್ತಿದ್ದು, ಪೂರ್ಣ ಚಾರ್ಜ್‌ನಲ್ಲಿ ದೀರ್ಘಕಾಲ ಚಾಲನೆಗೊಳ್ಳುತ್ತವೆ. ಅಂತೆಯೇ ಫೋನ್‌ಗಳ ದಪ್ಪವನ್ನು ಇವುಗಳು ಕಡಿಮೆ ಮಾಡಿದ್ದು ಸ್ಲಿಮ್ ಮಾದರಿಯಲ್ಲಿ ಡಿವೈಸ್‌ಗಳು ಬರುತ್ತಿವೆ. ಹುವಾವೆ ಹೋನರ್ ಬ್ರ್ಯಾಂಡ್ ಕೂಡ ತನ್ನ ಡಿವೈಸ್‌ಗಳಿಗಾಗಿ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದ್ದು, ಇದರ ಸ್ಮಾರ್ಟ್‌ಫೋನ್ ಉತ್ತಮ ಪ್ರೊಸೆಸಿಂಗ್ ಪವರ್ ಅನ್ನು ಒದಗಿಸುತ್ತಿವೆ.

#3

#3

ಈಗ ಕಂಪೆನಿಯು ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ 16 ಎನ್‌ಎಮ್ ಚಿಪ್‌ಸೆಟ್‌ನೊಂದಿಗೆ ಬಂದಿದ್ದು ಹುವಾವೆಯ ಹೋನರ್ ಬ್ರ್ಯಾಂಡ್ 16 ಎನ್‌ಎಮ್ ತಯಾರಕ ಪ್ರೊಸೆಸಿಂಗ್‌ನೊಂದಿಗೆ ಹೊಸ ಜೆನ್ ಕಿರಿನ್ ಚಿಪ್‌ಸೆಟ್ ಅನ್ನು ಪಡೆದುಕೊಂಡಿದೆ. ಕಂಪೆನಿಯ 16 ಎನ್‌ಎಮ್ ಟೆಕ್ ಆಕರ್ಷಕವಾಗಿದೆ. ತನ್ನ ಫ್ಲ್ಯಾಗ್‌ಶಿಪ್ ಡಿವೈಸ್ ಅನ್ನು ಈ ಚಿಪ್‌ಸೆಟ್‌ನೊಂದಿಗೆ ಕಂಪೆನಿ ಈ ತಿಂಗಳು ಹೊರತರಲಿದೆ.

#4

#4

ವದಂತಿಗಳ ಪ್ರಕಾರ, ಮುಂಬರಲಿರುವ ಹೋನರ್ ಸ್ಮಾರ್ಟ್‌ಫೋನ್ ಕಂಪೆನಿಯ ಮುಖ್ಯ ಉತ್ಪನ್ನ ಕಿರಿನ್ ಸೋಕ್‌ನೊಂದಿಗೆ ಬಂದಿದ್ದು 16 ಎನ್‌ಎಮ್ ಆರ್ಕಿಟೆಕ್ಚರ್ ಅನ್ನು ಪಡೆದುಕೊಂಡಿದೆ. ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡುವುದು ಮಾತ್ರವಲ್ಲದೆ, ಉತ್ತಮ ಬ್ಯಾಟರಿ ದೀರ್ಘತೆಯನ್ನು ನೀಡಲಿದೆ. ಅಂತೂ ಗ್ರಾಹಕರು ಅತ್ಯುತ್ತಮವಾಗಿರುವ ಉತ್ತಮ ಹ್ಯಾಂಡ್‌ಸೆಟ್ ಅನ್ನು ಎದುರು ನೋಡುವುದು ಖಂಡಿತವಾಗಿದೆ.

Best Mobiles in India

English summary
Huawei's Honor brand leverages the 16nm manufacturing process in its new gen Kirin chipset. The company's upcoming 16nm tech seems pretty impressive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X