Home
ಮೊಬೈಲ್

2016ರ ಅಗ್ಗದ ಬೆಲೆಯ ಉತ್ತಮ ಫೀಚರ್ ಫೋನ್‌ 'ಕೂಲ್‌ಪ್ಯಾಡ್‌ ಮೆಗಾ 2.5ಡಿ'

By Suneel

2016 ರ ಪ್ರಾರಂಭದಿಂದಲೂ ಸಹ ಬಹುಸಂಖ್ಯಾತ ಉತ್ತಮ ಫೋನ್‌ಗಳು ಭಾರತದಲ್ಲಿ ಲಾಂಚ್‌ ಆಗಿರಬಹುದು. ಆದರೆ ಅತೀ ಅಗ್ಗದ ಬೆಲೆಗೆ ಉತ್ತಮ ಫೀಚರ್‌ಗಳು ಇರುವ ಸ್ಮಾರ್ಟ್‌ಫೋನ್ ಲಾಂಚ್‌ ಆಗಿಲ್ಲ ಎಂಬುದು ಸ್ಮಾರ್ಟ್‌ಫೋನ್‌ ಪ್ರಿಯರ ಸ್ಮಾರ್ಟ್‌ ಆಲೋಚನೆ. ಆದರೆ ಈಗ ಈ ಮಾಹಿತಿಯನ್ನು 'ಕೂಲ್‌ಪ್ಯಾಡ್‌ ಮೆಗಾ 2.5ಡಿ' ಸುಳ್ಳು ಮಾಡುತ್ತಿದೆ.

2016ರ ಅಗ್ಗದ ಬೆಲೆಯ ಉತ್ತಮ ಫೀಚರ್ ಫೋನ್‌ 'ಕೂಲ್‌ಪ್ಯಾಡ್‌ ಮೆಗಾ 2.5ಡಿ'

ಹೌದು, ಕೂಲ್‌ಪ್ಯಾಡ್‌ ಹೊಸ ಬಜೆಟ್ ಸ್ಮಾರ್ಟ್‌ಫೋನ್ 'ಕೂಲ್‌ಪ್ಯಾಡ್‌ ಮೆಗಾ 2.5ಡಿ' ಅನ್ನು ಬೆಲೆ ರೂ 6,999 ಕ್ಕೆ ಭಾರತದಲ್ಲಿ ಲಾಂಚ್‌ ಮಾಡಿದ್ದು, ಅತಿ ಕಡಿಮೆ ಬೆಲೆ ಆಗಿದ್ದರು ಸಹ ಉತ್ತಮ ಫೀಚರ್‌ಗಳನ್ನು ಹೊಂದಿದೆ.

ಮೆಟಲ್‌ ಯುನಿಬಾಡಿ ಹೊಂದಿರುವ ಸ್ಮಾರ್ಟ್‌ಫೋನ್‌ 73 ಶೇಕಡ ಸ್ಕ್ರೀನ್‌ ರೇಟಿಯೋ ಹೊಂದಿದೆ. 8MP ಸೆಲ್ಫಿ ಕ್ಯಾಮೆರಾ ಹೊಂದಿರುವ 'ಕೂಲ್‌ಪ್ಯಾಡ್‌ ಮೆಗಾ 2.5ಡಿ' ಸ್ಮಾರ್ಟ್‌ಫೋನ್‌ ಅನ್ನು ಆಗಸ್ಟ್‌ 24 ರಿಂದ ಅಮೆಜಾನ್‌ನಲ್ಲಿ ಖರೀದಿಸಬಹುದು. ಇಂದಿನಿಂದ (ಆಗಸ್ಟ್‌ 10) ಸಂಜೆ 5 ಗಂಟೆಯಿಂದ ಸ್ಮಾರ್ಟ್‌ಫೋನ್‌ ಅನ್ನು ಬುಕಿಂಗ್ ಮಾಡಬಹುದು. ಸ್ಮಾರ್ಟ್‌ಫೋನ್‌ ಗೋಲ್ಡ್‌ ಕಲರ್‌ ವೈವಿಧ್ಯತೆಯಲ್ಲಿ ದೊರೆಯಲಿದೆ.

2016ರ ಅಗ್ಗದ ಬೆಲೆಯ ಉತ್ತಮ ಫೀಚರ್ ಫೋನ್‌ 'ಕೂಲ್‌ಪ್ಯಾಡ್‌ ಮೆಗಾ 2.5ಡಿ'

'ಕೂಲ್‌ಪ್ಯಾಡ್‌ ಮೆಗಾ 2.5ಡಿ' 5.5 ಇಂಚಿನ ಐಪಿಎಸ್‌ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್‌ ಮಾರ್ಷ್‌ಮಲ್ಲೋ 6.0 ಓಎಸ್‌ ಚಾಲಿತವಾಗಿದೆ. ಮೀಡಿಯಾಟೆಕ್ MT673558P 64bit ಕ್ವಾಡ್‌ ಕೋರ್‌ ಚಿಪ್‌ಸೆಟ್‌ ಕ್ಲಾಕ್ಡ್‌ 1GHz ಪ್ರೊಸೆಸರ್‌ ಹೊಂದಿದ್ದು, 3GB RAM ಮತ್ತು 16GB ಆಂತರಿಕ ಮೆಮೊರಿ ಹೊಂದಿದೆ. ಸ್ಮಾರ್ಟ್‌ಫೋನ್‌ ಮೈಕ್ರೋ ಎಸ್‌ಡಿ ಕಾರ್ಡ್‌ ಫೀಚರ್‌ ಹೊಂದಿದ್ದು, 32GB ವರೆಗೆ ವಿಸ್ತರಣೆ ಮಾಡಬಹುದು. USB OTG ಸಪೋರ್ಟ್‌ ಮಾಡುತ್ತದೆ.

2016ರ ಅಗ್ಗದ ಬೆಲೆಯ ಉತ್ತಮ ಫೀಚರ್ ಫೋನ್‌ 'ಕೂಲ್‌ಪ್ಯಾಡ್‌ ಮೆಗಾ 2.5ಡಿ'

ಸ್ಮಾರ್ಟ್‌ ಬ್ಯೂಟಿಫಿಕೇಶನ್‌ ಮೋಡ್‌ 8MP ಸೆಲ್ಫಿ ಕ್ಯಾಮೆರಾ ಮತ್ತು 8MP ಹಿಂಭಾಗ ಕ್ಯಾಮೆರಾ ಇದೆ. 'ಕೂಲ್‌ಪ್ಯಾಡ್‌ ಮೆಗಾ 2.5ಡಿ' ಸ್ಮಾರ್ಟ್‌ಫೋನ್‌ 4G ಡ್ಯುಯಲ್‌ ಸಿಮ್ ಎಲ್‌ಟಿಇ ಜೊತೆಗೆ VoLTE ವಾಯ್ಸ್‌ ಕಾಲಿಂಗ್‌ ಸಪೋರ್ಟ್‌ ಮಾಡುತ್ತದೆ. ವೈಫೈ 802.11n, ಜಿಪಿಎಸ್‌ ಮತ್ತು ಬ್ಲೂಟೂತ್‌ 4.0 ಕನೆಕ್ಟಿವಿಟಿ, 2,500mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದ್ರೆ 'ಕೂಲ್‌ಪ್ಯಾಡ್‌ ಮೆಗಾ 2.5ಡಿ' 9 ಗಂಟೆಗಳ ಟಾಕ್‌ ಟೈಮ್ ಆಫರ್‌ ನೀಡುತ್ತದೆ ಎಂದು ಕೂಲ್‌ಪ್ಯಾಡ್‌ ಹೇಳಿದೆ.

10,000 ರೂ ಕೆಳಗೆ ಖರೀದಿಸಬಹುದಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

Best Mobiles in India

English summary
2016 Best one Budget Smartphone 'Coolpad Mega 2.5D' at Rs 6,999. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+