Subscribe to Gizbot

10,000 ರೂ ಕೆಳಗೆ ಖರೀದಿಸಬಹುದಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

Written By:

ಬಹುಸಂಖ್ಯಾತ ಜನರು ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್‌ಫೋನ್‌ ಖರೀದಿಸಿದರು ಸಹ ಬಜೆಟ್‌ ಫಿಕ್ಸ್‌ ಆಗುವುದು 10,000 ರೂ. ಆದ್ರೆ ಆ ಬೆಲೆಗೆ ಯಾವ ಸ್ಮಾರ್ಟ್‌ಫೋನ್‌ ಉತ್ತಮವಾಗಿವೆ ಎಂಬುದನ್ನು ಮಾತ್ರ ತಿಳಿಯಲು ಸ್ವಲ್ಪ ಕಷ್ಟಪಡುತ್ತಾರೆ. ಆದ್ದರಿಂದ ಇಂದಿನ ಲೇಖನದಲ್ಲಿ 10,000 ರೂಗಿಂತ ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ ಯಾವುವು ಎಂದು ನಿಮಗೆ ಪರಿಚಯಿಸುತ್ತಿದ್ದೇವೆ. ಹಾಗೂ ಅವುಗಳ ಉತ್ತಮ ಫೀಚರ್‌ಗಳು ಯಾವುವು ಎಂದು ಓದಿ ತಿಳಿಯಿರಿ.

'ಒಪೊ ಎಫ್‌1ಎಸ್‌' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್ಮಿ ನೋಟ್ 3

ರೆಡ್ಮಿ ನೋಟ್ 3

ರೂ 10,000 ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ ಯಾವುದು ಎಂದರೆ ಗ್ಯಾಜೆಟ್ ಮಾಹಿತಿ ಉಳ್ಳವರು ಹೇಳುವುದು 'ರೆಡ್ಮಿ ನೋಟ್ 3'. ಕ್ವಾಲ್‌ಕಂ ಸ್ನಾಪ್‌ಡ್ರಾಗನ್‌ 650 ಪ್ರೊಸೆಸರ್‌, 2GB RAM, 16GB ಆಂತರಿಕ ಮೆಮೊರಿ ಹೊಂದಿದೆ. ಜೊತೆಗೆ ಡೀಸೆಂಟ್‌ ಡಿಸೈನ್‌ ಹೊಂದಿರುವ ಗುಣಮಟ್ಟದ ಮೆಟಲ್‌ ಬಾಡಿ ಹೊಂದಿರುವ 'ರೆಡ್ಮಿ ನೋಟ್ 3' MIUI ಸಾಫ್ಟ್‌ವೇರ್‌ ಹೊಂದಿದೆ. ಆಂಡ್ರಾಯ್ಡ್‌ ಓಎಸ್‌ ಆಧಾರಿತ ಸ್ಮಾರ್ಟ್‌ಫೋನ್‌ ಇದಾಗಿದ್ದು 16 MP ಹಿಂಭಾಗ ಕ್ಯಾಮೆರಾ ಹೊಂದಿದ್ದು, ರೂ 9,999 ಕ್ಕೆ ಖರೀದಿಸಬಹುದಾಗಿದೆ.

ಲೆನೊವೋ ಕೆ5 ಪ್ಲಸ್

ಲೆನೊವೋ ಕೆ5 ಪ್ಲಸ್

ಲೆನೊವೋ ಕೆ5 ಪ್ಲಸ್ ಬೆಲೆ 7,999. ಈ ಸ್ಮಾರ್ಟ್‌ಫೋನ್‌ ಒಂದು ರೀತಿಯಲ್ಲಿ ಆಲ್‌ ರೌಂಡರ್‌ ಇದ್ದಹಾಗೆ. 5 ಇಂಚಿನ ಸ್ಕ್ರೀನ್ ಹೊಂದಿದ್ದು, ಸ್ನಾಪ್‌ಡ್ರಾಗನ್‌ 616 ಆಕ್ಟಾ ಕೋರ್‌ ಪ್ರೊಸೆಸರ್, 2GB RAM, 16GB ಆಂತರಿಕ ಮೆಮೊರಿ ಹೊಂದಿದೆ. ಆಂಡ್ರಾಯ್ಡ್‌ ಲಾಲಿಪಪ್‌ ಓಎಸ್‌ ಚಾಲಿತ ಮೊಬೈಲ್‌ ಲೆನೊವೋ ವೈಬ್‌ UI ನಿಂದ ಕಸ್ಟಮೈಜ್‌ ಆಗಿದ್ದು, 13MP ಹಿಂಭಾಗ ಕ್ಯಾಮೆರಾ ಹೊಂದಿದೆ.

ಕೂಲ್‌ಪ್ಯಾಡ್‌ ನೋಟ್ 3

ಕೂಲ್‌ಪ್ಯಾಡ್‌ ನೋಟ್ 3

ಅತೀ ಅಗ್ಗದ ಬೆಲೆಗೆ ಉತ್ತಮ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ ಸಾಲಿನಲ್ಲಿ 'ಕೂಲ್‌ಪ್ಯಾಡ್‌ ನೋಟ್ 3' ಸಹ ಒಂದು. ಬೆಲೆ ರೂ 6,999 ಕ್ಕೆ ಉತ್ತಮ ಆಂಡ್ರಾಯ್ಡ್ ಅನುಭವ ನೀಡುವ 'ಕೂಲ್‌ಪ್ಯಾಡ್‌ ನೋಟ್ 3' ಸ್ಟೆಲ್ಲಾರ್‌ ಹಾರ್ಡ್‌ವೇರ್‌ನಿಂದ ಈ ಬೆಲೆಗೆ ಮಾರಾಟವಾಗುತ್ತಿದೆ. ಮೀಡಿಯಾಟೆಕ್‌ MT6735 ಪ್ರೊಸೆಸರ್, 3GB RAM, 16GB ಆಂತರಿಕ ಮೆಮೊರಿ ಫೀಚರ್ ಹೊಂದಿದೆ. 5 ಇಂಚಿನ ಸ್ಕ್ರೀನ್ ಜೊತೆಗೆ 720p ರೆಸಲ್ಯೂಶನ್‌ನ 13MP ಕ್ಯಾಮೆರಾ ಹೊಂದಿದೆ. ಅತಿ ಅಗ್ಗದ ಬೆಲೆಯಲ್ಲಿರುವ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಹೊಂದಿರುವ ಉತ್ತಮ ಸ್ಮಾರ್ಟ್‌ಫೋನ್‌ ಇದಾಗಿದೆ.

 ಲೀಕೊ ಲೀ 1ಎಸ್‌

ಲೀಕೊ ಲೀ 1ಎಸ್‌

ಪ್ರಸ್ತುತದಲ್ಲಿ 'ಲೀಕೊ ಲೀ 1ಎಸ್' 9,999 ರೂಗೆ ಮಾರಾಟವಾಗುತ್ತಿದೆ. ಇದೇ ಬೆಲೆಗೆ 'ರೆಡ್ಮಿ ನೋಟ್‌ 3' ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದು. ಉತ್ತಮ ಹಾರ್ಡ್‌ವೇರ್‌ ಮತ್ತು ಡಿಸೈನ್‌ ಹೊಂದಿದೆ. 32GB ಆಂತರಿಕ ಮೆಮೊರಿ ಹೊಂದಿದೆ. ಫೋನ್‌ನಲ್ಲೇ ಹೆಚ್ಚಿನ ವೀಡಿಯೋ ಸಂಗ್ರಹಿಸಬಹುದಾಗಿದೆ. ಖರೀದಿಗಾಗಿ ಉತ್ತಮ ಫೋನ್‌ 'ಲೀಕೊ ಲೀ 1ಎಸ್'‌.

ಮೊಟೊ ಜಿ3

ಮೊಟೊ ಜಿ3

'ಮೊಟೊ ಜಿ3' ಮಾರುಕಟ್ಟೆಯಲ್ಲಿ ಫ್ರೆಸ್‌ ಡಿವೈಸ್‌. ಯಾಕಂದ್ರೆ ಆಂಡ್ರಾಯ್ಡ್ ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದೆ. ಹಾರ್ಡ್‌ವೇರ್‌ ಅಷ್ಟೊಂದು ಗುಣಮಟ್ಟ ಅಲ್ಲದಿದ್ದರೂ ಸಾಫ್ಟ್‌ವೇರ್‌ ಮತ್ತು ಕ್ಯಾಮೆರಾದ ಉತ್ತಮ ಫೀಚರ್‌ಗಳಿಂದ ಇಷ್ಟವಾಗುತ್ತದೆ. 13MP ಕ್ಯಾಮೆರಾ ಹೊಂದಿರುವ 'ಮೊಟೊ ಜಿ3' ಯನ್ನು 10,000 ರೂಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಬ್ಯಾಡ್‌ ನ್ಯೂಸ್‌ ಅಂದ್ರೆ ಸ್ಟಾಕ್‌ ಕಡಿಮೆ ಇರುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 top phones under Rs 10,000 in India. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot