ಕಾಮದ ಸುಖ ಬೇಡ, ಮೊಬೈಲ್ ಬೇಕು:Ipsos ಸಮೀಕ್ಷೆ

Posted By: Varun
ಕಾಮದ ಸುಖ ಬೇಡ, ಮೊಬೈಲ್ ಬೇಕು:Ipsos ಸಮೀಕ್ಷೆ

"ಐಲು ಐಲು ಐಲು ಕೈಲಿದ್ರೆ ಮೊಬೈಲು" ಅನ್ನೋ ಹಾಡೊಂದು ಬಹಳ ವರ್ಷಗಳ ಹಿಂದೆ ಫೇಮಸ್ ಆಗಿತ್ತು. ಮೊಬೈಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು, ದಿನನಿತ್ಯದ ಜೀವನ ಶೈಲಿಯನ್ನೇ ಬದಲಾಯಿಸುವ ಮಟ್ಟಿಗೆ ಹೋಗಿದೆ. ಬೆಳಗ್ಗೆ ಎದ್ದರೆ ಮೊಬೈಲ್, ಹಲ್ಲು ಉಜ್ಜುವಾಗ ಮೊಬೈಲ್, ಸ್ನಾನ ಮಾಡುವಾಗ ಮೊಬೈಲ್, ಊಟ ಮಾಡುವಾಗ ಮೊಬೈಲ್, ಕೊನೆಗೆ ಮಲಗುವಾಗ ತಲೆದಿಂಬಿನ ಕೆಳಗೂ ಮೊಬೈಲ್ ಇರಬೇಕು. ಅಷ್ಟೊಂದು ದಾಸರಾಗಿದ್ದೇವೆ ನಾವು, ಈ ಮೊಬೈಲಿಗೆ.

ಮೊಬೈಲ್ ಬಳಸಿ ಅಶ್ಲೀಲ ಮೆಸೇಜುಗಳನ್ನು, ಫೋಟೋಗಳನ್ನು ಹಾಗು ವೀಡಿಯೋಗಳನ್ನು ನೋಡುವುದು, ಕಳಿಸುವುದರಿಂದ ಸಂಬಂಧಗಳು ಹಳಸುತ್ತಿವೆ ಎಂಬುದು ಹಳೇ ಸುದ್ದಿ. ಈಗIpsos ಎಂಬ ಕಂಪನಿಯೊಂದು ನಡೆಸಿರುವ ಸಮೀಕ್ಷೆ ಪ್ರಕಾರ, ಮೊಬೈಲ್ಮತ್ತು ಕಾಮದ ಸುಖ, ಇವೆರಡರಲ್ಲಿ ಯಾವುದು ಬೇಕು ಎಂಬ ಪ್ರಶ್ನೆ ಕೇಳಿದಾಗ 30% ಭಾರತೀಯರು ಕಾಮದ ಸುಖಕ್ಕಿಂತ ಮೊಬೈಲ್ ಬಳಸಲು ಇಷ್ಟಪಡುತ್ತೇವೆ ಎಂದರಂತೆ!!

ಭಾರತದಾದ್ಯಂತ ಸಮೀಕ್ಷೆಯನ್ನು ನಡೆಸಿ ವರದಿ ಪ್ರಕಟಿಸಿರುವ Ipsos ನ ಈ ವರದಿಯ ಪ್ರಕಾರ, ಕಾಮದ ಸುಖಕ್ಕಿಂತ ಮೊಬೈಲ್ ಬಳಸುತ್ತೇವೆ ಎಂದ 30% ಜನರಲ್ಲಿ ಶೇಕಡಾ 41 ರಷ್ಟು ಮಂದಿ ಮಹಿಳೆಯರು ಹಾಗು 23% ಗಂಡಸರೇ ಅಂತೆ! ಮತ್ತೊಂದು ಗಮನಾರ್ಹ ಅಂಶವೆಂದರೆ ಮೊಬೈಲ್ ಬೇಡ ಕಾಮದ ಸುಖ ಬೇಕೆಂದವರಲ್ಲಿ 77% ಗಂಡಸರೇ ಅಂತೆ.

ತಂತ್ರಜ್ಞಾನದಿಂದ ಮಾನವನಿಗೆ ಏನೇ ಒಳಿತಾಗಿದ್ದರೂ, ಜೀವನ ಶೈಲಿಯ ಮಟ್ಟ ಸುಧಾರಿಸಿದ್ದರೂ, ಇದರ ಅಡ್ಡ ಪರಿಣಾಮಗಳೂ ಅಷ್ಟೇ ಜಾಸ್ತಿಯಾಗಿವೆ ಎಂಬುದಕ್ಕೆ ಈ ಸಮೀಕ್ಷೆ ಒಂದು ಉತ್ತಮ ಉದಾಹರಣೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ? ದಯವಿಟ್ಟು ತಿಳಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot