ಜಿಯೋಫೋನ್ ಮಾತ್ರವಲ್ಲ ಮಾರುಕಟ್ಟೆಯಲ್ಲಿ ಲಭ್ಯವಿದೆ ಇನ್ನು ಹಲವು 4G VoLTE ಫೋನ್‌ಗಳು.!
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ 4G VoLTE ಫೀಚರ್ ಫೋನ್‌ಗಳು ಯಾವುವು ಎನ್ನುವದರ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ. ಇಲ್ಲಿ ಸದ್ಯ ಲಭ್ಯವಿರುವ ಫೋನ್‌ಗಳ ವಿವರವನ್ನು ನೀವು ಪಡೆಯಬಹುದಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ 4G VoLTE ಫೀಚರ್ ಫೋನ್‌ಗಳು ಸಹ ಹೆಚ್ಚು ಸದ್ದು ಮಾಡುತ್ತಿವೆ. ಇದಕ್ಕೆ ಕಾರಣ ರಿಲಯನ್ಸ್ ಮಾಲೀಕತ್ವದ ಜಿಯೋ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ.

ಓದಿರಿ: ಮಗಳು ವಿಡಿಯೋ ಮಾಡಿದ್ದಕ್ಕೆ ಐಫೋನ್ X ಇಂಜಿನಿಯರ್‌ನನ್ನು ಕೆಲಸದಿಂದ ಕಿತ್ತುಹಾಕಿದ ಆಪಲ್ !
ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ 4G VoLTE ಫೀಚರ್ ಫೋನ್‌ಗಳು ಯಾವುವು ಎನ್ನುವದರ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ. ಇಲ್ಲಿ ಸದ್ಯ ಲಭ್ಯವಿರುವ ಫೋನ್‌ಗಳ ವಿವರವನ್ನು ನೀವು ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ ಫೋನ್:
ಜುಲೈನಲ್ಲಿ ಪರಿಚಯವಾದ ಜಿಯೋಪೋನ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ರೂ. 1500ಕ್ಕೆ ಈ ಫೋನ್ ಲಭ್ಯವಿದ್ದು, ಇದು ಠೇವಣಿ ರೂಪದಲ್ಲಿ ಇಡಬೇಕಾಗಿದೆ. ಹಣವನ್ನು ಹಿಂತಿರುಗಿ ಪಡೆಯಬಹುದಾಗಿದೆ. 2.4 ಇಂಚಿನ QVGA ಡಿಸ್‌ಪ್ಲೇ, 512MB RAM, 4G ಇಂಟರ್ನಲ್ ಮೆಮೊರಿ ಅಲ್ಲದೇ 128GB ವರೆಗೂ ಮೆಮೊರಿಯನ್ನು ವಿಸ್ತಿರಿಸಿಕೊಳ್ಳುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಹಿಂಭಾಗದಲ್ಲಿ 2MP ಮುಂಭಾಗದಲ್ಲಿ 0.3MP ಕ್ಯಾಮೆರಾವನ್ನು ಕಾಣಬಹುದಾಗಿದೆ.


ಮೈಕ್ರೋಮಾಕ್ಸ್ ಭಾರತ 1:
ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಿರುವ ಭಾರತ್ 1 4G VoLTE ಸ್ಮಾರ್ಟ್‌ಫೋನ್ ರೂ.2200ಕ್ಕೆ ದೊರೆಯುತ್ತಿದೆ. ಈ ಫೋನ್ BSNLನೊಂದಿಗೆ ಕಾಣಿಸಿಕೊಂಡಿದೆ. ಈ ಫೋನಿನಲ್ಲಿ 2.4 QVGA ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 205 ಡ್ಯುಯಲ್ ಕೋರ್ ಚಿಪ್‌ಸೆಟ್ 512 MB RAM, 4GB ಇಂಟರ್ನಲ್ ಮೆಮೊರಿ ಸಹ ಇದೆ. ಹಿಂಭಾಗದಲ್ಲಿ 2MP ಮುಂಭಾಗದಲ್ಲಿ 0.3MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಇಂಟೆಕ್ಸ್ ಟರ್ಬೋ+ 4G:
ದೇಶಿಯ ಫೋನ್ ತಯಾರಿಕ ಕಂಪನಿ ಇನ್‌ಟೆಕ್ಸ್ 4G ಸಫೋರ್ಟ್ ಮಾಡುವ ಫೀಚರ್ ಫೋನ್ ಲಾಂಚ್ ಮಾಡಿದೆ. ಈ ಫೋನಿನಲ್ಲಿ 2.4 QVGA ಡಿಸ್‌ಪ್ಲೇ ಕಾಣಬಹುದಾಗಿದೆ. ಭಾಗದಲ್ಲಿ 2MP ಮುಂಭಾಗದಲ್ಲಿ 0.3MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 512 MB RAM ಮತ್ತು 2000mAh ಬ್ಯಾಟರಿಯನ್ನು ನೀಡಲಾಗಿದೆ. ಬೆಲೆ ರೂ. 1,999 ಆಗಲಿದೆ.

ಲಾವಾ ಕನೆಕ್ಟ್ M1:
ಲಾವಾ ಸಹ ಮಾರುಕಟ್ಟೆಗೆ 4G ಫೀಚರ್ ಫೋನ್ ಲಾಂಚ್ ಮಾಡಿದೆ. ಈ ಪೋನ್ ರೂ.2,999ಕ್ಕೆ ದೊರೆಯುತ್ತಿದೆ. ಈ ಪೋನಿನಲ್ಲಿ ವೈ-ಫೈ ಸೇರಿದಂತೆ ಬ್ಲೂಟೂತ್, GPS ಸೌಲಭ್ಯಗಳನ್ನು ಕಾಣಬಹುದಾಗಿದೆ. 2.4 QVGA ಡಿಸ್‌ಪ್ಲೇ, 512 MB RAM ಮತ್ತು 1750mAh ಬ್ಯಾಟರಿಯನ್ನು ನೀಡಲಾಗಿದೆ.


Click it and Unblock the Notifications








