ಮಗಳು ವಿಡಿಯೋ ಮಾಡಿದ್ದಕ್ಕೆ ಐಫೋನ್ X ಇಂಜಿನಿಯರ್‌ನನ್ನು ಕೆಲಸದಿಂದ ಕಿತ್ತುಹಾಕಿದ ಆಪಲ್ !

ಐಫೋನ್ X ಇಂಜಿನಿಯರ್ ಮಗಳು ಮಾಡಿದ ತಪ್ಪಿಗೆ ತಂದೆಗೆ ಆಪಲ್ ಶಿಕ್ಷೆ ವಿಧಿಸಿದೆ ಎನ್ನಲಾಗಿದೆ. ಐಫೋನ್ X ಮಾರುಕಟ್ಟೆಗೆ ಬರುವ ಮುನ್ನ ಆಪಲ್ ಆ ಕುರಿತಂತೆ ಯಾವುದೇ ಮಾಹಿತಿಯನ್ನು ಲೀಕ್ ಮಾಡಿರಲಿಲ್ಲ.

|

ಆಪಲ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆ ಮಾಡಿದ್ದ ಐಫೋನ್ X ಸದ್ಯ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಆಪಲ್ ಕಂಪನಿಯಿಂದ ಸುದ್ದಿಯೊಂದು ಹೊರಬಿದ್ದಿದೆ. ಐಫೋನ್ X ತಯಾರಿಕೆಯಲ್ಲಿ ಮುಂಚುಣಿಯಲ್ಲಿದ್ದ ಇಂಜಿನಿಯರ್ ಒಬ್ಬರನ್ನು ಕಂಪನಿಯು ಕೆಲಸದಿಂದ ಕಿತ್ತು ಹಾಕಿದೆ ಎನ್ನಲಾಗಿದೆ.

ಐಫೋನ್ X ಇಂಜಿನಿಯರ್‌ನನ್ನು ಕೆಲಸದಿಂದ ಕಿತ್ತುಹಾಕಿದ ಆಪಲ್

ಓದಿರಿ: ಟ್ವಿಟರ್ ನಲ್ಲಿ ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್‌ ಫೋಟೋ ಲೀಕ್..!!

ಐಫೋನ್ X ಇಂಜಿನಿಯರ್ ಮಗಳು ಮಾಡಿದ ತಪ್ಪಿಗೆ ತಂದೆಗೆ ಆಪಲ್ ಶಿಕ್ಷೆ ವಿಧಿಸಿದೆ ಎನ್ನಲಾಗಿದೆ. ಐಫೋನ್ X ಮಾರುಕಟ್ಟೆಗೆ ಬರುವ ಮುನ್ನ ಆಪಲ್ ಆ ಕುರಿತಂತೆ ಯಾವುದೇ ಮಾಹಿತಿಯನ್ನು ಲೀಕ್ ಮಾಡಿರಲಿಲ್ಲ. ಆದರೆ ಐಫೋನ್ X ಇಂಜಿನಿಯರ್ ಮಗಳು ಈ ಫೋನ್ ಕುರಿತಂತೆ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಳು.

ಮಗಳು ಮಾಡಿದ ತಪ್ಪು:

ಮಗಳು ಮಾಡಿದ ತಪ್ಪು:

ಐಫೋನ್ X ಇಂಜಿನಿಯರ್ ಆಗಿದ್ದ ತಂದೆಯನ್ನು ನೋಡಲು ಆಪಲ್ ಒಳಗೆ ಕಾಲಿಟ್ಟಿದ್ದ ಮಗಳು, ಬಿಡುಗಡೆಗೆ ಮುನ್ನವೇ ಐಫೋನ್ X ಬಳಕೆ ಮಾಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ ಜೊತೆಗೆ ಆಪಲ್ ಕಂಪನಿಯ ಒಳಗೆ ಇರುವ ಸೌಲಭ್ಯಗಳ ಕುರಿತಂತೆ ವಿಡಿಯೋದಲ್ಲಿ ವಿವರಣೆ ನೀಡಿದ್ದಳು ಎನ್ನಲಾಗಿದೆ.

ವೈರಲ್ ಆದ ವಿಡಿಯೋ:

ವೈರಲ್ ಆದ ವಿಡಿಯೋ:

ಹೀಗೆ ಬಿಡುಗಡೆಗೂ ಮುನ್ನವೇ ಐಪೋನ್ X ವಿನ್ಯಾಸವನ್ನು ಹಾಗೂ ವಿಶೇಷತೆಗಳನ್ನು ಬಿಡುಗಡೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಆಪಲ್ ಆಫೀಸ್ ಕುರಿತು ಮಾಡಿದ್ದ ವಿಡಿಯೋ ಆಗಿದ್ದರಿಂದ ಹೆಚ್ಚಿನ ಜನರು ನೋಡಿದ್ದರು.

ಆಪಲ್ ನಿಯಮ ಉಲ್ಲಂಘನೆ:

ಆಪಲ್ ನಿಯಮ ಉಲ್ಲಂಘನೆ:

ಆಪಲ್ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುವ ತನಕ ಎಲ್ಲಿಯೂ ಆ ಕುರಿತು ಮಾಹಿತಿನ್ನು ಬಿಟ್ಟುಕೊಡಲು ಇಷ್ಟಪಡುವುದಿಲ್ಲ ಇದು ಕಂಪನಿ ನಿಯಮಗಳಲ್ಲಿ ಒಂದಾಗಿದೆ. ಹೀಗೆ ಮಾಹಿತಿಯನ್ನು ಲೀಕ್ ಮಾಡಿದ್ದು, ಆಪಲ್ ನಿಯಮಗಳನ್ನು ಉಲ್ಲಂಘನೆ ಮಾಡಿದಂತೆ.

ಕೆಲಸದಿಂದ ವಜಾ:

ಕೆಲಸದಿಂದ ವಜಾ:

ಮಗಳು ಮಾಡಿದ ತಪ್ಪಿಗೆ ಐಫೋನ್ X ಇಂಜಿನಿಯರ್ ಅನ್ನು ಕೆಲಸದಿಂದ ವಜಾ ಮಾಡಿದೆ ಎನ್ನಲಾಗಿದೆ. ಮಗಳು ಮಾಡಿದ ಕೆಲಸಕ್ಕೆ ತಂದೆ ಬೆಲೆ ಕಟ್ಟಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ತಕ್ಕ ಶಿಕ್ಷೆಯಾಗಿದೆ.

ಹಿಂದೆಯೂ ನಡೆದಿದೆ:

ಹಿಂದೆಯೂ ನಡೆದಿದೆ:

ಈ ಹಿಂದೆಯೂ ಸಹ ಇಂತಹ ಘಟನೆಗಳು ನಡೆದಿದೆ. ಮೈಕ್ರೋ ಸಾಫ್ಟ್ ತನ್ನ X ಬಾಕ್ಸ್ ಫೋಟೋವನ್ನು ಬಿಡುಗಡೆಗೂ ಮುನ್ನವೇ ಲೀಕ್ ಮಾಡಿದ್ದ ನೌಕರರನ್ನು ಕೆಲಸದಿಂದ ತೆಗೆದು ಹಾಕಿತ್ತು ಎನ್ನಲಾಗಿದೆ.

Best Mobiles in India

English summary
Apple Fires iPhone X Engineer. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X