Home
ಮೊಬೈಲ್

Realme P1 Pro 5G: ಈ ಮೊಬೈಲ್‌ ಮೇಲೆ 20% ಡಿಸ್ಕೌಂಟ್: ಇಂಥ ಬಂಪರ್ ಆಫರ್‌ ಮತ್ತೆ ಸಿಗಲ್ಲ!

ರಿಯಲ್‌ಮಿ (Realme) ಕಂಪನಿಯ ಸ್ಮಾರ್ಟ್‌ಫೋನ್‌ಗಳು (Smartphones) ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ (Budget Smartphones) ಗಳನ್ನು ಮೊಬೈಲ್‌ ಪ್ರಿಯರು ಮುಗಿಬಿದ್ದು ಖರೀದಿ ಮಾಡುತ್ತಾರೆ. ಈ ಬೆಳವಣಿಗೆ ನಡುವೆ ರಿಯಲ್‌ಮಿ ಕಂಪನಿಯು, ಗ್ರಾಹಕರಿಗೆ Realme P1 Pro 5G ಮೊಬೈಲ್‌ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಈ ಮೊಬೈಲ್ ಖರೀದಿಸಿದ್ರೆ, ನಿಮಗೆ ಶೇ.20ರಷ್ಟು ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತಿದೆ. realme.com ಮತ್ತು Flipkartನಲ್ಲಿ Realme P1 Pro 5G ಸ್ಮಾರ್ಟ್‌ಫೋನ್‌ ಅನ್ನು ನೀವು ಖರೀದಿಸಬಹುದು.

ಹೌದು, Realme P1 Pro 5G Smartphone ಇದೀಗ ಆಫರ್ ಬೆಲೆಗೆ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 8GB, 128GB ಮತ್ತು 8GB + 256GB ಇಂಟರ್ ಸ್ಟೋರೇಜ್‌ ಸೌಲಭ್ಯ ಹೊಂದಿದೆ. 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹಾಗೂ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ಬೆಲೆ ಎಷ್ಟು? ಪ್ರಮುಖ ಫೀಚರ್ಸ್‌ಗಳು ಏನು? ಎಂಬ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ.

Realme P1 Pro 5G: ಈ ಮೊಬೈಲ್‌ ಮೇಲೆ 20% ಭರ್ಜರಿ ಡಿಸ್ಕೌಂಟ್

Realme P1, Realme P1 Pro ಬಿಡುಗಡೆ

Realme ಕಂಪನಿಯು, ದೇಶದ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ. ಕಳೆದ, ಏಪ್ರಿಲ್ 15ರಂದು ಭಾರತೀಯ ಮಾರುಕಟ್ಟೆಗೆ Realme P1 ಮತ್ತು Realme P1 Pro ಎಂಬ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು. ಇವು ಮೊಬೈಲ್‌ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಕೇವಲ 20,000 ರೂ.ಗಿಂತ ಕಡಿಮೆಯಿರುವ ವಿಭಾಗದಲ್ಲಿ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಈ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿತ್ತು. ಇದೀಗ, ಫ್ಲಿಪ್‌ಕಾರ್ಟ್‌ನಲ್ಲಿ Realme P1 Pro ಖರೀದಿಯ ಮೇಲೆ ಶೇ.20ರಷ್ಟು ಡಿಸ್ಕೌಂಟ್‌ ನೀಡಲಾಗುತ್ತಿದೆ.

Realme P1 Proನಲ್ಲಿವೆ ಅದ್ಭುತ ಫೀಚರ್ಸ್‌ಗಳು

Realme P1 Pro ಸ್ಮಾರ್ಟ್‌ಫೋನ್ ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ (17.02 cm) FHD+ OLED ಕರ್ವ್ ಡಿಸ್ಪ್ಲೇ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರ್ಯಾಗನ್‌ 6 Gen 1 5G Processor ಮತ್ತು 120Hz ರಿಫ್ರೆಶ್ ರೇಟ್‌ ಹೊಂದಿದೆ. ಇದು ಆಂಡ್ರಾಯ್ಡ್ 14OSನಲ್ಲಿ ಕಾರ್ಯನಿರ್ವಹಿಸಲಿದೆ. Realme P1 Proನಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಇದ್ದು, ಇದು Sony LYT-600 ಸೆನ್ಸಾರ್‌ನೊಂದಿಗೆ ಲಭ್ಯವಿದೆ.

ಈ ಸುದ್ದಿ ಓದಿದ್ದೀರಾ?: Google Pay: ನಾಳೆಯಿಂದ ಗೂಗಲ್ ಪೇ ಸ್ಥಗಿತ: ಭಾರತದ ಗ್ರಾಹಕರ ಕತೆ ಏನು?

16MP ಸೆಲ್ಫಿ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾ

ಇದಲ್ಲದೆ Realme P1 Pro ಸ್ಮಾರ್ಟ್‌ಫೋನ್‌ನಲ್ಲಿ 16MP ಸೆಲ್ಫಿ ಕ್ಯಾಮೆರಾ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಇದು 45W SUPERVOOC ಚಾರ್ಜಿಂಗ್‌ನೊಂದಿಗೆ, 5000 mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್ 50 ಮೆಗಾಪಿಕ್ಸೆಲ್ OIS ಸಕ್ರಿಯಗೊಳಿಸಿದ ಪ್ರಾಥಮಿಕ ಸೆನ್ಸರ್‌ ಜೊತೆಗೆ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಮತ್ತು ತೃತೀಯ ಸೆನ್ಸರ್‌ ಅನ್ನು ಈ ಫೋನ್‌ ಹೊಂದಿದೆ.

Realme P1 Proನ ಬೆಲೆ ಮತ್ತು ಡಿಸ್ಕೌಂಟ್‌

Realme P1 Pro 5G ಸ್ಮಾರ್ಟ್‌ಫೋನ್‌ನ 8GB+128GB ಮತ್ತು 8GB + 256GB ರೂಪಾಂತರಗಳನ್ನು 5 ಸಾವಿರ ರೂ.ಗಳ ನೇರ ಡಿಸ್ಕೌಂಟ್‌ನಲ್ಲಿ ಕೊಂಡುಕೊಳ್ಳಬಹುದು. ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಬ್ಯಾಂಕ್‌ ಆಫರ್‌ ಲಭ್ಯವಿದೆ. ಹೀಗಾಗಿ, ನೀವು ಅತ್ಯಂತ ಕಡಿಮೆ ಬೆಲೆಗೆ ಈ ಮೊಬೈಲ್‌ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಮಾಸಿಕ 739 ರೂ.ಗಳ EMI ಮೂಲಕವೂ ಕೊಂಡುಕೊಳ್ಳಬಹುದು. ಈ ಮೊಬೈಲ್‌ ಅನ್ನು realme.com ಮತ್ತು Flipkartನಲ್ಲಿ ಸೇಲ್ ಮಾಡಲಾಗುತ್ತಿದೆ.

Best Mobiles in India

English summary
Realme P1 Pro 5G has been well received by consumers. This phone has been introduced with the best features in the segment just below Rs 20,000. Now 20% discount is available on the purchase of Realme P1 Pro 5G Mobile on Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+