ಹೊಸ ಗೇಮಿಂಗ್ ಫೋನ್ ಲಿಸ್ಟ್ ಇಲ್ಲಿದೆ!..ಬಜೆಟ್ ಬೆಲೆಗೆ ಖರೀದಿಸಬಹುದು!
ಮಾರುಕಟ್ಟೆಯಲ್ಲಿ ಗೇಮಿಂಗ್ ಫೋನ್‌ಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಫೋರ್ಟ್‌ನೈಟ್, ಪವ್‌ಜಿ ಮೊಬೈಲ್, ಕಾಲ್ ಆಫ್ ಡ್ಯೂಟಿ ಮೊಬೈಲ್ಸ್, ಫೋರ್ಟ್‌ನೈಟ್ ಮತ್ತು ಆಸ್ಫಾಲ್ಟ್ 9 ಇಂತಹ ಹೈ ಎಂಡ್ ಮೊಬೈಲ್ ಗೇಮ್‌ಗಳು ಹೆಚ್ಚು ಜನಪ್ರಿಯವಾಗಿವೆ. ಅಂದಹಾಗೆ ಈ ರೀತಿಯ ಗೇಮ್ ಆಡಲು ಪವರ್‌ಫುಲ್ ಪ್ರೊಸೆಸರ್ ಬಲ ಪಡೆದಿರುವ ಫೋನ್‌ಗಳು ಇದ್ರೆ, ಸೂಪರ್.
ಹೌದು, ಮೊಬೈಲ್‌ನಲ್ಲಿ ಅಧಿಕ ಡೇಟಾ ಬೇಡುವ ಗೇಮ್ ಆಡಲು ಅತ್ಯುತ್ತಮ ಫೋನ್‌ಗಳು ಪೂರಕವಾಗಿದೆ. ಗೇಮಿಂಗ್‌ಗಾಗಿಯೇ ಕೆಲವು ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಅವುಗಳ ಬೆಲೆ ದುಬಾರಿ. ಆದರೆ ಬಹುತೇಕ ಗೇಮ್ ಪ್ರಿಯ ಗ್ರಾಹಕರು ಬಜೆಟ್ ದರದಲ್ಲಿ ಲಭ್ಯವಾಗುವ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಗಮನ ನೀಡುತ್ತಾರೆ. ಹಾಗಾದರೆ ಸುಮಾರು 20,000ರೂ. ಒಳಗೆ ಲಭ್ಯವಾಗುವ ಗೇಮಿಂಗ್ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ G73 5G : ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ 6.5 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G : ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಇದು 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಪೊಕೊ X4 ಪ್ರೊ 5G : ಪೊಕೊ X4 ಪ್ರೊ 5G ಸ್ಮಾರ್ಟ್‌ಫೋನ್ ಗೇಮಿಂಗ್‌ಗೆ ಪೂರಕವ ಎನಿಸಿದ ಫೋನ್ ಆಗಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಹಾಗೆಯೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಅಲ್ಲದೇ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಐಕ್ಯೂ Z7: ಐಕ್ಯೂ Z7 ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಇದು 6.28 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 90hz ಸ್ಕ್ರೀನ್ ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ.
ರೆಡ್ಮಿ ನೋಟ್ 11 ಪ್ರೊ 5G : ಈ ಫೋನ್ 6.67 ಇಂಚಿನ 1080p ಪ್ಯಾನೆಲ್ ಅನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೆಯೇ ಈ ಫೋನ್ 5G ವೇರಿಯಂಟ್ ಆಯ್ಕೆಯಲ್ಲಿ ಇದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್ ಪಡೆದಿದೆ. ಬಜೆಟ್ ದರದಲ್ಲಿ ಗೇಮಿಂಗ್‌ಗೆ ಇದು ಸಹ ಪೂರಕ ಫೋನ್ ಎನ್ನಬಹುದು.


Click it and Unblock the Notifications








