ಸ್ಟಿರಿಯೊ ಸ್ಪೀಕರ್ ಸೌಲಭ್ಯ ಪಡೆದ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ ನೋಡಿ!
ಪ್ರಸ್ತುತ ಮೊಬೈಲ್ ಮಾರುಕಟ್ಟೆಗೆ ಹಲವು ಸ್ಮಾರ್ಟ್‌ಫೊನ್‌ಗಳು ಲಗ್ಗೆ ಇಡುತ್ತಿವೆ. ಅವುಗಳ ಪೈಕಿ ಬಹುತೇಕ ಮೊಬೈಲ್‌ಗಳು ಇಂದಿನ ಅಗತ್ಯ ಫೀಚರ್ಸ್‌ಗಳನ್ನು ಪಡೆದಿರುತ್ತವೆ. ಬಿಗ್ ಬ್ಯಾಟರಿ, ಬೆಸ್ಟ್ ಕ್ಯಾಮೆರಾ, ವೇಗದ ಪ್ರೊಸೆಸರ್ ಜೊತಗೆ ಅತ್ಯುತ್ತಮ ಆಡಿಯೋ ಸೌಲಭ್ಯ ಸಹ ಪಡೆದಿರುತ್ತವೆ. ಅದರಲ್ಲಿಯೂ ಇನ್ನು ಕೆಲವು ಫೋನ್‌ಗಳು ಸ್ಟಿರಿಯೊ ಸ್ಪೀಕರ್‌ಗಳ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯುತ್ತವೆ.
ಹೌದು, ಬಹುತೇಕ ಗ್ರಾಹಕರು ಫೋನ್‌ಗಳಲ್ಲಿ ಅತ್ಯುತ್ತಮ ಸ್ಪೀಕರ್ ಸೌಲಭ್ಯ ಬಯಸುತ್ತಾರೆ. ಹೀಗಾಗಿ ಬ್ರ್ಯಾಂಡೆಡ್ ಸಂಸ್ಥೆಗಳು ತಮ್ಮ ಕೆಲವು ಫೋನ್‌ಗಳಲ್ಲಿ ಸ್ಟಿರಿಯೊ ಸ್ಪೀಕರ್‌ಗಳ ಆಯ್ಕೆ ಲಭ್ಯ ಮಾಡಿರುತ್ತವೆ. ಫೋನ್‌ಗಳಲ್ಲಿ ಸ್ಟಿರಿಯೊ ಸ್ಪೀಕರ್‌ಗಳ ಗ್ರಾಹಕರ ಆಡಿಯೋ ಅನುಭವನ್ನು ಹೆಚ್ಚಿಸುತ್ತವೆ. ಹಾಗಾದರೇ ಈ ಲೇಖನದಲ್ಲಿ ಸ್ಟಿರಿಯೊ ಸ್ಪೀಕರ್‌ಗಳ ಸೌಲಭ್ಯ ಪಡೆದ ಕೆಲವು ಅತ್ಯುತ್ತಮ ಫೋನ್‌ಗಳ ಲಿಸ್ಟ್ ಬಗ್ಗೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ
ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ ಸ್ಟಿರಿಯೊ ಸ್ಪೀಕರ್ ಸೌಲಭ್ಯ ಪಡೆದಿವೆ. ಈ ಸರಣಿಯು ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್ ಹಾಗೂ ಗ್ಯಾಲಕ್ಸಿ S24 ಅಲ್ಟ್ರಾ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಮೂರು ಫೋನ್‌ಗಳು ಅತ್ಯುತ್ತಮ ಆಡಿಯೊ ಮತ್ತು ಕರೆ ಗುಣಮಟ್ಟಕ್ಕಾಗಿ ಸ್ಟಿರಿಯೊ ಸ್ಪೀಕರ್‌ಗಳು ಹಾಗೂ ಮೂರು ಮೈಕ್ರೊಫೋನ್‌ಗಳನ್ನು ಒಳಗೊಂಡಿವೆ.

ಐಫೋನ್ 15 ಸರಣಿ
ಐಫೋನ್ 15 ಸರಣಿಯು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಸರಣಿಯ ಎಲ್ಲ ಫೋನ್‌ಗಳು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳ ಸೌಲಭ್ಯ ಪಡೆದಿವೆ. ಹಾಗೆಯೇ ಇವು 3 ಮೈಕ್ರೊಫೋನ್‌ಗಳನ್ನು ಪಡೆದಿವೆ. ಅಲ್ಲದೇ ಈ ಫೋನ್‌ಗಳು ಡಾಲ್ಬಿ ಅಟ್ಮಾಸ್ ಮತ್ತು ಸ್ಪೇಷಿಯಲ್ ಆಡಿಯೊಗೆ ಸಪೋರ್ಟ್ ಪಡೆದಿವೆ.
ಗೂಗಲ್ ಪಿಕ್ಸಲ್ 8 ಸರಣಿ
ಗೂಗಲ್ ಪಿಕ್ಸಲ್ 8 ಸರಣಿಯು ಗೂಗಲ್ ಪಿಕ್ಸಲ್ 8 ಹಾಗೂ ಗೂಗಲ್ ಪಿಕ್ಸಲ್ 8 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡು ಫೋನ್‌ಗಳು ಸಹ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳ ಸೌಲಭ್ಯ ಪಡೆದಿದ್ದು, ಒಂದು ಮೇಲ್ಭಾಗದ ಮಧ್ಯದಲ್ಲಿ ಮತ್ತು ಇನ್ನೊಂದು ಫೋನಿನ ಕೆಳಗಿನ ಬಲ ಮೂಲೆಯಲ್ಲಿ ಕಾಣಬಹುದು. ಇನ್ನು ಈ ಎರಡು ಫೋನ್‌ಗಳು ಟೆನ್ಸರ್ G3 ಚಿಪ್‌ಸೆಟ್ ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿವೆ.
ಶಿಯೋಮಿ 14 ಸರಣಿ
ಶಿಯೋಮಿ 14 ಮೊಬೈಲ್ ಸರನಿಯು ಎರಡು ಮಾಡೆಲ್‌ಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಶಿಯೋಮಿ 14 ಹಾಗೂ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್ ಆಗಿವೆ. ಈ ಎರಡು ಫೋನ್‌ಗಳು ಡಾಲ್ಬಿ ಅಟ್ಮೋಸ್ ಸಪೋರ್ಟ್ ಜೊತೆಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆದುಕೊಂಡಿವೆ. ಅಲ್ಲದೇ ಈ ಎರಡು ಫೋನ್‌ಗಳು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟೆಡ್ ಆಗಿವೆ.
ಇನ್ನು ಶಿಯೋಮಿ 14 ಫೋನ್ 6.36 ಇಂಚಿನ LTPO ಅಮೊಲೆಡ್ ಪ್ಯಾನೆಲ್ ಅನ್ನು ಪಡೆದಿದ್ದು, ಶಿಯೋಮಿ 14 ಪ್ರೊ 6.73 ಇಂಚಿನ 2.5D LTPO ಡಿಸ್ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಎರಡು ಫೋನ್‌ಗಳು ಟ್ರಿಪಲ್ ಕ್ಯಾಮೆರಾಗಳನ್ನು ಪಡೆದಿವೆ.
ರಿಯಲ್ GT ನಿಯೋ 3
ರಿಯಲ್ GT ನಿಯೋ 3 ಫೋನ್ ಸ್ಟಿರಿಯೊ ಸ್ಪೀಕರ್‌ಗಳ ಉತ್ತಮ ದರ್ಜೆಯ ಧ್ವನಿ ಗುಣಮಟ್ಟ ಮತ್ತು ಡಾಲ್ಬಿ ಅಟ್ಮಾಸ್ ಮತ್ತು ಹೈ-ರೆಸ್ ಆಡಿಯೊ ಸಪೋರ್ಟ್ ಪಡೆದಿದೆ. ಹಾಗೆಯೇ 6.7 ಇಂಚಿನ AMOLED ಪ್ಯಾನೆಲ್ ಅನ್ನು ಪಡೆದುಕೊಂಡಿದ್ದು, ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿದೆ.


Click it and Unblock the Notifications








