Home
ಮೊಬೈಲ್

ನೀವೇನಾದರೂ ವಿವೋ ಮೊಬೈಲ್‌ ಖರೀದಿ ಮಾಡುವಿರಾ?..ಹಾಗಿದ್ರೆ ಇಲ್ಲಿ ನೋಡಿ!

ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ವಿವೋ (Vivo) ಸಂಸ್ಥೆಯು ಕೆಲವು ಸ್ಮಾರ್ಟ್‌ಫೋನ್‌ಗಳ ಮೂಲಕ ಗಮನ ಸೆಳೆದಿದೆ. ವಿವೋ ಬಜೆಟ್‌ ಬೆಲೆಯ ಗ್ರಾಹಕರನ್ನು ಆಕರ್ಷಿಸುವುದರ ಜೊತೆಗೆ ಮೀಡ್‌ರೇಂಜ್‌ ವಿಭಾಗದ ಗ್ರಾಹಕರ ಗಮನ ಸೆಳೆದಿದೆ. ಆದ್ರೆ, ಬಜೆಟ್‌ ದರದಲ್ಲಿ ವಿವೋದ ಕೆಲವು ಸ್ಮಾರ್ಟ್‌ಫೋನ್‌ಗಳು ಅಧಿಕ ಡಿಮ್ಯಾಂಡ್‌ ಪಡೆದಿವೆ.

ಹೌದು, ವಿವೋ ಬಜೆಟ್‌ ದರದಿಂದ ದುಬಾರಿ ಬೆಲೆಯ ಮೊಬೈಲ್‌ಗಳನ್ನು ವಿವೋ ಒಳಗೊಂಡಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಮಾರುಕಟ್ಟೆಯಲ್ಲಿ ವಿವೋ ಸಂಸ್ಥೆಯು ರೆಡ್ಮಿ, ರಿಯಲ್‌ಮಿ, ಒಪ್ಪೋ ಕಂಪನಿಗಳ ಫೋನ್‌ಗಳಿಗೆ ಪೈಪೋಟಿ ನೀಡುತ್ತ ಸಾಗಿದೆ. ಆಕರ್ಷಕ ಡಿಸೈನ್‌, ಕ್ಯಾಮೆರಾ ಆಯ್ಕೆ, ಉತ್ತಮ ಪ್ರೊಸೆಸರ್‌, ದೀರ್ಘ ಬ್ಯಾಟರಿ ಗಳಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ.

ನೀವೇನಾದರೂ ವಿವೋ ಮೊಬೈಲ್‌ ಖರೀದಿ ಮಾಡುವಿರಾ?..ಹಾಗಿದ್ರೆ ಇಲ್ಲಿ ನೋಡಿ!

ಬಜೆಟ್‌ ದರದಲ್ಲಿ ವಿವೋ ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಈ ಲೇಖನದಲ್ಲಿ ನೀಡಲಾಗಿರುವ ಕೆಲವು ವಿವೋ ಫೋನ್‌ಗಳ ಮಾಹಿತಿ ನಿಮಗೆ ಉಪಯುಕ್ತ ಆಗಲಿದೆ. ಮುಂದೆ ಓದಿರಿ.

ವಿವೋ T1x ಸ್ಮಾರ್ಟ್‌ಫೋನ್‌

ವಿವೋ T1x ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080 x 2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದ್ದು, ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದ್ದು, ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ನೀವೇನಾದರೂ ವಿವೋ ಮೊಬೈಲ್‌ ಖರೀದಿ ಮಾಡುವಿರಾ?..ಹಾಗಿದ್ರೆ ಇಲ್ಲಿ ನೋಡಿ!

ವಿವೋ Y15C ಸ್ಮಾರ್ಟ್‌ಫೋನ್‌

ವಿವೋ Y15C ಸ್ಮಾರ್ಟ್‌ಫೋನ್‌ 6.51 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹೆಲಿಯೊ P35 ಆಕ್ಟಾ ಕೋರ್ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ವಿವೋ Y21 ಸ್ಮಾರ್ಟ್‌ಫೋನ್‌

ವಿವೋ Y21 ಸ್ಮಾರ್ಟ್‌ಫೋನ್‌ 6.51 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್‌ ಮೀಡಿಯಾ ಟೆಕ್‌ ಹೆಲಿಯೋ P35 (MT 6765) ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.

ನೀವೇನಾದರೂ ವಿವೋ ಮೊಬೈಲ್‌ ಖರೀದಿ ಮಾಡುವಿರಾ?..ಹಾಗಿದ್ರೆ ಇಲ್ಲಿ ನೋಡಿ!

ವಿವೋ Y21G ಸ್ಮಾರ್ಟ್‌ಫೋನ್‌

ವಿವೋ Y21G ಸ್ಮಾರ್ಟ್‌ಫೋನ್‌ 15,000ರೂ. ಒಳಗೆ ಲಭ್ಯವಾಗುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್‌ 6.51 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ G70 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ವಿವೋ U20 ಸ್ಮಾರ್ಟ್‌ಫೋನ್‌

ವಿವೋ U20 ಫೋನ್‌ 6.53 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 675 AIE ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
These are 5 best vivo mobiles at budget price in india 2023, know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+