ಆ್ಯಪಲ್ ಐ.ಒ.ಎಸ್ 10ರ 5 ಉತ್ತಮ ಮತ್ತು ಕೆಟ್ಟ ಫೀಚರ್ರುಗಳು.

Written By:

ಈ ವರ್ಷದ ಡಬ್ಲು.ಡಬ್ಲು.ಡಿ.ಸಿ ಸಮಾವೇಶದಲ್ಲಿ ಆ್ಯಪಲ್ ಐ.ಒ.ಎಸ್ 10ನ್ನು ಪರಿಚಯಿಸಿತು, ಕಂಪನಿಯ ಇತಿಹಾಸದಲ್ಲೇ ಇದು ದೊಡ್ಡ ಅಪ್ ಡೇಟ್ ಎಂದು ಹೇಳಲಾಯಿತು. ಪ್ರತಿ ವರುಷದಂತೆ, ಈ ವರ್ಷವೂ ಆ್ಯಪಲ್ ತನ್ನ ಹೊಸ ಒ.ಎಸ್ ಅನ್ನು ಸೆಪ್ಟೆಂಬರ್ 13ರಂದು ಬಿಡುಗಡೆಗೊಳಿಸಿತು, ತನ್ನ ಹೊಸ ಐಫೋನುಗಳಾದ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಬಿಡುಗಡೆಯಾಗಿ ವಾರದ ನಂತರ.

ಆ್ಯಪಲ್ ಐ.ಒ.ಎಸ್ 10ರ 5 ಉತ್ತಮ ಮತ್ತು ಕೆಟ್ಟ ಫೀಚರ್ರುಗಳು.

ಓದಿರಿ: ಜಿಯೋ ಸಿಮ್ ಬಳಕೆಯ ನಂತರ ನಿಮ್ಮ ಫೋನ್ ಲಾಕ್ ಆಗುತ್ತದೆಯೇ? ಇದೆಷ್ಟು ಸತ್ಯ?

ಹೊಸ ಐಫೋನುಗಳಲ್ಲಿ ಐ.ಒ.ಎಸ್ 10 ಇದ್ದರೆ, ಉಳಿದ ಐಫೋನ್/ಐಪ್ಯಾಡ್ ಬಳಕೆದಾರರು ಐಟ್ಯೂನ್ಸ್ ಮುಖಾಂತರ ಅಥವಾ ಓವರ್ ದಿ ಏರ್ ಮೂಲಕ ಸಾಫ್ಟ್ ವೇರ್ ಅಪ್ ಡೇಟ್ ಮಾಡಿಕೊಳ್ಳಬೇಕು. ಅದನ್ನು ಮಾಡುವ ಮೊದಲು ಐ.ಒ.ಎಸ್ 10 ಉತ್ತಮ ಮತ್ತು ಕೆಟ್ಟ ಫೀಚರ್ರುಗಳೆಡೆಗೆ ಒಮ್ಮೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಡ್ಜೆಟ್ಸ್, ಪರಿಷ್ಕರಿಸಿದ ನೋಟಿಫಿಕೇಷನ್ ಸೆಂಟರ್ ಮತ್ತು ಕಂಟ್ರೋಲ್ ಸೆಂಟರ್.

ವಿಡ್ಜೆಟ್ಸ್, ಪರಿಷ್ಕರಿಸಿದ ನೋಟಿಫಿಕೇಷನ್ ಸೆಂಟರ್ ಮತ್ತು ಕಂಟ್ರೋಲ್ ಸೆಂಟರ್.

ಐ.ಒ.ಎಸ್ 10ರಲ್ಲಿ ನೀವು ಮೊದಲು ಗುರುತಿಸುವುದು ಹೊಸ ನೋಟಿಫಿಕೇಷನ್ ಸೆಂಟರ್ ಮತ್ತು ಪರಿಷ್ಕರಿಸಿದ ಕಂಟ್ರೋಲ್ ಸೆಂಟರ್. ಐ.ಒ.ಎಸ್ 10 ಅನ್ನು ನಿಮ್ಮ ಫೋನಿನಲ್ಲಿ ಇನ್ಸ್ಟಾಲ್ ಮಾಡಿಕೊಂಡ ಮೇಲೆ ನೋಟಿಫಿಕೇಷನ್ಸ್ ಅನ್ನು ನೋಡಲು ಅನ್ ಲಾಕ್ ಮಾಡಬೇಡಿಲ್ಲ, ನೇರವಾಗಿ ಇಮೇಜುಗಳನ್ನು ನೋಡಬಹುದು, ಸಂದೇಶಗಳನ್ನು ಓದಬಹುದು ಮತ್ತು ಲಾಕ್ ಸ್ಕ್ರೀನಿನಲ್ಲೇ ಮರುತ್ತರ ಕೂಡ ಕೊಡಬಹುದು.

ಬಲಗಡೆಗೆ ಸ್ವೈಪ್ ಮಾಡಿದಾಗ, ವಿಡ್ಜೆಟ್ ಇಂಟರ್ ಫೇಸ್ ತೆರೆದುಕೊಳ್ಳುತ್ತದೆ, ಇಲ್ಲಿ ಹವಾಮಾನ, ವಾರ್ತೆ, ಸಂಗೀತ, ಫೋಟೋ, ರೆಮೈಂಡರ್ಸ್ ಮತ್ತು ಇನ್ನೂ ಹಲವು ತಂತ್ರಾಂಶಗಳನ್ನು ಇರಿಸಬಹುದು.

ಕಂಟ್ರೋಲ್ ಸೆಂಟರಿನಲ್ಲೂ ಮಹತ್ತರ ಬದಲಾವಣೆಗಳಾಗಿವೆ. ಪ್ರಮುಖ ಶಾರ್ಟ್ ಕಟ್ಟುಗಳಿರುವ ಒಂದೇ ಫಲಕದ ಬದಲು, ಆ್ಯಪಲ್ ಈಗ ಎರಡು ಫಲಕಗಳನ್ನು ನೀಡುತ್ತಿದೆ, ಎರಡನೇ ಪಟ್ಟಿಯಲ್ಲಿ ಸಂಗೀತ ಮತ್ತು ವಾಲ್ಯೂಮ್ ಅನ್ನು ನಿಯಂತ್ರಿಸಬಹುದು.

ಐಮೆಸೇಜ್ ಆ್ಯಪ್ ಚೆನ್ನಾಗಿದೆ.

ಐಮೆಸೇಜ್ ಆ್ಯಪ್ ಚೆನ್ನಾಗಿದೆ.

ಐ.ಒ.ಎಸ್ 10 ರಲ್ಲಿ ಆ್ಯಪಲ್ ಐಮೆಸೇಜ್ ಆ್ಯಪ್ ಅನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದಿದೆ. ಫೇಸ್ ಬುಕ್ ಮೆಸೆಂಜರ್ ಅಥವಾ ಸ್ನಾಪ್ ಚಾಟ್ ನಿಂದ ಆ್ಯಪಲ್ ವಿನ್ಯಾಸದ ಸಲಹೆಗಳನ್ನು ಪಡೆದುಕೊಂಡಿದೆ ಎನ್ನಬಹುದು. ಆ್ಯಪ್ ಮುಂಚಿಗಿಂತಲೂ ಖುಷಿ ಕೊಡುತ್ತದೆ. ಸ್ಪೆಷಲ್ ಎಫೆಕ್ಟ್ಸ ಇರುವ ಚಿತ್ರಗಳನ್ನು, ಅನಿಮೇಟೆಡ್ ಹಿನ್ನೆಲೆ, ಇನ್ ವಿಸಿಬಲ್ ಇಂಕ್, ಬಬಲ್ ಎಫೆಕ್ಟ್, ಫೈರ್ ವರ್ಕ್ ಎಫೆಕ್ಟ್ ಇರುವ ಚಿತ್ರಗಳನ್ನು ಕಳುಹಿಸಬಹುದು.

ಮತ್ತೇನು? ಆ್ಯಪಲ್ ಕೊನೆಗೂ ಐ ಮೆಸೇಜ್ ಅನ್ನು ಡೆವಲಪರ್ಸ್ ಗಳಿಗೆ ಓಪನ್ ಮಾಡಿದ್ದಾರೆ, ಹೆಚ್ಚಿನ ಬದಲಾವಣೆಗಳ ಆಯ್ಕೆ ಈಗ ಲಭ್ಯವಿರುತ್ತದೆ.

ಉತ್ತಮಗೊಂಡ ಫೋಟೋಸ್ ಆ್ಯಪ್, ಮೆಮೊರೀಸ್.

ಉತ್ತಮಗೊಂಡ ಫೋಟೋಸ್ ಆ್ಯಪ್, ಮೆಮೊರೀಸ್.

ಆ್ಯಪಲ್ ಗೆ ನಿಮ್ಮ ಎಲ್ಲಾ ಫೋಟೋಗಳ ಬಗ್ಗೆ ಮಾಹಿತಿ ಇರುವುದರಿಂದ, ದಿನಾಂಕ ಮತ್ತು ಸ್ಥಳವನ್ನಾಧರಿಸಿ ವೀಡಿಯೋ ಸೃಷ್ಟಿಸುತ್ತದೆ! ಕುಪರ್ಟಿನೋದ ಟೆಕ್ ದೈತ್ಯ ಇದನ್ನು ಮೆಮೊರೀಸ್ ಎಂದು ಹೆಸರಿಸಿದೆ ಮತ್ತಿದಕ್ಕಾಗಿಯೇ ಒಂದು ಹೊಸ ಟ್ಯಾಬ್ ಕೂಡ ಇದೆ.

ಹೊಸ ಫೋಟೋ ಆ್ಯಪ್ ನಲ್ಲಿ ವಿಶೇಷ ಮಾಹಿತಿಗಳಿರುವ ಚಿತ್ರಗಳನ್ನು ಹುಡುಕಲು ಅನುವು ಮಾಡಿಕೊಡುತ್ತದೆ.

ಬುದ್ಧಿವಂತ ಸಿರಿ.

ಬುದ್ಧಿವಂತ ಸಿರಿ.

ಸಿರಿಯ ಸಾಮರ್ಥ್ಯವೀಗ ಹೆಚ್ಚಾಗಿದೆ, ಥರ್ಡ್ ಪಾರ್ಟಿ ಡೆವಲಪರ್ ಗಳಿಗೆ ಕೃತಜ್ಞತೆ ಸಲ್ಲಿಸಬೇಕು. ಸಿರಿಗೆ ನೀವು ವಾಟ್ಸಪ್ ಮೆಸೇಜುಗಳನ್ನು ಕಳುಹಿಸಲು ಅಥವಾ ಉಬರ್ ಬುಕ್ ಮಾಡಲು ಹೇಳಬಹುದು.

ಸ್ಟಾಕ್ ಆ್ಯಪ್ ಗಳನ್ನು ಡಿಲೀಟ್ ಮಾಡಬಹುದು.

ಸ್ಟಾಕ್ ಆ್ಯಪ್ ಗಳನ್ನು ಡಿಲೀಟ್ ಮಾಡಬಹುದು.

ನಾವು ಉಪಯೋಗಿಸದ ಸ್ಟಾಕ್ ಆ್ಯಪ್ ಗಳನ್ನು ಡಿಲೀಟ್ ಮಾಡುವುದಕ್ಕೆ ನಾವೆಲ್ಲರೂ ಕಾಯುತ್ತಿದ್ದೆವು. ಐ.ಒ.ಎಸ್ 10 ಅದನ್ನು ಸಾಧ್ಯವಾಗಿಸಿದೆ.

ಸ್ಲೈಡ್ ಮಾಡಿ ಅನ್ ಲಾಕ್ ಮಾಡುವುದು ಈಗ ಇಲ್ಲ.

ಸ್ಲೈಡ್ ಮಾಡಿ ಅನ್ ಲಾಕ್ ಮಾಡುವುದು ಈಗ ಇಲ್ಲ.

ಐ.ಒ.ಎಸ್ 10ರಲ್ಲಿ ಆ್ಯಪಲ್ ಸ್ಲೈಡ್ ಮಾಡಿ ಅನ್ ಲಾಕ್ ಮಾಡುವ ಫೀಚರನ್ನು ತೆಗೆದುಹಾಕಿಬಿಟ್ಟಿದೆ. ಬದಲಿಗೆ, ನೀವು ಹೋಮ್ ಬಟನ್ ಅನ್ನು ಒತ್ತಿಯೇ ನಿಮ್ಮ ಫೋನನ್ನು ಅನ್ ಲಾಕ್ ಮಾಡಬೇಕು ಅಥವಾ ತೆರೆಯಬೇಕು. ಎಲ್ಲರಿಗೂ ಇದು ಇಷ್ಟವಾಗಲಿಕ್ಕಿಲ್ಲ.

ಸಂಗೀತದ ಆ್ಯಪ್ ಕೆಟ್ಟದಾಗಿದೆ.

ಸಂಗೀತದ ಆ್ಯಪ್ ಕೆಟ್ಟದಾಗಿದೆ.

ಸಂಗೀತದ ತಂತ್ರಾಂಶದ ಸೌಂದರ್ಯ ಗಮನಾರ್ಹವಾಗಿ ಬದಲಾಗಿದೆ, ಕೆಟ್ಟದಾಗಿ ಬದಲಾಗಿದೆ. ಐಕಾನುಗಳು ಕೆಟ್ಟದಾಗಿ ಕಾಣುತ್ತವೆ ಮತ್ತು ದೊಡ್ಡ ಫಾಂಟ್ ಗಾತ್ರ ಮತ್ತಷ್ಟು ಅಸಹ್ಯವಾಗಿ ಕಾಣುತ್ತದೆ.

ಬ್ಯಾಟರಿ ಸಮಸ್ಯೆ.

ಬ್ಯಾಟರಿ ಸಮಸ್ಯೆ.

ಐ.ಒ.ಎಸ್ 10 ಆ್ಯಪಲ್ ಹೊರತಂದ ಬಹುದೊಡ್ಡ ಅಪ್ ಡೇಟ್. ಇದರಿಂದಾಗಿ ಫೋನಿನ ಕಾರ್ಯದಕ್ಷತೆ ಸ್ವಲ್ಪ ನಿಧಾನವಾಗಿದೆ ಮತ್ತು ಬ್ಯಾಟರಿ ಬಹುಬೇಗ ಖಾಲಿಯಾಗುವ ಸಾಧ್ಯತೆ ಇದೆ. ಐ.ಒ.ಎಸ್ 10.1 ಅಪ್ ಡೇಟ್ ಕೊಟ್ಟಾಗ ಈ ಸಮಸ್ಯೆ ಸರಿ ಹೋಗಬಹುದು.

ರೈಸ್ ಟು ವೇಕ್ ಫೀಚರಿನಲ್ಲಿರುವ ತೊಂದರೆ.

ರೈಸ್ ಟು ವೇಕ್ ಫೀಚರಿನಲ್ಲಿರುವ ತೊಂದರೆ.

ಆ್ಯಪಲ್ ತನ್ನ ಹೊಸ ಫೋನಿನಲ್ಲಿ ರೈಸ್ ಟು ವೇಕ್ ಫೀಚರ್ ಸೇರಿಸಿದೆ. ಫೋನನ್ನು ನೀವು ಎತ್ತಿಕೊಂಡರೆ ಫೋನ್ ಆನ್ ಆಗುತ್ತದೆ. ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹಲವರು ದೂರಿದ್ದಾರೆ.

ಬ್ರಿಕ್ಕಿಂಗ್ ಸಮಸ್ಯೆ.

ಬ್ರಿಕ್ಕಿಂಗ್ ಸಮಸ್ಯೆ.

ಆ್ಯಪಲ್ ಕೆಲವು ದಿನಗಳ ಹಿಂದೆ ಐ.ಒ.ಎಸ್ 10ಅನ್ನು ಬಿಡುಗಡೆಗೊಳಿಸಿದೆ. ಬಹಳಷ್ಟು ಜನರು ಅಪ್ ಡೇಟ್ ಮಾಡಿದ ನಂತರ ತಮ್ಮ ಫೋನ್ ಬ್ರಿಕ್ ಆಗುವುದರ ಬಗ್ಗೆ (ಕೆಲಸ ಮಾಡದ ಸ್ಥಿತಿ) ದೂರಿದ್ದಾರೆ. ಅಪ್ ಡೇಟ್ ಮಾಡುವ ಮೊದಲು ಬ್ಯಾಕ್ ಅಪ್ ಮಾಡಿಕೊಳ್ಳುವುದನ್ನು ಮರೆಯಬೇಡಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
iOS 10 is one of the biggest updates we have ever released, says Apple. Let's find out five best and worst features iOS 10 brings along with it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot