ಜಿಯೋ ಸಿಮ್ ಬಳಕೆಯ ನಂತರ ನಿಮ್ಮ ಫೋನ್ ಲಾಕ್ ಆಗುತ್ತದೆಯೇ? ಇದೆಷ್ಟು ಸತ್ಯ?

By Shwetha
|

ಪ್ರಸ್ತುತ ಜಿಯೋ ಈಗ ಎಲ್ಲೆಡೆ ಸುದ್ದಿ ಮಾಡುತ್ತಿರುವ ಟೆಲಿಕಾಮ್ ಸೇವೆಯಾಗಿದೆ. ತನ್ನ ಅನೂಹ್ಯ ಸೇವೆಗಳ ಮೂಲಕ ಜಿಯೋ ಈಗ ಬಳಕೆದಾರರ ಮೆಚ್ಚಿನದ್ದಾಗಿದೆ. ಗೆಲುವಿದ್ದಲ್ಲಿ ಸೋಲು ಎಂಬ ಮಾತಿನಂತೆ ಸಿಮ್ ಬಳಕೆ ಮಾಡಿದ ನಂತರ ಡಿವೈಸ್ ಲಾಕ್ ಆಗುತ್ತದೆ ಎಂಬ ವದಂತಿ ಹರಡಿದೆ. ನಂತರ ನಿಮ್ಮ ಅದೇ ಡಿವೈಸ್‌ನಲ್ಲಿ ಇನ್ನೊಂದು ಸಿಮ್ ಅನ್ನು ಬಳಸಲಾಗುವುದಿಲ್ಲ ಎಂಬ ಮಾಹಿತಿ ಕೂಡ ಇದೆ.

ಓದಿರಿ: ಜಿಯೋ ಸಿಮ್ ಓವರ್ ಹೀಟಿಂಗ್ ಸಮಸ್ಯೆ ಪರಿಹಾರ ಹೇಗೆ?

ಈ ಹಿಂದೆ ಜಿಯೋ ಪ್ರಿವ್ಯೂ ಆಫರ್ ಬಳಕೆದಾರರಿಗೆ ಲಭ್ಯವಾದಾಗ ಸಿಮ್ ಕೇವಲ ತನ್ನ ಎಲ್‌ವೈಎಫ್ ಡಿವೈಸ್‌ನಲ್ಲಿ 90 ದಿನಗಳ ಕಾಲ ಉಚಿತ ಡೇಟಾ, ಕರೆ ಮತ್ತು ಎಸ್‌ಎಮ್‌ಎಸ್ ಅನ್ನು ಪಡೆದುಕೊಳ್ಳುವ ಆಫರ್ ಅನ್ನು ನೀಡಿತ್ತು. ಈಗ ಫೋನ್‌ನ IMEI ಸಂಯೋಜನೆಯ ಮೂಲಕ ಜಿಯೋ ಸಿಮ್ ಅನ್ನು ಯಾವುದೇ ಡಿವೈಸ್‌ನಲ್ಲಿ ಬಳಸಿಕೊಳ್ಳಬಹುದು ಎಂಬುದಾಗಿ ಬಳಕೆದಾರರಿಗೆ ಮನವರಿಕೆ ಮಾಡಿಕೊಟ್ಟಿತ್ತು. ಇಂದಿಲ್ಲಿ, ಜಿಯೋ ನಿಮ್ಮ ಫೋನ್ ಅನ್ನು ಲಾಕ್ ಮಾಡುತ್ತದೆಯೋ ಅಥವಾ ಸಿಮ್ ಅನ್ನೇ ಎಂಬುದರ ಸತ್ಯಾಸತ್ಯತೆಯನ್ನು ಅರಿತುಕೊಳ್ಳೋಣ.

ಜಿಯೋ ಸಿಮ್ ಇತರ ಸಿಮ್‌ಗಳಂತಲ್ಲ

ಜಿಯೋ ಸಿಮ್ ಇತರ ಸಿಮ್‌ಗಳಂತಲ್ಲ

ಹೆಚ್ಚಿನ ವದಂತಿಗಳು ಬಳಕೆದಾರರಿಗೆ ತಲೆನೋವನ್ನು ತಂದಿದ್ದಂತೂ ನಿಜ. ಆದರೆ ಇದು ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ಇತರ ನೆಟ್‌ವರ್ಕ್ ಪ್ರೊವೈಡರ್‌ಗಳ ಸಿಮ್‌ನಂತೆ ಜಿಯೋ ನಿಮ್ಮ ಫೋನ್ ಅನ್ನು ಲಾಕ್ ಮಾಡುವುದಿಲ್ಲ.

ಸಿಮ್ ಯಾವುದೇ ಡಿವೈಸ್ ಅನ್ನು ಲಾಕ್ ಮಾಡುವುದಿಲ್ಲ

ಸಿಮ್ ಯಾವುದೇ ಡಿವೈಸ್ ಅನ್ನು ಲಾಕ್ ಮಾಡುವುದಿಲ್ಲ

ಸಿಮ್ ಅನ್ನು ಇನ್‌ಸರ್ಟ್ ಮಾಡಿದ ಯಾವುದೇ ಡಿವೈಸ್ ಅನ್ನು ಇದು ಲಾಕ್ ಮಾಡುತ್ತದೆ ಎಂಬ ಸುದ್ದಿ ಇತ್ತು. ಇದು ಡ್ಯುಯಲ್ ಸಿಮ್ ಫೋನ್ ಆಗಿದ್ದಲ್ಲಿ, ಇದು ಸಿಮ್ ಕಾರ್ಡ್ ಸ್ಲಾಟ್ ಅನ್ನು ಲಾಕ್ ಮಾಡುತ್ತದೆ ಎಂಬುದಾಗಿ ಹೇಳಲಾಗಿತ್ತು. ಅದಾಗ್ಯೂ, ಸಿಮ್ ಯಾವುದೇ ಡಿವೈಸ್ ಅನ್ನು ಲಾಕ್ ಮಾಡುವುದಿಲ್ಲ ಮತ್ತು ನಿಮ್ಮ ಸೆಟ್‌ನ ನೆಟ್‌ವರ್ಕ್‌ಗೆ ಮಾರಕವಾಗಿರುವುದಿಲ್ಲ.

ಇತರ ಸಿಮ್ ಕಾರ್ಡ್‌ಗಳನ್ನು ಬಳಸಲಾಗುವುದಿಲ್ಲ

ಇತರ ಸಿಮ್ ಕಾರ್ಡ್‌ಗಳನ್ನು ಬಳಸಲಾಗುವುದಿಲ್ಲ

ಜಿಯೋ ಸಿಮ್ ಅನ್ನು ಬಳಸಿದ ನಂತರ ತಮ್ಮ ಫೋನ್‌ನಲ್ಲಿ ಇತರ ಸಿಮ್ ಕಾರ್ಡ್ ಅನ್ನು ಬಳಸಲಾಗುವುದಿಲ್ಲ ಎಂಬುದಾಗಿ ಬಳಕೆದಾರರು ದೂರು ನೀಡುತ್ತಿದ್ದಾರೆ. ಅವರು ಭಾವಿಸಿಕೊಂಡಿರುವುದು ಜಿಯೋ ಸಿಮ್ ಅನ್ನು ಸೇರ್ಪಡೆಮಾಡಿದ ಬಳಿಕ ಈ ತೊಂದರೆ ಉಂಟಾಗುತ್ತಿದೆ ಎಂದಾಗಿದೆ. ಆದರೆ ಇದಕ್ಕೆ ಪರಿಹಾರ ತುಂಬಾ ಸರಳವಾಗಿದೆ.

ಜಿಯೋ ಸಿಮ್ ಎಲ್‌ಟಿಇ ಆಧಾರಿತವಾಗಿದೆ

ಜಿಯೋ ಸಿಮ್ ಎಲ್‌ಟಿಇ ಆಧಾರಿತವಾಗಿದೆ

ರಿಲಾಯನ್ಸ್ ಜಿಯೋ ಸಿಮ್ ಎಲ್‌ಟಿಇ ಆಧಾರಿತವಾಗಿದೆ. 4ಜಿ ಸಿಮ್ ಕಾರ್ಡ್ ಯಾವುದೇ 3ಜಿ ಅಥವಾ 2ಜಿ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಇನ್ನೊಂದು ಸಿಮ್ ಬಳಸಲು ನೆಟ್‌ವರ್ಕ್ ವಿಧವನ್ನು ಬದಲಾಯಿಸಿ

ಇನ್ನೊಂದು ಸಿಮ್ ಬಳಸಲು ನೆಟ್‌ವರ್ಕ್ ವಿಧವನ್ನು ಬದಲಾಯಿಸಿ

2ಜಿ ಅಥವಾ 3ಜಿ ಸಾಮರ್ಥ್ಯವುಳ್ಳ ಬೇರೆ ಸರ್ವೀಸ್ ಪ್ರೊವೈಡರ್‌ನಿಂದ ಇನ್ನೊಂದು ಸಿಮ್ ಅನ್ನು ನೀವು ಬಳಸಲಿದ್ದೀರಿ ಎಂದಾದಲ್ಲಿ, ನಿಮ್ಮ ಫೋನ್‌ನಲ್ಲಿ ನೀವು ನೆಟ್‌ವರ್ಕ್ ವಿಧವನ್ನು ಬದಲಾಯಿಸಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿ. ಸೆಟ್ಟಿಂಗ್ಸ್ > ನೆಟ್‌ವರ್ಕ್ ಮೋಡ್ಸ್ ಮತ್ತು ಇದನ್ನು ಎಲ್‌ಟಿಇ ನಿಂದ ಬೇಕಾದ ಮೋಡ್‌ಗೆ ಬದಲಾಯಿಸಿಕೊಳ್ಳಿ.

Best Mobiles in India

English summary
Here, you will get to know if Jio will lock your phone or not with its SIM card. Take a look at the same to understand how the Jio SIM works from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X