Home
ಮೊಬೈಲ್

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಫೋನಿನ ಐದು ಸಮಸ್ಯೆಗಳು: ಅವುಗಳಿಗಿರುವ ಪರಿಹಾರವೇನು?

By Ashok

ಸ್ಪೋಟಗೊಳ್ಳುವ ಬ್ಯಾಟರಿಯಿಂದಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಅಂತರ್ಜಾಲದಲ್ಲಿ ಸುದ್ದಿ ಮಾಡುತ್ತಿದೆ. ಇಂಡಿಯನ್ ಏರ್ ಲೈನ್ಸ್ ಸೇರಿದಂತೆ ಅನೇಕ ವಿಮಾನಯಾನ ಸಂಸ್ಥೆಗಳು ಗ್ಯಾಲಕ್ಸಿ ನೋಟ್ 7 ಅನ್ನು ವಿಮಾನದಲ್ಲಿ ಹೊತ್ತೊಯ್ಯುವುದಕ್ಕೆ ನಿಷೇಧವೇರಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಫೋನಿನ 5 ಸಮಸ್ಯೆಗಳು: ಪರಿಹಾರವೇನು?

ಓದಿರಿ: 16GB ಸ್ಟೋರೇಜ್‌, ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ನ 'ಜೊಪೊ ಕಲರ್‌ ಎಫ್‌1' 8,890 ರೂಗೆ ಲಾಂಚ್‌

ಫೋನಿನಲ್ಲಿರುವ ತೊಂದರೆ ಇದೊಂದೇ ಅಲ್ಲ. ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಫೋನಿನ ಐದು ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸಿಕೊಳ್ಳುವುದೇಗೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಒಮ್ಮೆ ಕಣ್ಣಾಡಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐರಿಸ್ ಸ್ಕ್ಯಾನರ್.

ಐರಿಸ್ ಸ್ಕ್ಯಾನರ್.

ಸ್ಮಾರ್ಟ್ ಫೋನಿನಲ್ಲಿ ಐರಿಸ್ ಸ್ಕ್ಯಾನರ್ ಇರುವುದೇನೋ ಒಳ್ಳೆಯದೇ, ಆದರೆ ವೇಗದ ಬೆರಳಚ್ಚು ಸಂವೇದಕ ಇರುವಾಗ ಐರಿಸ್ ಸ್ಕ್ಯಾನರ್ ಅವಶ್ಯಕವೇ? ಅದು ನಿಮ್ಮ ನಿರ್ಧಾರ ಬಿಡಿ, ಆದರೆ ಇದು ಹಲವು ಸಲ ಸರಿಯಾಗಿ ಕಾರ್ಯನಿರ್ವಹಿಸದೇ ತೊಂದರೆ ಕೊಟ್ಟಿದೆ.

ಐರಿಸ್ ಸ್ಕ್ಯಾನರ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಹಲವರು ಅಂತರ್ಜಾಲದಲ್ಲಿ ದೂರಿದ್ದಾರೆ.

ಸರಿಪಡಿಸುವುದೇಗೆ?

ನಿಮ್ಮ ಪರದೆಯ ಮೇಲಿನ ಭಾಗವನ್ನು (ಇನ್ಫ್ರಾರೆಡ್ ಐರಿಸ್ ಸ್ಕ್ಯಾನರ್ ಇರುವ ಭಾಗ) ಸ್ವಚ್ಛಗೊಳಿಸಿ ಮತ್ತು ಆ ಭಾಗದಲ್ಲಿ ಯಾವುದೇ ಬೆರಳಚ್ಚು ಇಲ್ಲದಂತೆ ನೋಡಿಕೊಳ್ಳಿ.

ನಿಮ್ಮ ಫೋನನ್ನು ಅನ್ ಲಾಕ್ ಮಾಡುವಾಗ ಫೋನನ್ನು ಮುಖದಿಂದ 10ರಿಂದ 14 ಇಂಚಿನಷ್ಟು ದೂರಕ್ಕೆ ಹಿಡಿದುಕೊಳ್ಳಿ.

ಮೇಲಿನೆಲ್ಲವೂ ವಿಫಲವಾದರೆ, ನಿಮ್ಮ ಐರಿಸ್ ಸ್ಕ್ಯಾನರ್ ಅನ್ನು ಮತ್ತೊಮ್ಮೆ ನೋಂದಾಯಿಸಿ. ಇದನ್ನು ಮಾಡಲು ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ ಮತ್ತು ಸೆಕ್ಯುರಿಟಿ > ಐರಿಸ್ > ರಿಮೂವ್ ಐರಿಸ್ ಆಯ್ಕೆಯನ್ನು ಒತ್ತಿ.

ಸ್ಪೋಟ.

ಸ್ಪೋಟ.

ನೀವು ಯಾವುದೋ ಗುಹೆಯಲ್ಲಿಲ್ಲದೇ ಹೋದರೆ, ಗ್ಯಾಲಕ್ಸಿ ನೋಟ್ 7ನ ಬ್ಯಾಟರಿ ಸ್ಫೋಟಗೊಂಡ ಸುದ್ದಿ ಗೊತ್ತೇ ಇರುತ್ತದೆ.

ಪರಿಹಾರ?

ಸ್ಯಾಮ್ಸಂಗ್ ಹಳತರ ಬದಲಿಗೆ ಹೊಸ ಫೋನುಗಳನ್ನು ಕೊಡುತ್ತಿದೆ!

ಪರದೆಯ ಮೇಲಿನ ಹಸಿರು ಪಟ್ಟಿ.

ಪರದೆಯ ಮೇಲಿನ ಹಸಿರು ಪಟ್ಟಿ.

ಅಂತರ್ಜಾಲದಲ್ಲಿ ಹಲವು ಬಳಕೆದಾರರು ಗ್ಯಾಲಕ್ಸಿ ನೋಟ್ 7ನ ಪರದೆಯು ಅವಾಗವಾಗ ಹಸಿರಾಗಿ ಪರಿವರ್ತನೆಯಾಗುವುದರ ಬಗ್ಗೆ ದೂರಿದ್ದಾರೆ. ಇದು ತೀರ ಅಪರೂಪವೇನಲ್ಲ. ಇದು ಈ ಹಿಂದೆ ಬಿಡುಗಡೆಯಾಗಿದ್ದ ನೋಟ್ 5ನಲ್ಲೂ ಆಗಿತ್ತು, ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾದ ಗ್ಯಾಲಕ್ಸಿ ಎಸ್7ನಲ್ಲೂ ಆಗಿತ್ತು.

ಸರಿಪಡಿಸುವುದು?

ನಿಮ್ಮ ಮೊಬೈಲನ್ನು ಸೇಫ್ ಮೋಡಿನಲ್ಲಿ ಆನ್ ಮಾಡಲು ಪ್ರಯತ್ನಿಸಿ. ಈಗಲೂ ಹಸಿರು ಪಟ್ಟಿ ಇದ್ದರೆ ಬಹುಶಃ ಯಾವುದಾದರೂ ಆ್ಯಪ್ ಅದನ್ನು ಉಂಟುಮಾಡುತ್ತಿರಬಹುದು. ನಿಮ್ಮ ಗ್ಯಾಲಕ್ಸಿ ನೋಟ್ 7ನ ಬ್ಯಾಕ್ ಅಪ್ ಮಾಡಿ, ಫ್ಯಾಕ್ಟರಿ ರೀಸೆಟ್ ಮಾಡಿ. ಯಾವುದೇ ಆ್ಯಪ್ ಅನ್ನು ಇನ್ಸ್ಟಾಲ್ ಅಥವಾ ಅಪ್ ಡೇಟ್ ಮಾಡಬೇಡಿ.

ಈಗಲೂ ಸಮಸ್ಯೆ ಇದ್ದರೆ, ಹಾರ್ಡ್ ವೇರಿಗೆ ಸಂಬಂಧಪಟ್ಟ ಸಮಸ್ಯೆ. ನಿಮ್ಮ ಫೋನನ್ನು ಹತ್ತಿರದ ಸ್ಯಾಮ್ಸಂಗ್ ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಪರದೆಯನ್ನು ಬದಲಾಯಿಸಿಕೊಳ್ಳಿ.

ನೀರಿನಲ್ಲಿ ಮುಳುಗಿದ ಮೇಲೆ ಸ್ಪೀಕರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ನೀರಿನಲ್ಲಿ ಮುಳುಗಿದ ಮೇಲೆ ಸ್ಪೀಕರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಸ್ಪೀಕರ್ ನ ತೂತುಗಳೊಳಗೆ ನೀರು ಹೋದರೆ ಈ ರೀತಿ ಆಗುತ್ತದೆ. ಗ್ಯಾಲಕ್ಸಿ ನೋಟ್ 7 ಐಪಿ68 ಪ್ರಮಾಣಪತ್ರ ಪಡೆದಿದೆ, ಅಂದರೆ ಒಂದು ಹಂತದವರೆಗೆ ಜಲ ಮತ್ತು ಧೂಳು ನಿರೋಧಕ. ಹಾಗಾಗಿ ನಿಮ್ಮ ಫೋನಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.

ಸರಿಪಡಿಸುವುದೇಗೆ?

ನೀರು ಒಣಗುವವರೆಗೆ ಕಾಯಬಹುದು ಅಥವಾ ಅಲುಗಾಡಿಸುವುದರ ಮೂಲಕ ಸ್ಪೀಕರ್ ತೂತಿನಲ್ಲಿರುವ ನೀರನ್ನು ತೆಗೆಯಬಹುದು. ಒಣಗಿದ ನಂತರ ಸ್ಪೀಕರ್ ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತದೆ.

ಗೂಗಲ್ ನೌ ಲಾಂಚರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಗೂಗಲ್ ನೌ ಲಾಂಚರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಬಹಳಷ್ಟು ಜನರಿಗೆ ಸ್ಟಾಕ್ ಆ್ಯಂಡ್ರಾಯ್ಡ್ ಅಚ್ಚುಮೆಚ್ಚು. ಅವರು ಗೂಗಲ್ ನೌ ಲಾಂಚರ್ ಅನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಹಲವು ಬಳಕೆದಾರರು ಗ್ಯಾಲಕ್ಸಿ ನೋಟ್ 7 ಫೋನಿನಲ್ಲಿ ಗೂಗಲ್ ನೌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ಪರಿಹಾರ?

ಈ ಸಮಸ್ಯೆ ಉಂಟಾಗಿರುವುದು ಸ್ಯಾಮ್ಸಂಗಿನ ಕ್ನಾಕ್ಸ್ ಸೆಕ್ಯುರಿಟಿ ಸಾಫ್ಟ್ ವೇರ್ ನಿಂದ. ಇದನ್ನು ಸರಿಪಡಿಸಲು ಮೊದಲು ಗೂಗಲ್ ನೌ ಲಾಂಚರನ್ನು ಅನ್ ಇನ್ಸ್ಟಾಲ್ ಮಾಡಿ, ನಂತರ ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ ಮತ್ತು ಸೆಕ್ಯುರಿಟಿ > ಸೆಕ್ಯೂರ್ ಫೋಲ್ಡರ್ > ಅನ್ ಇನ್ಸ್ಟಾಲ್ > ಬ್ಯಾಕ್ ಅಪ್ & ಅನ್ ಇನ್ಸ್ಟಾಲ್ ಟು ಡಿಸೇಬಲ್ ಕ್ನಾಕ್ಸ್ ಅನ್ನು ಆರಿಸಿ.

ನಂತರ ಗೂಗಲ್ ನೌ ಲಾಂಚರನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಸೆಕ್ಯೂರ್ ಫೋಲ್ಡರನ್ನು ಮತ್ತೆ ರಿಯಾಕ್ಟಿವೇಟ್ ಮಾಡಲು ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ & ಸೆಕ್ಯುರಿಟಿ > ಸೆಕ್ಯೂರ್ ಫೋಲ್ಡರನ್ನು ಆಯ್ದುಕೊಳ್ಳಿ.

Best Mobiles in India

English summary
Samsung Galaxy Note 7 has been making rounds on the internet for all bad reasons, thanks to its exploding batteries. Many airlines including the Indian Airlines have issued a ban on carrying the Galaxy Note 7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+