16GB ಸ್ಟೋರೇಜ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನ 'ಜೊಪೊ ಕಲರ್ ಎಫ್1' 8,890 ರೂಗೆ ಲಾಂಚ್
ಜೊಪೊ ಮೊಬೈಲ್ಸ್, 'ಜೊಪೊ ಕಲರ್ ಎಫ್1 (Zopo Color F1)' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಜೊಪೊ ಕಲರ್ ಎಫ್1' ಸ್ಮಾರ್ಟ್‌ಫೋನ್ ಖರೀದಿ ಬೆಲೆ ರೂ. 8,890 ಆಗಿದ್ದು, 16GB ಸ್ಟೋರೇಜ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅತ್ಯಾಧುನಿಕ ಫೀಚರ್ ಒಳಗೊಂಡಿದೆ.
ಚೀನ ಮೂಲದ ಜೊಪೊ(Zopo) ಮೊಬೈಲ್ ಕಂಪನಿ ಬಿಡುಗಡೆ ಮಾಡುತ್ತಿರುವ 'ಜೊಪೊ ಕಲರ್ ಎಫ್1' ಕಪ್ಪು, ಬಿಳಿ ಮತ್ತು ಚಿನ್ನದ ಬಣ್ಣಗಳ ವೈವಿಧ್ಯತೆಯಲ್ಲಿ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. ಇತರೆ ಚೀನ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿ ವಿಶೇಷತೆ ಏನು ಎನ್ನುವುದಾದರೆ ಸ್ಮಾರ್ಟ್‌ಫೋನ್‌ನಲ್ಲಿನ ಕ್ಯಾಮೆರಾ, ಮ್ಯೂಸಿಕ್, ಗ್ಯಾಲರಿ ಮತ್ತು ಇತರೆ ಫೀಚರ್‌ಗಳನ್ನು ಕೇವಲ ಶಾರ್ಟ್‌ಕಟ್‌ನಲ್ಲಿ ನಿಯಂತ್ರಿಸಬಹುದು. ಸೆಲ್ಫಿಯನ್ನು ಕೇವಲ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಟ್ಯಾಪ್ ಮಾಡುವುದರ ಮೂಲಕ ಕ್ಯಾಪ್ಚರ್ ಮಾಡಬಹುದು.
ದೀಪಾವಳಿ ಹಬ್ಬದ ಸಂಭ್ರದಲ್ಲಿ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಬಯಸುವವರು, ಬಜೆಟ್ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್ ಹುಡುಕಾಟದಲ್ಲಿದ್ದರೆ, ರೂ.8,890 ಬೆಲೆಯ 'ಜೊಪೊ ಕಲರ್ ಎಫ್1' ಸ್ಮಾರ್ಟ್‌ಫೋನ್‌ನ ಇತರೆ ಉತ್ತಮ ಫೀಚರ್‌ಗಳೇನು ಎಂದು ಕೆಳಗಿನ ಸ್ಲೈಡರ್ ಓದಿ ತಿಳಿಯಿರಿ.
3GB RAM, ಪ್ಯಾನಿಕ್ ಬಟನ್‌ನ 'ವೀಡಿಯೊಕಾನ್ ಕ್ಯೂಬ್ 3' 8,490 ರೂಗೆ ಲಾಂಚ್

'ಜೊಪೊ ಕಲರ್ ಎಫ್1' ಫೀಚರ್‌ಗಳು
ಮೈಕ್ರೋ ಮತ್ತು ನ್ಯಾನೋ ಡ್ಯುಯಲ್ ಸಿಮ್ ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್ ಚಾಲಿತವಾಗಿದೆ. ಮೀಡಿಯಾ ಟೆಕ್ MT6580 ಕ್ವಾಡ್‌ಕೋರ್ ಪ್ರೊಸೆಸರ್ ಸಂಯೋಜಿತವಾಗಿದ್ದು, 1GB RAM ಹೊಂದಿದೆ. 'ಜೊಪೊ ಕಲರ್ ಎಫ್1' ಸ್ಮಾರ್ಟ್‌ಫೋನ್ ಸಂಪೂರ್ಣ ಲೋಹದಿಂದ ಕವರ್ ಆಗಿದೆ. 5.5 ಇಂಚಿನ (720*1280) HD IPS ಡಿಸ್‌ಪ್ಲೇ ಹೊಂದಿದೆ.

'ಜೊಪೊ ಕಲರ್ ಎಫ್1' ಫೋಟೋಗ್ರಫಿ ಫೀಚರ್‌ಗಳು
'ಜೊಪೊ ಕಲರ್ ಎಫ್1' ಸ್ಮಾರ್ಟ್‌ಫೋನ್ 8MP LED ಫ್ಲ್ಯಾಶ್ ಗುಣವುಳ್ಳ ಹಿಂಭಾಗ ಕ್ಯಾಮೆರಾ ಮತ್ತು 2MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಕ್ಯಾಮೆರಾ 2MP ಇದ್ದರೂ ಸಹ ಕಡಿಮೆ ಬೆಳಕಿನಲ್ಲೂ ಸುಂದರವಾದ ಫೋಟೋ ಶೂಟ್ ಮಾಡಬಹುದು. ಕಾರಣ ಫ್ಲ್ಯಾಶ್ ಮಾಡ್ಯೂಲ್ ಹೊಂದಿದೆ. ಹಿಂಭಾಗ ಕ್ಯಾಮೆರಾದ ಕೆಳಗೆ ಅಳವಡಿಸಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹಲವು ಚಟುವಟಿಕೆಗಳನ್ನು ಮೊದಲೇ ಹೇಳಿದಂತೆ ನಿರ್ವಹಿಸುತ್ತದೆ.

'ಜೊಪೊ ಕಲರ್ ಎಫ್1' ಸ್ಟೋರೇಜ್ ಫೀಚರ್‌ಗಳು
'ಜೊಪೊ ಕಲರ್ ಎಫ್1' 16GB ಇನ್‌ಬಿಲ್ಟ್ ಸ್ಟೋರೇಜ್ ಸಪೋರ್ಟ್ ಮಾಡುತ್ತದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64GB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಬಹುದು.

'ಜೊಪೊ ಕಲರ್ ಎಫ್1' ಸಂಪರ್ಕ ಫೀಚರ್‌ಗಳು
ಜಿಪಿಆರ್‌ಎಸ್/ಇಡಿಜಿಇ, 3G, ಬ್ಲೂಟೂತ್ ವಿ4.0, FM, ಜಿಪಿಎಸ್, ವೈಫೈ ಸಂಪರ್ಕ ಫೀಚರ್‌ಗಳನ್ನು ಹೊಂದಿದೆ. 'ಜೊಪೊ ಕಲರ್ ಎಫ್1' ಸ್ಮಾರ್ಟ್‌ಫೋನ್ 2300mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಸ್ಮಾರ್ಟ್‌ಫೋನ್ 153*77.8*8mm ಅಳತೆ ಇದೆ. 'ಜೊಪೊ ಕಲರ್ ಎಫ್1' ಸ್ಮಾರ್ಟ್‌ಫೋನ್‌ನ ಅತ್ಯಾಧುನಿಕ ವಿಶೇಷತೆ ಎಂದರೆ ಮಲ್ಟಿ ಖಾತೆಗಳನ್ನು ನಿರ್ವಹಿಸಬಹುದಾದ ಅಪ್ಲಿಕೇಶನ್‌ಗಳು, ಆಪ್ ಲಾಕ್, ಫ್ಲೋಟಿಂಗ್ ವೀಡಿಯೊ ವಿಜೆಟ್ಗಳು ಮತ್ತು ಬಾರ್‌ಕೋಡ್/QR ಕೋಡ್ ಸ್ಕ್ಯಾನರ್ ಫೀಚರ್ ಹೊಂದಿದೆ.

ಹಲವು ಖಾತೆ ನಿರ್ವಹಣೆ ಅಪ್ಲಿಕೇಶನ್
ಉದಾಹರಣೆಗೆ ಸಾಮಾಜಿಕ ತಾಣ ಫೇಸ್‌ಬುಕ್ ಮತ್ತು ವಾಟ್ಸಾಪ್ ಆಪ್‌ಗಳಲ್ಲಿ ಹಲವು ಖಾತೆಗಳನ್ನು ನಿರ್ವಹಿಸಲು ಅಪ್ಲಿಕೇಶನ್‌ಗಳನ್ನು ಹೊಂದಿದೆ.


Click it and Unblock the Notifications








