ಅಬ್ಬಬ್ಬಾ..ದೇಶದಲ್ಲಿ ಮಾರಾಟವಾದ 'ರೆಡ್ಮಿ ನೋಟ್ 7 ಪ್ರೊ' ಫೋನ್‌ಗಳೆಷ್ಟು ಗೊತ್ತಾ?
ಭಾರತೀಯರ ಕಣ್ಮನ ಸೆಳೆಯುತ್ತಿರುವ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನ್ ದೇಶದಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದೆ. ಬಿಡುಗಡೆಯಾದ ಕೇವಲ ಐದು ತಿಂಗಳ ಅವಧಿಯಲ್ಲೇ 5 ಮಿಲಿಯನ್‌ಗೂ (5ದಶಲಕ್ಷ) ಹೆಚ್ಚು 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಾರಾಟವಾದ ಏಕೆ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು, ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಪೋನನ್ನು ಮುಕ್ತ ಮಾರಾಟಕ್ಕೆ ತಂದ ನಂತರ ಶಿಯೋಮಿ ಈ ಅಂಕಿ ಅಂಶಗಳನ್ನು ನೀಡಿದೆ. ಜೊತೆಗೆ ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಪೋನನ್ನು ಖರೀದಿಸಲು ಮೊಬೈಲ್ ಪ್ರಿಯುರು ಈಗ ಫ್ಲಾಶ್‌ಸೇಲ್‌ಗಾಗಿ ಕಾಯಬೇಕಿಲ್ಲ ಎಂಬ ಸಿಹಿಸುದ್ದಿಯನ್ನು ಸಹ ನೀಡಿದೆ. ಅಂದರೆ, ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಂನಲ್ಲಿ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಮುಕ್ತ ಮಾರಾಟಕ್ಕೆ ಬಂದಿದೆ.
ನೀವು ಈ ಸ್ಮಾರ್ಟ್‌ಫೋನನ್ನು ಫ್ಲಿಪ್‌ಕಾರ್ಟ್ ತಾಣದಲ್ಲಿ ಖರೀದಿಸಿದರೆ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಶೇ ಐದು ಪ್ರತಿಶತ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಹಾಗೆಯೇ, ಶಿಯೋಮಿ ಕಂಪನಿಯ ವೆಬ್‌ಸೈಟ್‌ನಲ್ಲಿ ಏರ್‌ಟೆಲ್ ಡಬಲ್ ಡಾಟಾ ಆಫರ್ ನೀಡಿದ್ದು, 1,120 ಜಿಬಿ 4ಜಿ ಡೇಟಾ ಮತ್ತು ಅನಿಯಮಿತ ಕರೆಗಳ ಆಫರ್ ಅನ್ನು ಪಡೆಯಬಹುದಾಗಿದೆ.
ಓದಿರಿ: ಮೊಬೈಲ್ ಇತಿಹಾಸದ ಈ 5 ವಿಶೇಷ ಮಾಹಿತಿ ಆಶ್ಚರ್ಯ ಮೂಡಿಸದೇ ಇರವು!
ಇನ್ನು 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿರುವ ಫೋನಿನ ಬೆಲೆ 13,999 ರೂ.ಗಳಾಗಿವೆ. ಹಾಗೆಯೇ, 6GB RAM ಮತ್ತು 128GB ಆಂತರಿಕ ಮೆಮೊರಿಯ ಫೋನ್ ಬೆಲೆ 16,999 ರೂ.ಗಳಾಗಿವೆ. ಹಾಗಾದರೆ, ದೇಶದಲ್ಲಿ ದಾಖಲೆ ನಿರ್ಮಿಸಿರುವ ರೆಡ್ಮಿ ನೋಟ್ 7 ಪ್ರೊ ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್
ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್ ಕಾರ್ಯನಿರ್ವಹಣೆ ನೀಡಲಿದೆ.

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ
ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!
ರೆಡ್‌ಮಿ ನೋಟ್ 7 ಪ್ರೊ ಸಂವೇದಕವು 4 ಪಿಕ್ಸೆಲ್‌ಗಳನ್ನು 1 ಸೂಪರ್ ಪಿಕ್ಸೆಲ್‌ಗೆ ವಿಲೀನಗೊಳಿಸುವ ಮೂಲ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲಿದೆ. ಕೃತಕ ಬುದ್ದಿಮತ್ತೆ ಸಹಾಯದಿಂದ ರಾತ್ರಿ ಸಮಯದಲ್ಲೂ ಛಾಯಾಗ್ರಹಣಕ್ಕೆ ಶಕ್ತವಾಗಿದೆ. AI ಪೋರ್ಟ್ರೇಟ್ 2.0 ಹೊಂದಿರುವ ಕ್ಯಾಮೆರಾ ಬೊಕೆ ಚಿತ್ರಗಳು, 4K ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.


Click it and Unblock the Notifications








