Home
ಮೊಬೈಲ್

ಶಿಯೋಮಿ ರೆಡ್ ಮಿ ನೋಟ್ 3 ಅನ್ನು ಬಿಸಿಯಾಗುವುದನ್ನು ತಡೆಯುವುದಕ್ಕೆ 5 ಕ್ರಮಗಳು.

By Ashok

ಈ ವರ್ಷದ ಮೊದಲಲ್ಲಿ, ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಶಿಯೋಮಿ ಮಧ್ಯಮ ಬೆಲೆಯ ರೆಡ್ ಮಿ ನೋಟ್ 3 ಅನ್ನು ಭಾರತದಲ್ಲಿ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಭಾರತದಲ್ಲಿ ಆನ್ ಲೈನಿನಲ್ಲೇ ರೆಡ್ ಮಿ ನೋಟ್ 3 ಫೋನ್ 1.75 ಮಿಲಿಯನ್ನಿನಷ್ಟು ಮಾರಾಟವಾಗಿದ್ದು ಸಾಧನೆಯೇ ಸರಿ.

ಶಿಯೋಮಿ ರೆಡ್ ಮಿ ನೋಟ್ 3 ಅನ್ನು ಬಿಸಿಯಾಗುವುದನ್ನು ತಡೆಯುವುದಕ್ಕೆ 5 ಕ್ರಮಗಳು.

ಈ ಮಧ್ಯೆ ರೆಡ್ ಮಿ ನೋಟ್ 3ರ ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಬಗ್ಗೆ ಜನರಿಂದ ಹಾಗೂ ವಿಶ್ಲೇಷಕರಿಂದ ಹಲವಾರು ವಿಮರ್ಶೆಗಳು ಬಂದವು. ಭಾರತದಲ್ಲಿ ಆನ್ ಲೈನಿನಲ್ಲಿ ಮಾರಾಟವಾದ ಒಂಭತ್ತರಲ್ಲಿ ಒಂದು ಫೋನು ರೆಡ್ ಮಿ ನೋಟ್ 3 ಆಗಿತ್ತು. ಈ ಎಲ್ಲಾ ಯಶಸ್ಸಿನ ಕತೆಗಳ ಜೊತೆಗೆ, ಈ ಫೋನ್ ಬಿಸಿಯಾಗುವ ಸಂಗತಿಯೂ ಚರ್ಚೆಯಾಯಿತು.

ಓದಿರಿ: ಜಿಯೋ ವೈಫೈ ಹಾಟ್‌ಸ್ಪಾಟ್ ಬಳಸಿ 2ಜಿ/3ಜಿ ಫೋನ್‌ನಿಂದ ಕರೆ ಹೇಗೆ?

ಹೆಚ್ಚು ಕಡಿಮೆ ಎಲ್ಲಾ ಶಿಯೋಮಿ ಫೋನುಗಳು ಚಾರ್ಜ್ ಮಾಡುವಾಗ ಅಥವಾ ದೊಡ್ಡ ಆಟಗಳನ್ನಾಡುವಾಗ ಬಿಸಿಯಾಗುತ್ತಿತ್ತು. ರೆಡ್ ಮಿ ನೋಟ್ 3 ಕೂಡ ಅವುಗಳಲ್ಲೊಂದು ಮತ್ತಿದಕ್ಕಿರುವ ಪರಿಹಾರಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೀವಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಕ್ ಗ್ರೌಂಡ್ ಆ್ಯಪ್ ಗಳನ್ನು ಅಂತ್ಯಗೊಳಿಸಿ.

ಬ್ಯಾಕ್ ಗ್ರೌಂಡ್ ಆ್ಯಪ್ ಗಳನ್ನು ಅಂತ್ಯಗೊಳಿಸಿ.

ಬ್ಯಾಕ್ ಗ್ರೌಂಡಿನಲ್ಲಿ ಕಾರ್ಯನಿರ್ವಹಿಸುವ ಕೆಲವು ಆ್ಯಪ್ ಗಳು ಹೆಚ್ಚು ಮೆಮೊರಿಯನ್ನು ಬೇಡುತ್ತವೆ ಮತ್ತಿದರಿಂದಾಗಿ ಪ್ರೊಸೆಸರ್ ಮೇಲೆ ಒತ್ತಡ ಉಂಟಾಗುತ್ತದೆ ಹಾಗು ಫೋನ್ ಬಿಸಿಯಾಗುತ್ತದೆ. ಎಡಗಡೆ ಇರುವ ಕೆಪಾಸಿಟಿವ್ ಬಟನ್ ಮೇಲೆ ಕ್ಲಿಕ್ಕಿಸಿ ಹಾಗೂ ಬ್ಯಾಕ್ ಗ್ರೌಂಡ್ ಆ್ಯಪ್ ಗಳನ್ನು ಮುಚ್ಚಿರಿ.

ಸಂಪರ್ಕದ ಆಯ್ಕೆಗಳನ್ನು ಪರೀಕ್ಷಿಸಿ.

ಸಂಪರ್ಕದ ಆಯ್ಕೆಗಳನ್ನು ಪರೀಕ್ಷಿಸಿ.

ಜಿಪಿಎಸ್, ವೈಫೈ, ಡಾಟಾ ಮೊಬೈಲನ್ನು ಶೀಘ್ರವಾಗಿ ಬಿಸಿಯಾಗಿಸುತ್ತದೆ. ಅವುಗಳನ್ನು ಉಪಯೋಗಿಸುತ್ತಿಲ್ಲವಾದರೆ ಆಫ್ ಮಾಡಿ.

ಉತ್ತಮ ಗುಣಮಟ್ಟದ ಅಡಾಪ್ಟರ್ ಬಳಸಿ.

ಉತ್ತಮ ಗುಣಮಟ್ಟದ ಅಡಾಪ್ಟರ್ ಬಳಸಿ.

ಸರಿಯಾಗಿಲ್ಲದ ಅಥವಾ ಕಳಪೆ ಅಡಾಪ್ಟರನ್ನು ಬಳಸುವುದು ಬ್ಯಾಟರಿ ಹಾಳಾಗುವುದಕ್ಕೆ ಕಾರಣ ಹಾಗೂ ಫೋನು ತುಂಬಾ ಬಿಸಿಯಾಗುವುದಕ್ಕೆ ಕಾರಣ. ಯಾವಾಗಲೂ ಫೋನಿನ ಜೊತೆಗೆ ಬಂದ ಉತ್ತಮ ಗುಣಮಟ್ಟದ ಅಡಾಪ್ಟರ್ ಅನ್ನೇ ಬಳಸಿ.

ಚಾರ್ಜ್ ಮಾಡುವಾಗ ಕವರ್ ತೆಗೆಯಿರಿ.

ಚಾರ್ಜ್ ಮಾಡುವಾಗ ಕವರ್ ತೆಗೆಯಿರಿ.

ಸ್ಮಾರ್ಟ್ ಫೋನನ್ನು ಚಾರ್ಜ್ ಮಾಡುವಾಗ ಕವರನ್ನು ತೆಗೆದಿಡಿ. ಇದರಿಂದಾಗಿ ಚಾರ್ಜ್ ಆಗುವಾಗ ಉತ್ಪತ್ತಿಯಾಗುವ ಶಾಖ ವಾತಾವರಣದಲ್ಲಿ ಹರಡಿ ಹೋಗಿ ಫೋನ್ ಬಿಸಿಯಾಗುವುದು ತಪ್ಪುತ್ತದೆ. ಫೋನನ್ನು ಚಾರ್ಜ್ ಮಾಡುವಾಗ ಆಟಗಳನ್ನು ಆಡುವುದಾಗಲೀ, ಅಂತರ್ಜಾಲವನ್ನು ನೋಡುವುದನ್ನಾಗಲೀ ಮಾಡಬೇಡಿ.

ಥರ್ಡ್ ಪಾರ್ಟಿ ಕೂಲಿಂಗ್ ಆ್ಯಪ್ ಗಳು ಉಪಯೋಗವಿಲ್ಲ.

ಥರ್ಡ್ ಪಾರ್ಟಿ ಕೂಲಿಂಗ್ ಆ್ಯಪ್ ಗಳು ಉಪಯೋಗವಿಲ್ಲ.

ಕೂಲ್ ಮಾಸ್ಟರ್ ಅನ್ನು ಹೊರತುಪಡಿಸಿ, ಮಾರುಕಟ್ಟೆಯಲ್ಲಿ ಸದ್ಯಕ್ಕೆ ಇನ್ಯಾವುದೇ ಉತ್ತಮ ಕೂಲರ್ ಆ್ಯಪ್ ಲಭ್ಯವಿಲ್ಲ. ಕೂಲ್ ಮಾಸ್ಟರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಫೋನು ಬಿಸಿಯಾಗುವುದಕ್ಕೆ ಕಾರಣಗಳೇನು ಎಂದು ತಿಳಿದುಕೊಳ್ಳಬಹುದು. ಒಂದು ಸಲ ಕಾರಣ ತಿಳಿದುಕೊಂಡರೆ ಆ್ಯಪ್ ಮೂಲಕ ಸ್ಮಾರ್ಟ್ ಫೋನನ್ನು ತಣ್ಣಗಾಗಿಸಬಹುದು.

Best Mobiles in India

English summary
Earlier this year, the Chinese handset maker Xiaomi has launched its mid-range smartphone in the form of Redmi Note 3 in India and global market. The company did a massive job selling over 1.75 million smartphones online in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+