ಜಿಯೋ ವೈಫೈ ಹಾಟ್‌ಸ್ಪಾಟ್ ಬಳಸಿ 2ಜಿ/3ಜಿ ಫೋನ್‌ನಿಂದ ಕರೆ ಹೇಗೆ?

By Shwetha
|
Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?

ಭಾರತದಲ್ಲಿ ತನ್ನ 4ಜಿ ಸೇವೆಯ ಮೂಲಕ ರಿಲಾಯನ್ಸ್ ಜಿಯೋ ಡಿಜಿಟಲ್ ಕ್ರಾಂತಿಯನ್ನು ಮಾಡಿದೆ. ಅಂತಹದ್ದರಲ್ಲಿ ಹಲವರಿಗೆ ರಿಲಾಯನ್ಸ್ ಜಿಯೋದಲ್ಲಿ ಕೆಲವು ಕಾರ್ಯಗಳನ್ನು ನಡೆಸಲು ಸಾಧ್ಯವೇ ಸಾಧ್ಯವಿಲ್ಲವೇ ಎಂಬುದಾಗಿ ಹಲವರ ಮೂನದಲ್ಲಿ ಮೂಡಬಹುದು. ಅದರಲ್ಲಿ ಒಂದು ಸಂದೇಹವಾಗಿದೆ 2ಜಿ ಅಥವಾ 3ಜಿ ಸ್ಮಾರ್ಟ್‌ಫೋನ್‌ಗಳನ್ನು ಜಿಯೋ ಹಾಟ್‌ಸ್ಪಾಟ್‌ಗೆ ಸಂಪರ್ಕವನ್ನು ಪಡೆದುಕೊಂಡು ಕರೆಮಾಡುವುದಾಗಿದೆ.

ಓದಿರಿ: ಯಶಸ್ಸಿನ ಕದದ ಬೋಲ್ಟ್ ತೆರೆಯಲು ಜಿಯೋ ಬಳಸಿದ 'ವೋಲ್ಟ್'

ನಿಮ್ಮ 2ಜಿ ಅಥವಾ 3ಜಿ ಫೋನ್‌ನಲ್ಲಿ ಜಿಯೋ ಅಪ್ಲಿಕೇಶನ್ ಬಳಸಿಕೊಂಡು ಕರೆಗಳನ್ನು ಮಾಡುವುದು ಹೇಗೆ ಎಂಬುದನ್ನು ಕೆಲವು ಹಂತಗಳ ಮೂಲಕ ನೀಡುತ್ತಿದ್ದೇವೆ. ವೈಫೈ ಮೂಲಕ ಜಿಯೋ ಹಾಟ್‌ಸ್ಪಾಟ್‌ಗೆ ಸಂಪರ್ಕವನ್ನು ಪಡೆದುಕೊಂಡು ಕರೆಮಾಡುವುದಾಗಿದೆ. ಕೆಳಗೆ ಹಂತಗಳನ್ನು ನೋಡಿ.

ಜಿಯೋ ಜಾಯಿನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಜಿಯೋ ಜಾಯಿನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಮೊದಲಿಗೆ ಮೈಜಿಯೋ ಮತ್ತು ಜಿಯೋ ಜಾಯಿನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಹುಡುಕಿಕೊಂಡು ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿ.

ಮೈ ಜಿಯೋ ಅಪ್ಲಿಕೇಶನ್ ತೆರೆಯಿರಿ

ಮೈ ಜಿಯೋ ಅಪ್ಲಿಕೇಶನ್ ತೆರೆಯಿರಿ

ಜಿಯೋ ಫೈ ಡಿವೈಸ್‌ಗೆ ಸ್ವಯಂಚಾಲಿತವಾಗಿ ನೀವು ಈಗಾಗಲೇ ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ. ಆದ್ದರಿಂದ ಮೈಜಿಯೋ ಅಪ್ಲಿಕೇಶನ್ ಲಾಂಚ್ ಮಾಡಿ, ಸೈನ್ ಇನ್ ಮಾಡಿ ಮತ್ತು ನೀವು ಸೈನ್ ಇನ್ ಆಗುತ್ತಿರುವಂತೆ ಇತರ ಪ್ರೊಸೆಸ್ ಅನ್ನು ತ್ಯಜಿಸಿ.

ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಿ

ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಿ

ಜಿಯೋ ಜಾಯಿನ್ ಅಪ್ಲಿಕೇಶನ್‌ಗಳನ್ನು ಲಾಂಚ್ ಮಾಡಿ ಮತ್ತು ಜಿಯೋಫೈ ಡಿವೈಸ್‌ನಲ್ಲಿರುವ ಇನ್‌ಸರ್ಟ್ ಮಾಡಿಕೊಂಡಿರುವ ಜಿಯೋ ಸಂಖ್ಯೆಯನ್ನು ಬಳಸಿಕೊಂಡು ಇದು ಲಾಗಿನ್ ಆಗುತ್ತದೆ. ಕರೆಗಳನ್ನು ಮಾಡಲು, ಸಂದೇಶಗಳನ್ನು ಕಳುಹಿಸಲು ಮತ್ತು ಅಪ್ಲಿಕೇಶನ್‌ನಲ್ಲಿರುವ ಸಂಪರ್ಕಗಳನ್ನು ಪ್ರವೇಶಿಸಲು ನೀವು ಅನುಮತಿಗಳನ್ನು ಪಡೆದುಕೊಳ್ಳಬೇಕು.

ನಿಮ್ಮ ಕೆಲಸ ಮುಗಿದಂತೆಯೇ

ನಿಮ್ಮ ಕೆಲಸ ಮುಗಿದಂತೆಯೇ

ಮೈಜಿಯೋ ಅಪ್ಲಿಕೇಶನ್‌ಗೆ ನೀವು ಅಗತ್ಯ ಅನುಮತಿಗಳನ್ನು ಒದಗಿಸಿದ ನಂತರ, ನಿಮ್ಮ ಕೆಲಸ ಮುಗಿದಂತೆಯೇ. 2ಜಿ ಅಥವಾ 3ಜಿ ಫೋನ್ ಬಳಸಿಕೊಂಡು ಜಿಯೋ ಅಪ್ಲಿಕೇಶನ್ ಉಪಯೋಗಿಸಿ ನಿಮಗೆ ಕರೆಗಳನ್ನು ಮಾಡಬಹುದಾಗಿದೆ. ನಿಮ್ಮ ಡಿವೈಸ್‌ನಲ್ಲಿ ಅಪ್ಲಿಕೇಶನ್ ತೆರೆಯಿರಿ ಮತ್ತು ವೆಲ್‌ಕಮ್ ಸ್ಕ್ರೀನ್‌ನಲ್ಲಿ ಡಯಲರ್‌ಗೆ ಮುಂದುವರಿಯಿರಿ.

ವೀಡಿಯೊ ಕರೆಗಳನ್ನು ನಿಮಗೆ ಮಾಡಬಹುದು

ವೀಡಿಯೊ ಕರೆಗಳನ್ನು ನಿಮಗೆ ಮಾಡಬಹುದು

ವಾಯ್ಸ್ ಕರೆಗಳನ್ನು ಮಾಡುವುದಲ್ಲದೆ, ನಿಮ್ಮ 2ಜಿ ಅಥವಾ 3ಜಿ ಸ್ಮಾರ್ಟ್‌ಫೋನ್ ಬಳಸಿಕೊಂಡು ಜಿಯೋ ಜಾಯಿನ್ ಅಪ್ಲಿಕೇಶನ್‌ನೊಂದಿಗೆ ವೀಡಿಯೊ ಕರೆಗಳನ್ನು ಮಾಡಬಹುದಾಗಿದೆ.

Best Mobiles in India

English summary
how you can use the Jio Join app to make calls on your 2G or 3G smartphone that is connected to JioFi Hotspot via Wi-Fi. Take a look at the steps from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X