Just In
- 5 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್‍ಫೋನ್‍ಗಳ ವಿವರ ಇಲ್ಲಿದೆ!
- 1 hr ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- 1 hr ago
WhatsApp New Features : ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅಚ್ಚರಿಯ ಫೀಚರ್ಸ್! ಏನೆಲ್ಲಾ ಉಪಯೋಗಗಳು!
- 2 hrs ago
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
Don't Miss
- News
ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನ್ 7/7 ಪ್ಲಸ್ ಮಾಡಲಾಗದ 5 ವಿಷಯಗಳನ್ನು ಸ್ಯಾಮ್ಸಂಗ್ ಗೆಲಾಕ್ಸಿ ಎಸ್8/ಎಸ್8 ಪ್ಲಸ್ ಮಾಡುತ್ತದೆ
ಸ್ಯಾಮ್ಸಂಗ್ ತಮ್ಮ ಹೊಸ ಗೆಲಾಕ್ಸಿ ಎಸ್8 ಮತ್ತು ಗೆಲಾಕ್ಸಿ ಎಸ್8 ಪ್ಲಸ್ ಸ್ಮಾರ್ಟ್‍ಫೋನ್ ಗಳ ಬಗ್ಗೆ ಘೋಷಣೆ ಮಾಡಿದೆ. ಈ ಫೋನ್‍ಗಳು ಎಪ್ರಿಲ್ 21 ರಂದು ಬಿಡುಗಡೆಗೊಳ್ಳಲಿದ್ದು ಮುಂಗಡ ಮೀಸಲಾತಿ ಬಿಡುಗಡೆ ದಿನಾಂಕದ ನಂತರ ನಡೆಯಲಿದೆ.

ಸ್ಯಾಮ್ಸಂಗ್ ಅಡಿಯ ಈ ಎರಡೂ ಫೋನ್‍ಗಳು ಹೈ-ಎಂಡ್ ಸ್ಪೆಸಿಫಿಕೇಷನ್ಸ್ ಮತ್ತು ಫೀಚರ್ಸ್ ಹೊಂದಿದೆ. ಇವುಗಳು ಅತ್ತ್ಯುತ್ತಮ ಡಿಜೈನ್ ಮತ್ತು ಬಿಲ್ಡ್ ಹೊಂದಿದೆ. ಸ್ಮಾರ್ಟ್‍ಫೋನ್‍ಗಳ ವಿಷಯದಲ್ಲಿ ತಯಾರಕರಾದ ಸ್ಯಾಮ್ಸಂಗ್ ಮತ್ತು ಆಪಲ್ ಎಂದಿಗೂ ಎದುರಾಳಿಗಳು. ಅವರಿಬ್ಬರೂ ಎಂದಿಗೂ ಮಾರುಕಟ್ಟೆಯಲ್ಲಿ ಒಬ್ಬರಿಗೊಬ್ಬರು ಕಠಿಣವಾದ ಸ್ಪರ್ಧೆ ನೀಡುತ್ತಾರೆ. ಈ ಬಾರಿ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಎದುರಾಳಿ ಐಫೋನ್7 ಮತ್ತು ಐಫೋನ್ 7 ಪ್ಲಸ್ ಅನ್ನು ಸೋಲಿಸಲಿದೆ.
ಓದಿರಿ: ಸ್ಯಾಮ್ಸಂಗ್ ಗೆಲಾಕ್ಸಿ ಎಸ್8: ಕೊಳ್ಳಬೇಕೆ ಅಥವಾ ಇಲ್ಲವೆ ?
ನೀವು ನಿಮ್ಮ ಫೋನನ್ನು ಅಪ್‍ಗ್ರೇಡ್ ಮಾಡುವ ಯೋಚನೆಯಲ್ಲಿದ್ದರೆ ನಾವು ಗೆಲಾಕ್ಸಿ ಎಸ್8 ಐಫೋನ್ 7 ಗಿಂತ ಹೆಚ್ಚಿನದು ಏನು ಮಾಡಬಹುದು ಎಂದು ತಿಳಿಸುತ್ತೇವೆ. ನೋಡಿ.

ಇನ್‍ಫಿನಿಟಿ ಡಿಸ್ಪ್ಲೆ ದೊಡ್ಡ ಮತ್ತು ಉತ್ತಮ ಸ್ಕ್ರೀನ್ ನೀಡುತ್ತದೆ
ಗೆಲಾಕ್ಸಿ ಎಸ್8 ಸೀರಿಜ್ ಇನ್‍ಫಿನಿಟಿ ಡಿಸ್ಪ್ಲೆ ಎನ್ನುವ ಫೀಚರ್ ಹೊಂದಿದ್ದು 2960*1440 ಪಿಕ್ಸೆಲ್ಸ್ ನ ಕ್ಯುಎಚ್‍ಡಿ + ರಿಜೊಲ್ಯುಷನ್ ಹೊಂದಿದೆ. ಈ ಸ್ಕ್ರೀನ್ ಅಳತೆ ಕ್ರಮವಾಗಿ 5.8 ಇಂಚು ಮತ್ತು 6.2 ಇಂಚು ಇದೆ. ಇನ್ನೊಂದೆಡೆ ಐಫೋನ್ 7 ಪ್ಲಸ್ 1080 ಪಿಕ್ಸೆಲ್ಸ್ ನ ಎಫ್‍ಎಚ್‍ಡಿ ರಿಜೊಲ್ಯುಷನ್ ನೀಡುತ್ತದೆ.
ಸ್ಯಾಮ್ಸಂಗ್ ಮುಂದೆ ದೈಹಿಕವಾಗಿ ಇದ್ದ ಹೋಮ್ ಬಟನ್ ತೆಗೆದಿರುವುದರಿಂದ ಸ್ಕ್ರೀನ್ ಉದ್ದವಾಗಿ ಕಾಣುತ್ತದೆ. ದೊಡ್ಡ ಮತ್ತು ಉತ್ತಮ ಡಿಸ್ಪ್ಲೆ ಹೈಯರ್ ರಿಜೊಲ್ಯುಷನ್ ನೊಂದಿಗೆ ಇರುವುದರಿಂದ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಮನೊರಂಜನೆ ಮತ್ತು ಬ್ರೌಸಿಂಗ್ ಗೆ ಉತ್ತಮ ಆಯ್ಕೆಯಾಗಿದೆ.

ಐರಿಸ್ ಸ್ಕ್ಯಾನರ್ ಮತ್ತು ಫೇಷಿಯಲ್ ರಿಕೊಗ್ನಿಷನ್
ಬೈಯೊಮೆಟ್ರಿಕ್ ಸ್ಕ್ಯಾನಿಂಗ್ ತಂತ್ರಜ್ಞಾನ ಹೊಸದೇನಲ್ಲಾ, ಆದರೂ ಇದು ಸ್ಮಾರ್ಟ್‍ಫೋನ್‍ಗಳಲ್ಲಿ ಮುಖ್ಯಪಾತ್ರವಿನ್ನೂ ವಹಿಸಿಲ್ಲಾ. ಸ್ಯಾಮ್ಸಂಗ್ ತನ್ನ ಹೊಸ ಫೋನ್ ಗಳಲ್ಲಿ ಐರಿಸ್ ಸ್ಕ್ಯಾನರ್ ಮತ್ತು ಫೇಷಿಯಲ್ ರಿಕೊಗ್ನಿಷನ್ ತಂತ್ರಜ್ಞಾನವನ್ನು ಸೇರಿಸಿದೆ.
ಐಫೋನ್ ಗಳಲ್ಲಿ ರುವ ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನಿಂಗ್ ತಂತ್ರಜ್ಞಾನ ಹೊಂದಿದೆ. ಆದರೆ ಐರಿಸ್ ಸ್ಕ್ಯಾನರ್ ಸ್ವಲ್ಪ ಅಪರೂಪದ್ದು. ಇದು ನಿಮ್ಮ ಕಣ್ಣಿನ ಸ್ಕ್ಯಾನ್ ಮಾಡಿದ ನಂತರವಷ್ಟೇ ನಿಮ್ಮ ಮಾಹಿತಿ ಮತ್ತು ವಿವರಣೆಗಳನ್ನು ಸುರಕ್ಷಿತಗೊಳಿಸುತ್ತದೆ ಮತ್ತು ತೋರಿಸುತ್ತದೆ

ವೇಗದ ಚಾರ್ಜಿಂಗ್ ಸಾಧ್ಯವಿದೆ
ಸ್ಯಾಮ್ಸಂಗ್ ನ ಈ ಎರಡೂ ಫೋನುಗಳು ಯುಎಸ್‍ಬಿ ಟೈಪ್ - ಸಿ ಪೊರ್ಟ್ ಹೊಂದಿದೆ ಚಾರ್ಜಿಂಗ್ ಗಾಗಿ ಮತ್ತು ಇದು ವೇಗದ ಚಾರ್ಜಿಂಗ್ ಅನ್ನು ಕೂಡ ಬೆಂಬಲಿಸುತ್ತದೆ. ಐಫೋನ್ ಗಳು ಈ ಉದ್ದೇಶಕ್ಕಾಗಿ ಲೈಟನಿಂಗ್ ಕನೆಕ್ಟರ್ ಹೊಂದಿದೆ. ಆದರೆ, ಇದು ಯುಎಸ್‍ಬಿ ಟೈಪ್-ಸಿ ಚಾರ್ಜಿಂಗ್ ನಷ್ಟು ವೇಗವಾಗಿಲ್ಲಾ. ಇನ್ನೂ ಹೇಳಬೇಕೆಂದರೆ ಐಫೋನ್ ಇನ್ನೂ ವೇಗದ ಚಾರ್ಜಿಂಗ್ ಫೀಚರ್ ಅಳವಡಿಸಬೇಕಾಗಿದೆ. ಬಹುಶಃ ಮುಂಬರುವ ಐಫೋನ್ ನಲ್ಲಿ ಈ ಫೀಚರ್ ಅಪೇಕ್ಷಿಸಬಹುದು.

ಸ್ಟೋರೆಜ್ ಹೆಚ್ಚಿಸುವ ಅವಕಾಶ
ಸ್ಯಾಮ್ಸಂಗ್ ಗೆಲಾಕ್ಸಿ ಸೀರಿಜ್ ಬೋರ್ಡ್‍ನಲ್ಲಿ ಮೈಕ್ರೊ ಎಸ್‍ಡಿ ಕಾರ್ಡ್ ಸ್ಲೊಟ್ ಹೊಂದಿದೆ. ಇದು 256ಜಿಬಿ ತನಕ ಸ್ಟೋರೆಜ್ ಹೆಚ್ಚಿಸಲು ಬೆಂಬಲಿಸುತ್ತದೆ. ಐಫೋನ್ ಗಳಲ್ಲಿ ಈ ಆಯ್ಕೆ ಇಲ್ಲಾ, ಆಪಲ್ ಮೈಕ್ರೊ ಎಸ್‍ಡಿ ಕಾರ್ಡ್ ಸ್ಲೊಟ್ ನೀಡುವುದಿಲ್ಲಾ.

3.5 ಎಮ್‍ಎಮ್ ಹೆಡ್ ಫೋನ್ ಜ್ಯಾಕ್ ಜೊತೆಗಿರುವುದು
ಆಪಲ್ 3.5 ಎಮ್‍ಎಮ್ ಹೆಡ್‍ಫೋನ್ ಜ್ಯಾಕ್ ತೆಗೆದಿದೆ ಐಫೋನ್ 7 ಮತ್ತು 7 ಪ್ಲಸ್ ಫೋನಿನಲ್ಲಿ ಆಪಲ್ ನ ಏರ್‍ಪೊಡ್ಸ್ ಅನ್ನು ಬೆಂಬಲಿಸಲು. ಆದರೆ, ಸ್ಯಾಮ್ಸಂಗ್ ಈಗಲೂ ಹೆಡ್‍ಫೋನ್ ಜ್ಯಾಕ್ ಹೊಂದಿದೆ ಯುಎಸ್‍ಬಿ ಟೈಪ್-ಸಿ ಪೊರ್ಟ್ ಪಕ್ಕದಲ್ಲಿ. ಇದರರ್ಥ, ನಿಮಗೆ ವೈರ್‍ಲೆಸ್ ಹೆಡ್‍ಫೋನ್ಸ್ ಗಾಗಿ ದುಡ್ಡು ಹಾಕಬೇಕಿಲ್ಲಾ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470