ಸ್ಯಾಮ್ಸಂಗ್ ಗೆಲಾಕ್ಸಿ ಎಸ್8: ಕೊಳ್ಳಬೇಕೆ ಅಥವಾ ಇಲ್ಲವೆ ?

ಸ್ಯಾಮ್ಸಂಗ್ ಸಧ್ಯದಲ್ಲಿ ಬಿಡುಗಡೆ ಮಾಡಿದ ಗೆಲಾಕ್ಸಿ ಎಸ್8 ಸೀರಿಜ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.

By Prateeksha
|

ಸ್ಯಾಮ್ಸಂಗ್ ತನ್ನ ಹೊಸ ಮಾಡೆಲ್‍ಗಳಾದ ಗೆಲಾಕ್ಸಿ ಎಸ್8 ಮತ್ತು ಎಸ್8+ ಬಿಡುಗಡೆ ಮಾಡಿದೆ. ಈಗ ನಮಗೆಲ್ಲಾ ಮೊಬೈಲ್ ನ ಸ್ಪೆಸಿಫಿಕೇಷನ್ಸ್ ಮತ್ತು ಇತರ ವಿವರಣೆಗಳ ಬಗ್ಗೆ ತಿಳಿದು ಬಂದಿದೆ. ಬಿಡುಗಡೆ ನಂತರ ಈ ಮೊಬೈಲ್ ಗಳ ಬಹಳಷ್ಟು ಅಧಿಕೃತ ಚಿತ್ರಗಳು ಕೂಡ ಎಲ್ಲೆಡೆ ಹರಿದಾಡಲಾರಂಭಿಸಿದೆ.

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8: ಕೊಳ್ಳಬೇಕೆ ಅಥವಾ ಇಲ್ಲವೆ ?

ಸ್ಪೆಸಿಫಿಕೇಷನ್ಸ್ ಬಗ್ಗೆ ಹೇಳುವುದಾದರೆ ಗೆಲಾಕ್ಸಿ ಎಸ್8 ಮತ್ತು ಗೆಲಾಕ್ಸಿ ಎಸ್8+ ಎರಡೂ ಕೂಡ 18:5:9 ಆಸ್ಪೆಕ್ಟ್ ರೇಷಿಯೊ ಕರ್ವ್‍ಡ್ ಎಡ್ಜ್ ಡಿಸ್ಪ್ಲೆ ಹೊಂದಿದೆ. ಗೆಲಾಕ್ಸಿ ಎಸ್8 5.8 ಇಂಚಿನ ಡಿಸ್ಪ್ಲೆ ಮತ್ತು ಎಸ್8+ 6.2 ಇಂಚಿನ ಡಿಸ್ಪ್ಲೆ ಹೊಂದಿದೆ.

ಪ್ರೊಸೆಸರ್ ಬಗ್ಗೆ ಹೇಳುವುದಾದರೆ, ಎರಡೂ ಕೂಡ 2 ವಿಧದಲ್ಲಿ ಬರುತ್ತದೆ. ಒಕ್ಟಾ-ಕೊರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 835 ಅಡ್ರೆನೊ 540 ಜಿಪಿಯು ದೊಂದಿಗೆ / ಒಕ್ಟಾ-ಕೊರ್ ಸ್ಯಾಮ್ಸಂಗ್ ಎಕ್ಸಿನೊಸ್ 9 ಸೀರಿಜ್ 8895 ಪ್ರೊಸೆಸರ್ ಕ್ಷೇತ್ರದ ಮೇಲೆ ಅವಲಂಬಿಸಿದೆ.

ಸ್ಟೋರೆಜ್ ವಿಷಯಕ್ಕೆ ಬಂದರೆ ಸ್ಮಾರ್ಟ್‍ಫೋನ್‍ಗಳು 4ಜಿಬಿ ರಾಮ್ ನೊಂದಿಗೆ 64ಜಿಬಿ ಇನ್ ಬಿಲ್ಟ್ ಸ್ಟೋರೆಜ್ ಹೊಂದಿದೆ ಜೊತೆಗೆ ಮೈಕ್ರೊಎಸ್ಡಿ ಯಿಂದ ಮೆಮೊರಿ ಹೆಚ್ಚಿಸಬಹುದು.

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8: ಕೊಳ್ಳಬೇಕೆ ಅಥವಾ ಇಲ್ಲವೆ ?

ಕ್ಯಾಮೆರಾ ವಿಭಾಗದಲ್ಲಿ 12 ಎಮ್‍ಪಿ ಡುಯಲ್ ಪಿಕ್ಸೆಲ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ, 8ಎಮ್‍ಪಿ ಫ್ರಂಟ್ ಕ್ಯಾಮೆರಾ ಎಫ್/1.7 ಅಪೆರ್ಚರ್ ನೊಂದಿಗೆ.

ಆಂಡ್ರೊಯಿಡ್ ನೌಗಟ್ ನೊಂದಿಗೆ ಬರಲಿದೆ, ಎಸ್8 ಮತ್ತು ಎಸ್8+ ಎರಡೂ ಕೂಡ ಹೃದಯ ಬಡಿತದ ಸೆನ್ಸರ್, ಫಿಂಗರ್‍ಪ್ರಿಂಟ್ ಸೆನ್ಸರ್, ಐರಿಸ್ ಸ್ಕ್ಯಾನರ್, ಬ್ಯಾರೊ ಮೀಟರ್ ಮತ್ತು ಇತ್ಯಾದಿ ಫೀಚರ್‍ಗಳನ್ನು ಹೊಂದಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8, ಗ್ಯಾಲೆಕ್ಸಿ S8+ ಲಾಂಚ್‌: 4 GB RAM, 12 MP ಡ್ಯುಯಲ್ ಕ್ಯಾಮೆರಾ..!

ಕನೆಕ್ಟಿವಿಟಿ ಯಲ್ಲಿ 4ಜಿ ವೊಲ್ಟ್, ವೈ-ಫೈ, ಬ್ಲೂಟೂತ್ 4.2 ಎಲ್‍ಇ, ಜಿಪಿಎಸ್ ಗ್ಲೊನಾಸ್ ನೊಂದಿಗೆ, ಯುಎಸ್‍ಬಿ 2.0 ಮತ್ತು ಎನ್‍ಎಫ್‍ಸಿ ಹೊಂದಿದೆ.

ಗೆಲಾಕ್ಸಿ ಎಸ್8 3000 ಎಮ್‍ಎಎಚ್ ಬ್ಯಾಟರಿ ಮತ್ತು ಎಸ್8+ 3500ಎಮ್‍ಎಎಚ್ ಬ್ಯಾಟರಿ ಹೊಂದಿದೆ. ಎರಡೂ ಮೊಬೈಲ್ ಗಳು ವೇಗದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ ವೈಯರ್ಡ್ ಮತ್ತು ವೈಯರ್ಡ್‍ಲೆಸ್ ( ಡಬ್ಲ್ಯುಪಿಸಿ ಮತ್ತು ಪಿಎಮ್‍ಎ) ಚಾರ್ಜಿಂಗ್.

ನಾವೀಗ ಅವಶ್ಯಕ ಮಾಹಿತಿ ಬಗ್ಗೆ ತಿಳಿದೆವು, ಈಗ ನಾವು ಈ ಮೊಬೈಲ್ ಅನ್ನು ಯಾಕೆ ಕೊಳ್ಳಬೇಕು ಕೊಳ್ಳಬಾರದು ಎನ್ನುವುದರ ಬಗ್ಗೆ ಪಟ್ಟಿ ಮಾಡಿದ್ದೇವೆ. ನೋಡಿ.

ನೀವೆಕೆ ಕೊಳ್ಳಬೇಕು ?

ನೂತನ ಫ್ಲಾಗ್‍ಷಿಪ್ ಪ್ರೊಸೆಸರ್

ನೂತನ ಫ್ಲಾಗ್‍ಷಿಪ್ ಪ್ರೊಸೆಸರ್

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಸೀರಿಜ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 835 ಚಿಪ್ ಸೆಟ್ ಅನ್ನು ಬೋರ್ಡ್ ನಲ್ಲಿ ಹೊತ್ತು ಮಾರುಕಟ್ಟೆಗೆ ಬರುತ್ತಿರುವ ಮೊದಲ ಸ್ಮಾರ್ಟ್‍ಫೋನ್ ಆಗಿದೆ. ಇದು ಚಿಪ್ ಸೆಟ್ ನೊಂದಿಗೆ ಬರುತ್ತಿರುವ ಮೊದಲ ಸ್ಮಾರ್ಟ್‍ಫೋನ್ ಅಲ್ಲಾ ಆದರೆ ಮಾರಾಟವನ್ನು ಪರಿಗಣಿಸಿದೆ ಇಲ್ಲಿ. ಈ ಪ್ರೊಸೆಸರ್ 14ಎನ್ ಎಮ್ ನಿಂದ ಮಾಡಲಾದ ಸ್ನಾಪ್‍ಡ್ರಾಗನ್ 821 ನ ಮುಂದಿನ ಪೀಳಿಗೆಯಾಗಿದೆ.

ಜವಾಬ್ದಾರಿ ಬಗ್ಗೆ ಹೇಳುವುದಾದರೆ ಸ್ಯಾಮ್ಸಂಗ್ ಸ್ನಾಪ್‍ಡ್ರಾಗನ್ 835 ಎಸ್‍ಒಸಿ ಯನ್ನು 10 ಎನ್‍ಎಮ್ ಪ್ರೊಸೆಸ್ ನೊಂದಿಗೆ ತಯಾರಿಸಿತು, ಇದು 30% ಕಡಿಮೆ ಅಳತೆ ಹೊಂದಿದೆ. ಇನ್ನೂ ಹೇಳಬೇಕೆಂದರೆ ಸ್ನಾಪ್ ಡ್ರಾಗನ್ 835 ಅಪ್‍ಡೇಟೆಡ್ ವರ್ಷನ್ ಆದ ಕ್ರೈಯೊ ಸಿಪಿಯು ಉಪಯೋಗಿಸುತ್ತದೆ, ಇದಕ್ಕೆ 280 ಎನ್ನಲಾಗುವುದು. ಇದು ಸುಲಭವಾಗಿ ಚೆನ್ನಾಗಿ ಮೊಬೈಲ್ ನ ಕ್ಷಮತೆ ಹೆಚ್ಚಿಸುವುದು.

835 25% ಕಡಿಮೆ ಶಕ್ತಿ ಉಪಯೋಗಿಸುತ್ತದೆ, ಇದು ನೇರವಾಗಿ ಬ್ಯಾಟರಿ ಬದುಕನ್ನು ಹೆಚ್ಚಿಸುತ್ತದೆ ಮತ್ತು ವೇಗವಾಗಿ ಚಾರ್ಜ್ ಆಗುವ 4.0 ತಂತ್ರಜ್ಞಾನದೊಂದಿಗೆ ಬರುತ್ತದೆ.

ಹಾರ್ಡ್‍ವೇರ್ ಕಡೆಯಿಂದ ನೋಡಿದರೆ ಈ ಹೊಸ ಸ್ಮಾರ್ಟ್‍ಫೋನ್ ಗಳು ಸಫಲಗೊಳ್ಳುವುದು ಖಂಡಿತ.

ಬಿಕ್ಸ್ ಬಿ – ಎಐ ಅಸಿಸ್ಟೆಂಟ್

ಬಿಕ್ಸ್ ಬಿ – ಎಐ ಅಸಿಸ್ಟೆಂಟ್

ಆಪಲ್ ನ ಸಿರಿ ಯಂತೆ, ಸ್ಯಾಮ್ಸಂಗ್ ಕೂಡ ತನ್ನದೇ ಆದ ಬಿಕ್ಸ್‍ಬಿ ಎನ್ನುವ ಎಐ ಹೊಂದಿದೆ. ಸೌತ್ ಕೋರಿಯಾದ ತಂತ್ರಜ್ಞಾನ ದೈತ್ಯ ಎಸ್8 ನಲ್ಲಿ ಹೊಸದಾದ ಬಿಕ್ಸ್‍ಬಿ ಎನ್ನುವ ಎಐ ಅಸಿಸ್ಟೆಂಟ್ ಇರುವುದಾಗಿ ಖಚಿತ ಪಡಿಸಿದೆ. ವಿವ್ ಲ್ಯಾಬ್ಸ್ ಕೊಂಡ ನಂತರ - ಮೂಲ ಸಿರಿಯ ಹಿಂದಿದ್ದ ಮೂಲ ಕಂಪನಿ ಇದಾಗಿತ್ತು. ಬಿಕ್ಸ್‍ಬಿ ಡೀಪ್ ಇನ್ ಆಪ್ ಕಾರ್ಯಗಳು, ಧ್ವನಿಯ ಆಜ್ಞೆಯಿಂದ ಕಾರ್ಯ ನಡೆಸುವ ಕ್ಷಮತೆ ಹೊಂದಿದೆ.

ಅದ್ಭುತ ಕ್ಯಾಮೆರಾ

ಅದ್ಭುತ ಕ್ಯಾಮೆರಾ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್6 ನಲ್ಲಿ ತನ್ನದೇ ಆದ ಸರಿಯಾದ ಕ್ಯಾಮರಾ ಕ್ಷಮತೆಯ ಸೂತ್ರ ದೊರಕಿ ಅದನ್ನು ಗೆಲಾಕ್ಸಿ ಎಸ್7 ಸಿರೀಜ್ ಸ್ಮಾರ್ಟ್‍ಫೋನ್ ಗಳಲ್ಲಿ ಅದನ್ನೇ ಸುಧಾರಣೆ ಮಾಡಿ ಅನುಸರಿಸಿತು. ಈಗ ಗೆಲಾಕ್ಸಿ ಎಸ್7 ಹೊಂದಿರುವ ಹೆಚ್ಚಿನ ವೇಗದ ಆಟೊ ಫೊಕಸ್ ಫೀಚರ್ ಅನ್ನು ಗೆಲಾಕ್ಸಿ ಎಸ್8 ಫ್ರಂಟ್ ಕ್ಯಾಮೆರಾದಲ್ಲಿ ಅಳವಡಿಸಲಾಗಿದ್ದು , ಇದು ಆಂಡ್ರೊಯಿಡ್ ನ ಅತ್ತ್ಯುತ್ತಮ ಸ್ಮಾರ್ಟ್‍ಫೋನ್ ಕ್ಯಾಮೆರಾ ಆಗುವುದು.

ಏಕೆ ಕೊಳ್ಳಬಾರದು?

ಬ್ಲೊಟ್‍ವೇರ್

ಬ್ಲೊಟ್‍ವೇರ್

ಮುಖ್ಯವಾದ ನಕಾರಾತ್ಮಕ ಅಂಶವೆಂದರೆ ಸ್ಯಾಮ್ಸಂಗ್ ಮುಖ್ಯವಾದ ಫೀಚರ್ ಆದ ಬ್ಲೊಟ್‍ವೇರ್ ಅನ್ನು ಮಧ್ಯದಲ್ಲಿ ಸೇರಿಸಿರುವುದು. ಇದು ಕೇವಲ ಫೋನಿನ ವೇಗ ಕಡಿಮೆಗೊಳಿಸುತ್ತದೆ ಮತ್ತು ಬ್ಯಾಟರಿ ವೇಗವಾಗಿ ಹೀರಿಕೊಳ್ಳುತ್ತದೆ. ಹೊಸ ಆಂಡ್ರೊಯಿಡ್ 7.0 ನೌಗಟ್ ಅಪಡೇಟ್ ನಿಂದ ಸ್ಯಾಮ್ಸಂಗ್ ಇನ್ನೂ ಹೆಚ್ಚಿನ ಫೀಚರ್ಸ್ ಸೇರಿಸಿದೆ ಅದು ಪ್ರಯೋಜನಕ್ಕೆ ಬಾರದ್ದು. ಉದಾಹರಣೆಗೆ ಪರ್ಫೊರ್ಮೆನ್ಸ್ ಮೋಡ್ , ಇದು ನಿಮ್ಮ ಫೋನಿನ ಸ್ಕ್ರೀನ್ ರೆಜೊಲ್ಯುಷನ್ ಅಸಾಧಾರಣವಾಗಿ ಕಡಿಮೆಗೊಳಿಸುತ್ತದೆ.

ಬೆಲೆ

ಬೆಲೆ

ಇಲ್ಲಿಯೇ ಹೆಚ್ಚಿನ ನೋವು ನೀಡುತ್ತದೆ. ಸ್ಯಾಮ್ಸಂಗ್ ಗೆ ತನ್ನ ಫೋನನ್ನು ದುಬಾರಿ ಮಾಡುವ ಅಭ್ಯಾಸವಿದೆ. ಅದೇ ಬೇರೆ ಕಂಪನಿಯವರು ಮೊಬೈಲನ್ನು ಅದೇ ಸ್ಪೆಸಿಫಿಕೇಷನ್‍ಗಳೊಂದಿಗೆ ಕಡಿಮೆ ದರದಲ್ಲಿ ನೀಡುತ್ತದೆ. ಇಲ್ಲಿ ಸ್ಯಾಮ್ಸಂಗ್ ಸ್ಪರ್ಧೆಯಲ್ಲಿ ಸೋಲುತ್ತದೆ.

ಬ್ಯಾಟರಿ

ಬ್ಯಾಟರಿ

ಸ್ಯಾಮ್ಸಂಗ್ ನ ಕೆಲ ಫೋನುಗಳು ತಮ್ಮ ಕೆಟ್ಟ ಬ್ಯಾಟರಿ ಬ್ಯಾಕಪ್ ಗೆ ಹೆಸರಾಗಿದೆ. ಬಹಳಷ್ಟು ಅನಾವಶ್ಯಕ ಫೀಚರ್ಸ್ ಗಳಿಂದ ಫೋನಿನ ಬ್ಯಾಟರಿ ಇಂಗಿ ಹೋಗುವುದು ಮತ್ತು ಬಳಕೆದಾರರಿಗೆ ದಿನದ ಮಧ್ಯದಲ್ಲಿ ಅಸಹಾಯಕರನ್ನಾಗಿ ಮಾಡುವುದು. ಗೆಲಾಕ್ಸಿ ಎಸ್8 ಸ್ಮಾಟ್ ್ಫೋನಿನಲ್ಲಿ ಇದು ಬದಲಾವಣೆಗೊಳ್ಳುವುದೆಂದು ಅಪೇಕ್ಷಿಸೋಣ.

Best Mobiles in India

English summary
Samsung is all set to launch its much-expected flagship model dubbed as Galaxy S8 and S8+ tomorrow at a Samsung Unpacked Event in New York at 9:30 IST.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X